ಚೀನಾದ ಅತ್ಯಂತ ಹಿರಿಯ ವ್ಯಕ್ತಿ ಅಲಿಮಿಹಾನ್ ಸೆಯಿತಿ 135 ನೇ ವಯಸ್ಸಿನಲ್ಲಿ ನಿಧನ

ಬೀಜಿಂಗ್: ಚೀನಾದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದ ಅಲಿಮಿಹಾನ್ ಸೆಯಿತಿ ಅವರು 135 ನೇ ವಯಸ್ಸಿನಲ್ಲಿ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ನಿಧನಳಾಗಿದ್ದಾಳೆ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕಶ್ಗರ್ ಪ್ರಿಫೆಕ್ಚರ್‌ನ ಶುಲೆ ಕೌಂಟಿಯ ಕೊಮುಕ್ಸೆರಿಕ್ ಟೌನ್‌ಶಿಪ್‌ನಿಂದ ಬಂದ ಸೆಯಿತಿ, ಜೂನ್ 25, 1886 ರಂದು ಜನಿಸಿದ್ದರು ಎಂದು ಚೀನಾದ ಪ್ರಚಾರ ವಿಭಾಗವನ್ನು ಉಲ್ಲೇಖಿಸಿ ಕ್ಸಿನ್‌ಹುವಾ … Continued

ಓಮಿಕ್ರಾನ್ ರೂಪಾಂತರದ ವಿರುದ್ಧ ಸ್ಪುಟ್ನಿಕ್ ವಿ ‘ಬಲವಾದ’ ರಕ್ಷಣೆ ನೀಡುತ್ತದೆ: ಆರ್‌ಡಿಐಎಫ್

ಮಾಸ್ಕೋ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರದಿಂದ ಉಂಟಾದ ಗಂಭೀರ ರೋಗಲಕ್ಷಣಗಳು ಮತ್ತು ಆಸ್ಪತ್ರೆಗೆ ದಾಖಲಾತಿ ವಿರುದ್ಧ ಬಲವಾದ ರಕ್ಷಣೆಯನ್ನು ಒದಗಿಸುತ್ತದೆ ಎಂದು ಲಸಿಕೆ ಅಭಿವರ್ಧಕರ ಪ್ರಾಥಮಿಕ ಅಧ್ಯಯನವನ್ನು ಉಲ್ಲೇಖಿಸಿ ಆರ್‌ಡಿಐಎಫ್ ಶುಕ್ರವಾರ ತಿಳಿಸಿದೆ. ಬೂಸ್ಟರ್ ಶಾಟ್ ಆಗಿ ಬಳಸಿದಾಗ, ರಷ್ಯಾದ ಸಿಂಗಲ್-ಡೋಸ್ ಸ್ಪುಟ್ನಿಕ್ ಲೈಟ್ ಓಮಿಕ್ರಾನ್ ರೂಪಾಂತರದ ವಿರುದ್ಧ ಪ್ರಬಲವಾದ … Continued

ಜಪಾನ್​ನ ಒಸಾಕಾದಲ್ಲಿ ಅಗ್ನಿ ದುರಂತ; 27 ಜನರು ಸಾವು

ಟೋಕಿಯೊ: ಜಪಾನ್‌ನ ಒಸಾಕಾ ಜಿಲ್ಲೆಯ ವಾಣಿಜ್ಯ ಕಟ್ಟಡವೊಂದರಲ್ಲಿ ಶುಕ್ರವಾರ (ಡಿಸೆಂಬರ್ 17) ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 27 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಬೆಂಕಿಗೆ ಆಹುತಿಯಾದ ಮಹಡಿಯು ಮಾನಸಿಕ ಆರೋಗ್ಯ ಸೇವೆಗಳು ಮತ್ತು ಸಾಮಾನ್ಯ ವೈದ್ಯಕೀಯ ಆರೈಕೆಯನ್ನು ಒದಗಿಸುವ ಕ್ಲಿನಿಕ್ ಅನ್ನು ಹೊಂದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಒಸಾಕಾ … Continued

ಡೆಲ್ಟಾ, ಮತ್ತು ಮೂಲ ಕೋವಿಡ್-19 ವೈರಸ್‌ 70 ಪಟ್ಟು ಹೆಚ್ಚು ವೇಗವಾಗಿ ಓಮಿಕ್ರಾನ್ ವೈರಸ್‌ ಸೋಂಕು ತಗುಲುತ್ತದೆ: ಅಧ್ಯಯನ…!

