ನೀವು ಪ್ರಧಾನಿಯಾಗಲು ಬಯಸಿದ್ರೆ ನಿಮ್ಮನ್ನು ಬೆಂಬಲಿಸ್ತೇವೆ ಎಂದಿದ್ದರು : ಕೇಂದ್ರ ಸಚಿವ ನಿತಿನ್ ಗಡ್ಕರಿ

ನಾಗ್ಪುರ: ‘ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ’ ಎಂದು ರಾಜಕೀಯ ನಾಯಕರೊಬ್ಬರು ಲೋಕಸಭಾ ಚುನಾವಣೆ ವೇಳೆ ನನಗೆ ಭರವಸೆ ನೀಡಿದ್ದರು. ಆದರೆ, ಅವರ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ” ನನಗೆ ಒಂದು ಘಟನೆ ನೆನಪಿದೆ. ನಾನು ಯಾರನ್ನೂ ಹೆಸರಿಸುವುದಿಲ್ಲ. ಆ ವ್ಯಕ್ತಿ ನೀವು ಪ್ರಧಾನಿಯಾಗಲು ಬಯಸಿದರೆ … Continued

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣದ ಗಡುವು ವಿಸ್ತರಣೆ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಉಚಿತ ಆಧಾರ್ ಕಾರ್ಡ್ ನವೀಕರಣ ಸೇವೆಗಳ ಪ್ರಯೋಜನವನ್ನು ಪಡೆಯಲು ಗಡುವನ್ನು ಡಿಸೆಂಬರ್ 14ರ ವರೆಗೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು, 10 ವರ್ಷಗಳ ಹಿಂದೆ ನೀಡಲಾದ ಆಧಾರ್ ಕಾರ್ಡ್‌ಗಳಲ್ಲಿ ಉಚಿತ ನವೀಕರಣಗಳನ್ನು ಮಾಡಲು ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿತ್ತು. X ನಲ್ಲಿನ ಪೋಸ್ಟ್, “UIDAI ಉಚಿತ ಆನ್‌ಲೈನ್ ಡಾಕ್ಯುಮೆಂಟ್ … Continued

ಕೋಲ್ಕತ್ತಾ ಕಿರಿಯ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ ; ಆಸ್ಪತ್ರೆ ಮಾಜಿ ಪ್ರಾಂಶುಪಾಲ, ಪೊಲೀಸ್ ಅಧಿಕಾರಿ ಬಂಧಿಸಿದ ಸಿಬಿಐ…!

ಕೋಲ್ಕತ್ತಾ: ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಮತ್ತು ಆರಂಭದಲ್ಲಿ ತನಿಖೆ ನಡೆಸಿದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವರನ್ನು ತನಿಖಾಧಿಕಾರಿಗಳನ್ನು ಸಿಬಿಐ ಬಂಧಿಸಿದೆ. ತನಿಖೆ ದಾರಿ ತಪ್ಪಿಸಲು ಯತ್ನಿಸಿರುವುದು ಮತ್ತು … Continued

ಜ್ಯೂಸ್‌ ಗೆ ಮೂತ್ರ ಬೆರೆಸಿ ಮಾರಾಟ ; ವ್ಯಾಪಾರಿಗೆ ಸಾರ್ವಜನಿಕರಿಂದ ಗೂಸಾ, ಅಂಗಡಿ ಧ್ವಂಸ…

ಗಾಜಿಯಾಬಾದ್‌ : ಅಂಗಡಿಯ ವ್ಯಾಪಾರಿಯೊಬ್ಬ ತನ್ನ ಗ್ರಾಹಕರಿಗೆ ಜ್ಯೂಸ್‌ ನೀಡುವಾಗ ಅದಕ್ಕೆ ಮೂತ್ರ ಬೆರೆಸಿ ಜ್ಯೂಸ್‌ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ಜನರಿಗೆ ತಿಳಿಯುತ್ತಿದ್ದಂತೆ ಅಕ್ರೋಶಗೊಂಡ ಜನರು ವ್ಯಾಪಾರಿಯನ್ನು ಮನಬಂದಂತೆ ಥಳಿಸಿದ್ದು, ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಖುಷಿ ಜ್ಯೂಸ್ ಕಾರ್ನರ್ ಮಾಲೀಕ ಅಮೀರ್ … Continued

ಪ್ರಧಾನಿ ನಿವಾಸಕ್ಕೆ ಹೊಸ ಅತಿಥಿ ಆಗಮನ; ಮುದ್ದಾದ ಅತಿಥಿಯ ವೀಡಿಯೊ ಹಂಚಿಕೊಂಡ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯ ಲೋಕ್ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ “ಹೊಸ ಸದಸ್ಯರನ್ನು” ಸ್ವಾಗತಿಸಿದ್ದಾರೆ. ಮುದ್ದಾದ ಕರುವಿನೊಂದಿಗೆ ಸಮಯ ಕಳೆಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮನೆಗೆ ಆಗಮಿಸಿರುವ ಹೊಸ ಅತಿಥಿಯನ್ನು ಪರಿಚಯಿಸಿದ್ದಾರೆ. ಪ್ರಧಾನಿ ನಿವಾಸದಲ್ಲಿರುವ ಹಸು ಕರುವಿಗೆ ಜನ್ಮ ನೀಡಿದ್ದು ಅದರ ಹಣೆಯ ಮೇಲೆ ವಿಶಿಷ್ಟವಾದ ಬೆಳಕಿನ … Continued

ಈ ಪ್ರಾಣಿಯ ರಕ್ತವು ವಿಶ್ವದಲ್ಲೇ ಅತ್ಯಂತ ದುಬಾರಿ ರಕ್ತ ; 1 ಲೀಟರ್ ರಕ್ತದ ಬೆಲೆ ಕೇಳಿದ್ರೆ ಬೆಚ್ಚಿಬೀಳ್ಬೇಕು…!

ಜಗತ್ತಿನಲ್ಲಿ ಅನೇಕ ಜೀವಿಗಳಿವೆ, ಅವುಗಳ ಬಗ್ಗೆ ಜನರಿಗೆ ಕಡಿಮೆ ಜ್ಞಾನವಿದೆ. ಅವುಗಳಲ್ಲಿ ಕೆಲವು ಬಹಳ ಅನನ್ಯ ಮತ್ತು ಉಪಯುಕ್ತವಾಗಿವೆ. ಅನೇಕ ಸಂದರ್ಭಗಳಲ್ಲಿ ಮಾನವ ಜೀವನವು ಈ ಜೀವಿಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ದುಬಾರಿ ರಕ್ತವನ್ನು ಹೊಂದಿರುವ ಜೀವಿ ಇದೆ ಎಂದು ತಿಳಿದಿದೆಯೇ? ಮನುಷ್ಯರಂತೂ ಅಲ್ಲ, ಈ ಜೀವಿಯ ರಕ್ತವು ಪ್ರಪಂಚದಲ್ಲೇ ಅತ್ಯಂತ ದುಬಾರಿ … Continued

ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಜೀವಂತ ; ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ನೇತೃತ್ವ : ವರದಿ

ದಿ ಮಿರರ್ ಉಲ್ಲೇಖಿಸಿರುವ ಗುಪ್ತಚರ ವರದಿಗಳ ಪ್ರಕಾರ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಜೀವಂತವಾಗಿದ್ದಾರೆ ಮತ್ತು ಭಯೋತ್ಪಾದಕ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ಹಮ್ಜಾ ತನ್ನ ಸಹೋದರ ಅಬ್ದುಲ್ಲಾ ಬಿನ್ ಲಾಡೆನ್ ಜೊತೆಗೆ ಅಫ್ಘಾನಿಸ್ತಾನದಿಂದ ಅಲ್ ಖೈದಾವನ್ನು ರಹಸ್ಯವಾಗಿ ಮುನ್ನಡೆಸುತ್ತಿದ್ದಾನೆ ಎಂದು ದಿ ಮಿರರ್ ಉಲ್ಲೇಖಿಸಿರುವ ಗುಪ್ತಚರ ಸ್ಫೋಟಕ ವರದಿ … Continued

ಕಾಶ್ಮೀರ: ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮ, ಮತ್ತೊಂದು ಎನ್‌ಕೌಂಟರ್‌ ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾರಾಮುಲ್ಲಾದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ರೈಸಿಂಗ್ ಸ್ಟಾರ್ ಕಾರ್ಪ್ಸ್‌ನ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಕಿಶ್ತ್ವಾರ್‌ನ ಚತ್ರೂದಲ್ಲಿ ಪ್ರಾರಂಭಿಸಲಾಗಿದೆ … Continued

9 ದಿನ ಭೂಕಂಪದ ರೀತಿ ಭೂಮಿ ಮೇಲೆ ಕಂಪನ ಉಂಟುಮಾಡಿದ ʼಗ್ರೀನ್‌ಲ್ಯಾಂಡ್ʼ ಭೂ ಕುಸಿತ : ಹವಾಮಾನ ಬದಲಾವಣೆ ಪರಿಣಾಮ ಎಂದು ಎಚ್ಚರಿಸಿದ ವಿಜ್ಞಾನಿಗಳು..!

ಸೆಪ್ಟೆಂಬರ್ 2023 ರಲ್ಲಿ, ವಿಶ್ವದಾದ್ಯಂತ ಭೂಕಂಪನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ವಿಜ್ಞಾನಿಗಳು ನಿಗೂಢ ಸಂಕೇತವನ್ನು ಪತ್ತೆಹಚ್ಚಿದ್ದರು. ಈ ಸಿಗ್ನಲ್ ಅನ್ನು, ಆರ್ಕ್ಟಿಕ್‌ನಿಂದ ಅಂಟಾರ್ಕ್ಟಿಕಾದ ವರೆಗೆ ಎಲ್ಲೆಡೆ ದಾಖಲಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪತ್ತೆಯಾದ ವಿಚಿತ್ರ ಭೂಕಂಪನ ಸಂಕೇತವು ವಿಶಿಷ್ಟವಾದ ಭೂಕಂಪವನ್ನು ಹೋಲುವಂತಿರಲಿಲ್ಲ, ಆದರೆ ನಿಧಾನವಾದ ನಡುಕವು ಹೆಚ್ಚುವರಿ ಮೂರು ದಿನಗಳವರೆಗೆ ಪ್ರತಿಧ್ವನಿಸಿತು. ಈ ಅಸಂಗತತೆಯು ವಿಜ್ಞಾನಿಗಳನ್ನು … Continued

ಅಂಡಮಾನ್-ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರ : ಅದರ ನೂತನ ಹೆಸರು…

ನವದೆಹಲಿ : ಭಾರತದ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು ‘ಶ್ರೀ ವಿಜಯ ಪುರಂ’ ಎಂದು ಮರುನಾಮಕರಣ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೇಶವನ್ನು ವಸಾಹತುಶಾಹಿ ಮುದ್ರೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರ ಬಂದಿದೆ. ಪೋರ್ಟ್ ಬ್ಲೇರ್ ಪಟ್ಟಣವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ … Continued