ವೀಡಿಯೊ…| ಇರಾನಿನ ಎರಡು F-5 ಯುದ್ಧ ವಿಮಾನ, 8 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನ ನಾಶಪಡಿಸಿದ ಇಸ್ರೇಲ್‌

ಇರಾನ್‌ನಾದ್ಯಂತ ಡಜನ್ಗಟ್ಟಲೆ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ರಾತ್ರಿಯಿಡೀ ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲಿ ಇರಾನಿನ ಎರಡು ಯುದ್ಧ ವಿಮಾನಗಳು ಮತ್ತು ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಭಾನುವಾರ ತಿಳಿಸಿವೆ.
20 ಇಸ್ರೇಲಿ ಯುದ್ಧ ವಿಮಾನಗಳು ನಡೆಸಿದ ಈ ದಾಳಿಗಳು ಡೆಜ್‌ಫುಲ್ ಮತ್ತು ಇಸ್ಫಹಾನ್ ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ನೆಲೆಗಳನ್ನು ಹೊಡೆದುರುಳಿಸಿವೆ ಎಂದು ವರದಿಯಾಗಿದೆ.
ಐಡಿಎಫ್ ಪ್ರಕಾರ, ಇಸ್ರೇಲಿ ವಾಯುಪಡೆಯು ಡೆಜ್‌ಫುಲ್ ವಿಮಾನ ನಿಲ್ದಾಣದಲ್ಲಿ ಎರಡು ಇರಾನಿನ ಎಫ್ -5 ಯುದ್ಧ ವಿಮಾನಗಳನ್ನು ನಾಶಪಡಿಸಿದೆ, ಇದೇವೇಳೆ ತನ್ನ ಮೇಲೆ ಸನ್ನಿಹಿತ ದಾಳಿಗೆ ಸಿದ್ಧವಾಗಿದ್ದ ಇರಾನಿನ ಕ್ಷಿಪಣಿ ಉಡಾವಣಾ ವಾಹನಗಳನ್ನು ಸಹ ನಾಶಪಡಿಸಲಾಗಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. “ಭಾನುವಾರ ಬೆಳಿಗ್ಗೆ, ಇಸ್ರೇಲಿ ಪ್ರದೇಶದ ಕಡೆಗೆ ಹಾರಿಸಲು ಸಿದ್ಧವಾಗಿರುವ ಕ್ಷಿಪಣಿ ಉಡಾವಣಾ ವಾಹನಗಳನ್ನು, ಇರಾನಿನ ಸಶಸ್ತ್ರ ಪಡೆಗಳ ಸೈನಿಕರನ್ನು ತನ್ನ ವಾಯಪಡೆ ಹೊಡೆದುರುಳಿಸಿತು ಮತ್ತು ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಿದ ಉಡಾವಣಾ ವಾಹನಗಳನ್ನು ನಾಶಗೊಳಿಸಿತು” ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ಚುವರಿ ಟಾರ್ಗೆಟ್‌ಗಳಲ್ಲಿ ಸ್ಫೋಟಕ ಉತ್ಪಾದನಾ ತಾಣಗಳು, ಶಸ್ತ್ರಾಸ್ತ್ರಗಳ ಸಂಗ್ರಹಣೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಸೇರಿವೆ. ಇರಾನಿನ ವಾಯುಪಡೆಯು ಈ ಸೌಲಭ್ಯವನ್ನು ಬಳಸದಂತೆ ತಡೆಯಲು ಇಸ್ಫಹಾನ್ ವಿಮಾನ ನಿಲ್ದಾಣದಲ್ಲಿನ ಮಿಲಿಟರಿ ಮೂಲಸೌಕರ್ಯವನ್ನು ಸಹ ನಾಶಪಡಿಸಲಾಯಿತು ಎಂದು ಅದು ಹೇಳಿದೆ.
ಅಮೆರಿಕ ಸಹ ಇರಾನ್‌ ವಿರುದ್ಧ ಯುದ್ಧಕ್ಕೆ ಪ್ರವೇಶಿಸಿದ್ದು, ಇರಾನ್‌ನ ಮೂರು ಪರಮಾಣು ತಾಣಗಳಾದ ಫೋರ್ಡೊ, ಇಸ್ಫಹಾನ್ ಮತ್ತು ನಟಾಂಜ್‌ಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ಹಾನಿಯ ಮೌಲ್ಯಮಾಪನವನ್ನು ಸ್ವತಂತ್ರವಾಗಿ ಇನ್ನೂ ಬಿಡುಗಡೆ ಮಾಡಲಾಗಿಲ್ಲ.

