ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ : ಆಯ್ಕೆ ಮುಕ್ತವಾಗಿದೆ ಎಂದ ಸಿ.ಎಂ.ಇಬ್ರಾಹಿಂ

ಬೆಂಗಳೂರು : ಜೆಡಿಎಸ್‌ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಪಕ್ಷವು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಪಕ್ಷದ ಮೈತ್ರಿ ಮಾಡಿಕೊಳ್ಳುವ ಮೊದಲು ತಮ್ಮ ಬಳಿ ಸಮಾಲೋಚನೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ಮುಂದಿನ ಆಯ್ಕೆಗಳು ಮುಕ್ತವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಮಾತನಾಡಿದ ಇಬ್ರಾಹಿಂ, ಚುನಾಯಿತ ರಾಜ್ಯ ಅಧ್ಯಕ್ಷರಾಗಿದ್ದರೂ, ಪಕ್ಷವು ಬಿಜೆಪಿಯೊಂದಿಗೆ … Continued

ಸಿಎಂ ನಿತೀಶಕುಮಾರ ಬೆಂಗಾವಲು ವಾಹನ ಹೋಗಲು ಗಂಭೀರ ಸ್ಥಿಯಲ್ಲಿದ್ದ ಮಗು ಒಯ್ಯುತ್ತಿದ್ದ ಆಂಬ್ಯುಲೆನ್ಸ್‌ ತಡೆದು ನಿಲ್ಲಿಸಿದ ಪೊಲೀಸರು: ವೀಡಿಯೊ

ಪಾಟ್ನಾ: ಶುಕ್ರವಾರ, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರ ಬೆಂಗಾವಲು ವಾಹನಕ್ಕಾಗಿ ಪೊಲೀಸರು ಸುಮಾರು ಒಂದು ಗಂಟೆ ಕಾಲ ಆಂಬ್ಯುಲೆನ್ಸ್ ಅನ್ನು ತಡೆಹಿಡಿದ ಘಟನೆ ಘಟನೆ ಪಾಟ್ನಾ ಸಮೀಪದ ಫತುಹಾದಲ್ಲಿ ನಡೆದಿದೆ. ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆಂಬ್ಯುಲೆನ್ಸ್‌ನೊಳಗೆ ಮಹಿಳೆಯೊಬ್ಬರು ತನ್ನ ಮಗುವನ್ನು ಹಿಡಿದುಕೊಂಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಮಗು ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಹೊರಡುವವರೆಗೂ … Continued

ಬ್ರಿಟನ್‌ನಲ್ಲಿರುವ ಭಾರತೀಯ ರಾಯಭಾರಿ ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದ ಖಲಿಸ್ತಾನಿ

ನವದೆಹಲಿ: ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಂ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ಖಲಿಸ್ತಾನಿ ಉಗ್ರರು ತಡೆದಿದ್ದಾರೆ. ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಆರೋಪದ ನಡುವೆಯೇ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಪ್ರಕಾರ, ಖಲಿಸ್ತಾನ್ ಪರ ಕಾರ್ಯಕರ್ತನೊಬ್ಬ ವಿಕ್ರಂ ದೊರೈಸ್ವಾಮಿ ಅವರನ್ನು ಆಲ್ಬರ್ಟ್ … Continued

1992ರ ವಚಾತಿ ಅತ್ಯಾಚಾರ, ದೌರ್ಜನ್ಯ ಪ್ರಕರಣ : 215 ಅರಣ್ಯ, ಕಂದಾಯ ಇಲಾಖೆ ಸಿಬ್ಬಂದಿಗೆ ನೀಡಿದ್ದ ಶಿಕ್ಷೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ: 1992ರಲ್ಲಿ ಧರ್ಮಪುರಿ ಜಿಲ್ಲೆಯ ವಚತಿ ಗ್ರಾಮದಲ್ಲಿ ಆದಿವಾಸಿಗಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದಲ್ಲಿ ತಮಿಳುನಾಡಿನ ಅರಣ್ಯ ಮತ್ತು ಕಂದಾಯ ಇಲಾಖೆಗಳ ಮಾಜಿ ಸಿಬ್ಬಂದಿ ಸೇರಿದಂತೆ 215 ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. 215 ಅಪರಾಧಿಗಳಿಗೆ ವಿಧಿಸಲಾದ ಶಿಕ್ಷೆಯ ವಿರುದ್ಧ 2011 ರಿಂದ ಬಾಕಿ ಉಳಿದಿರುವ ಕ್ರಿಮಿನಲ್ ಮೇಲ್ಮನವಿಗಳ ಕುರಿತು … Continued

