ಭಾರೀ ಮಳೆಗೆ ಪ್ರವಾಹ, ಭೂಕುಸಿತದಿಂದ ಕಂಗೆಟ್ಟ ಈಶಾನ್ಯ ಭಾರತ; ಅಸ್ಸಾಂ ಒಂದರಲ್ಲೇ ನಾಲ್ಕು ಲಕ್ಷ ಜನರು ಸಂತ್ರಸ್ತ..!

ಗುವಾಹತಿ: ಪ್ರವಾಹದ ನೀರು ಅಸ್ಸಾಂನ ಹೊಸ ಪ್ರದೇಶಗಳಿಗೆ ಪ್ರವೇಶಿಸುತ್ತಿದ್ದು, ಪ್ರವಾಹದಿಂದ ಅಸ್ಸಾಂನಲ್ಲಿ ಸಂತ್ರಸ್ತರ ಸಂಖ್ಯೆ ನಾಲ್ಕು ಲಕ್ಷಕ್ಕೆ ಏರಿಕೆಯಾಗಿದೆ, ಅಸ್ಸಾಂನ ಬರಾಕ್ ಕಣಿವೆ ಮತ್ತು ದಿಮಾ ಹಸಾವೊ ಜಿಲ್ಲೆ ಮತ್ತು ನೆರೆಯ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರಕ್ಕೆ ನಿರಂತರ ಮಳೆಯಿಂದ ಭೂಕುಸಿತಗಳು ಸಂಭವಿಸಿ ರೈಲು ಮತ್ತು ರಸ್ತೆ ಸಂಪರ್ಕಗಳನ್ನು ಸ್ಥಗಿತಗೊಳಿಸಿವೆ. ಅರುಣಾಚಲ ಪ್ರದೇಶ ಮತ್ತು … Continued

ಕಾಶ್ಮೀರ: ಬುರ್ಖಾದಲ್ಲಿ ಬಂದ ಉಗ್ರರಿಂದ ಅಂಗಡಿಯ ಮೇಲೆ ಗ್ರೆನೇಡ್ ಎಸೆತ, ಒಬ್ಬ ಸಾವು, ಮೂವರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ವೈನ್ ಶಾಪ್‌ಗೆ ಶಂಕಿತ ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮ ಓರ್ವ ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ರಜೌರಿ ನಿವಾಸಿ ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ. 35 ವರ್ಷದ ಇವರು ಗ್ಯಾರಿಸನ್ ಪೇಟೆಯಲ್ಲಿ ಹೊಸದಾಗಿ ತೆರೆಯಲಾದ ವೈನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗಾಯಗೊಂಡ ಮೂವರಲ್ಲಿ ಒಬ್ಬರ ಸ್ಥಿತಿ … Continued

ಗೋಧಿ ರಫ್ತು ಮೇಲಿನ ನಿರ್ಬಂಧ ಕೊಂಚ ಸಡಿಲಿಸಿದ ಕೇಂದ್ರ

ನವದೆಹಲಿ: ವಿದೇಶಗಳಿಗೆ ಗೋಧಿ ರಫ್ತನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಮಂಗಳವಾರ ಸ್ವಲ್ಪ ಸಡಿಲಿಕೆ ಮಾಡಿದೆ. ಮೇ 13ರಂದು ರಫ್ತು ನಿಷೇಧ ಆದೇಶ ಹೊರಡಿಸುವುದಕ್ಕೂ ಮೊದಲು ಆಮದು ಮಾಡುವುದಕ್ಕಾಗಿ ನೋಂದಣಿ ಮಾಡಿಕೊಂಡಿದ್ದ ಗೋಧಿಯನ್ನು ರಫ್ತು ಮಾಡಲು ಅನುಮತಿ ನೀಡಲಾಗಿದೆ. ರಫ್ತು ನಿಷೇಧ ಆದೇಶ ಹೊರಬೀಳುವ ವೇಳೆ ಈಜಿಪ್ಟ್ ಗೆ ಕಳುಹಿಸಲೆಂದು ಗುಜರಾತ್‌ನ ಕಾಂಡ್ಲಾದಲ್ಲಿ ಸರಕು ಹಡಗಿಗೆ ತುಂಬಲಾಗುತ್ತಿದ್ದ … Continued

ಮದುವೆಗೆ ಸಮಯಕ್ಕೆ ಬಾರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನ ಮದುವೆಯಾದ ವಧು..!