ಇರಾನ್‌ನ ಖುಜೆಸ್ತಾನ್ ಪ್ರಾಂತ್ಯದ ಡೆಜ್‌ಫುಲ್ ವಿಮಾನ ನಿಲ್ದಾಣದಲ್ಲಿ ಎರಡು F-5 ಫೈಟರ್ ಜೆಟ್‌ಗಳು ಸೇರಿದಂತೆ ಇರಾನ್‌ನಲ್ಲಿ ಶನಿವಾರ ಇಸ್ರೇಲ್ ಪಡೆಗಳು ಒಂದು ಡಜನ್ ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿದವು.
ಇಸ್ರೇಲಿ ರಕ್ಷಣಾ ಪಡೆಗಳು (IDF) ಭಾನುವಾರ ಬಿಡುಗಡೆ ಮಾಡಿದ ಕಪ್ಪು-ಬಿಳುಪಿನ ದೃಶ್ಯಗಳು ಪಡೆಗಳು ವಿಮಾನ ನಿಲ್ದಾಣದಲ್ಲಿ ಒಂದು ವಿಮಾನವನ್ನು ನಾಶಪಡಿಸುತ್ತಿರುವುದನ್ನು ತೋರಿಸಿದೆ. ಇದಲ್ಲದೆ, ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಹಾರಿಸಲು ಸಿದ್ಧವಾಗಿದ್ದ ಆರು ಸೇರಿದಂತೆ ಎಂಟು ಲಾಂಚರ್‌ಗಳನ್ನು ನಾಶಪಡಿಸಲಾಗಿದೆ ಎಂದು ಪಡೆಗಳು ತಿಳಿಸಿವೆ.
ಶನಿವಾರ ಇರಾನ್‌ನಲ್ಲಿ ಸುಮಾರು 20 IAF ಫೈಟರ್ ಜೆಟ್‌ಗಳು ಡಜನ್‌ಗಟ್ಟಲೆ ಮಿಲಿಟರಿ ಗುರಿಗಳನ್ನು ಹೊಡೆದುರುಳಿಸಿವೆ ಎಂದು ಐಡಿಎಫ್‌ (IDF) ಹೇಳಿದೆ. ದಾಳಿಗೊಳಗಾದವುಗಳಲ್ಲಿ ಸ್ಫೋಟಕ ವಸ್ತುಗಳನ್ನು ಉತ್ಪಾದಿಸುವ ಘಟಕಗಳು, ಶಸ್ತ್ರಾಸ್ತ್ರಗಳ ಸಂಗ್ರಹಣೆ ಮತ್ತು ಉತ್ಪಾದನಾ ಸೌಲಭ್ಯಗಳು ಮತ್ತು ಇರಾನಿನ ವೈಮಾನಿಕ ರಕ್ಷಣಾ ವ್ಯವಸ್ಥೆಗಳು ಸೇರಿವೆ.

ಪ್ರಮುಖ ಸುದ್ದಿ :-   ಇರಾನ್-ಇಸ್ರೇಲ್ ಸಂಘರ್ಷ ಉಲ್ಬಣ | ತಮ್ಮ ಉತ್ತರಾಧಿಕಾರಿ ಪಟ್ಟಕ್ಕೆ ಬಂಕರ್‌ ನಿಂದಲೇ ಮೂವರನ್ನು ಹೆಸರಿಸಿದ ಖಮೇನಿ ; ಮಗನ ಹೆಸರಿಲ್ಲ : ವರದಿ

ಇರಾನಿನ ವಾಯುಪಡೆಯು ಮಿಲಿಟರಿ ಮೂಲಸೌಕರ್ಯವನ್ನು ಬಳಸುವುದನ್ನು ತಡೆಯಲು ಇಸ್ರೇಲಿ ಪಡೆಗಳು ಇಸ್ಫಹಾನ್ ವಿಮಾನ ನಿಲ್ದಾಣದಲ್ಲಿನ ಮಿಲಿಟರಿ ಮೂಲಸೌಕರ್ಯ ತಾಣಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.
ಇರಾನ್‌ನ ಪರಮಾಣು ಶಕ್ತಿ ಸಂಸ್ಥೆ ದಾಳಿಗಳನ್ನು ದೃಢಪಡಿಸಿತು. ಆದರೆ ತನ್ನ ಕಾರ್ಯಕ್ರಮವು ಮುಂದುವರಿಯುತ್ತದೆ ಎಂದು ಹೇಳಿದೆ. ಯುಎನ್ ಪರಮಾಣು ಕಾವಲು ಸಂಸ್ಥೆ ವಿಕಿರಣಶೀಲ ಸೋರಿಕೆಯ ಯಾವುದೇ ಲಕ್ಷಣಗಳನ್ನು ವರದಿ ಮಾಡಿಲ್ಲ ಆದರೆ ಅದು ಮೇಲ್ವಿಚಾರಣೆಯನ್ನು ಮುಂದುವರಿಸುವುದಾಗಿ ದೃಢಪಡಿಸಿತು.
ಅಮೆರಿಕದ ದಾಳಿಯ ನಂತರ, ಇರಾನ್ ಹೈಫಾ ಮತ್ತು ಟೆಲ್ ಅವೀವ್ ಸೇರಿದಂತೆ ಇಸ್ರೇಲಿ ನಗರಗಳನ್ನು ಗುರಿಯಾಗಿಸಿಕೊಂಡು 40 ಕ್ಷಿಪಣಿಗಳನ್ನೊಳಗೊಂಡ ದಾಳಿಯನ್ನು ನಡೆಸಿತು. 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ತಾನು ಪಶ್ಚಿಮ ಇರಾನ್ ಮೇಲೆ ಹೊಸ ದಾಳಿಗಳನ್ನು ಪ್ರಾರಂಭಿಸಿದೆ ಎಂದು ಹೇಳಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement