ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಪುತ್ರ ಝೈನ್ 26ನೇ ವಯಸ್ಸಿನಲ್ಲಿ ನಿಧನ

ವಾಷಿಂಗ್ಟನ್ : ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾದಲ್ಲಾ ಅವರ 26 ವರ್ಷದ ಮಗ ಸೋಮವಾರ ನಿಧನರಾದರು ಎಂದು ಕಂಪನಿಯು ತನ್ನ ಕಾರ್ಯನಿರ್ವಾಹಕ ಸಿಬ್ಬಂದಿಗೆ ಇಮೇಲ್ ಮೂಲಕ ತಿಳಿಸಿದೆ. ಸತ್ಯ ಮತ್ತು ಅನು ನಾದೆಲ್ಲಾ ದಂಪತಿಯ ಪುತ್ರ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ಝೈನ್ ನಾದೆಲ್ಲಾ ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ಝೈನ್ ನಾದೆಲ್ಲಾ ಅವರು ವಿಧಿವಶರಾಗಿರುವುದಾಗಿ … Continued

ಎಂಬಿಬಿಎಸ್‌ ಕಲಿಯಲು ವಿದೇಶಕ್ಕೆ ಹೋಗುವ 90% ವಿದ್ಯಾರ್ಥಿಗಳು ಭಾರತದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅನುತ್ತೀರ್ಣರಾದವರು: ಕೇಂದ್ರ ಸಚಿವರು

ನವದೆಹಲಿ: ಪ್ರತಿ ವರ್ಷ ಭಾರತದಿಂದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕೆಲವು ದೇಶಗಳಲ್ಲಿ ಭಾರತಕ್ಕಿಂತ ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್ ಪದವಿ ಪಡೆಯಬಹುದು. ಆದಾಗ್ಯೂ, ಸೀಮಿತ ಸೀಟುಗಳಿಗಾಗಿ ಸಾಕಷ್ಟು ಪೈಪೋಟಿ ಇರುವ ಭಾರತಕ್ಕಿಂತ ವಿದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸುಲಭ ಎಂಬ ಅಂಶವೂ ಇದೆ. ವಿದೇಶಕ್ಕೆ ಹೋಗುವ ವೈದ್ಯಕೀಯ … Continued

ಶಿವರಾತ್ರಿ ಹಬ್ಬದ ದಿನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ..!

ನವದೆಹಲಿ: ಮಾರ್ಚ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, 19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ 2,012 ರೂ. ಆಗಿದೆ. 5 ಕೆಜಿ ಸಿಲಿಂಡರ್‌ನ ಬೆಲೆಯನ್ನು 27 ರೂ.ಗಳಷ್ಟು ಪರಿಷ್ಕರಿಸಲಾಗಿದೆ. 5 ಕೆಜಿ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿಯಲ್ಲಿ 569 ರೂ.ಆಗಿದೆ. ಭಾರತದಲ್ಲಿನ … Continued

ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ರಾಜೀನಾಮೆ-ನನಗೆ ಕಂಪನಿ ತೊರೆಯುವಂತೆ ಮಾಡಲಾಯ್ತು ಎಂದು ಆರೋಪ

  ಫಿನ್‌ಟೆಕ್ ಯುನಿಕಾರ್ನ್ ಭಾರತ್‌ ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಕಂಪನಿಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಂಗಾಪುರದಲ್ಲಿ ಅಶ್ನೀರ್ ಗ್ರೋವರ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಲು ಫಿನ್‌ಟೆಕ್ ಪ್ಲಾಟ್‌ಫಾರ್ಮ್ ವಿರುದ್ಧ ಸಲ್ಲಿಸಿದ ಮಧ್ಯಸ್ಥಿಕೆಯಲ್ಲಿ ಅವರು ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ನಂತರ, ಅಶ್ನೀರ್ ರಾಜೀನಾಮೆ ಮುನ್ನೆಲೆಗೆ ಬಂದಿತು. ಆದಾಗ್ಯೂ, ಫಿನ್‌ಟೆಕ್ ಯೂನಿಕಾರ್ನ್ ಮಂಡಳಿಗೆ ಕಳುಹಿಸಿದ … Continued

