3 ದಿನಗಳ ಅಮೆರಿಕ ಭೇಟಿಗೆ ಪ್ರಧಾನಿ ಮೋದಿ ಪಯಣ ; ಅಜೆಂಡಾದಲ್ಲಿ ಏನಿದೆ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ, ಅಲ್ಲಿ ಅವರು ಸೆಪ್ಟೆಂಬರ್ 21 ರಂದು ನಾಲ್ಕನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ಕ್ವಾಡ್ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ತವರು ವಿಲ್ಮಿಂಗ್ಟನ್‌ನಲ್ಲಿ ಆಯೋಜಿಸಿದ್ದಾರೆ. ಅವರ ಮೂರು ದಿನಗಳ ಅಮೆರಿಕ … Continued

ದೆಹಲಿ- ಮುಂಬಯಿ ಎಕ್ಸ್‌ ಪ್ರೆಸ್‌ ವೇನಲ್ಲಿ ಗುಂಡಿಗಳಾಗಲು ʼಇಲಿʼಗಳು ಕಾರಣ ಎಂದ ನೌಕರ…! ಕೆಲಸದಿಂದ ವಜಾ ಮಾಡಿದ ಕಂಪನಿ

ನವದೆಹಲಿ: ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇನಲ್ಲಿ (Delhi-Mumbai Expressway) ಗುಂಡಿಗಳಾಗಲು ಇಲಿಗಳು (rat) ಕಾರಣ ಎಂದು ಹೇಳಿದ ನೌಕರನನ್ನು ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ಯೋಜನೆಯ ಬಗ್ಗೆ ತಾಂತ್ರಿಕ ತಿಳುವಳಿಕೆ ಇಲ್ಲದ ಕಿರಿಯ ಉದ್ಯೋಗಿಯೊಬ್ಬರು ಈ ಹೇಳಿಕೆ ನೀಡಿದ್ದು, ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಕಂಪನಿ ಹೇಳಿದೆ. ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇ ಯೋಜನೆ ಕಾರ್ಯದಲ್ಲಿ ತಾನು ಭಾಗಿಯಾಗಿದ್ದೆ … Continued

ಮ್ಯಾನ್ಮಾರ್‌ನಿಂದ ಮಣಿಪುರ ಪ್ರವೇಶಿಸಿದ ಶಸ್ತ್ರಸಜ್ಜಿತ 900 ಕುಕಿ ಉಗ್ರಗಾಮಿಗಳು ; ಮಣಿಪುರ ಸರ್ಕಾರದ ಎಚ್ಚರಿಕೆ

ಇಂಫಾಲ್ : ಮ್ಯಾನ್ಮಾರ್‌ನಿಂದ ತರಬೇತಿ ಪಡೆದ 900 ಶಸ್ತ್ರಸಜ್ಜಿತ ಉಗ್ರಗಾಮಿಗಳು ಮಣಿಪುರದಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ವರದಿಯನ್ನು ಭದ್ರತಾ ಮುಖ್ಯಸ್ಥರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಹೇಳಿದ್ದಾರೆ. ಗಡಿ ಪ್ರದೇಶಗಳು ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಭದ್ರತಾ ಏಜೆನ್ಸಿಗಳ ಸಂಯೋಜಿತ ಪಡೆಗಳನ್ನು ಎಚ್ಚರಿಸಲಾಗಿದೆ ಎಂದು … Continued

ವೀಡಿಯೊ…| ದಿಢೀರ್ ಬಾಯ್ತೆರೆದ ರಸ್ತೆ : ಸೆಕೆಂಡೆಗಳಲ್ಲೇ ದೊಡ್ಡ ಟ್ಯಾಂಕರ್ ಅನ್ನೇ ಇಡಿಯಾಗಿ ನುಂಗಿದ ಗುಂಡಿ…!

ಇದಕ್ಕಿದ್ದಂತೆ ಬಾಯ್ತೆರೆದ ರಸ್ತೆಯು ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸೆಪ್ಟಿಕ್ ಟ್ಯಾಂಕ್ ವಾಹನವನ್ನು ಇಡಿಯಾಗಿ ಆಪೋಶನ ತೆಗೆದುಕೊಂಡ ಘಟನೆ ಶುಕ್ರವಾರ ಪುಣೆಯ ಲಕ್ಷ್ಮೀ ರಸ್ತೆಯ ಸಮಾಧಾನ ಚೌಕದ ಬಳಿ ನಡೆದಿದೆ. ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ತಕ್ಷಣವೇ ವಾಹನದಿಂದ ಜಿಗಿದು ಪಾರಾಗಿದ್ದಾನೆ. ಘಟನೆ ವರದಿಯಾದ ನಂತರ ಅಗ್ನಿಶಾಮಕ ದಳದ 20 ಜವಾನರು ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ … Continued

ವೀಡಿಯೊ..| ಬಾಂಗ್ಲಾ ವಿರುದ್ಧದ ಟೆಸ್ಟ್‌ ನಲ್ಲಿ ಎಲ್‌ ಬಿಡಬ್ಲ್ಯು ತೀರ್ಪಿಗೆ ʼಡಿ ಆರ್‌ ಎಸ್ʼ ಮನವಿ ಮಾಡದೆ ವಿರಾಟ್‌ ಕೊಹ್ಲಿ ಪ್ರಮಾದ…!

ಶುಕ್ರವಾರ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2 ನೇ ದಿನದಂದು ವಿರಾಟ್ ಕೊಹ್ಲಿ ಡಿಆರ್‌ಎಸ್‌ ಪ್ರಮಾದ ಎಸಗಿದ್ದಾರೆ. ಕೊಹ್ಲಿ ಬಾಂಗ್ಲಾದೇಶದ ಬೌಲರ್‌ಗಳ ವಿರುದ್ಧ ಉತ್ತಮ ಟಚ್‌ನಲ್ಲಿದ್ದರು. ಅವರು 36 ಎಸೆತಗಳಲ್ಲಿ ಎರಡು ಬೌಂಡರಿಗಳ ಸಹಾಯದಿಂದ 17 ರನ್ ಗಳಿಸಿದರು. ಆದಾಗ್ಯೂ, ಮೆಹಿದಿ ಹಸನ್ ಮಿರಾಜ್ ಅವರ ಪೂರ್ಣ ಎಸೆತ ಅವರ ಮುಂಭಾಗದ ಪ್ಯಾಡ್‌ಗೆ … Continued

ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದ ಆರೋಪ ; ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌ ದಾಖಲು

ರಾಯ್ಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚಿನ ಅಮೆರಿಕ ಭೇಟಿಯ ವೇಳೆ ನೀಡಿದ ಹೇಳಿಕೆಗಳು  ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದೆ ಎಂದು ಆರೋಪಿಸಿ ಛತ್ತೀಸ್‌ಗಢದಲ್ಲಿ ರಾಹುಲ್‌ ಗಾಂಧಿಯವರ ಮೇಲೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ರಾಜಧಾನಿ ರಾಯ್ಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು ಬಿಲಾಸ್‌ಪುರ … Continued

ಸುಪ್ರೀಂ ಕೋರ್ಟ್​ ಯೂಟ್ಯೂಬ್​ ಚಾನೆಲ್ ಹ್ಯಾಕ್…!

ನವದೆಹಲಿ: ಸುಪ್ರೀಂ ಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಹ್ಯಾಕ್ ಮಾಡಲಾಗಿದೆ. ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು ಅಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ ಇತರ ಪ್ರಮೋಶನಲ್ ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ‌ ಚಾನೆಲ್ ಈಗ “ಭಾರತದ ಸುಪ್ರೀಂ ಕೋರ್ಟ್” ಬದಲಿಗೆ “ರಿಪ್ಪಲ್” ಎಂಬ ಹೆಸರನ್ನು ತೋರಿಸುತ್ತದೆ. ಹ್ಯಾಕ್ ಸರ್ಕಾರದ ಡಿಜಿಟಲ್ ಸ್ವತ್ತುಗಳಿಗೆ ಆನ್‌ಲೈನ್ ಭದ್ರತೆಯ ಬಗ್ಗೆ … Continued

ತಿರುಪತಿ ಲಡ್ಡು ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢ ಎಂದ ಟಿಡಿಪಿ…!

ಅಮರಾವತಿ : ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ. ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿಪಿ) ಸರ್ಕಾರ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದರು. … Continued

31 ವರ್ಷಗಳ ನಂತರ ರಾಮಾಯಣದ ಅನಿಮೇಟೆಡ್‌ ಸಿನಿಮಾ ʼದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮʼ ಅಕ್ಟೋಬರ್‌ 18ಕ್ಕೆ ದೇಶಾದ್ಯಂತ ಬಿಡುಗಡೆ

ನವದೆಹಲಿ : ವಾಲ್ಮೀಕಿ ರಾಮಾಯಣ ಆಧರಿಸಿದ ಆನಿಮೇಟೆಡ್‌ ಸಿನೆಮಾ ‘ರಾಮಾಯಣ; ದಿ ಲೆಜೆಂಡ್‌ ಆಫ್‌ ಪ್ರಿನ್ಸ್‌ ರಾಮ’ ಅಕ್ಟೋಬರ್‌ 18ಕ್ಕೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗುತ್ತಿದೆ. ಕೇವಲ ಇಂಗ್ಲಿಷ್‌ನಲ್ಲಿ ಅಷ್ಟೇ ಅಲ್ಲದೆ, ಭಾರತೀಯ ಭಾಷೆಗಳಾದ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೈ ಈ ಸಿನೆಮಾ ತೆರೆಕಾಣುತ್ತಿದೆ. ಸಿನೆಮಾದ ಟೀಸರ್ ಮತ್ತು ಪೋಸ್ಟರ್ ಅನ್ನು ಗೀಕ್ ಪಿಕ್ಚರ್ಸ್ … Continued

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಖರ್ಗೆ ಪತ್ರದ ನಂತರ ಮೋದಿ ವಿರುದ್ಧ ಕಾಂಗ್ರೆಸ್‌ ಬಳಸಿದ ʼಅವಹೇಳನಕಾರಿ ಪದʼಗಳ ಬಗ್ಗೆ ಬಿಜೆಪಿ ಪತ್ರ

ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಎರಡು ದಿನಗಳ ನಂತರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ಬಳಸಿರುವ ಅವಹೇಳನಕಾರಿ ಪದಗಳನ್ನು ಪಟ್ಟಿ ಮಾಡಿ ಖರ್ಗೆ ಅವರಿಗೆ … Continued