ಹರ್ಷ ಹತ್ಯೆ ಪ್ರಕರಣ: ಎನ್‌ಐಎ ತಂಡದಿಂದ ಶಿವಮೊಗ್ಗದಲ್ಲಿ 18 ಕಡೆ ಶೋಧ

ಶಿವಮೊಗ್ಗ: ಹಿಂದೂ ಸಂಘಟನೆಗಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು, ಗುರುವಾರ ಶಿವಮೊಗ್ಗ ಜಿಲ್ಲೆಯ 18 ಕಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಎನ್‌ಐಎ ಅಧಿಕಾರಿಗಳು ಶಿವಮೊಗ್ಗಕ್ಕೆ ಬುಧವಾರ ರಾತ್ರಿ ಬಂದಿಳಿದಿದ್ದು, ಇಂದು ಬೆಳಗ್ಗೆ ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳು, ಜಿಲ್ಲೆಯ ಅಧಿಕಾರಿಗಳನ್ನೂ … Continued

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ 4 ದಿನ ಭಾರೀ ಮಳೆ ಸಾಧ್ಯತೆ: ಆರೆಂಜ್- ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ನಾಳೆ ಜೂನ್‌ ೧ರಿಂದ ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 2 ರಿಂದ 4 ರವರೆಗೆ ಯೆಲ್ಲೋ ಅಲರ್ಟ್ … Continued

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಗುರುವಾರ ಶಾಲೆಗಳಿಗೆ ತೆರಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದಾರೆ. ಹಾಗೂ ಪಿಯು ಮತ್ತು ಪದವಿ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಹವಾಮಾನ ಇಲಾಖೆ ದಕ್ಷಿಣ ಕನ್ನಡದಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ, ಭಾರೀ ಮಳೆಯ … Continued

ಉದಯಪುರ ಟೈಲರ್‌ ಹತ್ಯೆ ಖಂಡಿಸಿ ಹಿಂದೂ ಲೈವ್ಸ್ ಮ್ಯಾಟರ್ ಫಲಕ ಹಿಡಿದ ನಟಿ ಪ್ರಣಿತಾ

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಟೈಲರ್‌ನ ಭೀಕರ ಹತ್ಯೆ ಖಂಡಿಸಿ ದೇಶಾದ್ಯಂತ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಹಲವರು ಪ್ರತಿಭಟನಾರ್ಥವಾಗಿ ಹಲವು ಅಭಿಯಾನವನ್ನು ಮಾಡುತ್ತಿದ್ದಾರೆ. ಬಹುಭಾಷಾ ನಟಿ ಪ್ರಣಿತಾ ಸುಭಾಷ ಕೂಡ ವಿಭಿನ್ನ ರೀತಿಯಲ್ಲಿ ಈ ಘಟನೆಯನ್ನು ಖಂಡಿಸಿದ್ದಾರೆ. ಹಿಂದೂ ಲೈವ್ಸ್ ಮ್ಯಾಟರ್ ಎಂದು ಬರೆದಿರುವ ಫಲಕ ಹಿಡಿದುಕೊಂಡು ಅವರು ಭೀಕರ ಕೃತ್ಯವನ್ನು ಖಂಡಿಸಿದ್ದಾರೆ. ಇಸ್ … Continued

ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಠಾಣೆಗೆ ಬಂದು ಶರಣಾದ ತಂದೆ

ಕಲಬುರಗಿ : ತನ್ನ ಹೆಂಡತಿ ಬೇರೆಯವರ ಜೊತೆ ಮನೆ ಬಿಟ್ಟು ಓಡಿಹೋದಳು ಎಂಬ ಕಾರಣಕ್ಕೆ  ನಾಲ್ವರು ಮಕ್ಕಳ ತಂದೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೈಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಗರದ ಭೋವಿ ಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಅಪ್ಪನಿಂದ ಕೊಲೆಯಾದ ಬಾಲಕಿಯರನ್ನು ಸೋನಿ(11) ಮಯೂರಿ (9) )ಎಂದು ಗುರುತಿಸಲಾಗಿದೆ. … Continued

