ಉಕ್ರೇನಿಯನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ಅನ್ನು ರಚಿಸಿದ 15 ವರ್ಷದ ಭಾರತೀಯ ಹುಡುಗ..!

ರಷ್ಯಾ ಮತ್ತು ಉಕ್ರೇನ್ ನಡುವೆ ಒಂದು ತಿಂಗಳಿಂದಲೂ ಹೆಚ್ಚುದಿನಗಳಿಂದ ಯುದ್ಧ ನಡೆಯುತ್ತಿದೆ. ಯುದ್ಧದಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿ ಬೇರೆ ದೇಶಗಳಿಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ. ಈಗ ನಿರಾಶ್ರಿತರಿಗೆ ಸಹಾಯ ಮಾಡಲು, 15 ವರ್ಷದ ಭಾರತೀಯ ಹುಡುಗನೊಬ್ಬ ಆ್ಯಪ್ ಅನ್ನು ವಿನ್ಯಾಸಗೊಳಿಸಿದ್ದು, ಉಕ್ರೇನಿಯನ್ ನಿರಾಶ್ರಿತರು ಅಗತ್ಯವಿರುವ ಸಹಾಯವನ್ನು ಪಡೆಯಲು ಇದನ್ನು ಬಳಸಬಹುದಾಗಿದೆ. ಈ ಆ್ಯಪ್ ಅನ್ನು … Continued

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 250 ರೂ.ಗಳಷ್ಟು ಏರಿಕೆ

ನವದೆಹಲಿ: 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಅಡುಗೆ ಅನಿಲ ದರದಲ್ಲಿ 250 ರೂ.ಗಳಷ್ಟು ಏರಿಕೆ ಮಾಡಲಾಗಿದ್ದು,ಪರಿಷ್ಕೃತ ದರ ಇಂದಿನಿಂದಲೇ (ಏಪ್ರಿಲ್‌ 1) ಜಾರಿಗೆ ಬರಲಿದೆ. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಮಾಡಿಲ್ಲ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿರುವ ಕಾರಣ ಇದೀಗ ಗ್ರಾಹಕರು 250 ರೂ.ಗಳಷ್ಟು ಹೆಚ್ಚುವರಿ ಸೇರಿದಂತೆ ಪ್ರತಿ … Continued

ಸೊಂಡಿಲಿನಿಂದ ಮಾವುತನ ಮೇಲೆತ್ತಿಕೊಂಡು ಬೆನ್ನಮೇಲೆ ಕೂರಿಸಿಕೊಂಡ ಆನೆ : ಈ ರಿಯಲ್ ಲೈಫ್ ಬಾಹುಬಲಿ ದೃಶ್ಯ ವೀಡಿಯೊದಲ್ಲಿ ಸೆರೆ

ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಮಾವುತನೊಬ್ಬ ಆನೆಯ ಮೇಲೆ ಹತ್ತುತ್ತಿರುವ ಮತ್ತು ಸವಾರಿ ಮಾಡುವ ಅಪರೂಪದ ದೃಶ್ಯವನ್ನು ತೋರಿಸುತ್ತದೆ. ಅದು ಆತನಿಗೆ ದೈನಂದಿನ ವಿಷಯ ಎಂದು ಅಂದುಕೊಳ್ಳಬೇಡಿ. ಅದು ಮಾವುತನಿಗೆ ದೈನಂದಿನ ವಿಷಯವೇ ಆದರೂ ಇದು ಬಾಹಬಲಿ ಸಿನೆಮಾದಲ್ಲಿ ಪ್ರಭಾಸ್ ಆನೆಯನ್ನ ಪಳಗಿಸಿ ಅದರ ಸೊಂಡಿಲಿನ ಮೇಲೆ ಆನೆಯ ಮೇಲೆ ನಿಲ್ಲುವಂತಿದೆ. ಅದು ಹೇಳೀಕೇಳಿ … Continued

ಪ್ರಚೋದನಕಾರಿ ಹೇಳಿಕೆ: ಸಚಿವ ಈಶ್ವರಪ್ಪ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಬೆಂಗಳೂರು: ಶಿವಮೊಗ್ಗದಲ್ಲಿ ಕಳೆದ ತಿಂಗಳ 20ರಂದು ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ತನಿಖೆಯ ಹಂತದಲ್ಲಿದ್ದಾಗ ಸಾರ್ವಜನಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ವೈರತ್ವ ಉಂಟಾಗುವಂತೆ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಬಿಜೆಪಿ ಮುಖಂಡ ಚನ್ನಬಸಪ್ಪ ವಿರುದ್ಧ ತನಿಖೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಆದೇಶಿಸಿದೆ. ಶಿವಮೊಗ್ಗದ … Continued

ಆರ್ಯನ್ ಖಾನ್ ಡ್ರಗ್ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಸಲು ಎನ್‌ಸಿಬಿಗೆ 60 ದಿನಗಳ ಹೆಚ್ಚುವರಿ ಸಮಯ ನೀಡಿದ ಮುಂಬೈ ಕೋರ್ಟ್

