ಈ ಕಾರಣಕ್ಕಾಗಿ ಗರ್ಭಿಣಿ ಪತ್ನಿಗೆ ಇಂಜೆಕ್ಷನ್‌ ಮೂಲಕ ಎಚ್‌ಐವಿ ಸೋಂಕಿತ ರಕ್ತ ಚುಚ್ಚಿದ ಪತಿ ಮಹಾಶಯ…!

ಅಮರಾವತಿ: ತನ್ನ ಗರ್ಭಿಣಿ ಪತ್ನಿಗೆ ವಿಚ್ಛೇದನ ನೀಡಲು ಕಾರಣ ಹುಡುಕುತ್ತಿದ್ದ ವ್ಯಕ್ತಿಯೊಬ್ಬ, ಆಕೆಗೆ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿ ಎಂ.ಚರಣ್ ನಕಲಿ ವೈದ್ಯನ ಸಹಾಯದಿಂದ ಎಚ್‌ಐವಿ ಸೋಂಕಿತ ರಕ್ತವನ್ನು ತನ್ನ ಪತ್ನಿಗೆ ಇಂಜೆಕ್ಷನ್ ಮೂಲಕ ನೀಡಿದ್ದು, ಪತ್ನಿ ನೀಡಿದ ದೂರಿನ … Continued

ಆರೋಗ್ಯವಂತ ಯುವ ಭಾರತೀಯರಲ್ಲಿ ಹೃದಯಾಘಾತದ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಅಂಶಗಳು ಯಾವವು..?

ಆರೋಗ್ಯವಂತ, ಯುವ ಮತ್ತು ಮಧ್ಯ ವಯಸ್ಕ ಭಾರತೀಯರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ಬಹಿರಂಗಪಡಿಸಿದೆ. ಹಾಗೂ ಎದುರಾಗುತ್ತಿರುವ ವೈದ್ಯಕೀಯ ತೊಂದರೆಗಳು ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ಜನರ ಮೇಲೆ ಪರಿಣಾಮ ಬೀರುತ್ತಿವೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ … Continued

ಮತ್ತೊಂದು ಭೀಕರ ಹತ್ಯೆ: ಹೆಂಡತಿಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಪತಿಯ ಬಂಧನ

ರಾಂಚಿ : ದೇಶವು ಶ್ರದ್ಧಾ ವಾಕರ್‌ ಭೀಕರ ಹತ್ಯೆ ಮರೆಯಾಗುವ ಮುನ್ನ, ಜಾರ್ಖಂಡ್‌ನಲ್ಲಿ ಅಂತಹುದೇ ಪ್ರಕರಣವು ವಿಲಕ್ಷಣ ಸಾಮ್ಯತೆಯ ಪ್ರಕರಣವೊಂದು ನಡೆದಿದೆ. ಬೋರಿಯೊ ಪೊಲೀಸ್ ಠಾಣಾ ವ್ಯಾಪ್ತಿಯ ಜಾರ್ಖಂಡ್‌ನ ಸಾಹೇಬ್‌ಗಂಜ್‌ನಲ್ಲಿ ಪತ್ನಿಯನ್ನು ಕೊಂದು ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಇದುವರೆಗೆ ಮೃತದೇಹದ 18 ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತಳನ್ನು … Continued

ಮುಂಬೈ ಮೂಲದ ಸರ್ಗಮ್ ಕೌಶಲ್‌ಗೆ ಮಿಸೆಸ್ ವರ್ಲ್ಡ್ 2022 ಕಿರೀಟ : 21 ವರ್ಷಗಳ ನಂತರ ಭಾರತಕ್ಕೆ ಪ್ರಶಸ್ತಿ

ನವದೆಹಲಿ: ಸರ್ಗಮ್ ಕೌಶಲ್ ಅವರು ಮಿಸೆಸ್ ವರ್ಲ್ಡ್ 2022 ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ 21 ವರ್ಷಗಳ ನಂತರ ಭಾರತಕ್ಕೆ ಈ ಪ್ರಶಸ್ತಿ ಭಾರತಕ್ಕೆ ಬಂದಿದೆ. ಶನಿವಾರ ಸಂಜೆ ವೆಸ್ಟ್‌ಗೇಟ್ ಲಾಸ್ ವೇಗಾಸ್ ರೆಸಾರ್ಟ್ ಮತ್ತು ಕ್ಯಾಸಿನೊದಲ್ಲಿ ನಡೆದ ಸಮಾರಂಭದಲ್ಲಿ ಮಿಸೆಸ್‌ ವರ್ಲ್ಡ್ 2021 ಅಮೆರಿಕದ ಶೈಲಿನ್ ಫೋರ್ಡ್ ಅವರು ಮುಂಬೈ ಮೂಲದ ಕೌಶಲ್‌ಗೆ ಕಿರೀಟ … Continued

