ವಾಗ್ವಾದದ ನಂತರ ಚಲಿಸುತ್ತಿರುವ ರೈಲಿನಿಂದ ಸಹ-ಪ್ರಯಾಣಿಕನನ್ನು ಹೊರಕ್ಕೆ ನೂಕಿದ ವ್ಯಕ್ತಿ ; ದೃಶ್ಯ ಸಿಸಿಟಿಯಲ್ಲಿ ಸೆರೆ

ಪಶ್ಚಿಮ ಬಂಗಾಳದಲ್ಲಿ ರೈಲಿನಲ್ಲಿ ನಡೆದ ವಾಗ್ವಾದದ ನಂತರ ಯುವಕನೊಬ್ಬನನ್ನು ಸಹ ಪ್ರಯಾಣಿಕರು ಚಲಿಸುತ್ತಿರುವ ರೈಲಿನಿಂದ ನೂಕಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಶನಿವಾರ ರಾತ್ರಿ ಹೌರಾ-ಮಾಲ್ಡಾ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಬಿರ್ಭೂಮ್ ಜಿಲ್ಲೆಯ ತಾರಾಪಿತ್ ರಸ್ತೆ ಮತ್ತು ರಾಮ್‌ಪುರಹತ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸರು (ಜಿಆರ್‌ಪಿ) ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಮತ್ತು … Continued

ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ ಎಂದು ಇಂಟರ್‌ಪೋಲ್ ಸಭೆಯಲ್ಲಿ ಪಾಕಿಸ್ತಾನಕ್ಕೆ ಪ್ರಶ್ನೆ : ಇದಕ್ಕೆ ಅವರ ಉತ್ತರ…?!

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಗ್ಗೆ ಪಾಕಿಸ್ತಾನದ ಉನ್ನತ ಆಂತರಿಕ ಭದ್ರತಾ ಏಜೆನ್ಸಿ ಮುಖ್ಯಸ್ಥರು ಪ್ರಶ್ನೆಯಿಂದ ಮಂಗಳವಾರ ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇವರಿಬ್ಬರೂ ಭಾರತೀಯ ಭದ್ರತಾ ಏಜೆನ್ಸಿಗಳಿಗೆ ಹೆಚ್ಚು ಬೇಕಾಗಿರುವ ಭಯೋತ್ಪಾದಕರಲ್ಲಿ ಸೇರಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆಂದು ನಂಬಲಾಗಿದೆ. ಇಂಟರ್‌ಪೋಲ್ ಸಾಮಾನ್ಯ ಸಭೆಗಾಗಿ ದೆಹಲಿಗೆ … Continued

ಜಯಲಲಿತಾ ಸಾವಿನ ಪ್ರಕರಣ : ಆಪ್ತ ಸಹಾಯಕಿ ಶಶಿಕಲಾ ಸೇರಿ ನಾಲ್ವರು ತಪ್ಪಿತಸ್ಥರೆಂದು ಪರಿಗಣಿಸಿದ ಆಯೋಗ, ತನಿಖೆಗೆ ಶಿಫಾರಸು

ಚೆನ್ನೈ: 2016ರಲ್ಲಿ ಚೆನ್ನೈನ ಉನ್ನತ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ  ಅವರ ಸಾವಿನ ಕುರಿತು ತನಿಖೆ ನಡೆಸಲು ರಚಿಸಲಾದ ತನಿಖಾ ಆಯೋಗವು ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಸೇರಿದಂತೆ ನಾಲ್ವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ ಹಾಗೂ ತನಿಖೆಗೆ ಶಿಫಾರಸು ಮಾಡಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಪ್ರಕರಣ ಸಂಬಂಧ … Continued

