ರೈತರಿಗೆ ಈ ವರ್ಷ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲದ ಗುರಿ: ಸಿಎಂ ಬಿಎಸ್‌ವೈ

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ೩೦.೨೬ ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು ೦.೬ ಲಕ್ಷ ರೈತರಿಗೆ ಶೇ. ೩ರ ಬಡ್ಡಿ ದರದಲ್ಲಿ ೧೪೬೦ ಕೋಟಿ ರೂ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದ ಸಹಕಾರ ಇಲಾಖೆ … Continued

ಬೋಯಿಂಗ್‌ ಇಂಡಿಯಾ-ಸೆಲ್ಕೊದಿಂದ ಕೇವಲ 20 ದಿನಗಳಲ್ಲಿ ಕೋವಿಡ್‌-19 ಆಸ್ಪತ್ರೆ ನಿರ್ಮಾಣ..!

ಬೆಂಗಳೂರು: ಬೋಯಿಂಗ್‌ ಇಂಡಿಯಾ ಹಾಗೂ ಸೆಲ್ಕೊ ಅನುದಾನದಲ್ಲಿ ಬೆಂಗಳೂರಲ್ಲಿ 20 ದಿನಗಳಲ್ಲಿ ಕೋವಿಡ್‌-19 ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು ಇದಕ್ಕೆ ಡಾಕ್ಟರ್ಸ್‌ ಫಾರ್‌ ಯು ಫೌಂಡೇಶನ್‌ ಹಾಗೂ ಕರ್ನಾಟಕ ಪವರ್‌ ಕಾರ್ಪೋರೇಶನ್‌ ಲಿಮಿಟೆಡ್‌ ಸಹಯೋಗ ನೀಡಿದೆ. ಬೋಯಿಂಗ್‌ ಇಂಡಿಯಾ ಹಾಗೂ ಸೆಲ್ಕೊ ಸೋಲಾರ್‌ ಅನುದಾನದ ಈ ಕೋವಿಡ್‌ ಸಪೇಷಾಲಿಟಿ … Continued

ಪತ್ನಿ ಸಾವಿನಿಂದ ಮನನೊಂದು ಪತಿ, ಇಬ್ಬರು ಹೆಣ್ಣುಮಕ್ಕಳು ಆತ್ಮಹತ್ಯೆ

ಬೆಳಗಾವಿ: ಹೆಂಡತಿಯ ಸಾವಿನಿಂದ ಮನನೊಂದ ಗಂಡ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ವಾರದ ಹಿಂದೆ ಚೆನ್ನವ್ವ ರಂಗಾಪುರೆ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ಮನನೊಂದ ಪತಿ ಕಾಡಪ್ಪ ತನ್ನ ಇಬ್ಬರು ಹೆಣ್ಣುಮಕ್ಕಳು ಜೊತೆ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕಾಡಪ್ಪ … Continued

ವಿದೇಶ ಪ್ರವಾಸ ಮಾಡುವ ಕರ್ನಾಟಕದವರಿಗೆ ಜೂನ್ 22 ರಂದು ಬೆಂಗಳೂರಿನಲ್ಲಿ ಲಸಿಕೆ ಅಭಿಯಾನ ಆರಂಭ

ಬೆಂಗಳೂರು; ವಿದೇಶ ಪ್ರವಾಸದಲ್ಲಿರುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ವ್ಯಾಕ್ಸಿನೇಷನ್ ಡ್ರೈವ್ ಮತ್ತು ಒಲಿಂಪಿಕ್ಸ್‌ಗಾಗಿ ಟೋಕಿಯೊಕ್ಕೆ ಪ್ರಯಾಣಿಸುವ ಕ್ರೀಡಾಪಟುಗಳಿಗೆ ಜೂನ್ 22 ರಿಂದ (ಮಂಗಳವಾರ) ಬೆಂಗಳೂರು ಸಿಟಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೋವಿಡ್‌-19 ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ.ಎನ್.ಎನ್. ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಈ ವಿಭಾಗದ ಫಲಾನುಭವಿಗಳು ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ … Continued

ಬೀದಿಬದಿ ತರಕಾರಿಗಳಿಗೆ ಕಾಲಿನಿಂದ ಒದ್ದು ದರ್ಪ ತೋರಿದ್ದ ಪಿಎಸ್‍ಐ ಅಮಾನತು

ರಾಯಚೂರು: ಹೊಟ್ಟೆ ಪಾಡಿಗಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದ ರಾಯಚೂರಿನ ಬೀದಿಬದಿಯ ವ್ಯಾಪಾರಿಗಳ ಮೇಲೆ ದರ್ಪ ತೋರಿಸಿದ್ದ ಪಿಎಸ್‍ಐ ಅವರನ್ನು ಅಮಾನತು ಮಾಡಲಾಗಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಲಾಗಿತ್ತು. ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ವ್ಯಾಪಾರ ನಡೆಸುತ್ತಿದ್ದ, ತರಕಾರಿ ವ್ಯಾಪಾರಿಗಳನ್ನ ಪೊಲೀಸರು ತೆರವು ಮಾಡಿಸುತ್ತಿದ್ದರು. ಆಗ ಏಕಾಏಕಿ ಬಂದ ಪಿಎಸ್‍ಐ … Continued