ಬೀಜಿಂಗ್; ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿ ವಿಶ್ವದ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮಿಕ್ರಾನ್, ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ, ಆದರೆ, ರೋಗದ ತೀವ್ರತೆ ಅತ್ಯಂತ ಕಡಿಮೆ ಇದ್ದಂತೆ ತೋರುತ್ತಿದೆ ಎಂದು ಹಾಂಗ್‌ಕಾಂಗ್‌ನ ಹೊಸ ಅಧ್ಯಯನವೊಂದು ಹೇಳಿದೆ. ಡೆಲ್ಟಾ ರೂಪಾಂತರ ತಳಿ ಮತ್ತು ಮೂಲ ವೈರಸ್ ಸಾರ್ಸ್-ಕೋವ್-2ಕ್ಕೆ ಹೋಲಿಸಿದರೆ ಓಮೈಕ್ರಾನ್ … Continued

ಓಮಿಕ್ರಾನ್ ಭಯದ ನಡುವೆ ಬ್ರಿಟನ್ನಿನಲ್ಲಿ ಈವರೆಗಿನ ಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣ ದಾಖಲು..!

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈವರೆಗಿನಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ಬ್ರಿಟನ್‌ ಮಂಗಳವಾರ 78,610 ದಾಖಲಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ಬ್ರಿಟಿಷ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ ಮಧ್ಯದ ವೇಳೆಗೆ ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಬಲವಾದ ಕೊರೊನಾ ವೈರಸ್ ರೂಪಾಂತರವಾಗಬಹುದು … Continued

ಕೋವಿಡ್‌-19 ಲಸಿಕೆ ಹಾಕಿಸಿಕೊಳ್ಳದಿದ್ದರೆ ಉದ್ಯೋಗಿಗಳನ್ನು ವಜಾಗೊಳಿಸಲಿರುವ ಗೂಗಲ್: ವರದಿ

ನವದೆಹಲಿ: ಆಲ್ಫಾಬೆಟ್ ಇಂಕ್‌ನ ಗೂಗಲ್ ತನ್ನ ಉದ್ಯೋಗಿಗಳಿಗೆ ಕೋವಿಡ್‌-19 ಲಸಿಕೆ ನಿಯಮಗಳನ್ನು ಅನುಸರಿಸದಿದ್ದರೆ ಅವರು ತಮ್ಮ ವೇತನವನ್ನು ಕಳೆದುಕೊಳ್ಳುತ್ತಾರೆ ಮತ್ತು ಅಂತಿಮವಾಗಿ ವಜಾಗೊಳಿಸಲಾಗುತ್ತದೆ ಎಂದು ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಸಿಎನ್‌ಬಿಸಿ (CNBC) ಮಂಗಳವಾರ ವರದಿ ಮಾಡಿದೆ. ವರದಿಯ ಪ್ರಕಾರ, ಉದ್ಯೋಗಿಗಳು ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ಘೋಷಿಸಲು ಮತ್ತು ಪುರಾವೆಗಳನ್ನು ತೋರಿಸುವ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಅಥವಾ … Continued

