ಗಡಿ ಹಿಂಸಾಚಾರ: ಅಸ್ಸಾಂ ಸಿಎಂ, 6 ಮಂದಿ ಹಿರಿಯ ಅಧಿಕಾರಿಗಳ ವಿರುದ್ಧ ಮಿಜೋರಾಂ ಪೊಲೀಸರಿಂದ ಎಫ್‌ಐಆರ್ ದಾಖಲು..!

ಗುವಾಹಟಿ: ಗಡಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಜೋರಾಂ ಪೊಲೀಸರು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹಾಗೂ 6 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆಂದು ವರದಿಯಾಗಿದೆ. ಜುಲೈ.26 ರಂದು ಅಸ್ಸಾಂ-ಮಿಜೋರಾಮ್ ಅಂತರ್ ರಾಜ್ಯ ಗಡಿ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಹಾಗೂ ಇತರ 6 ಮಂದಿ … Continued

ಡೇಟಾ ಶೇಖರಣಾ ನಿಯಮಗಳು: ಆರ್‌ಬಿಐಗೆ ಆಡಿಟ್ ವರದಿ ಸಲ್ಲಿಸಿದ ಮಾಸ್ಟರ್‌ ಕಾರ್ಡ್

ನವದೆಹಲಿ: ಹೊಸ ಕಾರ್ಡ್‌ಗಳನ್ನು ನೀಡುವುದನ್ನು ಆರ್‌ಬಿಐ ನಿಷೇಧಿಸಿದ ನಂತರ, ಅಮೆರಿಕ ಮೂಲದ ಪಾವತಿ ತಂತ್ರಜ್ಞಾನದ ಪ್ರಮುಖ ಮಾಸ್ಟರ್‌ಕಾರ್ಡ್ ಶುಕ್ರವಾರ ಸ್ಥಳೀಯ ಡೇಟಾ ಶೇಖರಣಾ ಮಾನದಂಡಗಳ ಅನುಸರಣೆಯನ್ನು ತೋರಿಸುವ ಆಡಿಟ್ ವರದಿಯನ್ನು ಆರ್‌ ಬಿಐಗೆ ಸಲ್ಲಿಸಿದೆ ಎಂದು ಹೇಳಿದೆ. ಹೊಸ ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳನ್ನು ನೀಡುವುದಕ್ಕಾಗಿ ರಿಸರ್ವ್ ಬ್ಯಾಂಕ್ ಜುಲೈ 14 ರಂದು ಮಾಸ್ಟರ್‌ಕಾರ್ಡ್‌ಗೆ … Continued

ಜಾರ್ಖಂಡ್ ಬಳಿಕ ಉತ್ತರಪ್ರದೇಶದಲ್ಲಿ ನ್ಯಾಯಾಧೀಶರ ಕಾರಿಗೆ ಇನ್ನೊಂದು ಕಾರಿನಿಂದ ಹಲವಾರು ಬಾರಿ ಢಿಕ್ಕಿ

ಲಕ್ನೋ: ಜಾರ್ಖಂಡ್ ನ ಧನಬಾದಿನಲ್ಲಿ ಆಟೋರಿಕ್ಷಾ ಢಿಕ್ಕಿ ಹೊಡೆಸಿ ನ್ಯಾಯಾಧೀಶರೋರ್ವರನ್ನು ಕೊಲೆಗೈದ ಬೆನ್ನಿಗೇ ಈಗ ಉತ್ತರ ಪ್ರದೇಶದಲ್ಲಿ ಅಂತಹುದೇ ಪ್ರಯತ್ನ ನಡೆದ ಬಗಗೆ ವರದಿಯಾಗಿದೆ. ಘಟನೆಯಲ್ಲಿ ಫತೇಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಹಮ್ಮದ್ ಅಹ್ಮದ್ ಖಾನ್ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಅವರ ಗನ್ ಮ್ಯಾನ್ ಗಾಯಗೊಂಡಿದ್ದು, ಕಾರಿಗೆ ತೀವ್ರ ಹಾನಿಯಾಗಿದೆ. ಕೌಶಾಂಬಿಯ … Continued

18 ವರ್ಷಗಳಿಂದ ವ್ಯಕ್ತಿ ಶ್ವಾಸಕೋಶದಲ್ಲಿ ಸಿಲುಕಿದ್ದ ಪೆನ್ ನಿಬ್ ತೆಗೆದ ಕೇರಳ ವೈದ್ಯರು..!

