ಒಂದೇ ಕುಟುಂಬದ 9 ಮಂದಿ ಮನೆಯಲ್ಲಿ ಶವವಾಗಿ ಪತ್ತೆ: ಆತ್ಮಹತ್ಯೆ ಮಾಡಿಕೊಂಡ ಶಂಕೆ

ಸಾಂಗ್ಲಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸೋಮವಾರ ಒಂದೇ ಕುಟುಂಬದ ಒಂಬತ್ತು ಜನರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.ಸಾಂಗ್ಲಿ ಜಿಲ್ಲೆಯ ಮಹೈಸಾಲ್‌ನಲ್ಲಿರುವ ಮನೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ. ನಾವು ಒಂದು ಮನೆಯಲ್ಲಿ ಒಂಬತ್ತು ಶವಗಳನ್ನು ಕಂಡುಕೊಂಡಿದ್ದೇವೆ. ಮೂರು ಶವಗಳು ಒಂದೇ ಸ್ಥಳದಲ್ಲಿ ಕಂಡುಬಂದರೆ, ಆರು … Continued

ಶರದ್ ಪವಾರ್, ಫಾರೂಕ್ ಅಬ್ದುಲ್ಲಾ ನಂತರ ಈಗ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಲು ನಿರಾಕರಿಸಿದ ಗೋಪಾಲಕೃಷ್ಣ ಗಾಂಧಿ

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಲು ವಿರೋಧ ಪಕ್ಷಗಳ ಮನವಿಯನ್ನು ತಿರಸ್ಕರಿಸಿದ ಮೂರನೇ ವ್ಯಕ್ತಿಯಾಗಿದ್ದಾರೆ. ಇದಕ್ಕೂ ಮುನ್ನ, ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ … Continued

ಪ್ರತಿಭಟನೆ ಮಧ್ಯೆ ಅಗ್ನಿಪಥ ಯೋಜನೆಯಡಿ ಅಗ್ನಿವೀರ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಸೇನೆ, ಜುಲೈನಿಂದ ನೋಂದಣಿ ಪ್ರಾರಂಭ

ನವದೆಹಲಿ: ಹೊಸದಾಗಿ ಪ್ರಾರಂಭಿಸಲಾದ ಅಗ್ನಿಪಥ ಯೋಜನೆಯ ಮೂಲಕ ಅಗ್ನಿವೀರ್‌ಗಳ ಮೊದಲ ಸುತ್ತಿನ ನೇಮಕಾತಿಗಾಗಿ ಭಾರತೀಯ ಸೇನೆಯು ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯು ಸೇವೆಯ ನಿಯಮಗಳು ಮತ್ತು ಷರತ್ತುಗಳು, ಅರ್ಹತೆ, ಬಿಡುಗಡೆ ಮತ್ತು ಯೋಜನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಯನ್ನು ವಿವರಿಸುತ್ತದೆ. ಯೋಜನೆಯಡಿ ದಾಖಲಾದ ಅಗ್ನಿವೀರ್‌ಗಳು ಯಾವುದೇ ರೀತಿಯ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಅರ್ಹರಾಗಿರುವುದಿಲ್ಲ” ಎಂದು ಅಧಿಸೂಚನೆಯಲ್ಲಿ … Continued

ಅಸ್ಸಾಂ ಪ್ರವಾಹ: ರಕ್ಷಣಾ ಕಾರ್ಯಾಚರಣೆ ವೇಳೆ ಕೊಚ್ಚಿಹೋದ ಇಬ್ಬರು ಪೊಲೀಸರು, ಮೃತದೇಹ ಪತ್ತೆ

ಗುವಾಹತಿ (ಅಸ್ಸಾಂ): ಭಾನುವಾರ ತಡರಾತ್ರಿ ಅಸ್ಸಾಂನ ನಾಗಾಂವ್ ಜಿಲ್ಲೆಯ ಕಂಪುರ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಮತ್ತು ಕಾನ್‌ಸ್ಟೇಬಲ್ ಸೇರಿದಂತೆ ಇಬ್ಬರು ಪೊಲೀಸರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆ ನಡೆದಾಗ ಪೊಲೀಸರು ಪ್ರವಾಹ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ರಾತ್ರಿಯ ಶೋಧ ಕಾರ್ಯಾಚರಣೆಯ ನಂತರ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಇಬ್ಬರೂ ಪೊಲೀಸರ ಮೃತದೇಹಗಳನ್ನು … Continued

ಅಗ್ನಿಪಥ ನೇಮಕಾತಿ ವಿರೋಧಿಸಿ ಪ್ರತಿಭಟನೆಗಳ ನಡುವೆ ಅಗ್ನಿವೀರ್‌ಗಳಿಗೆ ಉದ್ಯೋಗದ ಆಫರ್‌ ನೀಡಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ

ನವದೆಹಲಿ:ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಕಂಪನಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಅಗ್ನಿವೀರ್‌ಗಳಿಗೆ ಉದ್ಯೋಗಾವಕಾಶವನ್ನು ನೀಡುವುದಾಗಿ ಸೋಮವಾರ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ತಿಳಿಸಿದ್ದಾರೆ. ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆಯಾದ ‘ಅಗ್ನಿಪಥ’ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ, ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಅವರು ಹಿಂಸಾಚಾರದಿಂದ ದುಃಖಿತರಾಗಿವುದಾಗಿ ತಿಳಿಸಿದ್ದಾರೆ ಮತ್ತು ಅಗ್ನಿವೀರ್‌ಗಳ ಶಿಸ್ತು … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಂದು ರಾಹುಲ್ ಗಾಂಧಿಗೆ ಇಡಿಯಿಂದ ಮತ್ತೆ ವಿಚಾರಣೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾಲ್ಕನೇ ಸುತ್ತಿನ ವಿಚಾರಣೆಗಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು, ಸೋಮವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗಲಿದ್ದಾರೆ. ಕಳೆದ ವಾರ, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ತೀವ್ರ ಪ್ರತಿಭಟನೆಯ ನಡುವೆ ಸೋಮವಾರದಿಂದ ಬುಧವಾರದವರೆಗೆ ಸತತ ಮೂರು ದಿನಗಳಲ್ಲಿ ಸುಮಾರು 30 ಗಂಟೆಗಳ … Continued

