ಸಿಮ್ ಏಕಾಏಕಿ ಬ್ಲಾಕ್: ಉದ್ಯಮಿಯ ಖಾತೆಯಿಂದ 72 ಲಕ್ಷ ರೂ.ಮಂಗಮಾಯ..! ಸಿಮ್ ಸ್ವಾಪ್ ವಂಚನೆ ಬಗ್ಗೆ ಬೇಕಿದೆ ಜಾಗ್ರತೆ

ನವದೆಹಲಿ: ಆನ್‌ಲೈನ್ ಸಿಮ್ ಸ್ವಾಪ್ ವಂಚನೆಯ ಮತ್ತೊಂದು ಪ್ರಕರಣದಲ್ಲಿ ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರ ಬ್ಯಾಂಕ್‌ ಖಾತೆಯಿಂದ 72 ಲಕ್ಷ ರೂ. ಖಾಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಟೆಲಿಗ್ರಾಫ್ ಇಂಡಿಯಾ ಪ್ರಕಟಿಸಿದ ವರದಿಯ ಪ್ರಕಾರ, ಸೈಬರ್ ಕ್ರಿಮಿನಲ್‌ಗಳು ಉದ್ಯಮಿಯ ಸಿಮ್ ಕಾರ್ಡ್‌ಗೆ ಮೋಸದಿಂದ ಪ್ರವೇಶವನ್ನು ಪಡೆದರು ಮತ್ತು ಅವರ ಬ್ಯಾಂಕ್ ಖಾತೆಯಿಂದ 72 ಲಕ್ಷ ರೂ.ಗಳಿಗೂ … Continued

ರಾಷ್ಟ್ರೀಯ ಪಕ್ಷದ ಸ್ಥಾಮಾನ ಪಡೆದ ಎಎಪಿ : ಎನ್‌ಸಿಪಿ, ಸಿಪಿಐ, ಟಿಎಂಸಿಗೆ ಹಿನ್ನಡೆ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ಸೋಮವಾರ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ. ಶರದ್ ಪವಾರ್ ಅವರ ಶರದ್‌ ಪವಾರ್‌ ಎನ್‌ಸಿಪಿ, ಸಿಪಿಐ ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಕಳೆದುಕೊಂಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಏಪ್ರಿಲ್ … Continued

ಹಾರಾಟದ ವೇಳೆ ಕ್ಯಾಬಿನ್ ಸಿಬ್ಬಂದಿಗೆ ಹೊಡೆದ ಪ್ರಯಾಣಿಕ : ದೆಹಲಿ ನಿಲ್ದಾಣಕ್ಕೆ ವಾಪಸ್ಸಾದ ಏರ್ ಇಂಡಿಯಾ ವಿಮಾನ

ನವದೆಹಲಿ: ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಹಾರಾಟದ ವೇಳೆ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಜಗಳವಾಡಿದ ನಂತರ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್‌ ಮರಳಿದ ಘಟನೆ ಸೋಮವಾರ ನಡೆದ ವರದಿಯಾಗಿದೆ. ಏರ್ ಇಂಡಿಯಾ ದೆಹಲಿ-ಲಂಡನ್ (AI-111) ವಿಮಾನವು ‘ಅಶಿಸ್ತಿನ’ ಪ್ರಯಾಣಿಕನ ಕಾರಣದಿಂದ ದೆಹಲಿಯಿಂದ ಹೊರಟ ವಿಮಾನ ಹಾರಾಟದ ವೇಳೆಯೇ ವಾಪಸ್‌ ಮರಳಿದೆ ಮತ್ತು … Continued

ಪರಾರಿಯಾದ ಅಮೃತಪಾಲ್ ಸಿಂಗ್ ಸಹಾಯಕನ ಬಂಧನ : ಇಬ್ಬರೂ ಒಟ್ಟಿಗೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು

