ರಾಷ್ಟ್ರೀಯ ಕಾರ್ಯಕಾರಿಣಿಗೆ ನೂತನವಾಗಿ 10 ಸದಸ್ಯರನ್ನು ನೇಮಕ ಮಾಡಿದ ಬಿಜೆಪಿ

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಪಕ್ಷದ 10 ನಾಯಕರನ್ನು ನಾಮನಿರ್ದೇಶನ ಮಾಡಿದ್ದಾರೆ. ಹೊಸ ರಾಷ್ಟ್ರೀಯ ಕಾರ್ಯಕಾರಿಣಿಗೆ ತೆಲಂಗಾಣ, ಜಾರ್ಖಂಡ್, ರಾಜಸ್ಥಾನ ಮತ್ತು ಬಿಹಾರ ರಾಜ್ಯಗಳಿಂದ ಕ್ರಮವಾಗಿ ಬಿಜೆಪಿಯ ಮಾಜಿ ಅಧ್ಯಕ್ಷರಾದ ಬಂಡಿ ಸಂಜಯಕುಮಾರ, ದೀಪಕ ಪ್ರಕಾಶ, ಸತೀಶ ಪುನಿಯಾ ಮತ್ತು ಸಂಜಯ ಜೈಸ್ವಾಲ್ ಎಂದು ಪಕ್ಷದ ಹೇಳಿಕೆ … Continued

ನಾನು ಈಗ ಭಾರತೀಯ ಎಂದು ಭಾವಿಸುತ್ತೇನೆ, ಭಾರತ ಈಗ ನನ್ನದು “: ಪಬ್‌ಜಿಯಲ್ಲಿ ಭಾರತೀಯ ವ್ಯಕ್ತಿಯೊಂದಿಗೆ ಪ್ರೀತಿ ಬೆಳೆದ ನಂತರ ಭಾರತಕ್ಕೆ ಬಂದ ಪಾಕಿಸ್ತಾನದ ಮಹಿಳೆ

ನೋಯ್ಡಾ: ಪಬ್ ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾದ ಭಾರತ ಮೂಲದ ಯುವಕನಿಗಾಗಿ ಭಾರತಕ್ಕೆ ಬಂದು ಬಂಧನಕ್ಕೀಡಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಗೆ ಜಾಮೀನು ದೊರೆತಿದ್ದು, ಈಗ ನಾನು ಭಾರತೀಯ, ಭಾರತ ನನ್ನದು ಎಂದು ನನಗೆ ಅನುಭವವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜಾಮೀನು ಪಡೆದು ಶನಿವಾರ ಜೈಲಿನಿಂದ ಹೊರಬಂದ ಭಾರತದ ಸಚಿನ್ ಮೀನಾ ಮತ್ತು ಪಾಕಿಸ್ತಾನದ ಸೀಮಾ … Continued

ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಗಂಡ : ಈತನಿಗೆ ಹಮ್ ದಿಲ್ ದೇ ಚುಕೆ ಸನಮ್‌ ಸಿನೆಮಾ ಸ್ಫೂರ್ತಿಯಂತೆ…!

ಪಾಟ್ನಾ: ಬಿಹಾರದ ನವಾಡಾ ಜಿಲ್ಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಆಕೆಯ ಪ್ರಿಯಕರನ ಜೊತೆ ತಾನೇ ಮುಂದೆ ನಿಂತು ಮದುವೆ ಮಾಡಿಸಿ ಇಬ್ಬರೂ ಒಟ್ಟಿಗೆ ಇರಲು ಅವಕಾಶ ಮಾಡಿಕೊಟ್ಟ ಘಟನೆ ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಶಿವನ ದೇವಸ್ಥಾನದಲ್ಲಿ ತನ್ನ ಪತಿಯ ಸಮ್ಮುಖದಲ್ಲಿ ಮಹಿಳೆ ತನ್ನ ಪ್ರಿಯಕರನೊಂದಿಗೆ ವಿವಾಹವಾಗುತ್ತಿರುವುದನ್ನು ತೋರಿಸುತ್ತದೆ. ಮಹಿಳೆಯ ಪ್ರೇಮಿ ಆಕೆಯ … Continued