ಆಂಧ್ರ ದೇವಸ್ಥಾನದಲ್ಲಿ ಪುರಾತನ ನಂದಿ ವಿಗ್ರಹ ಧ್ವಂಸ: ನಿಧಿಗಳ್ಳರ ಕೃತ್ಯದ ಶಂಕೆ

ಹೈದರಾಬಾದ್‌: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕನಪರ್ತಿ ಗ್ರಾಮದಲ್ಲಿ ಪುರಾತನವಾದ ಶಿವನ ದೇವಾಲಯದಲ್ಲಿ ನಂದಿ ವಿಗ್ರಹವನ್ನು ಧ್ವಂಸಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ಭಾನುವಾರ ಮತ್ತು ಸೋಮವಾರದ ಮಧ್ಯೆ ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಎಂದು ಹೇಳಲಾಗಿದೆ. ಸೋಮವಾರ ಬೆಳಗ್ಗೆ ದೇವಸ್ಥಾನದ ಅರ್ಚಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರ ಪ್ರಕಾರ, ಅಪರಿಚಿತ ದುಷ್ಕರ್ಮಿಗಳು … Continued

ಕೇದಾರನಾಥ ಬಳಿ ಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ: 7 ಮಂದಿ ಸಾವು

ಕೇದಾರನಾಥ : ಮಂಗಳವಾರ(ಅಕ್ಟೋಬರ್ 18), ಉತ್ತರಾಖಂಡದ ಕೇದಾರನಾಥದ ಲಿಂಚೋಲಿ ಪ್ರದೇಶದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆದ ಕೂಡಲೇ ಪತನಗೊಂಡಿದೆ. ಪ್ರಯಾಣಿಸುತ್ತಿದ್ದ 2 ಪೈಲಟ್‌ಗಳು ಮತ್ತು 5 ಪ್ರಯಾಣಿಕರು ಸೇರಿದಂತೆ ಏಳು ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ. ಕೇದಾರನಾಥ ಕ್ಷೇತ್ರಕ್ಕೆ ಯಾತ್ರಿಗಳನ್ನು ಕರೆದುಕೊಂಡು … Continued

ಚಳಿಗಾಲ-ಹಬ್ಬದ ಸಮಯ: ಪ್ರತಿರಕ್ಷಣಾ ವ್ಯವಸ್ಥೆ ತಪ್ಪಿಸಿಕೊಳ್ಳುವ XBB ಕೋವಿಡ್‌-19 ರೂಪಾಂತರದ ಎಚ್ಚರಿಕೆ ನೀಡಿದ ಮಹಾರಾಷ್ಟ್ರ

ಮುಂಬೈ: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ 17.7% ಏರಿಕೆಯಾದ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಇಲಾಖೆ ಸೋಮವಾರ XBB ರೂಪಾಂತರವನ್ನು ಉಲ್ಲೇಖಿಸಿದೆ. ಇದು ಈಗ ದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದು, ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗಿದೆ. ಜೊತೆಗೆ ಚಳಿಗಾಲ ಮತ್ತು ಹಬ್ಬದ ಋತುವಿನಲ್ಲಿ ಮತ್ತಷ್ಟು ಸ್ಪೈಕ್‌ಗಳಿಗೆ ಉತ್ತೇಜನ ನೀಡುವ ಅಂಶಗಳಾಗಿವೆ. … Continued

ಕಾಶ್ಮೀರದಲ್ಲಿ ಉಗ್ರರಿಂದ ವಲಸೆ ಕಾರ್ಮಿಕರ ಮೇಲೆ ಗ್ರೆನೇಡ್ ದಾಳಿ: ಇಬ್ಬರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ದಲ್ಲಿ ಉಗ್ರರು ಕೈಬಾಂಬ್ (ಗ್ರೆನೇಡ್) ಎಸೆದಿದ್ದರಿಂದ ಇಬ್ಬರು ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಮೃತರು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಯೋತ್ಪಾದಕರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಕೆಲವೇ ದಿನಗಳ ನಂತರ ಈ ಆಘಾತಕಾರಿ ಘಟನೆ ನಡೆದಿದೆ. ಶೋಪಿಯಾನ್​ನ ಹಾರ್ಮೆನ್ ಎಂಬಲ್ಲಿ ಭಯೋತ್ಪಾದಕರು ಕೈಬಾಂಬ್ … Continued

