ಅಂತಾರಾಜ್ಯ ಜಲವಿವಾದ: ಅಗತ್ಯ ಕಂಡುಬಂದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ-ಸಿಎಂ ಬೊಮ್ಮಾಯಿ

ಬೆಂಗಳೂರು: ಸರ್ವಪಕ್ಷಗಳ ಸಭೆಯಲ್ಲಿ ಮೇಕೆದಾಟು ಹಾಗೂ ಇತರ ವಿಚಾರಗಳ ಕುರಿತು ದೀರ್ಘವಾದ ಚರ್ಚೆಯಾಗಿದೆ. ಅಂತಾರಾಜ್ಯ ಜಲವಿವಾದಗಳ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗದ ಜೊತೆ ತೆರಳಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಮಾತನಾಡಿದ … Continued

ಉಕ್ರೇನ್‍ನಲ್ಲಿ ಸಾವಿಗೀಡಾದ ನವೀನ್ ಪಾರ್ಥೀವ ಶರೀರ ಭಾನುವಾರ ಬೆಂಗಳೂರಿಗೆ

ಬೆಂಗಳೂರು: ರಷ್ಯಾ-ಉಕ್ರೇನ್​ ಯುದ್ಧದ ವೇಳೆ ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ ಭಾನುವಾರ ಮುಂಜಾನೆ 3.30ಕ್ಕೆ ಆಗಮಿಸಲಿದೆ. ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ನವೀನ್‌ ಮೃತದೇಹ ಆಗಮಿಸಲಿದೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಕ್ರೇನ್ ನಲ್ಲಿ ರಷ್ಯಾದ ಶೆಲ್‌ ದಾಳಿಗೆ ಮೃತಪಟ್ಟ ನವೀನ್ ಪಾರ್ಥಿವ ಶರೀರ ತವರಿಗೆ ತರಲಾಗುತ್ತದೆ. ಭಾನುವಾರ ಬೆಳಗಿನ … Continued

ಬಸ್​-ಬೈಕ್ ನಡುವೆ ಡಿಕ್ಕಿ; ಸಹೋದರರಿಬ್ಬರ ಸಾವು

ಮಂಗಳೂರು: ಕೆಸ್​ಆರ್​​ಟಿಸಿ ಬಸ್​ ಹಾಗೂ ಬೈಕ್‌ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಸಹೋದರರಿಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಗರ್ಡಾಡಿ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿಗಳಾದ ಸಿರಾಜ್, ಸಾದಿಕ್ ಎಂದು ಗುರುತಿಸಲಾಗಿದೆ. ಮೃತಪಟ್ಟವರ ಮನೆಗೆ ಹೋಗಿ ಹಿಂದಿರುಗಿ ಬರುತ್ತಿದ್ದಾಗ ಈ ಅವಘಡ … Continued

ಕರ್ನಾಟಕದಲ್ಲಿ ಹಲವೆಡೆ ನಾಲ್ಕು ದಿನ ಮಳೆ ಸಾಧ್ಯತೆ: ಮುನ್ಸೂಚನೆ

ಬೆಂಗಳೂರು : ಇಂದಿನಿಂದ (ಮಾರ್ಚ್‌ 18) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾರ್ಚ್ 21ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್ 19 ರಂದು ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳ ಕೆಲವು … Continued

ಬೆಂಗಳೂರು ಐಐಎಸ್‌ಸಿಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 105 ಕೋಟಿ ರೂ. ದೇಣಿಗೆ ನೀಡಿದ ಅಜಿತ್-ಸಾರಾ ಇಸಾಕ್ ದಂಪತಿ..!

ಬೆಂಗಳೂರು: ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ಸಂಸ್ಥೆ ಕ್ವೆಸ್ ಕಾರ್ಪ್ ಸಂಸ್ಥಾಪಕ ಅಜಿತ್ ಇಸಾಕ್ ಮತ್ತು ಅವರ ಪತ್ನಿ ಸಾರಾ ಇಸಾಕ್ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಸಾರ್ವಜನಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು 105 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ..! ಅಜಿತ್ ಮತ್ತು ಸಾರಾ ಇಸಾಕ್ ಸೆಂಟರ್ ಫಾರ್ ಪಬ್ಲಿಕ್ ಹೆಲ್ತ್ (ICPH) ಎಂದು … Continued

