ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಅವಧಿ ವಿಸ್ತರಣೆ

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಮಾರ್ಚ್ 31ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರಸ್ತುತ ಶಾಲಾ-ಕಾಲೇಜು ಪುನರಾರಂಭದ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ಪಾಸಿನ ಆಧಾರದಲ್ಲಿಯೇ ಪ್ರಯಾಣಿಸಲು ಫೆ.28ರ ವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಮತ್ತಷ್ಟು ಕಾಲಾವಕಾಶ … Continued

ಬಿಎಂಟಿಸಿ ಮಾಸಿಕ ಪಾಸ್‌ ವಿತರಣೆ

ಬೆಂಗಳೂರು: ಬಿಎಂಟಿಸಿ ರಿಯಾಯ್ತಿ ದರದಲ್ಲಿ ಮಾಸಿಕ ಪಾಸ್‍ಗಳ ವಿತರಣೆ ಆರಂಭಿಸಿದೆ. ಮಾರ್ಚ್ ತಿಂಗಳ ಪಾಸುಗಳನ್ನು 65 ಸ್ಥಳಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಾಗಿದೆ ಎಂದು ತಿಳಿಸಲಾಗಿದೆ. ನಗರದ ಎಲ್ಲಾ 200 ಬೆಂಗಳೂರು ಒನ್ ಕೇಂದ್ರಗಳಲ್ಲಿ 17 ಸ್ಥಳಗಳಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಹಾಗೂ ಪಾಸ್ ಕೌಂಟರ್ ಲಭ್ಯವಿಲ್ಲದ 12 ಬಸ್ ನಿಲ್ದಾಣಗಳಲ್ಲಿ ಸಾರಥಿ ವಾಹನಗಳ ಮೂಲಕ ಮೂಲಕ … Continued

ಕೆಸ್ಸಾರ್ಟಿಸಿ ಪಾರ್ಸಲ್‌-‌ ಕಾರ್ಗೊ ಸೇವೆಗೆ ಸಿಎಂ ಬಿಎಸ್‌ವೈ ಚಾಲನೆ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪಾರ್ಸಲ್ ಕಾರ್ಗೊ ಸೇವೆ ಮತ್ತು ಕೆಎಸ್‍ಆರ್‍ಟಿಸಿ, ಕಿದ್ವಾಯಿ, ರೋಟರಿ ಸಹಯೋಗದೊಂದಿಗೆ ನಿರ್ಮಿಸಿರುವ ಮೊಬೈಲ್ ರಕ್ತದಾನದ ಬಸ್ಸನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಉದ್ಘಾಟಿಸಿದರು. ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಕಾರ್ಗೊ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಆದಾಯ ಕಂಡುಕೊಂಡಿರುವುದು … Continued

ಆರೋಗ್ಯ ಸಚಿವರಿಗೆ ಹೈಕೋರ್ಟ್ ನೊಟೀಸ್‌

ಬೆಂಗಳೂರು: ಬೆಂಗಳೂರು ನಗರದಲ್ಲಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್‌ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ಕರೆಯಲಾಗಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದುಪಡಿಸಿದ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಭಾರತ್‌ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿದ್ದ ಪಿಐಎಲ್‌ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ … Continued

ಕೋ-ವಿನ್ ಅಪ್ಲಿಕೇಶನ್ ನವೀಕರಿಸಲು ಫೆ.೨೭, ೨೮ರಂದು ಕೊವಿಡ್‌ ವ್ಯಾಕ್ಸಿನೇಷನ್ ಇಲ್ಲ

ಭಾರತದಲ್ಲಿ ಚುಚ್ಚುಮದ್ದಿನ ಪ್ರಮಾಣ ನಿದಾನಗತಿಯಲ್ಲಿದೆ ಎಂಬ ಟೀಕೆಗಳ ಮಧ್ಯಯೇ ಫೆ.೨೭ ಹಾಗೂ ೨೮ರಂದು ಎರಡು ದಿನಗಳು ಲಸಿಕೆ ಡ್ರೈವ್‌ಗೆ ವಿರಾಮ ಬೀಳಲಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಫೆ.೨೭ ಹಾಗೂ ೨೮ರಂದು (ಶನಿವಾರ ಮತ್ತು ಭಾನುವಾರ) ಕೊವಿಡ್‌ ವ್ಯಾಕ್ಸಿನ್‌ ಅವಧಿಗಳನು ನಿಗದಿ ಪಡಿಸಲಾಗುವುದಿಲ್ಲ ಎಂದು ಶುಕ್ರವಾರ ಪ್ರಕಟಣೆ ಮೂಲಕ ತಿಳಿಸಿದೆ. ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ … Continued