ಪಶ್ಚಿಮ ಬಂಗಾಳ ಪಂಚಾಯತ ಚುನಾವಣೆ ಹಿಂಸಾಚಾರಕ್ಕೆ 14 ಸಾವು

ಕೋಲ್ಕತ್ತಾ; ಪಶ್ಚಿಮ ಬಂಗಾಳದ ಪಂಚಾಯತ ಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದ್ದಂತೆ ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ ಕನಿಷ್ಠ 14 ಜನರು ಸಾವಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಹಿಂಸಾಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಲಾಗಿದೆ ಮತ್ತು ಮುಕ್ತ … Continued

ರೈತರೊಂದಿಗೆ ರಾಹುಲ್‌ ಗಾಂಧಿ ಸಂವಾದ, ಟ್ರಾಕ್ಟರ್ ಓಡಿಸಿದ ಕಾಂಗ್ರೆಸ್‌ ನಾಯಕ, ಹೊಲಗಳಲ್ಲಿ ಭತ್ತದ ಸಸಿ ನಾಟಿ | ವೀಕ್ಷಿಸಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಒಳನಾಡಿನ ಜಮೀನಿನಲ್ಲಿ ಕಾಣಿಸಿಕೊಂಡರು.ಅವರು ಟ್ರಾಕ್ಟರ್ ಓಡಿಸಿದರು, ಭತ್ತದ ಬೀಜಗಳನ್ನು ಬಿತ್ತಿದರು ಮತ್ತು ಬರೋಡಾ ಮತ್ತು ಮದೀನದ ಹೊಲಗಳಲ್ಲಿ ರೈತರೊಂದಿಗೆ ಸಂಭಾಷಣೆ ನಡೆಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ ದೆಹಲಿಯಿಂದ ಶಿಮ್ಲಾಕ್ಕೆ ಹೋಗುವ ಮಾರ್ಗದಲ್ಲಿ ಸೋನೆಪತ್‌ನ ಮದೀನಾ ಗ್ರಾಮದಲ್ಲಿ ರೈತರನ್ನು ಭೇಟಿ ಮಾಡಿದ ನಂತರ … Continued

ವೀಡಿಯೊ..: ನನ್ನ ಹೆಂಡತಿ, ಮಕ್ಕಳನ್ನು ವಾಪಸ್ ಕಳುಹಿಸಿಕೊಡಿ ; ಪಬ್‌ಜಿ ಗೆಳೆಯನ ಭೇಟಿಗೆ ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆಯ ಪತಿಯಿಂದ ಮೋದಿ ಸರ್ಕಾರಕ್ಕೆ ಮನವಿ

ನವದೆಹಲಿ : ಪಬ್‌ಜಿಯಲ್ಲಿ ಪರಿಚಯವಾದ ಭಾರತದ ವ್ಯಕ್ತಿಯ ಭೇಟಿಗಾಗಿ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಪತಿ ಗುಲಾಮ್ ಹೈದರ್ ಅವರ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅವರು ತಮ್ಮ ಪತ್ನಿ ಮತ್ತು ಮಕ್ಕಳನ್ನು ತಮ್ಮ ತಮ್ಮ ದೇಶ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ … Continued

ವೀಡಿಯೊ: ಭಾರೀ ಮಳೆ ನಡುವೆ ಜಮ್ಮು-ಶ್ರೀನಗರ ಹೆದ್ದಾರಿಯ ದೊಡ್ಡ ಭಾಗ ಕುಸಿತ: ಅಮರನಾಥ ಯಾತ್ರೆ ಸ್ಥಗಿತ