ನವದೆಹಲಿ: ಪರಾರಿಯಾಗಿರುವ ಮೂಲಭೂತವಾದಿ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಪಪ್ಪಲ್‌ ಪ್ರೀತ್‌ ಸಿಂಗ್ ನನ್ನು ಪಂಜಾಬ್ ಪೋಲೀಸರ ಗುಪ್ತಚರ ಘಟಕವು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಇಂದು, ಸೋಮವಾರ ಬಂಧಿಸಿದೆ. ಕಳೆದ ತಿಂಗಳು ಜಲಂಧರ್‌ನಲ್ಲಿ ಪೋಲೀಸರ ಬಲೆಯಿಂದ ನಾಟಕೀಯವಾಗಿ ತಪ್ಪಿಸಿಕೊಂಡ ನಂತರ ಇಬ್ಬರೂ ಒಟ್ಟಿಗೆ ಪರಾರಿಯಾಗಿದ್ದರು. ನಂತರ ಇಬ್ಬರು ಹೋಶಿಯಾರ್‌ಪುರ ತಲುಪಿದ ನಂತರ ತಪ್ಪಿಸಿಕೊಳ್ಳಲು … Continued

ಸಂಸದರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕೇರಳದ ವಯನಾಡಿಗೆ ರಾಹುಲ್‌ ಗಾಂಧಿ ನಾಳೆ ಭೇಟಿ ಸಾಧ್ಯತೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಏಪ್ರಿಲ್ 11 ರಂದು ತಮ್ಮ ಹಿಂದಿನ ಕ್ಷೇತ್ರ ಕೇರಳದ ವಯನಾಡಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾದ ನಂತರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು. ಸೂರತ್ ನ್ಯಾಯಾಲಯವು 2019 ರಲ್ಲಿ … Continued

ದೇವಸ್ಥಾನದ ಬಳಿಯಿದ್ದ ಬೃಹತ್ ಮರ ಉರುಳಿ 7 ಮಂದಿ ಸಾವು, 5 ಮಂದಿಗೆ ಗಾಯ

ಅಕೋಲಾ (ಮಹಾರಾಷ್ಟ್ರ) : ಮಹಾರಾಷ್ಟ್ರದ ಅಕೋಲಾದಲ್ಲಿ ಭಾನುವಾರ ಟಿನ್ ಶೆಡ್‌ನ ಮೇಲೆ ಬೃಹತ್ ಮರವೊಂದು ಬಿದ್ದು ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಹಳೆಯ ಬೇವಿನ ಮರವೊಂದು ತಗಡಿನ ಶೆಡ್‌ನ … Continued

ಇವು ಸಮಸ್ಯೆಗಳೇ? ಪ್ರಮುಖ ವಿಷಯದ ಬಗ್ಗೆ ಚರ್ಚಿಸದೆ ಸಮಯ ವ್ಯರ್ಥ ಮಾಡ್ತಿದ್ದಾರೆ : ಪ್ರಧಾನಿ ಮೋದಿ ಪದವಿ ವಿವಾದಕ್ಕೆ ಶರದ್ ಪವಾರ್ ಆಕ್ಷೇಪ

ಮುಂಬೈ: ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯವನ್ನು ಎತ್ತುತ್ತಿರುವವರು ಪ್ರಶ್ನೆ ಎತ್ತಲೇಬೇಕಾದ ಮಹತ್ವದ ವಿಷಯಗಳ ಕುರಿತಾಗಿನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಟೀಕಿಸಿದ್ದಾರೆ. ದೇಶವು ಗಮನಹರಿಸಬೇಕಾದ ಹೆಚ್ಚು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಸಮಯದಲ್ಲಿ ಅಷ್ಟೊಂದು ಪ್ರಾಮುಖ್ಯವಲ್ಲದ ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯದ ಬಗ್ಗೆ ಪದೇಪದೇ ಪ್ರಸ್ತಾಪಿಸುತ್ತಿರುವುದಕ್ಕೆ … Continued