ಚಿತ್ತಾಪುರ: ನಾಯಿ ಕಡಿತಕ್ಕೆ 30 ಕುರಿಗಳ ಸಾವು

ಕಲಬುರಗಿ: ನಾಯಿ ಕಡಿತದಿಂದ ಸ್ಥಳದಲ್ಲೇ 30 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ. ರಾವೂರ ನಿವಾಸಿ ಮಲ್ಲಿಕಾರ್ಜುನ ಭೀಮರಾಯ ಪೂಜಾರಿ ಎನ್ನುವವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಈ ಅನಾಹುತ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಯಿಗಳು ದಾಳಿ ನಡೆಸಿ ಕುರಿಗಳನ್ನು ಕಚ್ಚಿವೆ. ಪರಿಣಾಮ … Continued

ಕರ್ನಾಟಕದಲ್ಲಿ ಭಾನುವಾರ 5 ಸಾವಿರಕ್ಕಿಂತ ಕಡಿಮೆಯಾದ ದೈನಂದಿನ ಪ್ರಕರಣ, ಶೇ.2.58 ಕ್ಕೆ ಕುಸಿದ ಪಾಸಿಟಿವಿಟಿ ದರ

ಬೆಂಗಳೂರು: ಕರ್ನಾಟಕದಲ್ಲಿ ಹಲವು ದಿನಗಳ ನಂತರ ಇದೇ ಮೊದಲ ಬಾರಿಗೆ ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಮತ್ತೊಂದು ಸಮಾಧಾನದ ಸಂಗತಿಯೆಂದರೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಭಾನುವಾರ ಶೇ.2.58 ಕ್ಕೆ ಕುಸಿದಿದೆ. ಅ ಎಂದು ರಾಜ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಭಾನುವಾರ ಹೊಸದಾಗಿ 4,517 … Continued

ನಾಳೆ ಬೆಳಿಗ್ಗೆ 6ರಿಂದ ಬಸ್ಸುಗಳು ಸಂಚಾರ, ವಾರಾಂತ್ಯ, ರಾತ್ರಿ ವೇಳೆಯೂ ಸಂಚಾರ

ಹುಬ್ಬಳ್ಳಿ:  ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್ ಗಳ ಓಡಾಟಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ  ಪ್ರಯಾಣಿಕರ  ಬೇಡಿಕೆ ಹಾಗೂ ಆದ್ಯತೆ ಮೇರೆಗೆ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಬಸ್ಸುಗಳ ಕಾರ್ಯಾಚರಣೆ ಆರಂಭವಾಗಲಿದೆ. ಈ ಕುರಿತು ಪ್ರಕಟಣೆ ನೀಡಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ರಾಜ್ಯದಲ್ಲಿ ಕೋವಿಡ್ ಪ್ರಕರಣ … Continued

ಪರಿಷ್ಕೃತ ಆದೇಶ: ಧಾರವಾಡ ಜಿಲ್ಲೆ ಕೆಟಗರಿ -1ರಲ್ಲಿ ಸೇರ್ಪಡೆ ,ನಾಳೆಯಿಂದ ಬಸ್‌ ಓಡಾಟ, ಎಲ್ಲ ಅಂಗಡಿ ಓಪನ್‌

ಹುಬ್ಬಳ್ಳಿ: ರಾಜ್ಯ ಸರ್ಕಾರ ಕೋವಿಡ್ ಅನ್‌ಲಾಕ್ 2.0 ಕುರಿತು ಹೊರಡಿಸಿದ ಆದೇಶದಲ್ಲಿ ಧಾರವಾಡ ಜಿಲ್ಲೆ ಬಿಟ್ಟು ಹೋಗಿತ್ತು.ಈಗ ಪರಿಷ್ಕೃತ ಆದೇಶದಲ್ಲಿ ಧಾರವಾಡ ಜಿಲ್ಲೆಯನ್ನೂ ಕೆಟಗರಿ -1ರ 16 ಜಿಲ್ಲೆಗಳ ಜೊತೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿಯಲ್ಲಿ 16 ಜಿಲ್ಲೆಗಳ ಮಾರ್ಗಸೂಚಿಗಳೆಲ್ಲ ಅನ್ವಯವಾಗುತ್ತದೆ. ರಾಜ್ಯ ಸರ್ಕಾರ ಜೂನ್‌ 20 ರಂದು ಪರಿಷ್ಕೃತ ಆದೇಶ ಹೊರಡಿಸಿದೆ. *ಎಲ್ಲ … Continued

ಬಿಜೆಪಿ ಅಧ್ಯಕ್ಷ ನಡ್ಡಾ ಜತೆ ಸಿಎಂ ಬಿಎಸ್‌ವೈ ವಿಡಿಯೋ ಸಂವಾದ

ಬೆಂಗಳೂರು: ದೇಶಾದ್ಯಂತ ನಾಳೆ (ಜೂನ್‌ 21) ಲಸಿಕಾ ಅಭಿಯಾನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಭಾನುವಾರ ವೀಡಿಯೊ ಸಂವಾದ ನಡೆಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಈ ವೀಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ … Continued