ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 23 ಲಕ್ಷ ರೂ. ವಂಚನೆ: ಮಂಗಳೂರಿನಲ್ಲಿ ಆರೋಪಿ ಬಂಧನ

ನವದೆಹಲಿ: ದೆಹಲಿಯ ಹೋಟೆಲ್‌ನಿಂದ ಬಿಲ್ ಪಾವತಿಸದೆ ಚೆಕ್ ಔಟ್ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ವಂಚನೆ ಘಟನೆಯ ಎರಡು ತಿಂಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದ್ದು, ಯುಎಇ ರಾಜಮನೆತನದ ಸದಸ್ಯನಂತೆ ಸೋಗು ಹಾಕಿಕೊಂಡು ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ನಿಂದ 23.46 ಲಕ್ಷ … Continued

ಬಳ್ಳಾರಿಯಲ್ಲಿ ಗಾಯಕಿ​ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ

ಬಳ್ಳಾರಿ: ಬಳ್ಳಾರಿಯಲ್ಲಿ ತೆಲುಗು ಮೂಲದ ಗಾಯಕಿ ಮಂಗ್ಲಿ ಕಾರಿನ ಮೇಲೆ ಶನಿವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಬಳ್ಳಾರಿ ಉತ್ಸವದಲ್ಲಿ ಹಾಡಲೆಂದು ಗಾಯಕಿ ಮಂಗ್ಲಿ ಆಗಮಿಸಿದ್ದರು. ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ … Continued

ಮೈಸೂರು: ಚಿರತೆ ದಾಳಿಗೆ ಬಾಲಕ ಸಾವು, ಗ್ರಾಮದ ಸಮೀಪ ಚಿರತೆ ಎಳೆದೊಯ್ದ ಶವ ಪತ್ತೆ

ಮೈಸೂರು : ಜಿಲ್ಲೆಯ ಟಿ.ನರಸಿಪುರ ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಈಗ 11 ವರ್ಷದ ಬಾಲಕನನ್ನ ಚಿರತೆ ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮೃತ ಬಾಲಕನನ್ನು ಹೊರಳಹಳ್ಳಿ ಗ್ರಾಮದ ಜಯಂತ (11) ಎಂದು ಗುರುತಿಸಲಾಗಿದೆ. ಬಾಲಕ ಜಯಂತನ ಶವಕ್ಕಾಗಿ ರಾತ್ರಿಯೆಲ್ಲಾ ಗ್ರಾಮಸ್ಥರು ಹುಡುಕಾಟ ನಡೆಸಿದ್ದು ಘಟನಾ ಸ್ಥಳದಿಂದ 1 ಕಿಮೀ … Continued

ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ರಾಮಚಂದ್ರ ಹುದ್ದಾರ್‌, ವೆಂಕಟೇಶ ನಾಯಕ್‌ ನೇಮಕ

ಬೆಂಗಳೂರು: ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದ್ದಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ ವೆಂಕಟೇಶ ನಾಯಕ್‌ ಅವರನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರವು ಶನಿವಾರ ಅಧಿಸೂಚನೆ ಹೊರಡಿಸಿದೆ. ರಾಮಚಂದ್ರ ದತ್ತಾತ್ರೇಯ ಹುದ್ದಾರ್ ಮತ್ತು ವೆಂಕಟೇಶ್ … Continued

ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ: ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ ಪಿಎಸ್‌ಐ ಹಗರಣದ ಆರೋಪಿ

ಕಲಬುರ್ಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಕಳೆದ ಮಧ್ಯರಾತ್ರಿ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ವೀಡಿಯೊದಲ್ಲಿ ಜನ ಬಯಸಿದರೆ, ಅಫಜಲಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಜನ ಬಯಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ನಾನು ಓಡಿ … Continued

ವಿಜಯಪುರ ಜ್ಞಾನ ಯೋಗಾಶ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ

ವಿಜಯಪುರ: ಸಿಂದಗಿಯಲ್ಲಿ ಆಯೋಜನೆಗೊಂಡ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದ ಜ್ಞಾನ ಯೋಗಾಶ್ರಮಕ್ಕೆ ಶನಿವಾರ ಭೇಟಿ ನೀಡಿದರು. ನಡೆದಾಡುವ ದೇವರು ಪರಮಪೂಜ್ಯ ಲಿಂ.ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದ ಅವರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಗದ್ದುಗೆಗೆ ನಮಿಸಿದರು. ಸಿದ್ದೇಶ್ವರ ಶ್ರೀಗಳು ಕೊನೆಯ ದಿನಗಳನ್ನು ಕಳೆದ ಕೋಣೆಗೆ … Continued

ಸಿಂದಗಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ ಹೃದಯಾಘಾತದಿಂದ ನಿಧನ

ವಿಜಯಪುರ : ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶುಕ್ರವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಶಿವಾನಂದ ಪಾಟೀಲ ಅವರು ಪತ್ನಿ, ಪುತ್ರ … Continued

ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ: 20 ಆರೋಪಿಗಳ ವಿರುದ್ಧ 1500 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಎನ್ಐಎ

ಬೆಂಗಳೂರು: ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಮೂಲಭೂತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಗೆ ಸಂಪರ್ಕ ಹೊಂದಿರುವ 20 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ. ಎನ್​ಐಎ ಶುಕ್ರವಾರ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ 1500 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದು, 240 ಸಾಕ್ಷಿಗಳ ಹೇಳಿಕೆಗಳು ಸೇರಿ ಒಟ್ಟು … Continued

ಕುಮಟಾ : ಮುಳುಗುತ್ತಿದ್ದ ಬೋಟ್‌ನಿಂದ 17 ಮೀನುಗಾರರ ರಕ್ಷಣೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಬಳಿ ಸಮುದ್ರದಲ್ಲಿ ಮುಳಗುತ್ತಿದ್ದ ಪರ್ಸಿನ್‌ ಬೋಟ್‌ನಿಂದ 17 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಕುಮಟಾ ತಾಲುಕಿನ ಕಡ್ಲೆ ಬಳಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಶ್ರೀದೇವಿ ಅನುಗ್ರಹ ಹೆಸರಿನ ಬೋಟ್ ಬಂಡೆಗೆ ಬಡಿದು ಮುಳುಗಡೆಯಾಗಿದೆ. ಕರಾವಳಿ ಕಾವಲು ಪಡೆಯವರು ಹಾಗೂ ಅಕ್ಕಪಕ್ಕದ ಬೋಟ್‌ನಲ್ಲಿದ್ದವರು ಸೇರಿ ಎಲ್ಲ … Continued

ಬೊಲೆರೊ ಡಿಕ್ಕಿ: ಮೂವರು ಮಹಿಳೆಯರು ಸಾವು

ಕಾರವಾರ : ಭೀಕರ ಅಪಘಾತವೊಂದರಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಸೀತಾವಾಡದಲ್ಲಿ ನಡೆದ ವರದಿಯಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಖಾನಾಪುರದ ಫಾರ್ಲಿಯ ಪಾರ್ವತಿ ಗಾವಡಾ (55), ದುರ್ಗೆ ಕೋಲ್ಸೇಕರ್ (55), ತುಳಸಿ ಗಾವಡಾ (50) ಎಂದು ಗುರುತಿಸಲಾಗಿದೆ. ಬಿಪಿನ್‌ ತಾಳ್ವೆ ಎಂಬ … Continued