ರಾಹುಲ್ ಗಾಂಧಿ ‘ಮೋದಿ ಉಪನಾಮ’ ಪ್ರಕರಣ: ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯ ಆದೇಶ ಕಾಯ್ದಿರಿಸಿದ ಸೂರತ್ ಕೋರ್ಟ್

ಸೂರತ್‌ : ತಮ್ಮ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಿರುವ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ ಮೇಲ್ಮನವಿಯ ಆದೇಶವನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಗುರುವಾರ ಕಾಯ್ದಿರಿಸಿದೆ. ರಾಹುಲ್‌ ಗಾಂಧಿ ಮತ್ತು ದೂರುದಾರರಾದ ಬಿಜೆಪಿಯ ಪೂರ್ಣೇಶ ಮೋದಿ ಅವರ ವಾದವನ್ನು ಆಲಿಸಿದ … Continued

ವಿದೇಶಿ ವಿನಿಮಯ ಉಲ್ಲಂಘನೆ : ಬಿಬಿಸಿ ಇಂಡಿಯಾ ವಿರುದ್ಧ ಪ್ರಕರಣ ದಾಖಲಿಸಿದ ಇ.ಡಿ-ವರದಿ

ನವದೆಹಲಿ: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಗಾಗಿ ಸುದ್ದಿ ಪ್ರಸಾರಕ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಫೆಮಾ ಪ್ರಕರಣ ದಾಖಲಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ ಎಂದು ವರದಿಯೊಂದು ತಿಳಿಸಿದೆ. ಫೆಡರಲ್ ತನಿಖಾ ಸಂಸ್ಥೆಯು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ನಿಬಂಧನೆಗಳ ಅಡಿಯಲ್ಲಿ ಕೆಲವು ಕಂಪನಿಯ ಕಾರ್ಯನಿರ್ವಾಹಕರ ದಾಖಲೆಗಳು ಮತ್ತು ಹೇಳಿಕೆಗಳನ್ನು … Continued

ಉಮೇಶ್ ಪಾಲ್ ಹತ್ಯೆ ಪ್ರಮುಖ ಆರೋಪಿ, ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ ಅಸದ್ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಸಾವು

ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌-ರಾಜಕಾರಣಿ ಅತೀಕ್ ಅಹ್ಮದ್‌ನ ಮಗ ಅಸದ್ ಮತ್ತು ಸಹಚರ ಗುಲಾಮ್ ಎಂಬವರು ಉತ್ತರ ಪ್ರದೇಶದ ಎಸ್‌ಟಿಎಫ್ ಗುಂಡಿಗೆ ಬಲಿಯಾಗಿದ್ದಾರೆ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಇಬ್ಬರೂ ಬೇಕಾಗಿದ್ದರು. ಝಾನ್ಸಿಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ನವೆಂದು ಮತ್ತು ವಿಮಲ್ ನೇತೃತ್ವದ ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ … Continued

ಭಾರತದಲ್ಲಿಏರುತ್ತಿರುವ ಕೊರೊನಾ : 10000ದ ಗಡಿ ದಾಟಿದ ದೈನಂದಿನ ಕೋವಿಡ್-19 ಪ್ರಕರಣಗಳು

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 10,158 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಸಕ್ರಿಯ ಪ್ರಕರಣಗಳು 44,998ಕ್ಕೆ ಏರಿದೆ. ದೈನಂದಿನ ಧನಾತ್ಮಕತೆಯ ದರವು ಶೇಕಡಾ 4.42 ರಷ್ಟಿದ್ದರೆ ವಾರದ ಧನಾತ್ಮಕತೆಯ ದರವು ಶೇಕಡಾ 4.02 ರಷ್ಟಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ ಶೇಕಡಾ 0.10 ರಷ್ಟಿದೆ. ಆರೋಗ್ಯ … Continued

ಈ ವರ್ಷ ಉತ್ತಮ ಮಾನ್ಸೂನ್‌ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಎಲ್ ನಿನೋ ಪರಿಸ್ಥಿತಿಗಳ ಸಾಧ್ಯತೆಯ ಹೊರತಾಗಿಯೂ ಈ ವರ್ಷ ನೈಋತ್ಯ ಮಾನ್ಸೂನ್ ಋತುವಿನಲ್ಲಿ “ಸಾಮಾನ್ಯ” ಮಳೆ (normal rain)ಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದೀರ್ಘಾವಧಿಯ ಸರಾಸರಿ 87 ಸೆಂಟಿಮೀಟರ್‌ಗಳಲ್ಲಿ 96% ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ, ಅಂದರೆ ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳವರೆಗೆ ದೇಶದಲ್ಲಿ … Continued

ಒಂದೇ ದಿನದಲ್ಲಿ ಹೊಸದಾಗಿ 1,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ ದೆಹಲಿ, ಮಹಾರಾಷ್ಟ್ರ

