ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 4867 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದೇ ಸಮಯದಲ್ಲಿ 142 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 8404 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ತಿಳಿಸಿದೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,11,320ಕ್ಕೆ … Continued

ಬಿಎಸ್ಸಿ ಅಗ್ರಿ ಸೀಟು ಮೀಸಲಾತಿ 50%ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದ ನಿರ್ಧಾರ:ಸಚಿವ ಬೊಮ್ಮಾಯಿ

ಬೆಂಗಳೂರು: ಬಿಎಸ್ಸಿ ಅಗ್ರಿ ಮತ್ತು ಸರಿ ಸಮಾನ ಕೋರ್ಸ್‌ಗಳಲ್ಲಿ ರೈತ ಮಕ್ಕಳಿಗೆ ನೀಡಲಾಗ್ತಿದ್ದ ಮೀಸಲಾತಿ ಪ್ರಮಾಣವನ್ನ ಶೇ.40ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸೋಮವಾರ ಸಚಿವ ಸಂಪುಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ‘ಸಾದಿಲ್ವಾರು ನಿಧಿಯನ್ನು 2500 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಮೈಸೂರು … Continued

ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ವರದಿ ಕೈಸೇರಿದ ಬಳಿಕ ಶಾಲಾ ಚಟುವಟಿಕೆಗಳ ಕುರಿತು ನಿರ್ಧಾರ

ಬೆಂಗಳೂರು: ಕೋವಿಡ್ ಮೂರನೇ ಅಲೆ ಸಂಬಂಧ ಆರೋಗ್ಯ ತಜ್ಞ ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ವರದಿ ತಮ್ಮ‌ ಕೈಸೇರಿದ ಬಳಿಕ ಕೂಲಂಕಷವಾಗಿ ಪರಿಶೀಲಿಸಿ, ಶಾಲಾ ಚಟುವಟಿಕೆಗಳ‌ ಕುರಿತು ಸೂಕ್ತ‌ ನಿರ್ಣಯ ಕೈಗೊಳ್ಳಲಾಗುವುದೆಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಲಿದೆ ಎಂದು ಹೇಳಲಾಗಿದೆ. ಡಾ.ದೇವಿಶೆಟ್ಟಿ ಅವರ ವರದಿಯಲ್ಲಿ‌ ತರಗತಿ ಕಲಿಕೆಯ … Continued

ಎನ್ಇಕೆಆರ್ ಟಿಸಿ ಮಾಸಿಕ ಬಸ್ ಪಾಸ್ ಅವಧಿ ವಿಸ್ತರಣೆ

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಕಳೆದ‌ ಏಪ್ರಿಲ್ 7 ರಿಂದ ಕೈಗೊಂಡ ಅನಿರ್ಧಿಷ್ಟಾವಧಿ ಮುಷ್ಕರದ ಅವಧಿ ಹಾಗೂ ಏಪ್ರಿಲ್ 28 ರಿಂದ ಘೋಷಿಸಲಾದ ಕೋವಿಡ್ ಲಾಕ್‍ ಡೌನ್ ಪ್ರಾರಂಭದ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಮಾಸಿಕ ಬಸ್ ಪಾಸುಗಳು ಲಾಕ್ಡೌನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದೆ … Continued

ಕರ್ನಾಟಕದಲ್ಲಿ ಮತ್ತೆ 6 ಜಿಲ್ಲೆಗಳು ಅನ್‌ಲಾಕ್: ಸರ್ಕಾರದ ಹೊಸ ಆದೇಶ..!

ಬೆಂಗಳೂರು: ಕರ್ನಾಟಕ ಸರ್ಕಾರ ಅನ್‌ಲಾಕ್ 2.0 ಪಟ್ಟಿಗೆ ಮತ್ತೆ 6 ಜಿಲ್ಲೆಗಳನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ರಾಜ್ಯದಲ್ಲಿ ಅನ್‌ಲಾಕ್ ಜಾರಿಗೆ ಬಂದಿದೆ. ಸೋಮವಾರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳನ್ನು ಅನ್‌ಲಾಕ್‌ ಪಟ್ಟಿಗೆ ಸೇರಿಸಲಾಗಿದೆ. ಜೂನ್ … Continued

ಮಾಸಿಕ ಬಸ್‌ ಪಾಸುಗಳ ಮಾನ್ಯತಾ ಅವಧಿ ವಿಸ್ತರಣೆ

ಹುಬ್ಬಳ್ಳಿ; ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಚಾಲನೆ ಸಿಬ್ಬಂದಿಯಿಂದ   07.04.2021 ರಿಂದ  ಮುಷ್ಕರ ಹಾಗೂ ದಿನಾಂಕ: 28.04.2021 ರಿಂದ ಸರ್ಕಾರ ಜನತಾ ಕರ್ಪ್ಯೂ / ಲಾಕಡೌನ್ ಘೋಷಿಸಿದ ಕಾರಣ ಪ್ರಯಾಣಿಕರಿಗೆ ಅನನುಕೂಲವಾಗಿರುವುದನ್ನು ಗಮನದಲ್ಲಿರಿಸಿ, ಮುಷ್ಕರದ ಅವಧಿ ಹಾಗೂ ಲಾಕಡೌನ್ ಪ್ರಾರಂಭದ ಅವಧಿಯಲ್ಲಿ ಮಾಸಿಕ ಬಸ್ ಪಾಸುಗಳು ಚಾಲ್ತಿಯಲ್ಲಿದ್ದ ಹಾಗೂ ಲಾಕಡೌನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ … Continued