ಜೈಪುರ: ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಮದುಮಗ ತಡವಾಗಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಬೇರೊಬ್ಬನನ್ನು ಮದುವೆಯಾದ ಘಟನೆ ನಡೆದಿತ್ತು. ಈಗ ಅಂತಹದ್ದೇ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಚುರು ಜಿಲ್ಲೆಯ ವಧು ತನ್ನ ವರನ ಕುಡಿತದ ನೃತ್ಯದಿಂದ ಬಾರಾತ್​ಗೆ (ಮದುವೆ ಮೆರವಣಿಗೆ) ತಡವಾಗಿ ಬಂದಿದ್ದರಿಂದ ಕುಡಿತದ ಚಟಕ್ಕೆ ಕೋಪಗೊಂಡು ಆತನನ್ನು ಮದುವೆಯಾಗಲು … Continued

ಕೃಷ್ಣ ಜನ್ಮಭೂಮಿ ವಿವಾದ: ಶಾಹಿ ಈದ್ಗಾದ ವೀಡಿಯೋಗ್ರಫಿ ಕೋರಿದ ಅರ್ಜಿ ವಿಚಾರಣೆಗೆ ಮಥುರಾ ಕೋರ್ಟ್ ಸಮ್ಮತಿ

ಮಥುರಾ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ಕುರಿತು ನಡೆಯುತ್ತಿರುವ ವಿವಾದದ ನಡುವೆ, ಉತ್ತರ ಪ್ರದೇಶದ ಮಥುರಾದ ಸ್ಥಳೀಯ ನ್ಯಾಯಾಲಯವು ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯ ವೀಡಿಯೋಗ್ರಾಫಿಗೆ ಮಾಡಿವಂತೆ ಕೋರಿದ್ದ ಅರ್ಜಿಯ ವಿಚಾರಣೆಗೆ ಸಮ್ಮತಿಸಿದೆ. 13.37 ಎಕರೆ ಪ್ರದೇಶದಲ್ಲಿ ಹರಡಿರುವ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು … Continued

ಮಾಧ್ಯಮಗಳಿಗೆ ಸೋರಿಕೆ’: ಜ್ಞಾನವಾಪಿ ಸಮೀಕ್ಷಾ ಆಯುಕ್ತರನ್ನು ವಜಾಗೊಳಿಸಿದ ವಾರಾಣಸಿ ನ್ಯಾಯಾಲಯ

ವಾರಾಣಸಿ: ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಾರಾಣಸಿಯ ಸಿವಿಲ್ ಕೋರ್ಟ್, ತಾನು ನೇಮಿಸಿದ್ದ ಮೂವರು ಕಮಿಷನರ್‌ಗಳಲ್ಲಿ ಒಬ್ಬರಾದ ಅಜಯ್ ಮಿಶ್ರಾ ಅವರನ್ನು ತೆಗೆದುಹಾಕಿದೆ. ಮಿಶ್ರಾ ಅವರ ಸಹಾಯಕರು ಸಮೀಕ್ಷೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನಿಬ್ಬರು – ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ – ಕ್ರಮವಾಗಿ ಕೋರ್ಟ್ ಕಮಿಷನರ್ ಮತ್ತು ಡೆಪ್ಯುಟಿ ಕೋರ್ಟ್ … Continued

ಜ್ಞಾನವಾಪಿ ಮಸೀದಿ ವಿವಾದ: ಶಿವಲಿಂಗ ರಕ್ಷಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ, ಮಸೀದಿ ಪ್ರವೇಶಿಸಲು ಮುಸ್ಲಿಮರಿಗೆ ಅನುಮತಿ