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ: ನಡೆಯಲಿದೆ 36ನೇ ಬಿಸಿಸಿಐ ಅಧ್ಯಕ್ಷರಾಗಿ ಕರ್ನಾಟಕದ ರೋಜರ್‌ ಬಿನ್ನಿ ಅವಿರೋಧ ಆಯ್ಕೆ

ನವದೆಹಲಿ: ಮಂಗಳವಾರ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಂತರ ಭಾರತದ ಮಾಜಿ ಕ್ರಿಕೆಟಿಗ. ಕರ್ನಾಟಕದ ರೋಜರ್ ಬಿನ್ನಿ ಅವರು ಸೌರವ್ ಗಂಗೂಲಿ ಅವರ ಬದಲಿಗೆ ಭಾರತೀಯ ಕ್ರಿಕೆಟ್‌ ಮಂಡಳಿ(ಬಿಸಿಸಿಐ)ಯ ನೂತನ ಅಧ್ಯಕ್ಷರಾಗಲಿದ್ದಾರೆ. ಅವಿರೋಧವಾಗಿ ಆಯ್ಕೆಯಾಗಲಿರುವುದರಿಂದ ಮುಂದಿನ ಪದಾಧಿಕಾರಿಗಳ ಆಯ್ಕೆ ಕೇವಲ ಔಪಚಾರಿಕವಾಗಿ ನಡೆಯಲಿದೆ .ರೋಜರ್‌ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗುತ್ತಾರೆ. ಕಾರ್ಯದರ್ಶಿಯಾಗಿ ಜಯ್ ಶಾ, ಆಶಿಶ್ … Continued

ವೈದ್ಯ, ಅವರ ತಾಯಿ ಮೇಲೆ ಡಿಎಂಕೆ ಪದಾಧಿಕಾರಿಯಿಂದ ಹಲ್ಲೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ | ವೀಕ್ಷಿಸಿ

ಚೆನ್ನೈ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ವೈದ್ಯರು ಮತ್ತು ಅವರ ತಾಯಿಯ ಮೇಲೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪದಾಧಿಕಾರಿಯೊಬ್ಬರು ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಡಿಎಂಕೆ ಕಾರ್ಯಕಾರಿಯು ಪೆರಿಯಕಡೈ ವೀಧಿಯಲ್ಲಿರುವ ತನ್ನ ಕ್ಲಿನಿಕ್‌ನಲ್ಲಿ ಸಿದ್ಧ ವೈದ್ಯ ( BSMS) ಮತ್ತು ಅವರ ತಾಯಿಯ … Continued

ಮುಸ್ಲಿಂ ವೈಯಕ್ತಿಕ ಕಾನೂನು: 15 ವರ್ಷ ಮೀರಿದ ಮುಸ್ಲಿಂ ಹುಡುಗಿಯರು ಮದುವೆಯಾಗಬಹುದೇ ಎಂಬುದನ್ನು ಪರಿಶೀಲಿಸಲಿರುವ ಸುಪ್ರೀಂಕೋರ್ಟ್‌

ನವದೆಹಲಿ: ಹದಿನೈದು ವರ್ಷ ವಯಸ್ಸಿನ ಮುಸ್ಲಿಂ ಹುಡುಗಿ ತಾನು ಬಯಸಿದ ವ್ಯಕ್ತಿಯೊಂದಿಗೆ ಮದುವೆಯಾಗಬಹುದೇ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ. ಎಸ್. ಓಕಾ ಅವರಿದ್ದ ಪೀಠವು ಈ ಪ್ರಕರಣದಲ್ಲಿ ಹಿರಿಯ ವಕೀಲ ರಾಜಶೇಖರ ರಾವ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ ಎಂದು ಬಾರ್‌ … Continued