ಯುಜಿಸಿ ನೆಟ್ 2021 ಪರೀಕ್ಷೆ ಮತ್ತೊಮ್ಮೆ ಮುಂದೂಡಿಕೆ

ನವದೆಹಲಿ: ಯುಜಿಸಿ ನೆಟ್ 2021: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತೊಮ್ಮೆ ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್) 2021 ಪರೀಕ್ಷೆಯನ್ನು ಮುಂದೂಡಿದೆ. ಪರೀಕ್ಷೆಯನ್ನು ಈ ಹಿಂದೆ ಅಕ್ಟೋಬರ್ 17 ರಿಂದ ಅಕ್ಟೋಬರ್ 25 ರ ನಡುವೆ ನಡೆಸಲು ನಿರ್ಧರಿಸಲಾಗಿತ್ತು. ಈಗ, ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಯುಜಿಸಿ- ugcnet.nta.nic.in ಅಧಿಕೃತ ವೆಬ್‌ಸೈಟ್‌ನಲ್ಲಿ … Continued

5792.63 ಕೋಟಿ ರೂ.ಗಳಿಗೆ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಖರೀಸಿದ ರಿಲಯನ್ಸ್ ಇಂಡಸ್ಟ್ರೀಸ್

ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಭಾನುವಾರ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಅನ್ನು ಚೀನಾ ನ್ಯಾಷನಲ್ ಬ್ಲೂಸ್ಟಾರ್‌ನಿಂದ 771 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿತು. ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾಗಿದೆ, ಚೀನಾ ನ್ಯಾಷನಲ್ ಬ್ಲೂಸ್ಟಾರ್ (ಗ್ರೂಪ್) ಕೋ ಲಿಮಿಟೆಡ್ ನಿಂದ ರಿಲಯನ್ಸ್ … Continued

ಅಸ್ಸಾಂನ ಒಂದೇ ಜಿಲ್ಲೆಯ ಎರಡು ಜೈಲುಗಳಲ್ಲಿ ಒಂದು ತಿಂಗಳಲ್ಲಿ 85 ಕೈದಿಗಳಲ್ಲಿ ಏಡ್ಸ್ ಪತ್ತೆ.. !

ಅಸ್ಸಾಂನ ನಾಗಂವ್ ಜಿಲ್ಲೆಯ ಎರಡು ಜೈಲುಗಳಲ್ಲಿ ಕಳೆದ ಒಂದು ತಿಂಗಳಲ್ಲಿ 85 ಎಚ್​ಐವಿ ಪಾಸಿಟಿವ್ ಪ್ರಕರಣಗಳು (HIV Positive Cases) ಪತ್ತೆಯಾಗಿವೆ. ಸೆಂಟ್ರಲ್ ಜೈಲು ಮತ್ತು ಸ್ಪೆಷಲ್​ ಜೈಲಿನಲ್ಲಿ ಈ ಪ್ರಕರಣಗಳು ವರದಿಯಾಗಿವೆ. ಈ ಜೈಲುಗಳು ಅಸ್ಸಾಂನ ನಾಗಂವ್ ಜಿಲ್ಲೆಯಲ್ಲಿದ್ದು, ಪೂರ್ವ ಗುವಾಹಟಿಯಿಂದ 125 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಆರೋಗ್ಯ ಸೇವೆ ಜಂಟಿ ನಿರ್ದೇಶಕ ಅತುಲ್ … Continued

ಕಲ್ಲಿದ್ದಲು ಕೊರತೆ, ವಿದ್ಯುತ್​ ಪೂರೈಕೆ ವ್ಯತ್ಯಯ ಎಂಬುದೆಲ್ಲ ತಪ್ಪು ಕಲ್ಪನೆ, ಯಾವುದೇ ಭಯ ಬೇಡ ಎಂದ ಕೇಂದ್ರ ಸರ್ಕಾರ

ನವದೆಹಲಿ: ಚೀನಾ ಮತ್ತು ಯುರೋಪ್​​​ಗಳಲ್ಲಿ ಶುರುವಾಗಿರುವ ಕಲ್ಲಿದ್ದಲು ಅಭಾವದ ಬಿಕ್ಕಟ್ಟು (Coal Crisis) ಭಾರತದಲ್ಲೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಕಲ್ಲಿದ್ದಲು ಬಗ್ಗೆ ಅಭಯ ನೀಡಿದೆ. ಕಲ್ಲಿದ್ದಲು ಕೊರತೆ ಆತಂಕ … Continued

ಲಖಿಂಪುರ್ ಘಟನೆ ಹಿಂದೂ- ಸಿಖ್ ನಡುವಿನ ಕದನ ಮಾಡುವ ಪ್ರಯತ್ನ: ವರುಣ್ ಗಾಂಧಿ ಕಿಡಿ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯನ್ನು ಹಿಂದೂ-ಸಿಖ್ಖರ ನಡುವಿನ ಕದನ ಮಾಡಲು ನಡೆಸುತ್ತಿರುವ ಪ್ರಯತ್ನ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಎಚ್ಚರಿಸಿದ್ದಾರೆ. ಹಾಗೂ ಇದನ್ನು ಅನೈತಿಕ ಮತ್ತು ತಪ್ಪು ಕ್ರಮ ಎಂದು ಕಿಡಿಕಾರಿದ್ದಾರೆ. ಈ ತಪ್ಪುಗಳನ್ನು ಸೃಷ್ಟಿಸುವುದು ದೇಶಕ್ಕೆ ಮತ್ತು ಸಮಾಜಕ್ಕೆ ಅಪಾಯಕಾರಿ. ಗಾಯ ಆರಲು ತಲೆಮಾರುಗಳನ್ನು ತೆಗೆದುಕೊಂಡದ್ದಕ್ಕೆ ಮತ್ತೆ ಗಾಯವಾಗುವಂತೆ ಮಾಡುವುದು … Continued