ನವದೆಹಲಿ: ಹಿಂದೂಗಳು ಮತ್ತು ಮುಸಲ್ಮಾನರ ನಡುವೆ ವಿವಾದದ ವಿಷಯವಾಗಿರುವ ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಗೆ ಮುಸ್ಲಿಮರು ಪ್ರವೇಶಿಸದಂತೆ ವಾರಣಾಸಿ ಕೋರ್ಟ್‌ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ. ಕೋರ್ಟ್‌ ಕಮಿಷನರ್‌ ಸಮೀಕ್ಷೆ ವೇಳೆ ಮಸೀದಿ ಸಂಕೀರ್ಣದಲ್ಲಿ ಪತ್ತೆಹಚ್ಚಲಾಗಿದೆ ಎಂದು ಹೇಳಲಾದ ಶಿವಲಿಂಗವನ್ನು ಸಂರಕ್ಷಿಸುವಂತೆ ವಾರಣಾಸಿಯ ಜಿಲ್ಲಾಧಿಕಾರಿಗೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಪಿ … Continued

ಈ ದಶಕದ ಅಂತ್ಯದ ವೇಳೆಗೆ ಭಾರತ 6G ಟೆಲಿಕಾಂ ನೆಟ್‌ವರ್ಕ್ ಹೊರತರಲಿದೆ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಈ ದಶಕದ ಅಂತ್ಯದ ವೇಳೆಗೆ ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ 6G ಟೆಲಿಕಾಂ ನೆಟ್‌ವರ್ಕ್ ಅನ್ನು ಬಿಡುಗಡೆ ಮಾಡುವ ಗುರಿಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಭಾರತವು ಪ್ರಸ್ತುತ 3G ಮತ್ತು 4G ಟೆಲಿಕಾಂ ನೆಟ್‌ವರ್ಕ್‌ಗಳನ್ನು ಹೊಂದಿರುವ ಕಂಪನಿಗಳು ಮುಂದಿನ ಕೆಲವು ತಿಂಗಳುಗಳಲ್ಲಿ 5G ಪ್ರಾರಂಭಿಸಲು … Continued

ಐವರು ನ್ಯಾಯಮೂರ್ತಿಗಳನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸಲು ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸು

ನವದೆಹಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ ಮೇ 17ರಂದು ವಿವಿಧ ಹೈಕೋರ್ಟ್‌ಗಳ ಐವರು ನ್ಯಾಯಾಧೀಶರನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸಲು ಶಿಫಾರಸು ಮಾಡಿದೆ. ಅಲ್ಲದೆ, ಮುಖ್ಯ ನ್ಯಾಯಮೂರ್ತಿಯೊಬ್ಬರ ವರ್ಗಾವಣೆಗೂ ಶಿಫಾರಸು ಮಾಡಿದೆ. ಕೊಲಿಜಿಯಂ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಪಿನ್ ಸಂಘಿ ಅವರನ್ನು ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲು ಶಿಫಾರಸು ಮಾಡಿದೆ. ಬಾಂಬೆ ಹೈಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳಾದ ಅಮ್ಜದ್ ಎ. … Continued

ಹಳೆಯ ವಾಹನಗಳ ನಿಷೇಧ ಪ್ರಶ್ನಿಸಿದ್ದ ವಕೀಲರಿಗೆ 8 ಲಕ್ಷ ರೂ.ದಂಡ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ಮೇಲೆ ಹೇರಿದ್ದ ನಿಷೇಧ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಕೀಲರಿಬ್ಬರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ 8 ಲಕ್ಷ ರೂ.ಗಳ ದಂಡ ವಿಧಿಸಿದೆ. ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ, ಇದು ಮೂಟ್ ಕೋರ್ಟ್ ಸ್ಪರ್ಧೆಯಲ್ಲ … Continued