ದೆಹಲಿಯಲ್ಲಿ ಆರು ಶಂಕಿತ ಭಯೋತ್ಪಾದಕರ ಬಂಧನ: ಇಬ್ಬರು ಶಂಕಿತರಿಗೆ ಪಾಕಿಸ್ತಾನದ ಸಿಂಧ್‌ನಲ್ಲಿ ಬಾಂಬ್ ತಯಾರಿಕಾ ತರಬೇತಿ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಇಬ್ಬರನ್ನು ಸಮುದ್ರದ ಮೂಲಕ ಗ್ವಾದರ್ ಬಂದರಿಗೆ ಕರೆದೊಯ್ದಿದೆ ಎಂದು ಮಂಗಳವಾರ ಬಂಧಿಸಲಾಗಿರುವ ದೆಹಲಿಯಲ್ಲಿ ಭಯೋತ್ಪಾದನಾ ಘಟಕದ ಆರು ಭಯೋತ್ಪಾದಕ ಶಂಕಿತರ ವಿಚಾರಣೆ ವೇಳೆ ವಿವರಗಳು ಹೊರಬಿದ್ದಿವೆ. ಸಿಂಧ್ ನಲ್ಲಿ ಬಾಂಬ್ ತಯಾರಿಕೆಯಲ್ಲಿ ಅವರಿಗೆ ತರಬೇತಿ ನೀಡಲಾಗಿದೆ ಎಂಬ ಅಂಶಗಳು ಬೆಳಕಿಗೆ ಬಂದಿದೆ. ಇಬ್ಬರು ಪಾಕಿಸ್ತಾನಕ್ಕೆ ಹೋಗಿ, ತರಬೇತಿ ಪಡೆದು, ನಂತರ ಭಾರತಕ್ಕೆ … Continued

ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿಯ ಅರ್ಪಿತಾ ಘೋಷ್

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ. ಬುಧವಾರದ ಅಧಿಸೂಚನೆಯಲ್ಲಿ, ರಾಜ್ಯಸಭಾ ಕಾರ್ಯಾಲಯವು ಉಪರಾಷ್ಟ್ರಪತಿ ನಾಯ್ಡು ಅವರು ಟಿಎಂಸಿ ಸಂಸದೆ ಅರ್ಪಿತಾ ಘೋಷ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ದೃಢಪಡಿಸಿದ್ದಾರೆ. ಅರ್ಪಿತಾ ಘೋಷ್ (55) ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ … Continued

ಏರ್ ಇಂಡಿಯಾ ಮಾರಾಟ: ಟಾಟಾಸ್, ಸ್ಪೈಸ್ ಜೆಟ್ ಸಂಸ್ಥಾಪಕ ಅಜಯ್ ಸಿಂಗ್ ಹಣಕಾಸು ಬಿಡ್ ಸಲ್ಲಿಕೆ: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

ನವದೆಹಲಿ: ಟಾಟಾ ಗ್ರೂಪ್ (Tata Group), ಸ್ಪೈಸ್ ಜೆಟ್ (SpiceJet) ಪ್ರಮೋಟರ್ ಅಜಯ್ ಸಿಂಗ್ ಸೇರಿದಂತೆ ಅನೇಕ ಇತರ ಬಿಡ್ಡರುಗಳು ಸಾಲದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಖರೀದಿಗೆ ತಮ್ಮ ಹಣಕಾಸಿನ ಬಿಡ್ ಅನ್ನು ಬುಧವಾರ ಸಲ್ಲಿಸಿದ್ದಾರೆ ಎಂದು ಕಂಪನಿಯ ವಕ್ತಾರರು ದೃಢಪಡಿಸಿದ್ದಾರೆ. ಟ್ವೀಟ್ ನಲ್ಲಿ, ಹೂಡಿಕೆ ಮತ್ತು … Continued

