ದೆಹಲಿ ಪಿಜಿ ಕಟ್ಟಡ ಕುಸಿತ : ಸಾವಿನ ಸಂಖ್ಯೆ 6ಕ್ಕೆ ಏರಿಕೆ

ನವದೆಹಲಿ: ದಕ್ಷಿಣ ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ಸಂಭವಿಸಿದ ಐದು ಅಂತಸ್ತಿನ ಪಿಜಿ ಹಾಸ್ಟೆಲ್‌ (PG hostel) ಕಟ್ಟಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಭಾನುವಾರ ನಡೆದ ಈ ದುರಂತದ ರಾತ್ರಿ ಕಾರ್ಯಾಚರಣೆ ವೇಳೆ ರಕ್ಷಿಸಲಾದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ 11 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 30 … Continued

ದೇವದುರ್ಗ : ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದು ಇಬ್ಬರು ಸಾವು ; ಓರ್ವನ ಸ್ಥಿತಿ ಗಂಭೀರ

ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಭಾನುವಾರ ಸಂಭವಿಸಿದ ಭೀಕರ ದುರಂತದಲ್ಲಿ ಕಟ್ಟಡದ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೇಳಲಾಗಿದೆ. ಮೃತರನ್ನು ರವಿ (35) ಮತ್ತು … Continued

ವೀಡಿಯೊ…| ಬೆಂಗಳೂರು : ನಿರ್ಮಾಣ ಹಂತದ ಕಟ್ಟಡ ಕುಸಿತ; ಮೂವರು ಕಾರ್ಮಿಕರ ಸಾವು, ಹಲವರು ಸಿಲುಕಿರುವ ಶಂಕೆ

ಬೆಂಗಳೂರು: ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳವಾರ ಸುರಿಯುತ್ತಿರುವ ಮಳೆಯ ಪರಿಣಾಮ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳ, ಪೊಲೀಸರು ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಶವ ಹೊರ ತೆಗೆದಿದ್ದಾರೆ ಹಾಗೂ ಮೂವರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. … Continued

ವೀಡಿಯೊ..| ದಿಢೀರನೆ ಕುಸಿದು ರಸ್ತೆ ಮೇಲೆ ಬಿದ್ದ ಕಟ್ಟಡ ; ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಪುಟ್ಟ ಮಕ್ಕಳು

ಉತ್ತರ ಪ್ರದೇಶದ ಮೀರತ್‌ನ ಸದರ್ ಬಜಾರ್ ಪ್ರದೇಶದಲ್ಲಿ ಶುಕ್ರವಾರ ಕಟ್ಟಡ ಕುಸಿತದಿಂದ ಅವಶೇಷಗಳ ಅಡಿಗೆ ಸಿಲುಕುವುದರಿಂದ ಇಬ್ಬರು ಪುಟ್ಟ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿರಿದಾದ ರಸ್ತೆ ಮೂಲಕ ಸ್ಕೂಟರ್ ಹಾದುಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ನಂತರ ಬೈಸಿಕಲ್ ಮೇಲೆ ಮಗು ಹೋಗುತ್ತದೆ. ನಂತರ ಮಹಿಳೆ ನಡೆದುಕೊಂಡು … Continued

ಭಾರೀ ಮಳೆಗೆ ಆರು ಅಂತಸ್ತಿನ ಕಟ್ಟಡ ಕುಸಿದು 7 ಮಂದಿ ಸಾವು

ಗಾಂಧಿನಗರ : ಗುಜರಾತಿನ ಸೂರತ್‍ನಲ್ಲಿ ಭಾರೀ ಮಳೆಯಿಂದ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು 7 ಜನ ಸಾವಿಗೀಡಾಗಿದ್ದಾರೆ ಹಾಗೂ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರ ರಕ್ಷಣೆಗೆ ಎನ್‍ಡಿಆರ್‌ಎಫ್‌ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಶನಿವಾರ ಮಹಿಳೆಯೊಬ್ಬರನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿತ್ತು. ಕುಸಿದು ಬಿದ್ದ ಕಟ್ಟಡದಲ್ಲಿ … Continued

ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದ ಐದು ಅಂತಸ್ತಿನ ಬೃಹತ್‌ ಕಟ್ಟಡ | ವೀಕ್ಷಿಸಿ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದಿದೆ, ಆದರೆ ಅದೃಷ್ಟವಶಾತ್, ಘಟನೆಯ ಮೊದಲು ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದ್ದರಿಂದ ಯಾರೂ ಗಾಯಗೊಂಡಿಲ್ಲ ಎಂದು ವರದಿಯಾಗಿದೆ. ಹಿಮಾಚಲದ ಧಾಮಿ ಪ್ರದೇಶದ ಘಂಡಾಲ್ ಗ್ರಾಮದಲ್ಲಿ ಈ ಐದು ಅಂತಸ್ತಿನ ಕಟ್ಟಡ ಕುಸಿದು ರಸ್ತೆ ಹಾಳಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಕಟ್ಟಡ ಕುಸಿತದ ಕ್ಷಣವನ್ನು … Continued