ನವದೆಹಲಿ: ಭಾರೀ ಮಳೆಯಿಂದಾಗಿ ಶನಿವಾರ ಬೆಳಿಗ್ಗೆ ಜಮ್ಮು ನಗರದಿಂದ ವಾರ್ಷಿಕ ಅಮರನಾಥ ಯಾತ್ರೆ ಸ್ಥಗಿತಗೊಳಿಸಲಾಯಿತು, ಇದರಿಂದ ಭೂ ಕುಸಿತ ರಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯನ್ನು ಕೊಚ್ಚಿ ಹಾಕಿದೆ. ಹವಾಮಾನ ವೈಪರೀತ್ಯದಿಂದಾಗಿ ಶನಿವಾರ ಬೆಳಗ್ಗೆ ಇಲ್ಲಿನ ಭಗವತಿ ನಗರದ ಯಾತ್ರಿ ನಿವಾಸ ಬೇಸ್ ಕ್ಯಾಂಪ್‌ನಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. … Continued

ಪಶ್ಚಿಮ ಬಂಗಾಳ ಪಂಚಾಯತ ಚುನಾವಣೆಯಲ್ಲಿ ಮತದಾನದ ವೇಳೆ ಹಿಂಸಾಚಾರ : 9 ಮಂದಿ ಸಾವು

ಕೋಲ್ಕತ್ತಾ: ಮೂರು ಹಂತದ ಪಂಚಾಯತಿ ಚುನಾವಣೆಗೆ ಇಂದು, ಶನಿವಾರ ಗ್ರಾಮೀಣ ಪಶ್ಚಿಮ ಬಂಗಾಳದ ಮತದಾನದ ವೇಳೆ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ಹತ್ಯೆಯಾದವರಲ್ಲಿ ಐವರು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಬಿಜೆಪಿ, ಎಡ ಮತ್ತು ಕಾಂಗ್ರೆಸ್‌ನ ತಲಾ ಒಬ್ಬ ಕಾರ್ಯಕರ್ತ ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತಾರೂಢ ತೃಣಮೂಲ … Continued

ಹೆಬ್ಬಾವಿನ ಬಿಗಿಹಿಡಿತದಲ್ಲಿ ಕಾಳಿಂಗ ಸರ್ಪ…ಕಾಳಿಂಗ ಸರ್ಪದ ದವಡೆಯಲ್ಲಿ ಹೆಬ್ಬಾವು; ಎರಡು ಅಪಾಯಕಾರಿ ಹಾವುಗಳ ಹೊಡೆದಾಟದಲ್ಲಿ ಗೆದ್ದಿದ್ದು ಯಾರು ?

ಹೆಬ್ಬಾವುಗಳು ಹೆಚ್ಚಾಗಿ ಇತರ ಪ್ರಾಣಿಗಳನ್ನು ಬೇಟೆಯಾಡುತ್ತವೆ, ಕಾಳಿಂಗ ಸರ್ಪ ಇತರೆ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ, ಆದರೆ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಹಾವು ಪರಸ್ಪರ ಕಾದಾಟ ನಡೆಸಿದರೆ..? ಹೆಬ್ಬಾವು ಮತ್ತು ಕಾಳಿಂಗ ಸರ್ಪದ ಕಾದಾಟ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಈ ಹೊಡೆದಾಟದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ವರ್ಷಗಳ ಹಿಂದಿನ ಈ … Continued

ಮೋದಿ ಉಪನಾಮ ಪ್ರಕರಣ : ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್ ತಿರಸ್ಕರಿಸಿದ ನಂತರ ರಾಹುಲ್ ಗಾಂಧಿಗೆ ಮುಂದಿನ ದಾರಿ ಯಾವುದು..?

ನವದೆಹಲಿ: 2019ರ ಮೋದಿ ಉಪನಾಮದ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ವಿಧಿಸಲಾಗಿರುವ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಶಿಕ್ಷೆಗೆ ತಡೆ ನೀಡಲು ಯಾವುದೇ ಸಮಂಜಸವಾದ ಕಾರಣವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ಹಿಂದೆ ಅವರ ಅಪರಾಧಕ್ಕೆ ತಡೆ ನೀಡಲು ನಿರಾಕರಿಸಿದ ಸೆಷನ್ಸ್ … Continued