ಕೊಚ್ಚಿ: 18 ವರ್ಷಗಳ ನಂತರ, ಸೂರಜ್ (32) ಎಂಬ ವ್ಯಕ್ತಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಆಕಸ್ಮಿಕವಾಗಿ ನುಂಗಿದ ಪೆನ್ನಿನ ತುಂಡನ್ನು ತೆಗೆದುಹಾಕಲಾಯಿತು. ಆಸ್ತಮಾ ಸಂಬಂಧಿತ ಚಿಕಿತ್ಸೆಗಾಗಿ ವರ್ಷಗಳಿಂದ ಚಿಕಿತ್ಸೆಪಡೆಯುತ್ತಿದ್ದ ಸೂರಜ ಅವರಿಗೆ ಈಗ ನಂತರವೇ ಪೆನ್ನಿನ ನಿಬ್ ಅವರ ಶ್ವಾಸಕೋಶದಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಘಟನೆ 2003 ರಲ್ಲಿ ನಡೆದಿದ್ದು, ಆಲುವಾ ನಿವಾಸಿ ಸೂರಜ್ ಒಂಭತ್ತನೇ ತರಗತಿಯಲ್ಲಿದ್ದಾಗ … Continued

ಭಯಾನಕ ವಿಡಿಯೋ: ಭೂಕುಸಿತವು ಹಿಮಾಚಲದ ಸಿರ್ಮೌರಿನ ಸಂಪೂರ್ಣ ರಸ್ತೆಯನ್ನೇ ನುಂಗಿಹಾಕಿದೆ..!

ನವದೆಹಲಿ: ಈ ಮಳೆಗಾಲದಲ್ಲಿ ಪರ್ವತಗಳೆಂದರೆ ರೋಮಾಂಚನವಾಗಬಹುದು. ಆದರೆ ಜಾಗರೂಕರಾಗಿರದಿದ್ದರೆ ಜೀವಕ್ಕೆ ಅಪಾಯವನ್ನುಂಟು ಮಾಡಬಹುದು. ಭಯಾನಕ ಘಟನೆಯಲ್ಲಿ, ಹಿಮಾಚಲ ಪ್ರದೇಶದ ಸಿರ್ಮೌರ್ ಪ್ರದೇಶದಲ್ಲಿ ಭೂಕುಸಿತವು ರಸ್ತೆಯ ಸಂಪೂರ್ಣ ವಿಸ್ತಾರವನ್ನೇ ನುಂಗಿಹಾಕಿ, ಪ್ರಯಾಣಿಕರನ್ನು ಭಯಭೀತರನ್ನಾಗಿ ಮಾಡಿತು. ಹಿಮಾಚಲ ಪ್ರದೇಶದ ನಹಾನ್‌ನ ಬದವಾಸ್ ಬಳಿ ಇಡೀ ಭೂಮಿಯು ಬೇರ್ಪಡುವ ಕ್ಷಣಗಳನ್ನು ತೋರಿಸುವ ವಿಡಿಯೊ ಹೊರಹೊಮ್ಮಿದೆ. ಇಲ್ಲಿಯವರೆಗೆ, ಘಟನೆಯಿಂದ ಯಾವುದೇ ಸಾವುನೋವುಗಳ … Continued

ಅಳ್ತಾರೆ, ಗಂಡನ ಜೊತೆ ಜಗಳವಾಡ್ತಾರೆ ಎನ್ನುವ ಸುದ್ದಿ ಮಾನಹಾನಿ ಆಗುತ್ತಾ ?:ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಗೆ ಕೋರ್ಟ್​ ಪ್ರಶ್ನೆ

ಮುಂಬೈ: ಪೊಲೀಸ್ ಮೂಲಗಳನ್ನು ಆಧರಿಸಿದ ವರದಿಗಳನ್ನು ದುರುದ್ದೇಶಪೂರಿತ ಮತ್ತು ಮಾನಹಾನಿಕರ ಎಂದು ಹೇಳಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಹೇಳಿದೆ. ಶಿಲ್ಪಾ ಅಳುತ್ತಿದ್ದಾರೆ, ಗಂಡನ ಜತೆ ಜಗಳವಾಡುತ್ತಿದ್ದಾರೆ ಇತ್ಯಾದಿಯಾಗಿ ಮಾನಹಾನಿಯಾಗುವಂಥ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ, ನಾನು ಅಳುವ ಫೋಟೋಗಳನ್ನು ಹಾಕುತ್ತಿದ್ದಾರೆ. ಆದ್ದರಿಂದ ನನ್ನ ಮಾನಹಾನಿಯಾಗಿದ್ದು, 25 ಕೋಟಿ ರೂಪಾಯಿ ಪರಿಹಾರ ಬೇಕು ಎಂದು ಖ್ಯಾತ ಬಾಲಿವುಡ್‌ ನಟಿ … Continued