15 ಸಾವಿರ ಶಿಕ್ಷಕರ ನೇಮಕಾತಿ : ಮೇ 21, 22ರಂದು ಸಾಮಾನ್ಯ ಪ್ರವೇಶ ಪರೀಕ್ಷೆ

ಬೆಂಗಳೂರು: ಶಿಕ್ಷಕರ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 21 ಮತ್ತು 22ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಮಾರ್ಚ್‌ 22 ರಿಂದ ಏಪ್ರಿಲ್‌ 22ರ ವರೆಗೆ ಅರ್ಜಿ ಸಲ್ಲಿಕೆ ಅವಕಾಶವಿದೆ. … Continued

ಈ ವರ್ಷ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯ ವಿಷಯ ಅಳವಡಿಕೆ ಇಲ್ಲ: ಸಚಿವ ನಾಗೇಶ

ಬೆಂಗಳೂರು: ಗುಜರಾತ್‌ನಲ್ಲಿ ಮಾಡಿದಂತೆ ಕರ್ನಾಟಕದಲ್ಲೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಪರಿಚಯಿಸುವ ವಿಚಾರ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಪಠ್ಯಪುಸ್ತಕದಲ್ಲಿ ಈ ವರ್ಷ ಪಠ್ಯದಲ್ಲಿ ಭಗವದ್ಗೀತೆಯನ್ನ ಸೇರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಹಲವರು ಈಗ ಪುಸ್ತಕದಲ್ಲಿ ಜ್ಞಾನವಿದೆ, ಆದರೆ ಸಂಸ್ಕಾರವಿಲ್ಲ ಎಂದು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸಬೇಕಿದೆ. ನೈತಿಕತೆ … Continued

ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ

ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದ ಬಗ್ಗೆ ವರದಿಯಾಗಿದೆ. ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಗಬ್ಬೂರ ಬೈಪಾಸ್ ವೃತ್ತದ ಬಳಿಯ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಮತ್ತು ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ದೊಡ್ಡಬಳ್ಳಾಪುರವರಾದ … Continued

ರೈಲು ಡಿಕ್ಕಿ ಹೊಡೆದು ಕಾಡುಕೋಣ-ಮರಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಗಡಿಪಿಲ ಬಳಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಡುಕೋಣ ಮತ್ತು ಅದರ ಮರಿ ಮೃತಪಟ್ಟ ಘಟನೆ ಗುರುವಾರ ಮಾ.17ರಂದು ನಡೆದ ಬಗ್ಗೆ ವರದಿಯಾಗಿದೆ. ಕಾಡುಕೋಣ ಮತ್ತು ಅವರ ಮರಿ ಮೇವು ಅರಸಿ ಕಾಡಿನಿಂದ ಹೊರ ಬಂದಿದ್ದು, ಈ ವೇಳೆ ಗುರುವಾರ ಬೆಳಿಗ್ಗೆ ರೈಲುಹಳಿ ದಾಟುವಾಗ ರೈಲು … Continued

ಮಲ್ಪೆಯಲ್ಲಿ ಹಿಜಾಬ್ ಪರ ಗೋಡೆ ಬರಹ

ಉಡುಪಿ: ಮಲ್ಪೆಯ ಬೈಲಕೆರೆ ಪರಿಸರದಲ್ಲಿ ಹಿಜಾಬ್ ಪರವಾಗಿ ಕಿಡಿಗೇಡಿಗಳು ಗೋಡೆಬರಹ ಬರೆದಿದ್ದಾರೆ. ನ್ಯಾಯಾಲಯ ಹಿಜಾಬ್ ವಿರುದ್ಧ ಆದೇಶ ನೀಡಿದ ಬೆನ್ನಲ್ಲೇ ಗೋಡೆ ಬರಹ ಬರೆಯಲಾಗಿದೆ. ಬೈಲಕೆರೆಯಲ್ಲಿರುವ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಬರಹ ಕಂಡುಬಂದಿದೆ. “ಹಿಜಾಬ್ ಮೂವ್ ಮೆಂಟ್”, “ಹಿಜಾಬ್ ಈಸ್ ಅವರ್ ರೈಟ್” ಎಂಬ ಗೋಡೆ ಬರಹ ಪತ್ತೆಯಾಗಿದೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ನ್ಯಾಯಾಲಯದ … Continued