ಕರ್ನಾಟಕದಲ್ಲಿ ದೇವಾಲಯ’ ಓಪನ್: ದೇವರ ದರ್ಶನ, ಆರತಿಗಷ್ಟೇ ಸೀಮಿತ

ಬೆಂಗಳೂರು : ಕೊರೊನಾ ಮಾರ್ಗಸೂಚಿ ಪಾಲಿಸುವ ಷರತ್ತಿಗೊಳಪಟ್ಟು ಜುಲೈ 5 ರಿಂದ ರಾಜ್ಯಾದ್ಯಂತ ‘ದೇವಾಲಯ’ ತೆರೆಯಲು ಅನುಮತಿ ನೀಡಿ ಧಾರ್ಮಿಕ ದತ್ತಿ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಅನ್ ಲಾಕ್ 3.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಮಾರ್ಗಸೂಚಿ ಕ್ರಮದಂತೆ ರಾಜ್ಯದಲ್ಲಿ ಮತ್ತಷ್ಟು ಚಟುವಟಿಕೆಗಳಿಗೆ ರಿಲೀಫ್ ನೀಡಲಾಗಿದೆ, ಅಂತೆಯೇ ದೇವಾಲಯ ತೆರೆಯಲು ಸರ್ಕಾರ … Continued

ಜುಲೈ5ರಿಂದ ಕರ್ನಾಟಕ ಅನ್ಲಾಕ್ 3.0: ದೇವಸ್ಥಾನ, ಮಾಲ್‌ ತೆರೆಯಲು ಅನುಮತಿ..ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಜುಲೈ 5ರಿಂದ 19ರ ವರೆಗೆ ಕರ್ನಾಟಕ ಅನ್ಲಾಕ್ 3.0  ರಾಜ್ಯದಲ್ಲಿ ಜಾರಿ ಮಾಡಲಾಗಿದ್ದು  ವಾರಾಂತ್ಯ ಕರ್ಫ್ಯೂವನ್ನು (Weekend Curfew) ತೆಗೆದು ಹಾಕಲಾಗಿದೆ. ಕರ್ನಾಟಕದಲ್ಲಿ ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಕುರಿತು ಅಧಿಕಾರಿಗಳು, ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ, ರಾಜ್ಯದಲ್ಲಿ ಪ್ರತಿದಿನ ವಿಧಿಸಿದ್ದ ನೈಟ್​ … Continued

ಡಿನೋಟಿಫಿಕೇಶನ್‌: ಸಿಎಂ ಬಿಎಸ್‌ವೈ ವಿರುದ್ಧ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್‌ ತಿರಸ್ಕರಿಸಿದ ವಿಶೇಷಕೋರ್ಟ್‌, ತನಿಖೆಗೆ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಡಿನೋಟಿಫಿಕೇಶನ್ ಭೂತದ ಕಾಡ ಶುರುವಾಗಿದೆ. ಬೆಳ್ಳಂದೂರು ಡೀನೋಟಿಫಿಕೇಶನ್ ಪ್ರಕರಣದ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿದೆ. ವಾಸುದೇವ ರೆಡ್ಡಿ ಎಂಬುವವರು ಸಲ್ಲಿಸಿದ ದೂರನ್ನು ಪರಿಗಣಿಸಿ ವಿಶೇಷ ಕೋರ್ಟ್ ಈ ಆದೇಶ ಮಾಡಿದೆ. ಲೋಕಾಯುಕ್ತ ಪೊಲೀಸರು ಈ ಹಿಂದೆ ಈ ಪ್ರಕರಣದಲ್ಲಿ ಬಿ ರಿಪೋರ್ಟ್ ನೀಡಿದ್ದರು.ಈಗ … Continued