ಹಾಡಹಗಲೇ ತನ್ನನ್ನು ತಾನೇ ಕೊಂದುಕೊಳ್ಳುವ ಮುನ್ನ ದಂತ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದ ಯುವಕ

ಕೊಚ್ಚಿ: ಇಲ್ಲಿ ಹಾಡಹಗಲೇ ತನ್ನನ್ನು ತಾನೇ ಕೊಂದುಕೊಳ್ಳುವ ಮೊದಲು 24 ವರ್ಷದ ಯುವಕನೊಬ್ಬ ಮಹಿಳಾ ವೈದ್ಯಕೀಯ ವಿದ್ಯಾರ್ಥಿನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಕೊಚ್ಚಿಯಿಂದ 35 ಕಿಮೀ ದೂರದಲ್ಲಿರುವ ಕೋತಮಂಗಲಂ ಸಮೀಪದ ನೆಲ್ಲಿಕುಳಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಕೊಲೆಗಾರನನ್ನು ರಾಖಿಲ್ (24) ಎಂದು ಗುರುತಿಸಲಾಗಿದೆ. ಮೃತ ವೈದ್ಯಕೀಯ ಮನಸಾ ಪಿ ವಿ (24) ನಾಲ್ಕನೇ … Continued

ಆಂದೋಲನದ ಸಮಯದಲ್ಲಿ ರೈತರ ಸಾವಿನ ಬಗ್ಗೆ ಎಂಟು ಪಕ್ಷಗಳಿಂದ ಜೆಪಿಸಿ ತನಿಖೆಗೆ ಒತ್ತಾಯ

ನವದೆಹಲಿ: ಶಿರೋಮಣಿ ಅಕಾಲಿ ದಳ (ಎಸ್‌ಎಡಿ), ಎಡಪಕ್ಷಗಳು, ಬಿಎಸ್ಪಿ, ಆರ್‌ಎಲ್‌ಪಿ, ಎನ್‌ಸಿಪಿ, ಶಿವಸೇನೆ ಮತ್ತು ಎನ್‌ಸಿ ಸೇರಿದಂತೆ ಎಂಟು ಪಕ್ಷಗಳು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶುಕ್ರವಾರ ಪತ್ರ ಬರೆದಿದ್ದು, ರೈತರ ಆಂದೋಲನದ ಸಮಯದಲ್ಲಿ ಸಂಭವಿಸಿದ ಸಾವಿನ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂದು ಒತ್ತಾಯಿಸಿವೆ. ಒಂಭತ್ತು ತಿಂಗಳ ಅವಧಿಯ ಕಿಸಾನ್ ಆಂದೋಲನದ … Continued

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಶೇ 99.37 ಮಂದಿ ಉತ್ತೀರ್ಣ, ಈ ಸಲವೂ ಬಾಲಕಿಯರ ಮೇಲುಗೈ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 12ನೇ ತರಗತಿಯ ಫಲಿತಾಂಶ ಶುಕ್ರವಾರ ಮಧ್ಯಾಹ್ನ ಪ್ರಕಟವಾಗಿದೆ. ಈ ವರ್ಷ ಶೇಕಡಾ 99.37 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 70 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶೇ. 95ರಷ್ಟು ಅಂಕಗಳಿಸಿರುವುದು ಈ ಬಾರಿಯ ವಿಶೇಷತೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಯೂ ಬಾಲಕಿಯರೇ ಮೇಲುಗೈ … Continued

ಭಾರತಕ್ಕೆ ಮತ್ತೊಂದು ಪದಕದ ಭರವಸೆ: ಬಾಡ್ಮಿಂಟನ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು

ಟೊಕಿಯೊ ಒಲಂಪಿಕ್ಸ್​ನಲ್ಲಿ ಪದಕದ ಬೇಟೆಗೆ ಮುನ್ನುಗ್ಗುತ್ತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕ್ವಾರ್ಟರ್​ ಫೈನಲ್​ನಲ್ಲಿ ಜಪಾನ್​ನ ಅಕನೆ ಯಾಮಗುಚಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮುಸಾಷಿನೊ ಫಾರೆಸ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ 21-13, 22-20ರ ಅಂತರದಿಂದ ಸಿಂಧು ಯಾಮಗುಚಿ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಮೊದಲಿಗೆ ಅಕನೆ ಯಾಮಗುಚಿ ಆಕ್ರಮಣಕಾರಿ ಆಟವಾಡುತ್ತಾ 6-5 ರ ಅಂತರದಲ್ಲಿ … Continued