ಆಟೋ, ಡ್ರೋನ್ ವಲಯಗಳಿಗೆ 5 ವರ್ಷಗಳ ವರೆಗೆ 26,058 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು (ಬುಧವಾರ) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ 26,058 ಕೋಟಿ ರೂ.ಗಳ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಅನುಮೋದಿಸಲಾಗಿದೆ. ಡ್ರೋನ್ ಉದ್ಯಮಕ್ಕಾಗಿ 120 ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಅಶ್ವಿನಿ … Continued

ದೊಡ್ಡ ಟೆಲಿಕಾಂ ಸುಧಾರಣೆ: ಸ್ವಯಂಚಾಲಿತ ಮಾರ್ಗದ ಮೂಲಕ 100% ವಿದೇಶಿ ನೇರ ಹೂಡಿಕೆಗೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಒಂದು ದೊಡ್ಡ ಟೆಲಿಕಾಂ ಸುಧಾರಣಾ ಕ್ರಮದಲ್ಲಿ ಕೇಂದ್ರ ಸರ್ಕಾರವು ಟೆಲಿಕಾಂ ವಲಯದಲ್ಲಿ ತನ್ನ ಸಮಗ್ರ ಪ್ಯಾಕೇಜ್‌ನ ಭಾಗವಾಗಿ 100 % ವಿದೇಶಿ ನೇರ ಹೂಡಿಕೆಯನ್ನು (FDI) ಸ್ವಯಂಚಾಲಿತ ಮಾರ್ಗದ ಮೂಲಕ ಘೋಷಿಸಿದೆ. “ಸ್ವಯಂಚಾಲಿತ ಮಾರ್ಗದ ಮೂಲಕ 100 % ವಿದೇಶಿ ನೇರ ಹೂಡಿಕೆಗೆ (FDI) ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಟೆಲಿಕಾಂ ಸಚಿವರಾದ ಅಶ್ವಿನಿ … Continued

ಬಾಲಿವುಡ್‌ ನಟ ಸೋನು ಸೂದ್ ಮನೆ – 6 ಸಂಬಂಧಿತ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ‘ಸರ್ವೆ’: ವರದಿಗಳು

ಆದಾಯ ತೆರಿಗೆ ಅಧಿಕಾರಿಗಳು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರ ಮುಂಬೈನ ನಿವಾಸದಲ್ಲಿದ್ದಾರೆ. ಎನ್‌ಡಿಟಿವಿ ವರದಿಯ ಪ್ರಕಾರ, ಅಧಿಕಾರಿಗಳು ಸೋನು ಸೂದ್ ಅವರ ಮುಂಬೈನ ಅವರ ಕಚೇರಿ ಸೇರಿದಂತೆ ಆರು ಸ್ಥಳಗಳಲ್ಲಿ ಪ್ರಸ್ತುತ ‘ಸರ್ವೆ ಮಾಡುತ್ತಿದ್ದಾರೆ. ಮುಂಬೈನಲ್ಲಿರುವ ಬಾಲಿವುಡ್ ನಟ ಸೋನು ಸೂದ್ ಅವರ ಮನೆಯನ್ನು ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಮಾಡಿದೆ. … Continued

ಕೇಂದ್ರ ಸರ್ಕಾರದಿಂದ ತನ್ನ ಅನುಕೂಲಕ್ಕೆ ತಕ್ಕಂತೆ ನ್ಯಾಯಮಂಡಳಿಗಳಿಗೆ ನೇಮಕಾತಿ ಆಯ್ಕೆ: ಸುಪ್ರೀಂ ಕೋರ್ಟ್ ಆಕ್ಷೇಪ

ನವದೆಹಲಿ: ವಿವಿಧ ನ್ಯಾಯಮಂಡಳಿ, ನ್ಯಾಯಾಧಿಕರಣಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇತ್ತೀಚಿಗೆ ಅನುಸರಿಸಿದ ವಿಧಾನಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿ ಉಳಿದವರ ನೇಮಕಾತಿ ತಡೆ ಹಿಡಿದಿದ್ದು, ಶೋಧ ಮತ್ತು ಆಯ್ಕೆ ಸಮಿತಿಗಳು (ಎಸ್‌ಸಿಎಸ್‌ಸಿ) ಮಾಡಿದ ಶಿಫಾರಸುಗಳನ್ನು ಅತೃಪ್ತಿಕರ ರೀತಿಯಲ್ಲಿ ಪರಿಗಣಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ … Continued