ಸಿಇಟಿ 2021ಕ್ಕೆ ನೋಂದಾಯಿಸಲು 45 ಓಸಿಐ ಕಾರ್ಡ್‌ದಾರರಿಗೆ ಅವಕಾಶ ನೀಡಲು ಕೆಇಎಗೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: 45 ಸಾಗರೋತ್ತರ ನಾಗರಿಕರ (ಒಸಿಐ) ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2021ಕ್ಕೆ ನೋಂದಾಯಿಸಲು ಮತ್ತು ಅವರ ಅರ್ಜಿಗಳ ಬಾಕಿ ಇರುವಾಗ ಪರೀಕ್ಷೆಗೆ ಹಾಜರಾಗಲು ಕರ್ನಾಟಕದ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರು ಬೆಂಗಳೂರಿನ ಅಲೆಖ್ಯಾ ಪೊನ್ನೇಕಂತಿ ಮತ್ತು 21 ಮಂದಿ … Continued

ಗೌರಿ ಲಂಕೇಶ್ ಹತ್ಯೆ ಪ್ರಕರಣ : ಪ್ರಭಾವಕ್ಕೊಳಗಾಗದೆ ಜಾಮೀನು ಅರ್ಜಿ ಇತ್ಯರ್ಥ ಪಡಿಸಲು ಹೈಕೋರ್ಟ್‍ಗೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಜಾಮೀನು ಅರ್ಜಿಯನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಇತ್ಯರ್ಥ ಪಡಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್‍ಗೆ ಸೂಚಿಸಿದೆ. ಗೌರಿಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖನ್‍ವಾಲಿಕರ್, ದಿನೇಶ್‍ಮಹೇಶ್ವರಿ, ಅನಿರುದ್ಧ ಭೋಸ್‌ ಅವರುಗಳನ್ನೊಳಗೊಂಡ ವಿಭಾಗೀಯ ಪೀಠ ಕರ್ನಾಟಕ ಹೈಕೋರ್ಟ್‍ಗೆ ಸೂಚನೆ ನೀಡಿದೆ. ಆರೋಪಿ ಮೋಹನ್ … Continued

‘ಈಗ ರೀಚಾರ್ಜ್ ಮಾಡಿ, ನಂತರ ಪಾವತಿಸಿ’: ರಿಲಯನ್ಸ್ ಜಿಯೊದಿಂದ ‘ತುರ್ತು ಡೇಟಾ ಸಾಲ ’ಸೌಲಭ್ಯ..!

ಜಿಯೋ ತನ್ನ ಬಳಕೆದಾರರಿಗೆ ಈಗ ರೀಚಾರ್ಜ್ ಮಾಡಿ ನಂತರ ಪಾವತಿಸಿ’ ಎಂಬ ತುರ್ತು ಡೇಟಾ ಸಾಲ ಸೌಲಭ್ಯವನ್ನು ನೀಡುತ್ತಿದೆ. ಇದುಖಾತೆಗಳಲ್ಲಿ ಹಣವಿಲ್ಲದಿದ್ದರೆ ಸಹ ಅವರಿಗೆ ಸಹಾಯ ಮಾಡುತ್ತದೆ. ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ತಲಾ 1 ಜಿಬಿಯ ಐದು ತುರ್ತು ಡೇಟಾ ಸಾಲ ಪ್ಯಾಕ್‌ಗಳನ್ನು ಎರವಲು ಪಡೆಯಲು ಅನುಮತಿಸುತ್ತದೆ. ಪ್ರತಿ 1 ಜಿಬಿ ಡೇಟಾ ಸಾಲವು … Continued

ಹೃದಯ ವಿದ್ರಾವಕ ಘಟನೆ..ಹೆಣ್ಣು ಮಗುವೆಂಬ ಕಾರಣಕ್ಕೆ ನವಜಾತ ಶಿಶುವಿಗೆ ನೇಣುಬಿಗಿದು ಬಚ್ಚಲುಕೋಣೆ ಕಿಟಿಕಿಗೆ ಕಟ್ಟಿದರು..