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪ್ರಮುಖ ಆರೋಪಿಯಾಗಿರುವ ಕ್ರೂಸ್ ಶಿಪ್ ಡ್ರಗ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ)ದ ವಿಶೇಷ ತನಿಖಾ ತಂಡಕ್ಕೆ (ಎಸ್ ಐಟಿ) ಮುಂಬೈ ನ್ಯಾಯಾಲಯ ಗುರುವಾರ 60 ಹೆಚ್ಚುವರಿ ದಿನಗಳನ್ನು ನೀಡಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ … Continued

ರತನ್ ಟಾಟಾಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಭಾರತದ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಭಾರತ ರತ್ನ ಯಾರಿಗೆ ನೀಡಬೇಕೆಂದು ನಾವು ನಿರ್ಧರಿಸುತ್ತೇವೆಯೇ? ನೀವು ಹಿಂಪಡೆಯಿರಿ ಅಥವಾ ನಾವು ದಂಡ ವಿಧಿಸುತ್ತೇವೆ ಎಂದು ಪೀಠ ಹೇಳಿದೆ. ಹೈಕೋರ್ಟ್ ನ … Continued

ಅವಿವಾಹಿತ ಮಗಳು ತನ್ನ ಮದುವೆ ಖರ್ಚನ್ನು ಪೋಷಕರಿಂದ ಪಡೆಯಬಹುದು: ಹೈಕೋರ್ಟ್

ರಾಯ್‌ಪುರ: ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆಯಡಿ ಅವಿವಾಹಿತ ಮಗಳು ತನ್ನ ಪೋಷಕರಿಂದ ಮದುವೆಯ ಖರ್ಚನ್ನು ಪಡೆಯಲು ಅರ್ಹಳು ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ. “ ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ಮದುವೆಗೂ ಮುನ್ನ ಮತ್ತು ಮದುವೆಯ ನಂತರ ಹಲವು ರೀತಿಯ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಆ ಹಣವನ್ನು ಪೋಷಕರಿಂದ ಮಗಳು ಪಡೆಯಬಹುದು ಎಂದು ಛತ್ತೀಸ್​ಗಢ ಹೈಕೋರ್ಟ್ ಹೇಳಿದೆ … Continued

ವಣ್ಣಿಯಾರ್ ಸಮುದಾಯಕ್ಕೆ ನೀಡಲಾಗಿದ್ದ ಶೇ.10.5 ಒಳ ಮೀಸಲಾತಿ ರದ್ದುಪಡಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ತಮಿಳುನಾಡಿನ ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ.10.5 ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದ ಕಾಯಿದೆಯನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಸುಪ್ರಿಂ ಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ ಕಾಯಿದೆಯನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ … Continued

ಗರ್ಭಿಣಿ ಮೇಕೆ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ ಆರೋಪ; ವ್ಯಕ್ತಿ ಬಂಧನ

ಕಾಸರಗೋಡು(ಕೇರಳ): ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ತುಂಬು ಗರ್ಭಿಣಿ ಮೇಕೆಯೊಂದರ ಮೇಲೆ ಮೇಲೆ ಅತ್ಯಾಚಾರವೆಸಗಿ ನಂತರ ಅದನ್ನು ಕೊಂದು ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತಮಿಳುನಾಡು ಮೂಲದ ಹೊಟೇಲ್‌ ಉದ್ಯೋಗಿ ಸೆಂಥಿಲ್ ಎಂದು ಗುರುತಿಸಲಾಗಿದೆ. ಹೊಟೇಲ್‌ ಮಾಲೀಕರು ದೂರು ನೀಡಿದ ನಂತರ ಆತನನ್ನು ಬಂಧಿಸಲಾಗಿದೆ. ಹೊಟೇಲ್‌ ಮಾಲೀಕರ ದೂರಿನ ಪ್ರಕಾರ, ಮಂಗಳವಾರ ರಾತ್ರಿ … Continued

ದೆಹಲಿಯಲ್ಲಿ ರಸ್ತೆ ಮಧ್ಯೆ ಉದ್ಯಮಿ ಕಾರು ನಿಲ್ಲಿಸಿ 2 ಕೋಟಿ ರೂ. ಲೂಟಿ ಮಾಡಿದ ದರೋಡೆಕೋರರು; ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಲ್ಲಿ ಸೆರೆ

ನವದೆಹಲಿ: ದೆಹಲಿಯ ರೋಹಿಣಿ ಸೆಕ್ಟರ್ 24 ರಲ್ಲಿ ದುಷ್ಕರ್ಮಿಗಳು ಬಂದೂಕು ತೋರಿಸಿ ಉದ್ಯಮಿಯನ್ನು ಲೂಟಿ ಮಾಡಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಹಾದುಹೋಗುವ ಜನನಿಬಿಡ ರಸ್ತೆಯ ಮಧ್ಯದಲ್ಲಿ ರಾತ್ರಿಯ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೂವರು ಸ್ಕೂಟಿ ಸವಾರರು ಉದ್ಯಮಿಯೊಬ್ಬರ ಕಾರಿನ ಗಾಜು ಒಡೆದು, ನಂತರ ಪಿಸ್ತೂಲ್ ತೋರಿಸಿ ಡಿಕ್ಕಿಯಲ್ಲಿದ್ದ ಮೂರು … Continued