ಮರಾಠಾ ಸಮಾಜಕ್ಕೆ ಮೀಸಲಾತಿ ; ಡಿಸೆಂಬರ್‌ 20 ರಂದು ಸುವರ್ಣ ವಿಧಾನ ಸೌಧದ ಬಳಿ ಬೃಹತ್ ಪ್ರತಿಭಟನೆ

ಬೆಳಗಾವಿ : ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಮರಾಠಾ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತಾ ಬರಲಾಗಿದೆ. ಸರಕಾರದ ಮೀಸಲಾತಿ ಇಲ್ಲದೆ ಮರಾಠ ಸಮಾಜದ ಪ್ರಗತಿ ಕುಂಠಿತವಾಗಿದೆ. ಅದಕ್ಕಾಗಿಯೇ ಮೀಸಲು ಬೇಡಿಕೆ ಕುರಿತು ಸರಕಾರದ ಗಮನ ಸೆಳೆಯಲು ಡಿ.20ರ ಮಂಗಳವಾರ ಸಮಸ್ತ ಮರಾಠ ಸಮಾಜದ ವತಿಯಿಂದ ಸುವರ್ಣ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ಎಲ್ಲಾ … Continued

ನಿಯಂತ್ರಣ ತಪ್ಪಿ ಫುಟ್​​ಪಾತ್ ಬದಿಯಲ್ಲಿದ್ದ ಮೂವರು ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು, ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭಾನುವಾರ ಉತ್ತರ ದೆಹಲಿಯ ರೂಪ್ ನಗರದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 10 ಮತ್ತು 4 ವರ್ಷದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಆರು ವರ್ಷ ವಯಸ್ಸಿನ ಮೂರನೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ. ಫುಟ್ ಪಾತ್ … Continued

ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ ಪಾಕಿಸ್ತಾನದ ಆಡಳಿತ ಪಕ್ಷದ ನಾಯಕಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅನಾಗರಿಕ ಆಕ್ರೋಶಕ್ಕಾಗಿ ನೆರೆಯ ದೇಶದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರನ್ನು ಭಾರತ ತೀವ್ರವಾಗಿ ಖಂಡಿಸಿದ ಒಂದು ದಿನದ ನಂತರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕಿ ಶಾಜಿಯಾ ಮರ್ರಿ ಅವರು ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. “ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ … Continued

ಪ್ರಧಾನಿಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ಪಾಕಿಸ್ತಾನದ ಬಿಲಾವಲ್ ಭುಟ್ಟೋ ಶಿರಚ್ಛೇದ ಮಾಡಿದವರಿಗೆ 2 ಕೋಟಿ ರೂ. ಬಹುಮಾನ ಘೋಷಿಸಿದ ಬಿಜೆಪಿ ನಾಯಕ…!

ಬಾಗ್‌ಪತ್‌ (ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿರುವಾಗ, ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಪಾಕಿಸ್ತಾನದ ವಿದೇಶಾಂಗ ಸಚಿವರ ಶಿರಚ್ಛೇದ ಮಾಡುವವರಿಗೆ 2 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಶನಿವಾರ ಹೇಳಿದ್ದಾರೆ. ಇಲ್ಲಿನ ಕಲೆಕ್ಟರೇಟ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ … Continued

ತನ್ನ ಕೋರ್ಸ್‌ಗಳ ಖರೀದಿಗೆ ಆಮಿಷದ ಆರೋಪ : ಬೈಜೂಸ್‌ ಸಿಇಒಗೆ ಸಮನ್ಸ್ ನೀಡಿದ ಎನ್‌ಸಿಪಿಸಿಆರ್‌

ನವದೆಹಲಿ : ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ (NCPCR) ಬೈಜು (BYJU) ಸಿಇಒ ಬೈಜು ರವೀಂದ್ರನ್ ಅವರಿಗೆ ಸಮನ್ಸ್ ನೀಡಿದೆ. BYJU’S ನ ಮಾರಾಟ ತಂಡವು ತಮ್ಮ ಮಕ್ಕಳಿಗೆ ತಮ್ಮ ಕೋರ್ಸ್‌ಗಳನ್ನು ಖರೀದಿಸಲು ಪೋಷಕರಿಗೆ ಆಮಿಷವೊಡ್ಡಲು ದುಷ್ಕೃತ್ಯಗಳಲ್ಲಿ ತೊಡಗಿದೆ ಎಂಬ ಸುದ್ದಿ ವರದಿ ಆಧರಿಸಿ ಆಯೋಗವು ಕ್ರಮ ಕೈಗೊಂಡಿದೆ. ಕೆಲವು ಗ್ರಾಹಕರು ತಮ್ಮನ್ನು ಶೋಷಣೆಗೆ … Continued

‘ಪಠಾಣ್‌ನ ಬಿಡುಗಡೆ ನಿರ್ಬಂಧಿಸಿ’: ಧಾರ್ಮಿಕ ಭಾವನೆ ಘಾಸಿಗೊಳಿಸಿದ್ದಕ್ಕೆ ಈಗ ಮುಸ್ಲಿಂ ಮಂಡಳಿಯಿಂದ ಶಾರುಖ್ ಖಾನ್ ಸಿನೆಮಾಕ್ಕೆ ವಿರೋಧ

ನವದೆಹಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ‘ಪಠಾಣ್‌’ ಚಿತ್ರವು ಅದರ “ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದ ಹಲವಾರು ವಿವಾದಗಳನ್ನು ಎದುರಿಸುತ್ತಿದೆ. ಹಿಂದೂ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಸಿನೆಮಾಕ್ಕೆ ಈಗ, ಮಧ್ಯಪ್ರದೇಶದ ಮುಸ್ಲಿಂ ಉಲೇಮಾ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಪಠಾಣ್‌ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಮಂಡಳಿ ಒತ್ತಾಯಿಸಿದೆ. ಚಿತ್ರದಲ್ಲಿನ ಅಸಭ್ಯತೆಯ … Continued