ನವದೆಹಲಿ: ಮಹಾರಾಷ್ಟ್ರವು ಬುಧವಾರ 1,000 ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ಮತ್ತು ಒಂಬತ್ತು ಸಾವುಗಳನ್ನು ವರದಿ ಮಾಡಿದೆ. ರಾಜ್ಯವು 1,115 ಹೊಸ ಸೋಂಕುಗಳನ್ನು ವರದಿ ಮಾಡಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 5,421 ಕ್ಕೆ ಒಯ್ದಿದೆ. ಮುಂಬೈನಲ್ಲಿ ಅತಿ ಹೆಚ್ಚು 1,577 ಪ್ರಕರಣಗಳು, ನಂತರ ಥಾಣೆಯಲ್ಲಿ 953, ಪುಣೆಯಲ್ಲಿ 776 ಮತ್ತು ನಾಗ್ಪುರದಲ್ಲಿ 548 … Continued

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ವೀರ್ ಸಾವರ್ಕರ ಮೊಮ್ಮಗ

ಪುಣೆ: ವಿನಾಯಕ ದಾಮೋದರ್ ಸಾವರ್ಕರ ವಿರುದ್ಧದ ಹಳೆಯ ಟೀಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಇನ್ನಷ್ಟು ತೊಂದರೆ ಉಂಟುಮಾಡುವ ಸಾಧ್ಯತೆಯಿದ್ದು, ಪುಣೆಯ ನ್ಯಾಯಾಲಯದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಸಾವರ್ಕರ ಅವರ ಮೊಮ್ಮಗ ಸತ್ಯಕಿ ಸಾವರ್ಕರ ಅವರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ … Continued

ಇಲಿ ಕೊಂದವನ ವಿರುದ್ಧ ಎಫ್‌ಐಆರ್ : ನ್ಯಾಯಾಲಯಕ್ಕೆ 30 ಪುಟಗಳ ಚಾರ್ಜ್‌ ಶೀಟ್ ಸಲ್ಲಿಕೆ…!

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದ ‘ಇಲಿ ಹತ್ಯೆ’ ಪ್ರಕರಣವೊಂದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಇಲಿಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ 30 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬರೇಲಿಯ ಐವಿಆರ್‌ಐ(IVRI)ನಲ್ಲಿ ಮರಣೋತ್ತರ ಪರೀಕ್ಷೆ ಮತ್ತು ಪ್ರಕರಣದ ಆರೋಪಪಟ್ಟಿಯು ದೇಶದ ಮೊದಲ ಈ ರೀತಿಯ … Continued

ಬಾಗಿಲ ಚೌಕಟ್ಟಿನೊಳಗೆ ಗೆದ್ದಲುಗಳಿವೆ ಎಂದು ಭಾವಿಸಿದವರಿಗೆ ಕಂಡುಬಂದಿದ್ದು 39 ಹಾವುಗಳು…!

ಗೊಂಡಿಯಾ:ಮಹಾರಾಷ್ಟ್ರದ ಗೊಂಡಿಯಾ ನಗರದ ಶಾಸ್ತ್ರಿ ವಾರ್ಡ್ ಪ್ರದೇಶದಲ್ಲಿರುವ ಮನೆಯೊಂದರ ಬಾಗಿಲಿನ ಚೌಕಟ್ಟನ್ನು ತೆಗೆಯುವ ವೇಳೆ, ಒಂದಲ್ಲ ಎರಡಲ್ಲ, 39 ಹಾವುಗಳ ಮಕ್ಕಳು ಒಂದೊಂದಾಗಿ ಹೊರಬರುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ 4 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಮನೆಯ ಬಾಗಿಲಿನ ಚೌಕಟ್ಟಿನಿಂದ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿರುವುದನ್ನು … Continued

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7830 ಹೊಸ ಕೋವಿಡ್‌-19 ಪ್ರಕರಣಗಳು ದಾಖಲು

ನವದೆಹಲಿ: ಇಂದು ಬುಧವಾರ (ಏಪ್ರಿಲ್ 12) ಬೆಳಿಗ್ಗೆ ನೀಡಿದ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 7,830 ದೈನಂದಿನ ಹೊಸ ಕೊರೊನಾ ವೈರಸ್ ಸೋಂಕುಗಳು ದಾಖಲಾಗಿದೆ, ಇದು 223 ದಿನಗಳಲ್ಲಿ ಅತಿ ಹೆಚ್ಚು ಒಂದೇ ದಿನದಲ್ಲಿ ದಾಖಲಾದ ಪ್ರಕರಣವಾಗಿದೆ ಮತ್ತು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40,215 ಕ್ಕೆ ಏರಿದೆ. ದೆಹಲಿ, … Continued