ದೇಶದಲ್ಲಿ ಅತ್ಯಂತ ಹೆಚ್ಚಿನ ತೆರಿಗೆ ಕಟ್ಟುವ ಸೆಲೆಬ್ರಿಟಿಗಳು ಇವರು ; ವಿವರ ಇಲ್ಲಿದೆ…

ನವದೆಹಲಿ: ಫಾರ್ಚೂನ್ ಇಂಡಿಯಾ ವರದಿಯ ಪ್ರಕಾರ ಎಲ್ಲ ಭಾರತೀಯ ಸೆಲೆಬ್ರಿಟಿಗಳಲ್ಲಿ 2024 ರಲ್ಲಿ ಶಾರುಖ್ ಖಾನ್ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿ ಹೊರಹೊಮ್ಮಿದ್ದಾರೆ. ಶಾರುಖ್ ಖಾನ್‌ ಅವರು 92 ಕೋಟಿ ತೆರಿಗೆ ಪಾವತಿಸಿದ್ದು, ನಂತರ ತಮಿಳು ಸೂಪರ್ ಸ್ಟಾರ್ ವಿಜಯ ಅವರು 80 ಕೋಟಿ ತೆರಿಗೆ ಪಾವತಿಸಿದ್ದಾರೆ. 75 ಕೋಟಿ ರೂ. ಪಾವತಿಸಿ ಸಲ್ಮಾನ್ ಖಾನ್ … Continued

ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆಯ ನಂತರ ಆರ್‌.ಜಿ. ಕರ್‌ ಆಸ್ಪತ್ರೆ ನವೀಕರಣ ಕಾರ್ಯಕ್ಕೂ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್‌ ಗೂ ನಂಟಿರುವ ‘ಪತ್ರ’ ಬಹಿರಂಗ…!

ಕೋಲ್ಕತ್ತಾ : ಟ್ರೈನಿ ವೈದ್ಯರ ಶವ ಪತ್ತೆಯಾದ ಅದೇ ಮಹಡಿಯಲ್ಲಿ ನವೀಕರಣ ಕಾರ್ಯಕ್ಕೆ ಸಂಬಂಧಿಸಿ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಸಂದೀಪ ಘೋಷ್ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಗುರುವಾರ ಹೊರಬಿದ್ದಿದೆ. ಈ ಪತ್ರವು ನವೀಕರಣ ಕಾರ್ಯವು ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಸಾಕ್ಷ್ಯಗಳ ಸಂಭವನೀಯ ನಾಶದ ಬಗ್ಗೆ ಪ್ರಯತ್ನಗಳು ನಡೆದಿವೆಯೇ ಎಂಬ ಬಗ್ಗೆ ಪ್ರಶ್ನೆಗಳು … Continued

ಎನ್‌ಕೌಂಟರ್‌ನಲ್ಲಿ 6 ಮಾವೋವಾದಿಗಳ ಹತ್ಯೆ

ಭದ್ರಾದ್ರಿ ಕೊತಗುಡೆಂ (ತೆಲಂಗಾಣ): ಕರಕಗೂಡು ಮಂಡಲದ ರಘುನಾಥಪಾಲೆಂ ಸಮೀಪದ ಅರಣ್ಯ ಪ್ರದೇಶದಲ್ಲಿ ಗುರುವಾರ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಾವೋವಾದಿಗಳು ಸಾವಿಗೀಡಾಗಿದ್ದಾರೆ. ಮಾವೋವಾದಿ ಪೀಡಿತ ಪ್ರದೇಶದಲ್ಲಿ ಪೊಲೀಸರು ನಡೆಸಿದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ತೆಲಂಗಾಣ ಪೊಲೀಸರ ಗಣ್ಯ ನಕ್ಸಲ್ ವಿರೋಧಿ ಪಡೆಯ … Continued

ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌-ಸಹಚರರ ಕ್ರೌರ್ಯ ಅನಾವರಣ ; ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ ವೈರಲ್