ಅಗ್ನಿಪಥ ವಿರೋಧಿ ಪ್ರತಿಭಟನೆಗಳ ನಡುವೆ ಇಂದು ಭಾರತ್ ಬಂದ್‌ಗೆ ಕರೆ

ನವದೆಹಲಿ: ಅಗ್ನಿಪಥ ಯೋಜನೆ ವಿರೋಧಿಸಿ ಸಶಸ್ತ್ರ ಪಡೆಗಳ ಆಕಾಂಕ್ಷಿಗಳು ಇಂದು (ಜೂನ್‌ 20) ಭಾರತ್ ಬಂದ್‌ಗೆ ಕರೆ ನೀಡಿದ್ದು, ಹಲವು ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯೋಜನೆಯನ್ನು ಹಿಂತೆಗೆದುಕೊಳ್ಳುವುದನ್ನು ಸರ್ಕಾರ ತಳ್ಳಿಹಾಕಿದೆ. ಹಿಂಸಾಚಾರ ಅಥವಾ ಸಾರ್ವಜನಿಕ ಆಸ್ತಿ ನಾಶಪಡಿಸುವ ಯಾರನ್ನಾದರೂ ಬಂಧಿಸಲು ತನ್ನ ಸಂಪೂರ್ಣ ಪಡೆ ಸೋಮವಾರ ಕರ್ತವ್ಯದಲ್ಲಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್‌ನಲ್ಲಿ, … Continued

ಸೊಸೆಯ ಮೇಲೆ ಕೋಪಕ್ಕೆ ರಾದ್ದಾಂತ ಮಾಡಿ ಪೊಲೀಸರ ಮೇಲೆ 45 ಸುತ್ತು ಗುಂಡು ಹಾರಿಸಿದ ಈ ಹಠಮಾರಿ ಮುದುಕ.. ಮೂವರು ಪೊಲೀಸರಿಗೆ ಗಾಯ

ನವದೆಹಲಿ: ಕಾನ್ಪುರದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಪೊಲೀಸರ ಮೇಲೆ 45 ಸುತ್ತು ಗುಂಡು ಹಾರಿಸಿದ್ದಾರೆ. ಕೇವಲ 300 ರೂ.ಗಳಿಗೆ ತನ್ನ ಸೊಸೆಯೊಂದಿಗೆ ಜಗಳವಾಡಿ ಕೋಪಗೊಂಡ ಮಾವ 3 ಗಂಟೆಗಳ ಕಾಲ ಗದ್ದಲ ಸೃಷ್ಟಿಸಿದ್ದಾರೆ. ಕೇವಲ 300 ರೂ.ಗಳಿಗಾಗಿ ಪತ್ನಿ, ಮಗ ಮತ್ತು ಸೊಸೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚುವುದಾಗಿ ಬೆದರಿಸಿದ್ದಾರೆ. ಗಾಬರಿಗೊಂಡ ಸೊಸೆ ತಕ್ಷಣ ಪೊಲೀಸರಿಗೆ … Continued

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ ಸೋಂಕು

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಕೋವಿಡ್ -19 ಸೋಂಕಿಗೆ ಒಳಗಾಗಿರುವುದಾಗಿ ಅವರೇ ಭಾನುವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ರಾಜೇಂದ್ರ ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ನಾಗರಿಕರಲ್ಲಿ ಕ್ಷಮೆಯಾಚಿಸಿರುವ ಇರಾನಿ, ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇರಾನಿ ಅವರು ಈ ಹಿಂದೆ … Continued

ಜಲಾವೃತವಾಗಿದ್ದ ಮ್ಯಾನ್‌ಹೋಲ್‌ಗೆ ಬಿದ್ದ ಸ್ಕೂಟರ್‌ನಲ್ಲಿದ್ದ ಪೊಲೀಸ್ ಅಧಿಕಾರಿ-ಪತ್ನಿ, ಗಾಯ | ವೀಕ್ಷಿಸಿ

ಅಲಿಗಢ: ಉತ್ತರ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾಗಿದ್ದು, ಅಲಿಗಢ ನಗರದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಮಳೆ ನೀರಿನಿಂದ ತುಂಬಿದ್ದ ರಸ್ತೆ ಪಕ್ಷದ ತೆರೆದ ಮ್ಯಾನ್‌ ಹೋಲ್‌ಗೆ ಬೀಳುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಸಮೀಪದಲ್ಲಿದ್ದ ಜನರು ಅವರನ್ನು ರಕ್ಷಿಸಿದ್ದಾರೆ. ದಂಪತಿ ಜಲಾವೃತವಾದ ರಸ್ತೆಯ ಮೇಲೆ ಬೈಕ್ ಚಲಾಯಿಸುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬೀಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸ್ಕೂಟರ್‌ನಲ್ಲಿ ಉತ್ತರ ಪ್ರದೇಶದ … Continued