ಬ್ರಿಟನ್‌ನಲ್ಲಿ ಓಮಿಕ್ರಾನ್ ರೂಪಾಂತರದಿಂದ ಮೊದಲ ಸಾವು ದಾಖಲು

ಲಂಡನ್‌:ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರ ಪತ್ತೆಯಾದ ನಂತರ ಬ್ರಿಟನ್ನಿನಲ್ಲಿ ಕನಿಷ್ಠ ಒಬ್ಬ ರೋಗಿಯು ಮೃತಪಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಹೇಳಿದ್ದಾರೆ. ದುಃಖಕರವೆಂದರೆ ಕನಿಷ್ಠ ಒಬ್ಬ ರೋಗಿ ಓಮಿಕ್ರಾನ್‌ನಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ” ಎಂದು ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದರು. ಓಮಿಕ್ರಾನ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ.  ಆದ್ದರಿಂದ ಜನಸಂಖ್ಯೆಯ ಮೂಲಕ ಅದು ಹರಡುವ … Continued

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌‌ ರಾಂಫೋಸಾಗೆ ಕೊರೊನಾ ಸೋಂಕು

ಜೋಹಾನ್ಸ್‌‌ಬರ್ಗ್‌: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌‌ ರಾಂಫೋಸಾ (69) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ಅಧ್ಯಕ್ಷ ರಾಂಫೋಸಾ ಅವರು ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ದಾಖಲೆ ಮ್ರಮಾಣದಲ್ಲಿ ದೈನಂದಿನ ಪ್ರಕರಣಗಳು 37,875ಕ್ಕೆ ಏರಿಕೆಯಾದ ದಿನವೇ ಅಧ್ಯಕ್ಷ ರಾಂಫೋಸಾ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರು ಓಮಿಕ್ರಾನ್ ಕೊರೊನಾ … Continued

ದುಬೈ ಆಯ್ತು 100% ಕಾಗದ ರಹಿತ ಆದ ವಿಶ್ವದ ಮೊದಲ ಸರ್ಕಾರ: ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್

ದುಬೈ: ದುಬೈ 100 ಪ್ರತಿಶತ ಪೇಪರ್‌ಲೆಸ್ ಮಾಡುವ ವಿಶ್ವದ ಮೊದಲ ಸರ್ಕಾರವಾಗಿದೆ ಎಂದು ಎಮಿರೇಟ್‌ನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಘೋಷಿಸಿದ್ದಾರೆ. 1.3 ಬಿಲಿಯನ್ ದಿರ್ಹಮ್ (USD 350 ಮಿಲಿಯನ್) ಮತ್ತು 14 ಮಿಲಿಯನ್ ಮಾನವ ಗಂಟೆಗಳ ಉಳಿತಾಯವನ್ನು ಸೂಚಿಸಿದ್ದಾರೆ. . ದುಬೈ ಸರ್ಕಾರದಲ್ಲಿನ ಎಲ್ಲ ಆಂತರಿಕ, … Continued

ಓಮಿಕ್ರಾನ್ ಡೆಲ್ಟಾಕ್ಕಿಂತ ವೇಗವಾಗಿ ಹರಡುತ್ತದೆ, ಲಸಿಕೆ ಪರಿಣಾಮಕಾರಿತ್ವ ಕಡಿಮೆ ಮಾಡುತ್ತದೆ: ವಿಶ್ವ ಆರೋಗ್ಯ ಸಂಸ್ಥೆ | ತಿಳಿಯಬೇಕಾದ 5 ಅಂಶಗಳು

ನವದೆಹಲಿ: ಕೊರೊನಾ ವೈರಸ್ಸಿನ ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತದೆ ಮತ್ತು ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಭಾನುವಾರ ಹೇಳಿದೆ. ಆದಾಗ್ಯೂ, ಒಂದು ಪ್ರಮುಖ ಪರಿಹಾರದಲ್ಲಿ, ಇದು ಕಡಿಮೆ ತೀವ್ರವಾದ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ ಎಂದು ಆರಂಭಿಕ ಡೇಟಾ ತೋರಿಸುತ್ತದೆ ಎಂದು ಸುದ್ದಿ ಸಂಸ್ಥೆ AFP … Continued