ಬೆಂಗಳೂರು : ನಟ ದರ್ಶನ್ ತೂಗುದೀಪ ಅವರ ಆಜ್ಞೆಯ ಮೇರೆಗೆ ಕೊಲೆಯಾದ 33 ವರ್ಷದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಸಾಯುವ ಕೆಲವೇ ಕ್ಷಣಗಳ ಮೊದಲಿನ ಹೊಸ ಫೋಟೋಗಳು ಹೊರಬಂದಿವೆ. ಹೊರಬಂದ ಎರಡು ಫೋಟೊಗಳ ಪೈಕಿ ಒಂದರಲ್ಲಿ ರೇಣುಕಾಸ್ವಾಮಿ ಪ್ರಾಣಭಯದಿಂದ ಬೇಡಿಕೊಳ್ಳುತ್ತಿರುವುದು ಕಾಣುತ್ತದೆ. ಎರಡೂ ಚಿತ್ರಗಳಲ್ಲಿ ರೇಣುಕಾಸ್ವಾಮಿ ಶರ್ಟ್ ಧರಿಸಿಲ್ಲ, ಹಿನ್ನಲೆಯಲ್ಲಿ ಟ್ರಕ್‌ಗಳು ನಿಂತಿವೆ. ಅವರ ದೇಹದ ಮೇಲೆ … Continued

ಸ್ಯಾಂಡಲ್‌ ವುಡ್‌ನಲ್ಲಿ ಲೈಂಗಿಕ ಕಿರುಕುಳ ತನಿಖೆಗೆ 153 ಮಂದಿ ಆಗ್ರಹ

ಬೆಂಗಳೂರು : ಸಿನಿಮಾಕ್ಷೇತ್ರದಲ್ಲಿ ಮಹಿಳೆಯರ ಸಮಸ್ಯೆ ಕುರಿತು ಮಲಯಾಳಂ ಸಿನಿಮಾರಂಗದಲ್ಲಿ ರಚನೆಯಾದ ಹೇಮಾ ಕಮಿಟಿ ಮಾದರಿಯಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ತನಿಖಾ ಸಮಿತಿ ರಚಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಭುಗಿಲೆದ್ದ ಹಿನ್ನೆಲೆ ಸ್ಯಾಂಡಲ್‌ವುಡ್‌ನಲ್ಲೂ ತನಿಖಾ ಸಮಿತಿ ರಚಿಸುವ ಕುರಿತು ‘ಫೈರ್’ ಸಂಸ್ಥೆ ಸರ್ಕಾರಕ್ಕೆ ಒತ್ತಾಯಿಸಿದೆ. ಫಿಲ್ಮ್ ಇಂಡಸ್ಟ್ರಿ ಫಾರ್ … Continued

ವೀಡಿಯೊ…| ಸಂಗೀತ ಕಾರ್ಯಕ್ರಮದ ವೇಳೆ ಶೆಡ್ ಕುಸಿದು ಅವಘಡ ; 100ಕ್ಕೂ ಹೆಚ್ಚು ಮಂದಿಗೆ ಗಾಯ

ಛಾಪ್ರಾ : ಬಿಹಾರದ ಸರನ್ ಜಿಲ್ಲೆಯ ಛಪ್ರಾದಲ್ಲಿ ಶೆಡ್ ಕುಸಿದು 100 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಈ ಪ್ರದೇಶದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಜನರ ಭಾರ ತಾಳಲಾರದೆ ಶೆಡ್ ಕುಸಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಇಶಾವಪುರ ಬ್ಲಾಕ್‌ನ ಮಹಾವೀರ ಅಖಾಡ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಮೆರವಣಿಗೆಯಲ್ಲಿ … Continued

ಸಿಬಿಎಫ್‌ಸಿ ಪ್ರಮಾಣಪತ್ರ ತಕ್ಷಣ ನೀಡುವಂತೆ ಆದೇಶಿಸಲು ಬಾಂಬೆ ಹೈಕೋರ್ಟ್ ನಕಾರ: ‘ಎಮೆರ್ಜೆನ್ಸಿ’ ಚಲನಚಿತ್ರ ಬಿಡುಗಡೆ ವಿಳಂಬ

ಮುಂಬೈ: ಬಾಲಿವುಡ್‌ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಅಭಿನಯದ ʼಎಮೆರ್ಜೆನ್ಸಿʼ ಚಿತ್ರದ ಸೆನ್ಸಾರ್‌ ಪ್ರಮಾಣಪತ್ರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಆದೇಶ ನೀಡಲು ಬಾಂಬೆ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಜಾರಿಗೆ ತರಲಾಗಿದ್ದ 1975ರ ತುರ್ತು ಪರಿಸ್ಥಿತಿ ಹಿನ್ನೆಲೆಯಾಗಿರಿಸಿಕೊಂಡು ನಿರ್ಮಾಣ … Continued

