ಜುಲೈ ೫ ರಂದು ಧಾರವಾಡ ಜೆಎಸ್ಎಸ್ ಐಟಿಐನಲ್ಲಿ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ದಿನಾಂಕ ೦೫.೦೭.೨೦೨೧ ರಂದು ಬೆಳಿಗ್ಗೆ ೧೦ಗಂಟೆಗೆ ಬೆಂಗಳೂರಿನ ಎನ್.ಟಿ.ಟಿ.ಎಫ್ ಕಂಪನಿಯವರು ನೀಮ್ ಟ್ರೈನೀ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ೧೮-೨೫ ವಯೋಮಾನದೊಳಗಿನ ಐ.ಟಿ.ಐ ಉತ್ತೀರ್ಣರಾದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತರು ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಬಯೋಡೆಟಾ, ೨ ಪೋಟೊ, ಆಧಾರ ಕಾರ್ಡಿನ ಝರಾಕ್ಸ್‌ … Continued

3ನೇ ಹಂತದ ಅನ್‍ಲಾಕ್ : ಕೋವಿಡ್-19 ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ನಾಳೆ ಸಿಎಂ ಸಭೆ

ಬೆಂಗಳೂರು: ರಾಜ್ಯದಲ್ಲಿ ಮೂರನೇ ಹಂತದ ಅನ್‍ಲಾಕ್ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಕೋವಿಡ್-19 ಉಸ್ತುವಾರಿ ಸಚಿವರ ಸಭೆ ನಡೆಸಲಿದ್ದಾರೆ. ನಾಳೆ ಸಂಜೆ 5.30ಕ್ಕೆ ಕಾವೇರಿ ನಿವಾಸದಲ್ಲಿ ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ಮೂರನೇ ಹಂತದ ಅನ್‍ಲಾಕ್ ಸಡಿಲಿಕೆ ಮಾಡುವ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು … Continued

ನಟ ಜಗ್ಗೇಶ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬೆಂಗಳೂರು: ಕನ್ನಡದ ಹಿರಿಯ ನಟ ಜಗ್ಗೇಶ್ ಪುತ್ರ ಹಾಗೂ ನಟ ಗುರುರಾಜ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಅಪಘಾತವಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಿಕ್ಕಬಳ್ಳಾಪುರದ ಅಗಲಗುರ್ಕಿ ಎಂಬಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಏರ್ ಬ್ಯಾಗ್ ಓಪನ್ ಆಗಿದ್ದರಿಂದ … Continued

ದಾಂಡೇಲಿ: ಕಾಳಿ ನದಿಯಿಂದ ಬಂದು ಗ್ರಾಮದ ರಸ್ತೆಯಲ್ಲಿ ಬೃಹತ್‌ ಮೊಸಳೆಯ ಬೆಳಗಿನ ವಾಕಿಂಗ್..!..ವಿಡಿಯೋ ನೋಡಿ

ಕಾರವಾರ:- ಆಹಾರ ಅರಸಿ ನದಿ ಭಾಗದಿಂದ ಮೊಸಳೆಯೊಂದು ಗ್ರಾಮಕ್ಕೆ ನುಗ್ಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ಗುರುವಾರ ನಡೆದಿದೆ. ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದೆ.ಬೆಳ್ಳಂಬೆಳಗ್ಗೆ ಗ್ರಾಮದಲ್ಲಿ ಓಡಾಡಿದ ಮೊಸಳೆಯನ್ನು … Continued

ಬೆಂಗಳೂರು ಈಜುಪಟು ಟೋಕಿಯೊ ಒಲಂಪಿಕ್ಸ್ ಗೆ ಆಯ್ಕೆ

ನವದೆಹಲಿ: ರೋಮ್ ಈಜು ಸ್ಪರ್ಧೆಯ 100 ಮೀಟರ್ ಬ್ಯಾಕ್‍ಸ್ಟ್ರೋಕ್ ಈಜಿನಲ್ಲಿ ಉತ್ತಮ ಸಾಧನೆ ತೋರಿದ್ದ ಭಾರತೀಯ ಈಜುಪಟು ಶ್ರೀಹರಿ ನಟರಾಜ್ ಅವರಿಗೆ ಫಿನಾ ಸಂಸ್ಥೆ ಎ ದರ್ಜೆ ಸರ್ಟಿಫಿಕೆಟ್ ನೀಡಿರುವುದರಿಂದ ಅವರು ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ರೋಮ್‍ನ ಸೆಟ್‍ಕೊಲ್ಲಿಯಲ್ಲಿ ನಡೆದಿದ್ದ ಈಜು ಸ್ಪರ್ಧೆಯಲ್ಲಿ ನಟರಾಜ್ ಅವರು 53.77 ಸೆಕೆಂಡ್‍ಗಳಲ್ಲಿ ಗುರಿಮುಟ್ಟುವಲ್ಲಿ ಯಶಸ್ವಿಯಾಗಿದ್ದರು. ಈ ಮಾನದಂಡದ … Continued