ತೈಲಬೆಲೆ ಏರಿಕೆಗೆ ತೈಲ ಬಾ೦ಡ್‌ ಕಾರಣ ಎಂದು ಅಪಪ್ರಚಾರ: ಆಧಾರ ಸಮೇತ ಲದವಾ ಖಂಡನೆ

ಹುಬ್ಬಳ್ಳಿ: ಕಾಂಗೆಸ್‌ ನೇತೃತ್ವದ ಯುಪಿಎ ಸರ್ಕಾರ ಅವಧಿಯಲ್ಲಿ ತೈಲ ಬಾಂಡ್‌ ಬಿಡುಗಡೆ ಮಾಡಿದ್ದರಿ೦ದ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆಗೆ ಕಾರಣವೆ೦ದು ಆಧಾರರಹಿತವಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ ಎ೦ದು ಜಿಲ್ಲಾ ಕಾ೦ಗ್ರೆಸ್‌ ವಕ್ತಾರ ವಕ್ತಾರ ವಸ೦ತ ಲದವಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ಬಿಡುಗಡೆ ಮಾಡಿರುವ ಅವರು, 2010ರ ವರೆಗೆ ಎಲ್ಲ ಸರ್ಕಾರಗಳು ತೈಲ … Continued

ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟಿದ್ದರೆ ಇವರಪ್ಪನ‌ಮನೆ ಗಂಟು ಹೋಗುತ್ತಿತ್ತಾ?

ಕೊಪ್ಪಳ:ಲಾಕ್ ಡೌನ್ ಮಾಡುವ ಮುನ್ನ ಬಿಪಿಎಲ್‌ ಕುಟುಂಬಗಳಿಗೆ 10 ಸಾವಿರ ಹಣ, 10 ಕೆಜಿ ಉಚಿತ ಪಡಿತರ ಅಕ್ಕಿ ಕೊಡಿ ಎಂದು ಸಲಹೆ ನೀಡಿದೆವು. ನಾನು ಮುಖ್ಯಮಂತ್ರಿ ಇದ್ದಾಗ 7 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ. ಇವರು ಕೇವಲ ಎರಡು ಕೆಜಿ ಕೊಡುತ್ತಿದ್ದಾರೆ. ಬಡವರಿಗೆ ಅಕ್ಕಿ ಕೊಟ್ಟಿದ್ದರೆ ಇವರಪ್ಪನ ಮನೆ ಗಂಟು ಹೋಗುತ್ತಿತ್ತಾ ಎಂದು ಪ್ರತಿಪಕ್ಷದ … Continued

ಮತ್ತೆ ನಾನು ಸಿಎಂ ಆಗಬೇಕೆನ್ನುವುದು ಶಾಸಕರ ವೈಯಕ್ತಿಕ ಅಭಿಪ್ರಾಯ: ಸಿದ್ದರಾಮಯ್ಯ

ಕೊಪ್ಪಳ: ಸಿದ್ದರಾಮಯ್ಯ ಅವರೇ ಮುಂದಿನ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ಕೆಲ ಶಾಸಕರು ಹೇಳುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದ ಕ್ಷೇತ್ರದಲ್ಲಿ ಜನತೆಗೆ ಕಿಟ್ ವಿತರಿಸಲು  ಸೋಮವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕೆಲ ಶಾಸಕರು ನಾನು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು … Continued

ಯೋಗ ಸಾಧಕ ಸ್ವಾಮೀಜಿ..! ವಿಶ್ವ ಯೋಗದಿನದಂದು ಸ್ವರ್ಣವಲ್ಲೀ ಶ್ರೀಗಳಿಂದ ವಿವಿಧ ಯೋಗಾಸನ

ಶಿರಸಿ:ಕಳೆದ ನಾಲ್ಕು ದಶಕಗಳಿಂದಲೂ ನಿರಂತರ ಯೋಗಾಭ್ಯಾಸ ನಡೆಸತ್ತಿರುವ ಸ್ವರ್ಣವಲ್ಲೀ ಶ್ರೀಗಳು ಸ್ವತಃ ಯೋಗ ಸಾಧಕ ಪೀಠಾಧೀಶರೂ ಹೌದು. ವಿಶ್ವ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಶ್ರೀಗಳು ಕೆಲ ಸಮಯ ಯೋಗದ ವಿವಧ ಆಸನಗಳು ಹಾಗೂ ಪ್ರಾಣಾಯಾಮಗಳನ್ನು ಮಾಡುವ ಮೂಲಕ ಗಮನ ಸೆಳೆದರು. ಜೊತೆಗೆ ಯೋಗಾಸನದ ಕ್ರಮಬದ್ಧತೆ ಹಾಗೂ ಸಮತ್ವದ ಬಗ್ಗೆ ವಿವರವಾಗಿ ಮಾತನಾಡಿದರು. ಜೀವನದ ಸಮತೆ … Continued