ಸಚಿನ್‌ ತೆಂಡುಲ್ಕರ್‌ ಮನೆ ಎದುರು ಪ್ರತಿಭಟನೆ

ಕೇರಳದ ಕೊಚ್ಚಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿನ್ ತೆಂಡೂಲ್ಕರ್ ಅವರ ಕಟೌಟ್ ಮೇಲೆ ಕಪ್ಪುಮಸಿ ಸುರಿದ ೨ ದಿನಗಳಲ್ಲೇ ಸ್ವಾಭಿಮಾನಿ ಶೇತಕರಿ ಸಕ್ತಾನಾದ ಕಾರ್ಯಕರ್ತರು ಸೋಮವಾರ ಮುಂಬೈನ ಕ್ರಿಕೆಟಿಂಗ್ ದಂತಕಥೆ ಸಚಿನ್‌ ನಿವಾಸದ ಎದುರು ಪ್ರತಿಭಟನೆ ನಡೆಸಿದರು. “ಸಚಿನ್‌ ನಮ್ಮ ತಂದೆಗಾಗಿ ನೀವು ಯಾವಾಗ ಟ್ವೀಟ್‌ ಮಾಡುತ್ತೀರಿʼ ಎಂದು ಬರೆದ ಪೋಸ್ಟರ್‌ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. … Continued

ಹೈಕೋರ್ಟಿನಲ್ಲಿ‌ ಗೌತಮ್‌ ನವಲಖಾ ಮೇಲ್ಮನವಿ ಅರ್ಜಿ ವಜಾ

ಮುಂಬೈ: ಕೋರೆಗಾಂವ ಹಿಂಸಾಚಾರ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ತನ್ನ ಶಾಸನಬದ್ಧ ಜಾಮೀನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಖಾ ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ. ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮೂಲಕ ಸೆಪ್ಟೆಂಬರ್ 9 ರಂದು ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನವಲಖಾ ಅವರ ಗೃಹಬಂಧನದ … Continued

ಮೃತ ರೈತರ ಕುಟುಂಬಸ್ಥರಿಗೆ ನೆರವು: ಐವರು ಶಿಕ್ಷಣತಜ್ಞರಿಂದ ಪೋರ್ಟಲ್‌

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಮೃತಪಟ್ಟ ರೈತರ ನೋಂದಣಿ ಹಾಗೂ ಅವರ ಕುಟುಂಬಸ್ಥರಿಗೆ ನೆರವು ನೀಡಲು ಐವರು ಶಿಕ್ಷಣತಜ್ಞರು ಪೋರ್ಟಲ್‌‌ ಆರಂಭಿಸಿದ್ದಾರೆ. ವಿಶ್ವವಿದ್ಯಾಲಯಗಳ ಪ್ರಸ್ತುತ ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಐದು ಪ್ರಮುಖ ಶಿಕ್ಷಣ ತಜ್ಞರು ಭಾನುವಾರ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ (ಪಿಎಯು) ಪೋರ್ಟಲ್‌ಗೆ ಚಾಲನೆ ನೀಡಿದರು. ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ … Continued

ಮಾತುಕತೆಗೆ ಸರ್ಕಾರವೇ ದಿನಾಂಕ ನಿಗದಿ ಮಾಡಲಿ: ಪಿಎಂ ಹೇಳಿಕೆಗೆ ರೈತ ಸಂಘಟನೆಗಳ ಉತ್ತರ

ಹೊಸ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರೈತ ಹೋರಾಟಗಾರರು ಮುಂದಿನ ಸುತ್ತಿನ ಮಾತುಕತೆಗೆ ನಾವು ಸಿದ್ಧರಾಗಿದ್ದಾರೆ. ಅದಕ್ಕೆ ಸರ್ಕಾರ ದಿನಾಂಕ ನಿಗದಿ ಪಡಿಸಲಿ ಎಂದು  ಸಂಯುಕ್ತ ಕಿಸಾನ್‌ ಮೋರ್ಚಾದ ಹಿರಿಯ ಸದಸ್ಯ ಶಿವಕುಮಾರ ಕಕ್ಕಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತರ ಹೋರಾಟವನ್ನು ಕೊನೆಗೊಳಿಸಿ, ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.  ಹಿಂದೆ ಮಾತುಕತೆಗೆ … Continued

ಕೇಂದ್ರಕ್ಕೆ ರೈತರ ಪಟ್ಟಿ ಕಳುಹಿಸಲಾಗಿದೆ:ಮಮತಾ ಸ್ಪಷ್ಟನೆ

ಕೋಲ್ಕತ್ತ: ಪ್ರಧಾನಮಂತ್ರಿ ಕಿಸಾನ ಸಮ್ಮಾನ್‌ ಯೋಜನೆಗೆ ಪಶ್ಚಿಮ ಬಂಗಾಳ ೨.೫ ಲಕ್ಷ ರೈತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಮರುದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. … Continued

ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ ಮಾಡಿ: ಪ್ರಧಾನಿಗೆ ಟಿಕಾಯಿತ್‌ ಆಗ್ರಹ

