ಸಂಯಮದಿಂದ ಮಾತನಾಡಲು ನಿಮ್ಮ ಕಕ್ಷಿದಾರರಿಗೆ ಹೇಳಿ: ಬಿಜೆಪಿ ಮುಖಂಡ ಈಶ್ವರಪ್ಪಗೆ ಹೈಕೋರ್ಟ್‌ ತರಾಟೆ

ಬೆಂಗಳೂರು : ನಮ್ಮ ಧುರೀಣರು ಮಾತನಾಡುವಾಗ ಒಳ್ಳೆಯ ಭಾಷೆಯನ್ನು ಏಕೆ ಬಳಸುವುದಿಲ್ಲ? ನಾವು ಏನೋ ಒಂದು ಮಾತನಾಡಬಾರದು. ಸಂಯಮದಿಂದ ಭಾಷಾ ಪ್ರಯೋಗ ಮಾಡಬೇಕು. ಪದ ಬಳಕೆಯಲ್ಲಿ ಜವಾಬ್ದಾರಿಯುತವಾಗಿರಬೇಕು ಎಂದು ನಿಮ್ಮ ಕಕ್ಷಿದಾರರಿಗೆ ಹೇಳಿ” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅವರ ಕುರಿತು ಮೌಖಿಕವಾಗಿ ಹೇಳಿತು. ದೇಶವನ್ನು ಛಿದ್ರ ಮಾಡುತ್ತೇವೆ … Continued

‘ಹಿಂದೂಗಳು ಸಹಿಷ್ಣುಗಳು…ಅವರ ಜೀವನ ವಿಧಾನದಿಂದ ನಾವು ಕಲಿತಿದ್ದೇವೆ, ಭಗವಾನ್ ರಾಮ ನಮ್ಮ ಸಂಸ್ಕೃತಿ-ನಾಗರಿಕತೆಯ ಭಾಗ : ಜಾವೇದ್ ಅಖ್ತರ್

ಮುಂಬೈ :   ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಹಿಂದೂ ಸಂಸ್ಕೃತಿಯನ್ನು ಹೊಗಳಿದ್ದಾರೆ ಮತ್ತು ಅವರು ಹಿಂದೂಗಳು ಯಾವಾಗಲೂ ಸಹಿಷ್ಣುಗಳು ಎಂದು ಹೇಳಿದ್ದಾರೆ. ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ. ಠಾಕ್ರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿಂದೂ ಧರ್ಮದ ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳಿದ ಅವರು, … Continued

ಭಾರತದಲ್ಲಿ ಶೇ.99ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿಯಿಂದ ‘ಹಿಂದೂಸ್ತಾನಿಗಳು’: ಆರ್‌ಎಸ್‌ಎಸ್ ನಾಯಕ

ಥಾಣೆ: ಭಾರತದಲ್ಲಿನ ಶೇಕಡಾ 99 ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಈ ನೆಲದ ಮೂಲದಿಂದ“ಹಿಂದೂಸ್ತಾನಿ” ಆಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರಾದ ಇಂದ್ರೇಶಕುಮಾರ್ ಭಾನುವಾರ ಹೇಳಿದ್ದಾರೆ. ಭಾರತೀಯರ ಪೂರ್ವಜರನ್ನು ನಾವು ಪರಿಗಣಿಸಿದರೆ ಅವರ ಡಿಎನ್‌ಎ ಒಂದೇ ಆಗಿದೆ ಎಂದು ಈ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಕ್ತಪಡಿಸಿದ … Continued