15-20 ನಿಮಿಷ ಫ್ಲೈಓವರ್ ಮೇಲೆ ಸಿಲುಕಿಕೊಂಡ ಪ್ರಧಾನಿ..!: ಪ್ರಮುಖ ಭದ್ರತಾ ವೈಫಲ್ಯ, ಅರ್ಧದಲ್ಲೇ ಪ್ರಧಾನಿ ಪಂಜಾಬ್ ಭೇಟಿ ರದ್ದು

ಚಂಡೀಗಢ: ಪ್ರಮುಖ ಭದ್ರತಾಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್‌ನ ಫಿರೋಜ್‌ಪುರಕ್ಕೆ ನಿಗದಿಯಾಗಿದ್ದ ಭೇಟಿಯನ್ನು ಮಾರ್ಗಮಧ್ಯದಲ್ಲಿಯೇ ರದ್ದುಗೊಳಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಫಿರೋಜ್‌ಪುರದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ “ಕೆಲವು ಕಾರಣಗಳಿಂದಾಗಿ” ಸಮಾವೇಶ ಉದ್ದೇಶಿಸಿ ಮಾತನಾಡಲು ಪ್ರಧಾನಿಗೆ ಸಾಧ್ಯವಾಗುವುದಿಲ್ಲ ಎಂದು ಘೋಷಿಸಿದರು. ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಮತ್ತು ಈ ಸಂದರ್ಭದಲ್ಲಿ ಜನರನ್ನು … Continued

ಬಿಹಾರದ ಇಬ್ಬರು ಉಪಮುಖ್ಯಮಂತ್ರಿಗಳು, ಮೂವರು ಸಚಿವರಿಗೆ ಕೊರೊನಾ ಸೋಂಕು…

ಪಾಟ್ನಾ: ಬಿಹಾರದ ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ ಬಿಹಾರ ಸರ್ಕಾರದ ಐವರು ಸಚಿವರಿಗೆ ಕೊರೊನಾ ಸೋಂಕು ತಗುಲಿದೆ. ಬಿಹಾರದ ಉಪಮುಖ್ಯಮಂತ್ರಿಗಳಾದ ರೇಣುದೇವಿ ಮತ್ತು ತಾರ್ಕಿಶೋರ್ ಪ್ರಸಾದ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಅಬಕಾರಿ ಸಚಿವ ಸುನಿಲಕುಮಾರ, ಶಿಕ್ಷಣ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವಿಜಯಕುಮಾರ ಚೌಧರಿ ಮತ್ತು ಶಿಕ್ಷಣ ಸಚಿವ ಅಶೋಕ್ ಚೌಧರಿ ಅವರಿಗೂ … Continued

ಭಾರತದಲ್ಲಿ ಓಮಿಕ್ರಾನ್ ಉಲ್ಬಣ ಡೆಲ್ಟಾ ಅಲೆಯ ಉಲ್ಬಣದಂತೆಯೇ ಇರುವ ಸಾಧ್ಯತೆಯಿದೆ, ಜನವರಿ ಅಂತ್ಯದಲ್ಲಿ ಗರಿಷ್ಠ ಮಟ್ಟಕ್ಕೆ: ತಜ್ಞರು

ನವದೆಹಲಿ: ಭಾರತವು ಡೆಲ್ಟಾ ತರಂಗದ ಸಮಯದಲ್ಲಿ ಕಂಡಂತೆ ಓಮಿಕ್ರಾನ್-ಚಾಲಿತ ಉಲ್ಬಣದಲ್ಲಿಯೂ ಲಕ್ಷಾಂತರ ಸೋಂಕುಗಳನ್ನು ನೋಡುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ (IHME) ನಿರ್ದೇಶಕ ಮತ್ತು ವಿಶ್ವವಿದ್ಯಾನಿಲಯದ ಆರೋಗ್ಯ ಮಾಪನ ವಿಜ್ಞಾನಗಳ ಅಧ್ಯಕ್ಷ ಡಾ ಕ್ರಿಸ್ಟೋಫರ್ ಮುರ್ರೆ ಹೇಳಿದ್ದಾರೆ. . ಭಾರತದಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ 50,000 ಸೋಂಕಿನ ಗಡಿ … Continued

ಭಾರತದಲ್ಲಿ ಮತ್ತೆ ಉಲ್ಬಣದತ್ತ ಕೋವಿಡ್‌ ಸೋಂಕು..!: 58,000ಕ್ಕೂ ಹೊಸ ದೈನಂದಿನ ಕೋವಿಡ್ -19 ಪ್ರಕರಣಗಳು ದಾಖಲು, ಹಿಂದಿನ ದಿನಕ್ಕಿಂತ 55.4% ಹೆಚ್ಚು..!

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 534 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರದ ಬುಲೆಟಿನ್‌ ತಿಳಿಸಿದೆ. ಬುಧವಾರ ವರದಿಯಾದ ದೈನಂದಿನ ಪ್ರಕರಣಗಳು ಮಂಗಳವಾರ ವರದಿಯಾದ ಪ್ರಕರಣಗಳಿಗಿಂತ 55.4% ಹೆಚ್ಚಾಗಿದೆ. ಏತನ್ಮಧ್ಯೆ, ದೇಶದಲ್ಲಿ ದೈನಂದಿನ ಸಕಾರಾತ್ಮಕತೆಯ ದರವು 4.18% ತಲುಪಿದೆ. … Continued

ಸಾವಿರಾರು ಅನಾಥರ ‘ಮಾಯಿʼ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ

ಪುಣೆ: ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧೂತಾಯಿ ಸಪ್ಕಾಲ್ ಪುಣೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. 74 ವರ್ಷದ ಸಿಂಧೂತಾಯಿ ಸಪ್ಕಾಲ್ ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ 8.10ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. “ಮಾಯಿ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಪ್ಕಾಲ್, ಪುಣೆಯಲ್ಲಿ ಸನ್ಮತಿ … Continued

ಮುಂಬಯಿನಲ್ಲಿ ಒಂದೇ ದಿನ 10,860 ಹೊಸ ಕೊರೊನಾ ಸೋಂಕು ಪತ್ತೆ; ಮಹಾರಾಷ್ಟ್ರದಲ್ಲಿ 18,466 ಪ್ರಕರಣಗಳು ದಾಖಲು..!

ಮುಂಬಯಿ: ಕೊರೊನಾದ ಮೊದಲೆರಡು ಅಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿನ ಪ್ರಕರಣಗಳೊಂದಿಗೆ ದೇಶದಲ್ಲೇ ಪ್ರಮುಖ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದ ಮುಂಬಯಿ ಮಹಾನಗರಿ ಮೂರನೇ ಅಲೆಯಲ್ಲೂ ಮತ್ತೆ ಹಾಟ್‌ಸ್ಪಾಟ್‌ ಆಗುತ್ತಿದೆ. ಅದೇರೀತಿ ಮಹಾರಾಷ್ಟ್ರ ರಾಜ್ಯವೂ ಕೂಡ. ದೇಶದ ವಾಣಿಜ್ಯ ರಾಜಧಾನಿಯಲ್ಲಿ ಮಂಗಳವಾರ 10,860 ಹೊಸ ಕೇಸ್‌ಗಳು ದೃಢಪಟ್ಟಿದ್ದು ಒಂದೇ ಸಮನೆ ಏರಿಕೆ ಕಂಡಿದೆ. ಸೋಮವಾರ (8,082)ಕ್ಕೆ ಹೋಲಿಸಿದರೆ ಹೊಸ … Continued