ನವ ದೆಹಲಿ: ಹೊಸ ವಿವಾದಾತ್ಮಕ ಕೃಷಿ-ಮಾರುಕಟ್ಟೆ ಕಾನೂನುಗಳನ್ನು ರದ್ದುಪಡಿಸುವುದರ ಜೊತೆಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು ಎಂಬ ರೈತರ ಬೇಡಿಕೆಯನ್ನುರಾಕೇಶ ಟಿಕಾಯಿತ್‌ ಪುನರುಚ್ಚರಿಸಿದ್ದಾರೆ ಸೋಮವಾರ ರಾಜ್ಯಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮುಂದುವರಿಯಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ  ಘೋಷಣೆಗೆ ಪ್ರತಿಕ್ರಿಯಿಸಿದ ರೈತ ಮುಖಂಡ ರಾಕೇಶ್ ಟಿಕಾಯಿತ್‌ ಎಂಎಸ್‌ಪಿ ಕಾನೂನಿಗೆ ಒತ್ತಾಯಿಸಿದರು … Continued

ಗಾಜಿಪುರ ರೈತ ಹೋರಾಟಕ್ಕೆ ಕರ್ನಾಟಕದ ೫೦ ರೈತರು

ಗಾಜಿಪುರ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತೀಯ ಕಿಸಾನ್‌ ಯೂನಿಯನ್‌ ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ೫೦ ಜನ ರೈತರ ಗುಂಪು ಸೋಮವಾರ ಆಗಮಿಸಿತು. ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಹೋರಾಟಗಾರರ ಡೇರೆಗಳನ್ನು ಕರ್ನಾಟಕದ ಕೃಷಿಕರು ಸೇರಿಕೊಂಡರು. ನಾವು ಬೆಂಗಳೂರು ಹಾಗೂ ಮೈಸೂರಿನಲ್ಲಿ ರೈತ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದೆವೆ. … Continued

ಸಿಖ್ಖರ ದೂಷಣೆ ನಿಲ್ಲಿಸಿ: ಪ್ರಧಾನಿ ಮೋದಿ

ನವ ದೆಹಲಿ: ಸಿಖ್ಖರ ಬಗ್ಗೆ ದೂಷಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ರೈತರು ಹೋರಾಟ ಹಿಂಪಡೆದು ನೀತನ ಕೃಷಿ ಕಾನೂನು ಜಾರಿಯಗಲು ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸೋಮವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಕೃಷಿ ಕಾನೂನ ಜಾರಿ ವಿಚಾರದಲ್ಲಿ ನಡೆಯುತ್ತಿರುವ ರಾಜಕಾರಣದ … Continued

ನಾವೇನು ಮೂರ್ಖರೇ: ಪ್ರಧಾನಿ ಭಾಷಣಕ್ಕೆ ಖರ್ಗೆ ಪ್ರತಿಕ್ರಿಯೆ

ನವ ದೆಹಲಿ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಕಾಂಗ್ರೆಸ್ ಸೋಮವಾರ ಟೀಕಿಸಿದೆ. ವಿವಾದಾತ್ಮಕ ಮೂರು ಕೃಷಿ ಕಾನೂನುಗಳಲ್ಲಿ ಏನು ಕೊರತೆಯಿದೆ ಎಂಬ ಬಗ್ಗೆ ಪಕ್ಷದ ಪ್ರಸ್ತಾಪವನ್ನು ಅವರು ಕಡೆಗಣಿಸಿದ್ದಾರೆ ಎಂದು ಮೇಲ್ಮನೆಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ್ ಖರ್ಗೆ ಹೇಲಿದ್ದು ‘ನಾವೆಲ್ಲರೂ ಮೂರ್ಖರೇ ಎಂದು ಪ್ರಶ್ನಿಸಿದ್ದಾರೆ. ರಾಜ್ಯಸಭೆಯಲ್ಲಿ … Continued

ಅಸ್ಸಾಂ: ಕಾಂಗ್ರೆಸ್‌-ಎಐಯುಡಿಎಫ್ ನಡುವೆ ಸೀಟಿಗಾಗಿ ತಿಕ್ಕಾಟ

ಗುವಾಹಟಿ: ಅಸ್ಸಾಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಎರಡು ವಿರೋಧ ಪಕ್ಷಗಳು ಮೈತ್ರಿ ಘೋಷಿಸಿದ ನಂತರ ಕಾಂಗ್ರೆಸ್ ಮತ್ತು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಸ್ಥಾನಗಳಿಗಾಗಿ ಚುನಾವಣೆ ಘೋಷಣೆಯಾಗುವ ಜಗಳವಾಡಲು ಪ್ರಾರಂಭಿಸಿವೆ. ಜನವರಿ 19 ರಂದು, ಎರಡೂ ಪಕ್ಷಗಳು, ಪ್ರಾದೇಶಿಕ ಅಂಚಾಲಿಕ್ ಗಾನಾ ಮೋರ್ಚಾ (ಎಜಿಎಂ) ಮತ್ತು ಮೂರು ಎಡ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ … Continued