ಲಖಿಂಪುರ್ ಹಿಂಸಾಚಾರ: ಆರೋಪಿ ಆಶಿಶ್ ಮಿಶ್ರಾ 14 ದಿನ ನ್ಯಾಯಾಂಗ ಬಂಧನಕ್ಕೆ

ಲಖಿಂಪುರ್: ಅಕ್ಟೋಬರ್ 3ರಂದು ನಡೆದಿದ್ದ ಲಖಿಂಪುರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಳೆದ ತಡರಾತ್ರಿ ಆಶಿಶ್ ಮಿಶ್ರಾ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಸತತ 12 ಗಂಟೆಗಳ ಕಾಲ ಎಸ್‌ಐಟಿ ತಂಡ … Continued

ಕಾಶ್ಮೀರ ಕಣಿವೆಯ 16 ಸ್ಥಳಗಳ ಮೇಲೆ ಎನ್‌ಐಎ ದಾಳಿ

ನವದೆಹಲಿ: ಐಸಿಸ್ ಪ್ರಕರಣ ಮತ್ತು ಟಿಆರ್‌ಎಫ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಕಾಶ್ಮೀರ ಕಣಿವೆಯ 16 ಸ್ಥಳಗಳಲ್ಲಿ ದಾಳಿ ನಡೆಸಿದೆ. ಮೂಲಗಳ ಪ್ರಕಾರ, ಶ್ರೀನಗರ, ಅನಂತನಾಗ್, ಕುಲ್ಗಾಮ್ ಮತ್ತು ಬಾರಾಮುಲ್ಲಾದ ಒಂಬತ್ತು ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿವೆ. ಹಲವಾರು ಕಲ್ಲು ತೂರಾಟಗಾರರು ಮತ್ತು ಭಾರತ ವಿರೋಧಿ ಅಂಶಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಅವರನ್ನು … Continued

ಸತತ 6ನೇ ದಿನವೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ..!

ನವದೆಹಲಿ: ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಸತತ ಆರನೇ ದಿನವೂ ಏರಿಕೆಯಾಗಿದೆ. ಪೆಟ್ರೋಲ್ 30 ಪೈಸೆ, ಡಿಸೇಲ್ 35 ಪೈಸೆ ಹೆಚ್ಚಾಗಿದೆ. ಈ ಮೂಲಕ ದೇಶದ ಹಲವು ಭಾಗಗಳಲ್ಲಿ ಇಂಧನ ದರ ದಾಖಲಾರ್ಹ ಮಟ್ಟಕ್ಕೆ ಏರಿದೆ. ಬೆಂಗಳೂರು, ದೆಹಲಿ, ಮುಂಬೈ, ಲೇಹ್ ಸೇರಿದಂತೆ ಹಲವು … Continued

ಭಾರತದಲ್ಲಿ 18,166 ಹೊಸ ಕೋವಿಡ್‌ ಪ್ರಕರಣಗಳು ದಾಖಲು.. ಏಳು ತಿಂಗಳಲ್ಲಿ ಇದು ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ಸಿನ 18,166 ಹೊಸ ಪ್ರಕರಣಗಳನ್ನು ಭಾರತವು ದಾಖಲಿಸಿದೆ, ಇದು 214 ದಿನಗಳಲ್ಲಿ ಅತ್ಯಂತ ಕಡಿಮೆ. ಇದೇ ಸಮಯದಲ್ಲಿ 214 ಸಾವುಗಳು ಕಡಿಮೆಯಾಗಿವೆ. ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 23,624 ಚೇತರಿಕೆಗಳನ್ನು ಕಂಡಿದೆ, ಒಟ್ಟು ಚೇತರಿಕೆಯ ಪ್ರಮಾಣವು ಸುಮಾರು … Continued

ಅಕ್ಟೋಬರ್ 16 ರಂದು ಕಾಂಗ್ರೆಸ್ ಕಾರ್ಯಕಾರಿ ಸಭೆ; ಲಖಿಂಪುರ ಹಿಂಸೆ, ಆಂತರಿಕ ಚುನಾವಣೆ ಮುಖ್ಯ ಅಜೆಂಡಾ

ನವದೆಹಲಿ: ಲಖಿಂಪುರ್ ಹಿಂಸಾಚಾರ ಸೇರಿದಂತೆ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಚರ್ಚಿಸಲು ಮತ್ತು ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಂಸ್ಥಿಕ ಚುನಾವಣೆಯನ್ನು ನಿರ್ಧರಿಸಲು ಕಾಂಗ್ರೆಸ್‌ನ ಉನ್ನತ ನಾಯಕತ್ವವು ಅಕ್ಟೋಬರ್ 16 ರಂದು ನವದೆಹಲಿಯಲ್ಲಿ ಸಭೆ ಸೇರಲಿದೆ. ಇತ್ತೀಚಿನ ಕೆಲವು ಪಕ್ಷಾಂತರಗಳು ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಪಕ್ಷದೊಳಗಿನ ಕೆಲವರ ಬೇಡಿಕೆಗಳ ನಂತರ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ … Continued