ಸೋಂಕು ತಡೆಗೆ ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ

ನವದೆಹಲಿ: ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಗೆ ಕಡೆವಾಣ ಹಾಕುವ ನಿಟ್ಟಿನಲ್ಲಿ ರಾಜಧಾನಿ ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲು ಅಪ್ ಸರ್ಕಾರ ತೀರ್ಮಾನಿದೆ. ಈ ಕುರಿತು ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಮಾಹಿತಿ ನೀಡಿದ್ದಾರೆ. ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಭೆ ನಡೆಸಿದ ಬಳಿಕ ವರ್ಚುವಲ್‌ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಮತ್ತು ಭಾನುವಾರ ಕರ್ಫ್ಯೂ ಜಾರಿಯಲ್ಲಿರಲಿದೆ. ತೀರ … Continued

ಮೊಲ್ನುಪಿರವಿರ್ ಕೋವಿಡ್ ಮಾತ್ರೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯ ಸಾಧ್ಯತೆ: ಬೆಲೆ ಬಗ್ಗೆಯೂ ಕಂಪನಿ ಹೇಳಿಕೆ

ಹೈದರಾಬಾದ್: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ.ಗಳಿಗೆ ಮೊಲ್ನುಪಿರವಿರ್ ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ. ಮೊಲ್ನುಪಿರವಿರ್ ಮಾತ್ರೆಗಳ ಬೆಲೆ ಕೇವಲ 35 ರೂ.ಗಳು ಆಗಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ … Continued

ರೋಗಲಕ್ಷಣಗಳು, ಮರಣ ಪ್ರಮಾಣ, ಲಸಿಕೆ ಪರಿಣಾಮಕಾರಿತ್ವ: ಓಮಿಕ್ರಾನ್-ಸಂಬಂಧಿತ ಸಂದೇಹಗಳಿಗೆ ಉತ್ತರಿಸಿದ ಉನ್ನತ ವೈದ್ಯರು

ನವದೆಹಲಿ: ಓಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯಿಂದಾಗಿ ಕೋವಿಡ್‌-19 ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯ ನಡುವೆ, ದೆಹಲಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಭಾರತವು ಮೂರನೇ ಅಲೆಯ ಆರಂಭದಲ್ಲಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಮಾರಣಾಂತಿಕ ಎರಡನೇ ಅಲೆಯಂತೆ ಮೂರನೇ ಅಲೆಯು ತೀವ್ರವಾಗಿರುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿಯ ಹೆಲ್ವೆಟಿಯಾ ಮೆಡಿಕಲ್ ಸೆಂಟರ್‌ನ ಆಂತರಿಕ ಮತ್ತು ಪ್ರಯಾಣದ ಔಷಧದ ಸಲಹೆಗಾರ ವೈದ್ಯ ಡಾ. ಎಸ್ … Continued

ನಾವು 3ನೇ ಕೊರೊನಾ ಅಲೆಯಲ್ಲಿದ್ದೇವೆ, ಆದರೆ ಗಾಬರಿಯಾಗುವ ಅವಶ್ಯಕತೆಯಿಲ್ಲ: ಕೋವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ಎನ್‌.ಕೆ. ಅರೋರಾ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ತೀವ್ರ ಏರಿಕೆಯ ಮಧ್ಯೆ, ಸಾಂಕ್ರಾಮಿಕ ರೋಗದ ಮೂರನೇ ಅಲೆ ಪ್ರಾರಂಭವಾಗಿದೆ, ಆದರೆ ಈ ಪರಿಸ್ಥಿತಿಯನ್ನು ಎದುರಿಸಲು ದೇಶವು ಉತ್ತಮವಾಗಿ ಸಜ್ಜಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ದೇಶದ ಕೋವಿಡ್‌-19 ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ.ಎನ್‌.ಕೆ. ಅರೋರಾ ಹೇಳಿದ್ದಾರೆ. ಮಿರರ್ ನೌ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಡಾ.ಅರೋರಾ, “ಕಳೆದ ಒಂದು … Continued