ಚಿಕ್ಕಬಳ್ಳಾಪುರ: ನವಜಾತ ಶಿಶುವೊಂದನ್ನು ಆಸ್ಪತ್ರೆಯ ಬಚ್ಚಲು ಕೋಣೆಯ ಕಿಟಕಿಗೆ ನೇಣು ಹಾಕಿ ಸಾಯಿಸಿರುವ ಅತ್ಯಂತ ಅಮಾನವೀಯ ಘಟನೆ ನಡೆದ ವರದಿಯಾಗಿದೆ. ಚಿಕ್ಕಬಳ್ಳಾಪುರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೃದಯವಿದ್ರಾವಕ ಕೃತ್ಯ ನಡೆದ ವರದಿಯಾಗಿದ್ದು, ಆಗತಾನೇ ಜನಿಸಿದ ಮಗುವನ್ನು ಬಚ್ಚಲ ಕೋಣೆಯ ಕಿಟಕಿಗೆ ನೇತುಹಾಕಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಬೆಳಗ್ಗೆ 8 ಗಂಟೆ … Continued

ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕ್ಷೇತ್ರಗಳ ಮೀಸಲಾತಿ ಪ್ರಕಟ

ಕಾರವಾರ:ಕೊರೊನಾ ಎರಡನೇ ಅಲೆ ಮುಕ್ತಾಯದ ಹಂತದಲ್ಲಿರುವಾಗಲೇ ಉತ್ತರ ಕನ್ನಡ ಜಿಲ್ಲಾ ಪಂಚಾಯತ  ಕ್ಷೇತ್ರಗಳ ಮುಂದೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಕರಡು ಅಧಿಸೂಚನೆಯನ್ನು ಸರಕಾರವು ಪ್ರಕಟಿಸಿದ್ದು ಜುಲೈ ೭ ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಾರವಾರ ತಾಲೂಕಿನ ಚಿತ್ತಾಕುಲದ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ವಿರ್ಜೆ (ಮಲ್ಲಾಪುರ)ಗೆ ಸಾಮಾನ್ಯ ಮಹಿಳೆ ಹಾಗೂ ಅಮದಳ್ಳಿ (ಚೆಂಡಿಯಾ)ಗೆ ಅನುಸೂಚಿತ … Continued

ಉತ್ತರ ಕನ್ನಡ ಜಿಲ್ಲೆ‌ ೧೨ ತಾಪಂಗಳ ೧೨೯ ಕ್ಷೇತ್ರಗಳ ಮೀಸಲಾತಿ ಪ್ರಕಟ

ಕಾರವಾರ: ರಾಜ್ಯ ಸರ್ಕಾರವು ತಾಲೂಕಾ ಪಂಚಾಯತ ಮತಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲ ೧೨ ತಾಲೂಕುಗಳ ಒಟ್ಟೂ ೧೨೯ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದೆ. ಪ್ರಸಕ್ತ ಸಾಲಿನಲ್ಲಿ ಹೊನ್ನಾವರ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶವೊಂದು ನಗರ ಪ್ರದೇಶವಾಗಿ ಪರಿವರ್ತಿತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ತಾಲುಕು ಪಂಚಾಯಿತಿ ಕ್ಷೇತ್ರ ಕಡಿಮೆಯಾಗಿದೆ. ಅದರಂತೆ ಒಟ್ಟೂ … Continued

ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್​ನಿಂದ ನಿರ್ಬಂಧಕಾಜ್ಞೆ ತಂದ ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಿಂದ ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದಾರೆ. ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲ ಪತ್ರಿಕೆ, ಚಾನಲ್​​ಗಳಲ್ಲಿ ತಮ್ಮ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಮಾಡುವ ಸಾಧ್ಯತೆ ಇದೆ. ಕಿಡಿಗೇಡಿಗಳು ನಕಲಿ ಸಿಡಿ ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಡುವ ಸಾಧ್ಯತೆಯೂ … Continued