ಅಪರೂಪದ ಬೇಟೆ..: ಮರದಿಂದ ಮರಕ್ಕೆ ಜಿಗಿಯುತ್ತಲೇ ಮಂಗನ ಬೇಟೆಯಾಡಿದ ಚಿರತೆ | ವೀಕ್ಷಿಸಿ

ಚಿರತೆಗಳು ಬೇಟೆಯಾಡಲು, ವೇಗವಾಗಿ ಓಡುವ ವಿಶೇಷ ಸಾಮರ್ಥ್ಯ ಹೊಂದಿರುತ್ತವೆ. ಅವುಗಳು ಮರ ಏರುವುದರಲ್ಲಿಯೂ ಚತುರ ಪ್ರಾಣಿಗಳು. ದೈತ್ಯಾಕಾರದ ಮರ ಏರಿ ಬೇಟೆಯಾಡುವುದನ್ನು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಮಂಗಗಳು, ಸಿಂಗಳೀಕಗಳು ಮರದಿಂದ ಮರಕ್ಕೆ ಜಿಗಿಯುವುದರಲ್ಲಿ ನಿಪುಣ ಪ್ರಾಣಿಗಳು ಹಾಗೂ ಹೆಚ್ಚಾಗಿ ಮರದಲ್ಲಿಯೇ ವಾಸಿಸುತ್ತವೆ. ಆದರೆ ಚಿರತೆ ಮರದಿಂದ, ಮರಕ್ಕೆ ಮಂಗನಂತೆ ಜಿಗಿದು ಬೇಟೆಯಾಡುವುದನ್ನು ನೋಡಿದ್ದೀರಾ..? ಈ ವೀಡಿಯೊ … Continued

ಕೇಜ್ರಿವಾಲ್‌ಗೆ ಗುಜರಾತ್ ಹೈಕೋರ್ಟ್ ದಂಡ ವಿಧಿಸಿದ ಕೆಲವು ದಿನಗಳ ನಂತರ ʼನಿಮ್ಮ ಪದವಿ ತೋರಿಸಿ’ ಎಎಪಿ ಅಭಿಯಾನ ಆರಂಭ

ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಪ್ರದಾನಿ ಮೋದಿಗೆ ‘ನಿಮ್ಮ ಪದವಿ ತೋರಿಸಿ’ ಎಂಬ ಅಭಿಯಾನ ಆರಂಭಿಸಿದ್ದು, ಬಿಜೆಪಿ ನಾಯಕರಿಗೂ ಇದೇ ರೀತಿ ಸವಾಲು ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗಳ ವಿವರಗಳು ಸಾರ್ವಜನಿಕ ಡೊಮೇನ್‌ನಲ್ಲಿರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಗುಜರಾತ್ ಹೈಕೋರ್ಟ್ ₹ 25,000 ದಂಡ ವಿಧಿಸಿದ ಒಂದು ವಾರದ ನಂತರ … Continued

ಗೆಹ್ಲೋಟ್ Vs ಪೈಲಟ್: ರಾಜಸ್ಥಾನ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮತ್ತೆ ಭುಗಿಲೆದ್ದ ರಾಜಕೀಯ ಯುದ್ಧ…!

ಜೈಪುರ: ರಾಜಸ್ಥಾನದಲ್ಲಿ ಚುನಾವಣೆಗೆ ತಿಂಗಳುಗಳ ಮೊದಲು, ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಭಿನ್ನಮತದ ಗೆರೆಗಳು ಭಾನುವಾರ ಮುನ್ನೆಲೆಗೆ ಬಂದವು. ಪಕ್ಷದ ನಾಯಕ ಸಚಿನ್ ಪೈಲಟ್ ಅವರು ತಮ್ಮ ಪ್ರತಿಸ್ಪರ್ಧಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮೇಲೆ ಹೊಸ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಮಂಗಳವಾರ ಭ್ರಷ್ಟಾಚಾರದ ವಿರುದ್ಧ ಒಂದು ದಿನದ ಉಪವಾಸ ಕುಳಿತುಕೊಳ್ಳುವುದಾಗಿ ಘೋಷಿಸಿದರು. ವಸುಂಧರಾ ರಾಜೆ ನೇತೃತ್ವದ … Continued