ಕೇವಲ ಒಬ್ಬನೇ ಒಬ್ಬ ದೆಹಲಿಯ ಆಭರಣ ಅಂಗಡಿಯಲ್ಲಿನ ₹ 25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ; ಆದ್ರೆ ದೂರದ ಛತ್ತೀಸ್‌ಗಢದ ಮತ್ತೊಬ್ಬ ಕಳ್ಳನಿಂದ ಜೈಲು ಪಾಲಾದ…!

ನವದೆಹಲಿ : ದೆಹಲಿಯಲ್ಲಿ ನಡೆದ ₹ 25 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವು ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚಿನ ನೆನಪಿನಲ್ಲೇ ಅತಿ ದೊಡ್ಡ ಕಳ್ಳತನದ ಪ್ರಕರಣವಾಗಿದೆ. ಇದನ್ನು ಛತ್ತೀಸ್‌ಗಢದ ಒಬ್ಬನೇ ಒಬ್ಬ ಯೋಜಿಸಿ ಕಾರ್ಯಗತಗೊಳಿಸಿದ್ದಾನೆ. ಆತ ಬಹುಶಃ ಇನ್ನೂ ಹೆಚ್ಚು ಕಾಲ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದನೇನೋ, ಆದರೆ ಆತನ ರಾಜ್ಯದಲ್ಲಿ ಇನ್ನೊಬ್ಬ ಕಳ್ಳನನ್ನು ಬಂಧಿಸಿದ್ದು, ಈತನ ಬಂಧನಕ್ಕೆ ಕಾರಣವಾಗಿದೆ. … Continued

‘ಶುಕ್ರಯಾನ-1’: ಶುಕ್ರಗ್ರಹಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸಲಿರುವ ಇಸ್ರೋ…

ನವದೆಹಲಿ: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಸಾಫ್ಟ್ ಲ್ಯಾಂಡಿಂಗ್‌ ಮಾಡುವ ಮೂಲಕ ಭಾರತವು ಇತಿಹಾಸವನ್ನು ಸೃಷ್ಟಿಸಿದ ಕೇವಲ ಒಂದು ತಿಂಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಶುಕ್ರಗ್ರಹದ ಮೇಲೆ ಕಣ್ಣಿಟ್ಟಿದೆ. ಇದನ್ನು ಅನಧಿಕೃತವಾಗಿ ಶುಕ್ರಯಾನ್-1 ಎಂದು ಉಲ್ಲೇಖಿಸಲಾಗಿದ್ದು, ಶುಕ್ರ ಮಿಷನ್ ಅನ್ನು ಕಾನ್ಫಿಗರ್ ಮಾಡಲಾಗಿದೆ ಮತ್ತು ಕೆಲವು … Continued

ಕ್ರೈಮ್ ಡೇಟಾ ಏಜೆನ್ಸಿ ಹೆಸರಿನಲ್ಲಿ ನಕಲಿ ಸಂದೇಶ ಬಂದಿದ್ದು ನೋಡಿದ ನಂತರ ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ

ಕೋಝಿಕ್ಕೋಡ್‌ : ಅನಧಿಕೃತ ಚಲನಚಿತ್ರ ವೆಬ್‌ಸೈಟ್‌ಗೆ ಪ್ರವೇಶಿಸಿದ್ದಕ್ಕಾಗಿ ಶುಲ್ಕ ಪಾವತಿಸುವಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಹೆಸರಿನಲ್ಲಿ ನಕಲಿ ಸಂದೇಶ ಸ್ವೀಕರಿಸಿದ ಕಾರಣ 16 ವರ್ಷದ ಬಾಲಕನೊಬ್ಬ ಉತ್ತರ ಕೇರಳ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ನಗರದ ಶಾಲೆಯೊಂದರಲ್ಲಿ 11ನೇ ತರಗತಿ ಓದುತ್ತಿದ್ದ ಆದಿನಾಥ ಬುಧವಾರ ಸಂಜೆ ಇಲ್ಲಿನ ಚೇವಾಯೂರಿನಲ್ಲಿರುವ … Continued

‘ಕೆನಡಾ ಕೊಲೆಗಾರರ ಕೇಂದ್ರವಾಗಿದೆ’: ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಭಾರತವನ್ನು ಬೆಂಬಲಿಸಿದ ಬಾಂಗ್ಲಾದೇಶದ ವಿದೇಶಾಂಗ ಸಚಿವ

ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆ ನಡುವೆ ಕೆನಡಾವು ಖಲಿಸ್ತಾನಿ ಉಗ್ರರಿಗೆ ಆಶ್ರಯ ನೀಡಿದ್ದಕ್ಕಾಗಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಅವರು ಕೆನಡಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅವರು, ಕೆನಡಾ ಎಲ್ಲ ಕೊಲೆಗಾರರ ಕೇಂದ್ರವಾಗಿರಬಾರದು ಮತ್ತು ಅವರಿಗೆ ಸುರಕ್ಷಿತ ನೆಲೆಯನ್ನು ಒದಗಿಸಬಾರದು ಎಂದು … Continued

ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದು. ಈಗ ನಾರಿ ಶಕ್ತಿ ವಂದನ ಅಧಿನಿಯಮ ಭಾರತದಲ್ಲಿ ಕಾನೂನು ಆಯಿತು. ಈಗ ಕಾಯಿದೆಯಾಗುತ್ತಿದ್ದಂತೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಆದರೆ, ಹೊಸ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಮೀಸಲಾತಿ ಜಾರಿಗೆ ಬರಲಿದೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ, … Continued

“ಇಂದೇ ವಿಚಾರಣೆ….”: ನಟ ಸೆನ್ಸಾರ್ ಮಂಡಳಿ ವಿರುದ್ಧ ನಟ ವಿಶಾಲ ಭ್ರಷ್ಟಾಚಾರ ಆರೋಪಕ್ಕೆ ಕೇಂದ್ರದ ಪ್ರತಿಕ್ರಿಯೆ

ನವದೆಹಲಿ: ತಮಿಳು ನಟ ವಿಶಾಲ ಅವರು ಮಾಡಿದ ಚಲನಚಿತ್ರ ಸೆನ್ಸಾರ್ ಮಂಡಳಿಯಲ್ಲಿನ ಭ್ರಷ್ಟಾಚಾರದ ಆರೋಪಗಳಿಗೆ ಕೇಂದ್ರ ಸರ್ಕಾರ ತಕ್ಷಣದ ಪ್ರತಿಕ್ರಿಯೆ ನೀಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹಿರಿಯ ಅಧಿಕಾರಿಯೊಬ್ಬರು “ಇಂದೇ ವಿಚಾರಣೆ ನಡೆಸಲು” ಮುಂಬೈಗೆ ಧಾವಿಸಿದ್ದಾರೆ ಎಂದು ತಿಳಿಸಿದೆ. ಕಳೆದ ವಾರ ಉತ್ತರ ಭಾರತದ ರಾಜ್ಯಗಳಲ್ಲಿ ಬಿಡುಗಡೆಯಾದ ತನ್ನ ಹೊಸ ಚಿತ್ರ ‘ಮಾರ್ಕ್ ಆಂಟನಿ’ … Continued