ಉಕ್ರೇನ್‌ ಬಿಕ್ಕಟ್ಟಿಗೆ ರಾಜತಾಂತ್ರಿಕತೆ ಏಕೈಕ ಮಾರ್ಗ-ವಿಶ್ವಸಂಸ್ಥೆ ಸಭೆಯಲ್ಲಿ ಮತದಾನದಿಂದ ದೂರ ಉಳಿದ ಭಾರತ

ನವದೆಹಲಿ: ಉಕ್ರೇನ್‌ನಲ್ಲಿನ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ನಡೆಸಿದ ತುರ್ತು ಚರ್ಚೆಯಲ್ಲಿ ಭಾರತ ಸೋಮವಾರ ಮತದಾನದಿಂದ ದೂರ ಉಳಿದಿದೆ. ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುವ ಪ್ರಸ್ತಾಪದ ಮೇಲೆಇಪ್ಪತ್ತೊಂಬತ್ತು ರಾಷ್ಟ್ರಗಳು ಪರವಾಗಿ ಮತ ಹಾಕಲು ನಿರ್ಧರಿಸಿದವು, 5 ವಿರುದ್ಧ ಮತ್ತು 13 ಮತದಾನದಿಂದ ದೂರವಿರಲು ನಿರ್ಧರಿಸಿದವು. ಉಕ್ರೇನ್‌ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ … Continued

ಜೂನ್ 22ರ ಸುಮಾರಿಗೆ ಭಾರತದಲ್ಲಿ ನಾಲ್ಕನೇ ಕೋವಿಡ್ ಅಲೆ ಸಾಧ್ಯತೆ: ಐಐಟಿ ಕಾನ್ಪುರ ಅಧ್ಯಯನ

ನವದೆಹಲಿ: ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕದ ನಾಲ್ಕನೇ ಅಲೆಯು ಜೂನ್ 22ರ ಸುಮಾರಿಗೆ ಪ್ರಾರಂಭವಾಗಬಹುದು ಮತ್ತು ಆಗಸ್ಟ್ ತಿಂಗಳ ಮಧ್ಯದಿಂದ ಅಂತ್ಯದ ಒಳಗೆ ಉತ್ತುಂಗಕ್ಕೇರಬಹುದು ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರದ ಸಂಶೋಧಕರ ಮಾದರಿ ಅಧ್ಯಯನವು ಸೂಚಿಸಿದೆ. ಇತ್ತೀಚಿಗೆ ಪ್ರಿಪ್ರಿಂಟ್ ರೆಪೊಸಿಟರಿ MedRxiv ನಲ್ಲಿ ಪೋಸ್ಟ್ ಮಾಡಲಾದ ಇನ್ನೂ ಪೀರ್-ರಿವ್ಯೂಡ್ ಅಧ್ಯಯನವು ಭವಿಷ್ಯವನ್ನು ಮಾಡಲು ಸಂಖ್ಯಾಶಾಸ್ತ್ರೀಯ … Continued

ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ; 7 ಮಂದಿ ವಿರುದ್ಧ ಎಫ್‌ಐಆರ್ ದಾಖಲು

ಪ್ರಯಾಗ್‌ರಾಜ್‌ : ವಿಧಾನ ಸಭಾ ಚುನಾವಣಾ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ಕೂಗಿದ 7 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಹಂಡಿಯಾ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ “ಪಾಕಿಸ್ಥಾನ ಜಿಂದಾಬಾದ್” ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು … Continued

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮತದಾನದಿಂದ ಭಾರತ ದೂರ: ಉಕ್ರೇನ್‌ನಲ್ಲಿ ಭಾರತೀಯರಿಗೆ ಕಿರುಕುಳದ ಆರೋಪ