ಹಿಂದೂಗಳು ವಿಶ್ವದ ಅತ್ಯಂತ ಸಹಿಷ್ಣು ಬಹುಸಂಖ್ಯಾತರು, ಭಾರತ ಎಂದಿಗೂ ಅಫ್ಘಾನಿಸ್ತಾನದಂತೆ ಆಗಲ್ಲ:ತಾಲಿಬಾನ್-ಆರ್‌ಎಸ್‌ಎಸ್ ಟೀಕೆ ವಿವಾದದ ನಂತರ ಜಾವೇದ್ ಅಖ್ತರ್

ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್, ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಲೇಖನದಲ್ಲಿ, ಹಿಂದೂಗಳು ವಿಶ್ವದ ಅತ್ಯಂತ ಸಹಿಷ್ಣು ಬಹುಸಂಖ್ಯಾತರು ಮತ್ತು ಭಾರತವು ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದ ತರಹ ಎಂದೂ ಆಗುವುದಿಲ್ಲ. ಏಕೆಂದರೆ ಭಾರತೀಯರು ಸೌಮ್ಯ ಸ್ವಭಾವದರು ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಅಖ್ತರ್‌ ಅವರನ್ನು ಆರ್‌ಎಸ್‌ಎಸ್ ಮತ್ತು ವಿಎಚ್‌ಪಿಯನ್ನು ತಾಲಿಬಾನ್‌ನೊಂದಿಗೆ ಹೋಲಿಸಿದಾಗ ಶಿವಸೇನೆಯು ಸಾಮ್ನಾ … Continued

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ-ಕೊಲೆ ಮಾಡಿದ ಆರೋಪಿಯ ವಿರುದ್ಧ ಎನ್ಕೌಂಟರ್ ನಡೆಯಬೇಕು ಎಂದ ತೆಲಂಗಾಣ ಸಚಿವ

ಹೈದರಾಬಾದ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ( Hyderabad rape case) ಆರೋಪಿಗಳನ್ನು “ಎನ್‌ಕೌಂಟರ್‌ ನಡೆಸಿ ಕೊಲ್ಲಲಾಗುವುದು” ಎಂದು ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಹೇಳಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಹೈದರಾಬಾದಿನ ಸೈದಾಬಾದ್ ನಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕೇಳಿದಾಗ, “ನಾವು ಆರೋಪಿಗಳನ್ನು ಖಂಡಿತವಾಗಿಯೂ ಬಂಧಿಸುತ್ತೇವೆ ಮತ್ತು … Continued

ಕಾಬೂಲ್‌ ನಲ್ಲಿ ಬಂದೂಕು ತೋರಿಸಿ ಅಫ್ಘಾನಿಸ್ತಾನ ಮೂಲದ ಭಾರತೀಯನ ಅಪಹರಣ

ನವದೆಹಲಿ: ಅಫ್ಘಾನಿಸ್ತಾನ ಮೂಲದ ಭಾರತೀಯ ನಾಗರಿಕ ಬನ್ಸಾರಿ ಲಾಲ್ ಅರೆಂದೆಹ್ ಎಂಬವರನ್ನು ಕಾಬೂಲ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ 14) ಬೆಳಿಗ್ಗೆ ಅವರ ಅಂಗಡಿಯಿಂದ ಬಂದೂಕು ತೋರಿಸಿ ಅಪಹರಿಸಲಾಗಿದೆ. ಇಂಡಿಯನ್ ವರ್ಲ್ಡ್ ಫೋರಂ ಅಧ್ಯಕ್ಷ ಹಾಗೂ ಸಿಖ್ ಕಾರ್ಯಕರ್ತ ಪುನೀತ್ ಸಿಂಗ್ ಚಾಂದೋಕ್ ವರದಿಯನ್ನು ದೃಢಪಡಿಸಿದ್ದಾರೆ. “ನಾನು ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇನೆ ಮತ್ತು … Continued