ಕೊರೊನಾ ಏರಿಕೆ ಬೆನ್ನಲ್ಲೇ ಹೊಸ ಮಾರ್ಗಸೂಚಿ ಜಾರಿಗೆ

ಬೆಂಗಳೂರು: ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ನಿರೀಕ್ಷೆಗೂ ಕೊರೊನಾ ಸೋಂಕು ವೇಗವಾಗಿ ಏರಿಕೆಯಾಗುತ್ತಿರುವುದರಿಂದ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ಕಚೇರಿಗಳು, ವಿದ್ಯಾಸಂಸ್ಥೆ, ಕಾಲೇಜುಗಳು ಹಾಗೂ ಅಪಾರ್ಮೆಂಟ್‍ಗಳಲ್ಲಿ ಕೋವಿಡ್-19 ಪರೀಕ್ಷೆ, ಐಸೋಲೇಷನ್, ಚಿಕಿತ್ಸೆ ಹಾಗೂ ಕ್ವಾರಂಟೈನ್‍ಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಅಪಾರ್ಟ್‍ಮೆಂಟ್‍ಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. … Continued

ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಸಿಹಿಸುದ್ದಿ : ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ

ಬೆಂಗಳೂರು: ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಕಾಲೇಜು ಸೇರುವ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡುತ್ತಿದೆ. ಬಾಲಕಿಯರು ಇನ್ನು ಮುಂದೆ ಒಂದೇ ಒಂದು ರೂಪಾಯಿ ಶುಲ್ಕ ಭರಿಸಬೇಕಿಲ್ಲ, ವಿದ್ಯಾರ್ಥಿನಿಯರ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಬೇಕಿದೆ. ಈವರೆಗೆ ಕಾಲೇಜಿಗೆ ದಾಖಲಾಗುವ ವೇಳೆ ವಿದ್ಯಾರ್ಥಿನಿಯರು ಶುಲ್ಕವೆಂದು 456 ರೂ. … Continued

ಜಗಳ ಬಗೆಹರಿಸಲು ಬಂದ ಪತ್ನಿ ಸಂಬಂಧಿಕರನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ ಪತಿ: ಒಬ್ಬರು ಸಾವು, ಮೂವರಿಗೆ ಗಾಯ

ಯಾದಗಿರಿ : ದಂಪತಿ ಜಗಳ ಸರಿಮಾಡಲು ಹೋಗಿದ್ದ ಪತ್ನಿಯ ಸಂಬಂಧಿಕರನ್ನೇ ಮನೆಯಲ್ಲಿ ಕೂಡಿಹಾಕಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದು, ಈ ಘಟನೆಯಲ್ಲಿ ಒಬ್ಬರು ಸಾವಿಗೀಡಾಗಿ, ಇತರ ಮೂವರು ಗಾಯಗೊಂಡ ಘಟನೆ ನಾರಾಯಣಪುರದ ಛಾಯಾ ಕಾಲೊನಿಯಲ್ಲಿ ಬುಧವಾರ ನಡೆದಿದೆ‌. ಆರೋಪಿ ಶರಣಪ್ಪ  ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ … Continued

ಐಎಫ್‌ಎಸ್‌ ಪರೀಕ್ಷೆಯಲ್ಲಿ ಉತ್ತರ ಕನ್ನಡ ಯುವಕರ ಉತ್ತಮ ಸಾಧನೆ: ದೇಶಕ್ಕೆ 2ನೇ ರ‍್ಯಾಂಕ್ ಪಡೆದ ವರದರಾಜ ಗಾಂವಕರ, ನವೀನಕುಮಾರ ಹೆಗಡೆಗೆ 62ನೇ ರ‍್ಯಾಂಕ್

ಅಂಕೋಲಾ: ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ)ದಿಂದ ನಡೆಸಲಾಗಿದ್ದ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಮುಖ್ಯ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತೊರ್ಕೆಯ ವರದರಾಜ ಗಾಂವಕರ ರಾಷ್ಟ್ರಕ್ಕೆ ಎರಡನೇ ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಸಾಧನೆ ಮಾಡಿದ್ದಾರೆ. ಇದೇ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ  ಅಚವೆಯ ಎಸ್. … Continued