ಕನ್ನಡಕಗಳಿಗೆ ಗುಡ್‌ ಬೈ ಹೇಳಬಹುದು : 15 ನಿಮಿಷಗಳಲ್ಲಿ ದೃಷ್ಟಿ ಸರಿಪಡಿಸುವ ಕಣ್ಣಿನ ಡ್ರಾಪ್‌ ಗೆ ಅನುಮೋದನೆ ನೀಡಿದ ಡಿಸಿಜಿಐ…

ನವದೆಹಲಿ: ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಎಂಟಾಡ್ ಫಾರ್ಮಾಸ್ಯುಟಿಕಲ್ಸ್‌ನ ʼಪ್ರೆಸ್‌ವುʼ ಹೆಸರಿನ ಕಣ್ಣಿನ ಡ್ರಾಪ್‌ ಅನ್ನು ಅನುಮೋದಿಸಿದೆ. ಇದು ಪ್ರೆಸ್‌ಬಯೋಪಿಯಾ ಚಿಕಿತ್ಸೆಯಲ್ಲಿ ಒಂದು ಪ್ರಗತಿಯಾಗಿದೆ ಎಂದು ಹೇಳಲಾಗುತ್ತದೆ. ಔಷಧ ಕಂಪನಿಯು ಈಗಾಗಲೇ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ವಿಷಯ ತಜ್ಞರ ಸಮಿತಿಯಿಂದ ಕಣ್ಣಿನ ಡ್ರಾಪ್‌ಗೆ ಅನುಮೋದನೆ ಪಡೆದಿದೆ. ಪ್ರೆಸ್‌ವು (PresVu) … Continued

ಅಪರೂಪದ ವೀಡಿಯೊ..| ರಾಮ ಭಜನೆ ಹಾಡುತ್ತಿದ್ದ ಮಹಿಳೆಯನ್ನು ತಬ್ಬಿಕೊಂಡ ಕೋತಿ…!

ರಾಮ ಭಜನೆ ಮತ್ತು ಹರೇ ರಾಮ ಪಠಣಗಳನ್ನು ಕೇಳಿದ ನಂತರ ಕೋತಿಯೊಂದು ಮಹಿಳೆಯನ್ನು ತಬ್ಬಿಕೊಂಡ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೆಸ್ಟೊರೆಂಟ್‌ನಲ್ಲಿ ಮಹಿಳೆಯೊಬ್ಬರು ಕುಳಿತಿದ್ದು, ಕೋತಿ ಆರಂಭದಲ್ಲಿ ಮಹಿಳೆಯ ತೊಡೆಯ ಮೇಲೆ ಕುಳಿತು ಮಹಿಳೆ ರಾಮ ಭಜನೆ ಹಾಡುವುದನ್ನು ಕೇಳುತ್ತಿತ್ತು. ಆ ಮಹಿಳೆಯು ಭಗವಾನ್ ರಾಮನ ಸ್ತೋತ್ರಗಳನ್ನು ಪಠಿಸಲು ಪ್ರಾರಂಭಿಸಿದಾಗ ಕೋತಿಯು ಶ್ರದ್ಧೆಯಿಂದ … Continued

ವೀಡಿಯೊ…| ತನ್ನ ದೂರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ನೂರಾರು ಪುಟಗಳ ದಾಖಲೆಗಳ ಹಾರದೊಂದಿಗೆ ಉರುಳುತ್ತ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ..!

ಒಂದು ವಿಶಿಷ್ಟ ಪ್ರತಿಭಟನೆಯಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಗ್ರಾಮದ ಸರಪಂಚ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೆಪ್ಟೆಂಬರ್ 3 ರಂದು ವ್ಯಕ್ತಿಯೊಬ್ಬರು ತಮ್ಮ ಕುತ್ತಿಗೆಗೆ ಸುಮಾರು ನೂರಾರು ಪುಟಗಳ ದಾಖಲೆಗಳ ಹಾರವನ್ನು ಹಾಕಿಕೊಂಡು ರಸ್ತೆಯಲ್ಲಿ ಉರುಳುತ್ತ ಮಧ್ಯಪ್ರದೇಶದ ನೀಮುಚ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದಾರೆ. “ಉರುಳುವ” ಪ್ರತಿಭಟನೆಯ ನಂತರ ನೀಮಚ್ ಜಿಲ್ಲಾಧಿಕಾರಿ ಹಿಮಾಂಶು ಚಂದ್ರ ಅವರು ಈ ವ್ಯಕ್ತಿಯ … Continued