ಕಾವೇರಿ ಹೆಚ್ಚುವರಿ ನೀರು ಬಳಕೆಗೆ ತಮಿಳುನಾಡು ಹೊಸ ಯೋಜನೆ: ಬೊಮ್ಮಾಯಿ ಖಂಡನೆ

ಕಾವೇರಿ ನದಿಯ ಹೆಚ್ಚುವರಿ ನೀರು ಹಂಚಿಕೆಯಾಗದಿದ್ದರೂ ಅದರ ಬಳಕೆಗೆ ತಮಿಳುನಾಡು ಯೋಜನೆ ರೂಪಿಸಿರುವುದು ಖಂಡನೀಯ ಎಂದು ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ತಮಿಳುನಾಡು ಸರಕಾರದ ಯೋಜನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ತಮಿಳುನಾಡು ಸರಕಾರ ಕಾವೇರಿ ನದಿಯ ಹೆಚ್ಚುವರಿ ೪೫ ಟಿಎಂಸಿ ನೀರು ಬಳಕೆಯ ಯೋಜನೆಗೆ ಅಡಿಗಲ್ಲು ಹಾಕಿದೆ. ಮುಂದೆ ರಾಜ್ಯ ಯಾವ ಕ್ರಮ … Continued

ತುಮಕೂರು ಮೇಯರ್‌ ಚುನಾವಣೆ: ಬಿಜೆಪಿ ಜೊತೆ ಕೈಜೋಡಿಸಿ ಮತ್ತೆ ಕಾಂಗ್ರೆಸ್‌ಗೆ ಶಾಕ್‌ ನೀಡಿದ ಜೆಡಿಎಸ್‌…!

ತುಮಕೂರು:ಬಿಜೆಪಿ ಹಾಗೂ ಕಾಂಗ್ರೆಸ್‌ ಜೊತೆ ಜೆಡಿಎಸ್‌ನ ಸಂಗೀತ ಖುರ್ಚಿ ಆಟ ಮುಂದುವರಿದೆ. ಎರಡು ದಿನಗಳ ಹಿಂದೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆ ವಿಚಾರದಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಜೊತೆ ಕೈಜೋಡಿಸಿ ಬಿಜೆಪಿಗೆ ಶಾಕ್‌ ನೀಡಿದ್ದ ಜೆಡಿಎಸ್‌ ಶುಕ್ರವಾರ ತುಮಕೂರು ಪಾಲಿಕೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿ ಮತ್ತೆ ಕಾಂಗ್ರೆಸ್‌ಗೆ ಶಾಕ್‌ ನೀಡಿದೆ..!! ಮೇಯರ್‌ ಹಾಗೂ … Continued

ಬೀದರ್:‌ ಅನಧಿಕೃತ ಸ್ಫೋಟಕಗಳ ಸಂಗ್ರಹ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಅನಧಿಕೃತ ಸ್ಫೋಟಕಗಳನ್ನು ಅಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಬೀದರ್‌ ತಾಲೂಕಿನ ಸುಲ್ತಾನಪುರ ಶಿವಾರದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿ.ಕೆ.ಕನ್ಸ್ಟ್ರಕ್ಷನ್‌ ಕಂಪೆನಿಯ ಮಾಲೀಕ, ಟಿಪ್ಪರ್‌ ಮಾಲಿಕ ಯಾದಗಿರಿಯ ಭೈರಾಪುರ ತಾಂಡಾದ ಶಂಕರ ಗೋವಿಂದ ಚವ್ಹಾಣ್‌, ವಿಜಯಪುರದ ಸಿಂದಗಿಯ ಟಿಪ್ಪರ್‌ ಚಾಲಕ ಮಹಾದೇವ್‌ ಪಾಂಡು ರಾಠೋಡ್‌, ಕಂಪೆನಿಯ ಮ್ಯಾನೇಜರ್‌ ಸೂರ‍್ಯಕಾಂತ ಗಣಪತಿ ಹೆಡಗಾಪುರ ವಿರುದ್ಧ ಬೀದರ್‌ ಗ್ರಾಮೀಣ ಪೊಲೀಸ್‌ … Continued

ರಾಜ್ಯದಲ್ಲಿ ಪಿಎಫ್‌ಐ-ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಲಿಂಬಾವಳಿ ಒತ್ತಾಯ

ಬೆಂಗಳೂರು: ಡಿಜೆ-ಕೆಜಿಹಳ್ಳಿ ಗಲಭೆ ಮತ್ತು ಸಂಘರ್ಷಕ್ಕೆ ಕಾರಣಕರ್ತ ಸಂಘಟನೆಗಳಾದ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಪಿಎಫ್‍ಐ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ರಾಜ್ಯ ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ. ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದಆಗಸ್ಟ್ 11 ರಂದು ಕೆ.ಜೆ … Continued

ಫೆ.೨೬ರಂದು ಲಾರಿ ಮುಷ್ಕರ, ನಿಂತಲ್ಲೇ ನಿಲ್ಲುವ ೬ ಲಕ್ಷ ಲಾರಿಗಳು

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿಫೆ,೨೬ರಂದು ಲಾರಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ,ಇಂಧನ ದರ, ಟೋಲ್, ವಿಮೆ ಹೆಚ್ಚಳದಿಂದ ಟ್ರಕ್ಕಿಂಗ್ ಉದ್ಯಮದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದರು. ಸ್ಕ್ರಾಪಿಂಗ್ ನೀತಿ, ಇ-ವೇ ಬಿಲ್, ಹಸಿರು ತೆರಿಗೆ ಹೆಚ್ಚಳ, ಬಿಎಸ್6 … Continued