ನವದೆಹಲಿ: ರಷ್ಯಾ ದಾಳಿಯಿಂದ ಕಂಗೆಟ್ಟಿರುವ ಉಕ್ರೇನ್‌ನ ಭಾರತೀಯ ಸಮುದಾಯ ಈಗ ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ವಿರುದ್ಧದ ರಷ್ಯಾ ದಾಳಿಯನ್ನು ಖಂಡಿಸುವ ನಿರ್ಣಯ ಮೇಲಿನ ಮತದಾನದಿಂದ ಭಾರತ ದೂರ ಉಳಿದ ನಂತರ ಆಕ್ರೋಶಿತ ಉಕ್ರೇನ್ ಗಡಿ ರಕ್ಷಣಾ ಸಿಬ್ಬಂದಿ ಭಾರತೀಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅರೋಪಿಸಲಾಗಿದೆ. ಯುದ್ಧಪೀಡಿತ ಉಕ್ರೇನ್- ಪೋಲಂಡ್ … Continued

19 ಸಾವಿರ ಕೋಟಿಯ ಟೆಂಡರ್ ರದ್ದುಗೊಳಿಸಿದ ಬಿಎಸ್ಎನ್ಎಲ್

ನವದೆಹಲಿ: ದೇಶದ 16 ರಾಜ್ಯಗಳ ಹಳ್ಳಿಗಳಿಗೆ ವೇಗದ ಅಂತರ್ಜಾಲ ನೀಡಲು ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಯೋಜನೆಗೆ ಹಿನ್ನಡೆಯಾಗಿದೆ. ಈ ಕುರಿತು ಬಿಎಸ್ಎನ್ಎಲ್ ಕರೆದಿದ್ದ 19 ಸಾವಿರ ಕೋಟಿ ರು. ಟೆಂಡರ್ ಗೆ ಯಾರೂ ಬಿಡ್ ಸಲ್ಲಿಸಲು ಮುಂದೆ ಬಾರದ ಹಿನ್ನೆಲೆಯಲ್ಲಿ ರದ್ದಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 19,430 ಕೋಟಿ ರು. ಈ ಯೋಜನೆಗೆ … Continued

ಸ್ವಾತಂತ್ರ್ಯೋತ್ಸವ ವೇಳೆಗೆ ಬಿಎಸ್ಎನ್ಎಲ್ 4ಜಿ ಸೇವೆ

ಈ ವರ್ಷ ಸ್ವಾತಂತ್ರ್ಯೋತ್ಸವದ ವೇಳೆ ಭಾರತದಾದ್ಯಂತ ಬಿಎಸ್ಎನ್ಎಲ್ 4ಜಿ ಸೇವೆ ಆರಂಭಿಸುವ ಗುರಿ ಹೊಂದಿದೆ. ಈ 4ಜಿ ಸೇವೆ ಹಲವು ವಿಶೇಷಗಳನ್ನು ಹೊಂದಿದೆ. ಈ ಸೇವೆಗೆ ಟಾಟಾ ಕನ್ಸಲ್ಟನ್ಸಿ ಸರ್ವೀಸ್ (ಟಿಸಿಎಸ್) ಟೆಕ್ನಾಲಜಿ ಪಾರ್ಟ್ನರ್ ಆಗಿರಲಿದೆ. ಇದೇ ಮೊದಲ ಬಾರಿಗೆ 4ಜಿ ಸೇವೆಗೆ ಪೂರ್ಣಪ್ರಮಾಣದ ಭಾರತೀಯ ತಂತ್ರಜ್ಞಾನ ಬಳಕೆಯಾಗಲಿದೆ. ಅಲ್ಲದೆ ದೂರಸಂಪರ್ಕ ಉಪಕರಣಗಳ ಉತ್ಪಾದನೆ ಉದ್ಯಮಕ್ಕೆ … Continued