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಾಯಂಗೊಳಿಸಲು ಉನ್ನತ ಶಿಕ್ಷಣ ಸಚಿವರಿಗೆ ಸಭಾಪತಿ ಹೊರಟ್ಟಿ ಪತ್ರ

ಹುಬ್ಬಳ್ಳಿ; ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸರ್ಕಾರದ ಮಾನದಂಡಗಳು ಹಾಗೂ ಯು.ಜಿ.ಸಿ. ನಿಯಮಾವಳಿಯ ಪ್ರಕಾರ ಅರ್ಹತೆಯುಳ್ಳವರಾಗಿದ್ದು, ಈ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ. ಈ ಕುರಿತು ಉಮುಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ … Continued

ಅತ್ಯಾಚಾರಿಗಳಿಂದ ಮಹಿಳೆಯನ್ನು ರಕ್ಷಿಸಿದ ಎಮ್ಮೆ!

ಹಾವೇರಿ: ದನ ಮೇಯಿಸಲು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರನ್ನು ಎಮ್ಮೆ ಅಟ್ಟಾಡಿಸಿಕೊಂಡು ಹೋಗುವ ಮೂಲಕ ಮಹಿಳೆಯನ್ನು ರಕ್ಷಿಸಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆರೋಪಿಗಳನ್ನು ಹಿರೇಮರಳಿಹಳ್ಳಿ ಗ್ರಾಮದ ಇಬ್ಬರು ಆರೋಪಿಗಳು ಹಿರೇಮರಳಿಹಳ್ಳಿ ಗ್ರಾಮದ ತಮ್ಮ ಜಮೀನಿನ ಬದುವಿನ ಹತ್ತಿರವಿರುವ ನೀಲಗಿರಿ ತೋಪಿನಲ್ಲಿ ದನ ಮೇಯಿಸುತ್ತಿದ್ದ … Continued

ಕರ್ನಾಟಕದಲ್ಲಿ ಬುಧವಾರ ಕೊರೊನಾ ಸಾವಿನ ಸಂಖ್ಯೆ ಕೊಂಚ ಹೆಚ್ಚಳ..

ಬೆಂಗಳೂರು:ರಾಜ್ಯದಲ್ಲಿ ಬುಧವಾರ ಹೊಸದಾಗಿ 3,382 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 111 ಮಂದಿ ಮೃತಪಟ್ಟಿದ್ದಾರೆ . ಇದೇ ಸಮಸಯದಲ್ಲಿ 12, 763 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಒಟ್ಟಾರೆಯಾಗಿ ಸೋಂಕಿನ ಸಂಖ್ಯೆ 28,43,810 ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 35,040ಕ್ಕೆ ಏರಿಕೆಯಾಗಿದೆ. ಚೇತರಿಸಿಕೊಂಡವರ ಸಂಖ್ಯೆ 27,32,242 ಕ್ಕೆ ಏರಿಕೆಯಾಗಿದೆ. … Continued

ಪತ್ನಿ ಕೊರೊನಾದಿಂದ ಸಾವು: ನೋವಿನಲ್ಲಿ ಪತಿ, ಇಬ್ಬರು ಮಕ್ಕಳು ಆತ್ಮಹತ್ಯೆ

ಬೆಂಗಳೂರು: ಕೊರೊನಾ ಮಾಹಾಮಾರಿ ಕುಟುಂಬಗಳನ್ನೇ ಆಹುತಿ ಪಡೆಯುತ್ತಿದ್ದು, ರಾಜ್ಯದಲ್ಲಿ ಕೋವಿಡ್ ಹಾಗೂ ಕೋವಿಡ್ ನಂತರದ ಸಾವಿನ ಸರಣಿ ಬೇರೆ ಬೇರೆ ರೂಪದಲ್ಲಿ ಮುಂದುವರಿದಿದೆ. ಇಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದ ವದಿಯಾಗಿದೆ. ಕೊರೊನಾ ಸೋಂಕಿಗೆ ಪತ್ನಿ ಮೃತಪಟ್ಟಿದ್ದರಿಂದ ಮನನೊಂದು ಪತಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ. ಮೃತರನ್ನು ನಾಗರಾಜ್ … Continued

ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ವೈದ್ಯೆ ಸೇರಿ ಇಬ್ಬರ ಬಂಧನ

ಮಂಗಳೂರು: ಒಂದು ಕೋಟಿ ರೂಪಾಯಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಸಾಗಿಸುತ್ತಿದ್ದ ಮಹಿಳಾ ವೈದ್ಯೆಯನ್ನು ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಕೇರಳದ ಕಾಂಞಗಾಡ್‌ನ ಹರಿಮಲ ಆಸ್ಪತ್ರೆ ವೈದ್ಯೆ ಮಿನು ರಶ್ಮಿ ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ವೈದ್ಯೆಯ ಜೊತೆಗಿದ್ದ ಇನ್ನೋರ್ವ ಆರೋಪಿ ಕಾಸರಗೋಡಿನ ಅಜ್ಮಲ್‌ ಎಂಬಾತನನ್ನೂ ಸಿಸಿಬಿ ಪೊಲೀಸರು ವಶಕ್ಕೆ … Continued