ಸ್ಮೃತಿ ಇರಾನಿ ಮಾನನಷ್ಟ ಮೊಕದ್ದಮೆ: ಕಾಂಗ್ರೆಸ್ ನಾಯಕರಿಗೆ ಸಮನ್ಸ್ ನೀಡಿದ ದೆಹಲಿ ಹೈಕೋರ್ಟ್, ತಕ್ಷಣವೇ ಬಾರ್ ವಿವಾದದ ಪೋಸ್ಟ್ ತೆಗೆಯುವಂತೆ ಸೂಚನೆ

ನವದೆಹಲಿ: ಗೋವಾದ ರೆಸ್ಟೋರೆಂಟ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಯ ಮೇಲಿನ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ಸೂಚಿಸಿದೆ ಮತ್ತು ಅಕ್ರಮ ಬಾರ್ ವಿವಾದದ ಪ್ರಕರಣದಲ್ಲಿ ಸ್ಮೃತಿ ಇರಾನಿ ಅವರು ಸಲ್ಲಿಸಿದ ಸಿವಿಲ್ ಮಾನನಷ್ಟ ಮೊಕದ್ದಮೆಯಲ್ಲಿ ಈ … Continued

ಈ ಶಾಲೆಯಲ್ಲಿ ಸಾಮೂಹಿಕ ಹಿಸ್ಟೀರಿಯಾ…ವಿದ್ಯಾರ್ಥಿಗಳು ಕೂಗುತ್ತಾರೆ, ಕಿರುಚುತ್ತಾರೆ, ತಲೆ ಬಡಿದುಕೊಳ್ಳುತ್ತಾರೆ | ವೀಕ್ಷಿಸಿ

ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಲ್ಲಿ “ಮಾಸ್ ಹಿಸ್ಟೀರಿಯಾ” ಪ್ರಕರಣ ವರದಿಯಾದ ಮೂರು ವರ್ಷಗಳ ನಂತರ, ಇತ್ತೀಚೆಗೆ ಬಾಗೇಶ್ವರ ಜಿಲ್ಲೆಯಲ್ಲಿ ಇಂತಹುದೇ ಘಟನೆ ಸಂಭವಿಸಿದೆ. ಬಾಗೇಶ್ವರದ ರೈಖುಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ಕಿರುಚಲು ಮತ್ತು ತಲೆ ಬಡಿದುಕೊಳ್ಳಲು ಪ್ರಾರಂಭಿಸಿದರು ಎಂದು ನ್ಯೂಸ್ 18 ವರದಿ ಮಾಡಿದೆ. ವಿದ್ಯಾರ್ಥಿಗಳ ನಡವಳಿಕೆಯಲ್ಲಿನ … Continued

ರಾಜಸ್ಥಾನದಲ್ಲಿ ವಾಯುಪಡೆಯ ಮಿಗ್‌-21 ಫೈಟರ್ ಜೆಟ್ ಪತನ: ಇಬ್ಬರು ಪೈಲಟ್‌ಗಳು ಸಾವು

ನವದೆಹಲಿ: ಗುರುವಾರ ಸಂಜೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸಾವಿಗೀಡಾಗಿದ್ದಾರೆ. ಬಾರ್ಮರ್‌ನ ಭೀಮದಾ ಗ್ರಾಮದಲ್ಲಿ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನದ ಅವಶೇಷಗಳು ಚದುರಿಹೋಗಿವೆ. ಅಪಘಾತ ಸಂಭವಿಸಿದಾಗ ಮಿಗ್ -21 ವಿಮಾನವು ಬೇಟು ಪ್ರದೇಶದ ಮೇಲೆ ಹಾರಾಡುತ್ತಿತ್ತು. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಅಪಘಾತದ ಕಾರಣವನ್ನು ಕಂಡುಹಿಡಿಯಲು ಭಾರತೀಯ ವಾಯುಪಡೆ … Continued

ಅಲ್-ಖೈದಾ, ಅನ್ಸರುಲ್ಲಾ ಬಾಂಗ್ಲಾ ಜೊತೆ ನಂಟು ಆರೋಪ: ಅಸ್ಸಾಂನಲ್ಲಿ 11 ಮಂದಿ ಬಂಧನ

ಗುವಾಹತಿ: ಕೆಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ 11 ಮಂದಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಮೊರಿಗಾಂವ್, ಬಾರ್ಪೇಟಾ, ಕಮ್ರೂಪ್ (ಮೆಟ್ರೋ) ಮತ್ತು ಗೋಲ್ಪಾರಾ ಜಿಲ್ಲೆಗಳಿಂದ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ವಿಶೇಷ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಹೇಳಿದ್ದಾರೆ. ಅವರು ಜಾಗತಿಕ ಭಯೋತ್ಪಾದಕ ಸಂಘಟನೆಗಳಾದ AQIS (ಭಾರತೀಯ ಉಪಖಂಡದಲ್ಲಿ ಅಲ್-ಖೈದಾ) ಮತ್ತು ABT (ಅನ್ಸಾರುಲ್ಲಾ … Continued

ವ್ಯಾಪಾರ ಸರಾಗ: ಐದು ತಿಂಗಳ ನಂತರ ಉಕ್ರೇನ್‌ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಆಮದು

ನವದೆಹಲಿ: ಸನ್‌ವಿನ್ ಗ್ರೂಪ್ ಪ್ರಕಾರ, ವಿಶ್ವದ ಅತಿದೊಡ್ಡ ಖಾದ್ಯ ತೈಲ ಆಮದುದಾರ ಭಾರತ, ಐದು ತಿಂಗಳ ಅಂತರದ ನಂತರ ಸೆಪ್ಟೆಂಬರ್‌ನಲ್ಲಿ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯ ಮೊದಲ ಸಾಗಣೆಯನ್ನು ಸ್ವೀಕರಿಸಲಿದೆ ಎಂದು ಬ್ಲೂಮ್‌ಬರ್ಗ್‌.ಕಾಮ್‌ ವರದಿ ಮಾಡಿದೆ. ಉಕ್ರೇನ್ ಕೃಷಿ ರಫ್ತುಗಾಗಿ ಕೆಲವು ಕಪ್ಪು ಸಮುದ್ರದ ಕಾರಿಡಾರ್‌ಗಳನ್ನು ತೆರೆಯಲು ಸಜ್ಜಾಗಿರುವುದರಿಂದ ಸುಮಾರು 50,000 ರಿಂದ 60,000 ಟನ್‌ಗಳು ಬರಬಹುದು … Continued

17 ವರ್ಷವಾದರೆ ಸಾಕು, ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು…!

ನವದೆಹಲಿ : ಇನ್ಮುಂದೆ 17 ವರ್ಷ ಮೇಲ್ಪಟ್ಟವರು ತಮಗೆ 18 ವರ್ಷ ವಯಸ್ಸು ಆಗುವ ಮೊದಲೇ ತಮ್ಮ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ಪ್ರಕಟಿಸಿದೆ. ಆಯೋಗವು ಇಂದು, ಗುರುವಾರ ಹೊಸ ಮಾದರಿಯನ್ನು ಅನಾವರಣಗೊಳಿಸಿದ್ದು, ದೇಶದ ಯುವಕರು ಮತದಾರರ ಪಟ್ಟಿಗೆ ಸೇರಲು ಒಂದು ವರ್ಷದಲ್ಲಿ ನಾಲ್ಕು ಸಲ … Continued

ತರಗತಿಯಲ್ಲಿ ಬಾಲಕನಿಂದ ಕೈಗೆ ಮಸಾಜ್‌ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ: ವೀಡಿಯೊ ವೈರಲ್ ಆದ ನಂತರ ಅಮಾನತು | ವೀಕ್ಷಿಸಿ

ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ಸರ್ಕಾರಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಈ ವಾರದ ಆರಂಭದಲ್ಲಿ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಕುರ್ಚಿಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿರುವಾಗ ವಿದ್ಯಾರ್ಥಿಯೊಬ್ಬ ತನ್ನ ಪಕ್ಕದಲ್ಲಿ ನಿಂತು ಶಾಲಾ ಸಮಯದಲ್ಲಿ ಅವರ … Continued

ಸಂಪುಟ ಸಭೆಯ ನಂತರ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಬಂಧಿಸಲ್ಪಟ್ಟ ಐದು ದಿನಗಳ ನಂತರ ಪಾರ್ಥ ಚಟರ್ಜಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗುರುವಾರ ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಕೋಲ್ಕತ್ತಾದ ಬೆಲ್‌ಘಾರಿಯಾ ಪ್ರದೇಶದಲ್ಲಿನ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಒಡೆತನದ ಎರಡನೇ ಫ್ಲಾಟ್‌ನಿಂದ 29 … Continued

‘ರಾಷ್ಟ್ರಪತ್ನಿ’ ಹೇಳಿಕೆ ವಿವಾದ: ಕಾಂಗ್ರೆಸ್‌ನಿಂದ ಕ್ಷಮೆ ಯಾಚೆನೆಗೆ ಬಿಜೆಪಿ ಒತ್ತಾಯ; ಅದು ನಾಲಿಗೆಯಿಂದ ಜಾರಿದ್ದು, ಉದ್ದೇಶಪೂರ್ವಕವಲ್ಲ ಎಂದ ಅಧೀರ್ ರಂಜನ್ ಚೌಧರಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುತ್ಮು ಅವರನ್ನು “ರಾಷ್ಟ್ರಪತ್ನಿ” ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಕರೆದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಸೋನಿಯಾ ಗಾಂಧಿಯವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಸ್ಮೃತಿ ಇರಾನಿ, ಕಾಂಗ್ರೆಸ್‌ ಅಧ್ಯಕ್ಷರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ” ದೇಶದ … Continued

₹ 50 ಕೋಟಿ ಹಣ, 5 ಕೆಜಿ ಚಿನ್ನ : ಪಶ್ಚಿಮ ಬಂಗಾಳದ ಸಚಿವರ ಆಪ್ತ ಸಹಾಯಕಿ ಮನೆಯಲ್ಲಿ ಹಣದ ಪರ್ವತವೇ ಪತ್ತೆ….!

ಕೋಲ್ಕತ್ತಾ: ಶಾಲೆಯ ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ದಾಳಿ ವೇಳೆ ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ಎರಡನೇ ಫ್ಲಾಟ್‌ನಿಂದ ಸುಮಾರು ₹ 29 ಕೋಟಿ ನಗದು ಮತ್ತು ಐದು ಕಿಲೋ ಗ್ರಾಂಗಳಷ್ಟು ಚಿನ್ನಾಭರಣಗಳನ್ನು ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು … Continued