ವೀಡಿಯೊ..| ಆಸ್ಪತ್ರೆ ಬಿಲ್ ಕೇಳಿ ಐಸಿಯುವಿನಿಂದ ಹೊರಬಂದ ‘ಕೋಮಾ’ ದಲ್ಲಿದ್ದ ವ್ಯಕ್ತಿ…! ವಂಚನೆ ಪ್ರಕರಣ ಬೆಳಕಿಗೆ ಬಂತು…!!

ರತ್ಲಾಮ್ (ಮಧ್ಯಪ್ರದೇಶ): ಮಧ್ಯಪ್ರದೇಶದ ರತ್ಲಾಮ್‌ನಲ್ಲಿ, ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಕೋಮಾದಲ್ಲಿದ್ದಾನೆ ಎಂದು ಹೇಳಲಾದ ವ್ಯಕ್ತಿಯೊಬ್ಬ ಆಸ್ಪತ್ರೆಯ ಬಿಲ್‌ ಕೇಳಿ ಆಮ್ಲಜನದ ಮಾಸ್ಕ್‌ ಸಮೇತ ಐಸಯುವಿನಿಂದ ಹೊರಬಂದ ಘಟನೆ ನಡೆದಿದೆ.
ತನ್ನನ್ನು ಆಸ್ಪತ್ರೆಯ ಐಸಿಯುವಿನಲ್ಲಿ ಬಂಧಿ ಮಾಡಲಾಗಿತ್ತು. ಹಾಗೂ ತನ್ನ ಕುಟುಂಬಕ್ಕೆ ಅನಗತ್ಯ ದುಬಾರಿ ಚಿಕಿತ್ಸೆಗೆಂದು 1 ಲಕ್ಷ ರೂಪಾಯಿ ಪಾವತಿಸಲು ಸೂಚಿಸಲಾಯಿತು ಎಂದು ಹೇಳಿಕೊಂಡಿದ್ದಾನೆ.
ಅಲ್ಲದೆ, ಈ ವೈದ್ಯಕೀಯ ವಂಚನೆಯ ಪ್ರಕರಣವನ್ನು ಬೆಳಕಿಗೆ ತರಲು ತಾನು ಐಸಿಯುನಿಂದ ಹೊರಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ವರದಿಯ ಪ್ರಕಾರ, ದೀನದಯಾಳ ನಗರದ ನಿವಾಸಿ ಬಂಟಿ ನಿನಾಮ ಎಂಬಾತ ಜಗಳದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆತನಿಗೆ ಬೆನ್ನುಮೂಳೆ ಮುರಿದಿದೆ ಮತ್ತು ಕೋಮಾಕ್ಕೆ ಹೋಗಿದ್ದಾನೆ ಎಂದು ಆತನ ಕುಟುಂಬಕ್ಕೆ ಆಸ್ಪತ್ರೆಯಿಂದ ತಿಳಿಸಲಾಯಿತು. ಅಲ್ಲದೆ, ಬೆನ್ನು ಮೂಳೆ ಮುರಿದಿರುವುದಕ್ಕೆ ತುರ್ತಾಗಿ ದುಬಾರಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಹೀಗಾ ತಕ್ಷಣವೇ ಹಣ ಹೊಂದಿಸಿ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಪ್ರಾಣಭಯದಿಂದ ಆತನ ಪತ್ನಿ ಮತ್ತು ತಾಯಿ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲ ಪಡೆದು 1 ಲಕ್ಷ ರೂ. ರೂ.ಗಳಷ್ಟು ಹಣ ಕಟ್ಟಿದ್ದಾರೆ.

ಆದರೆ, ಮುಂದೆ ನಡೆದದ್ದು ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಐಸಿಯುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಂಟಿ ನಿನಾಮ ಐಸಿಯುವಿನಿಂದ ಹೊರಬರುತ್ತಿರುವುದನ್ನು ಕಂಡುಬಂದಿದೆ. ವೈದ್ಯರು ವಿವರಿಸಿದ ಕೋಮಾ ಅಥವಾ ಪ್ರಜ್ಞಾಹೀನ ಸ್ಥಿತಿ ಯಾವುದೂ ಆತನಲ್ಲಿ ಕಂಡುಬಂದಿಲ್ಲ. ಬಂಟಿ ಸಾಮಾನ್ಯ ಆರೋಗ್ಯವಂತ ವ್ಯಕ್ತಿಯಂತೆ ನಡೆದುಕೊಂಡು ಬಂದಿದ್ದಾನೆ, ಡ್ರಿಪ್ಸ್‌ ನೀಡಲು ಬಳಸಿದ ವೈದ್ಯಕೀಯ ಟೇಪ್‌ ಗಳು ಕೈ ಮತ್ತು ಎದೆಯ ಮೇಲೆ ಅಂಟಿಸಿಕೊಂಡಿದೆ. ಮೂಗಿಗೆ ಅಳವಡಿಸಿದ್ದ ಟ್ಯೂಬ್ ಸಮೇತ ಆಸ್ಪತ್ರೆಯಿಂದ ಹೊರನಡೆಯುತ್ತಿರುವುದು ಕಂಡುಬಂದಿದೆ. ಐಸಿಯುವಿನಿಂದ ಹೊರ ಬಂದ ಆತ ಆಸ್ಪತ್ರೆಯು ತನ್ನನ್ನು ಬಂಧಿಯಾಗಿ ಇಟ್ಟಿತ್ತು ಎಂದು ಆರೋಪಿಸಿದ್ದಾನೆ. ಕೋಮಾದಲ್ಲಿದ್ದ ವ್ಯಕ್ತಿ ಹೇಗೆ ನಡೆದುಕೊಂಡು ಬಂದ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಆತ ಐಸಿಯು ಕೊಠಡಿಯಿಂದ ಹೊರಬಂದು ಸಂಪೂರ್ಣ ಘಟನೆ ಬಗ್ಗೆ ವಿವರಿಸಿದಾಗ ವಂಚನೆ ಪ್ರಕರಣ ಹೊರಹೊಮ್ಮಿತು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಆಸ್ಪತ್ರೆ ಸಿಬ್ಬಂದಿ ವಂಚನೆ ಮಾಡಿದ್ದಾರೆ ಎಂದು ಆತನ ಪತ್ನಿ ಮತ್ತು ತಾಯಿ ಆರೋಪಿಸಿದ್ದಾರೆ. “ಬೆನ್ನುಹುರಿಯಲ್ಲಿ ಮುರಿತ ಉಂಟಾಗಿ ಕೋಮಾ ಸ್ಥಿತಿಗೆ ಜಾರಿದ್ದಾನೆ ಎಂದು ನಮಗೆ ತಿಳಿಸಲಾಗಿತ್ತು. ಔಷಧ, ಚುಚ್ಚುಮದ್ದುಗಳಿಗೆ ಹಲವು ಪ್ರಿಸ್ಕ್ರಿಪ್ಷನ್‌ಗಳನ್ನು ಕೊಟ್ಟರು. ಎಲ್ಲವನ್ನೂ ತಂದುಕೊಟ್ಟೆವು. ನಂತರ ಚಿಕಿತ್ಸೆಗೆ 1 ಲಕ್ಷ ರೂ. ಕೊಡುವಂತೆ ಹೇಳಿದರು. ಸಂಬಂಧಿಕರು ಮತ್ತು ಇತರರ ಬಳಿ ಹಣ ಕೇಳಿ 1 ಲಕ್ಷ ರೂ. ವ್ಯವಸ್ಥೆ ಮಾಡಿದೆವು ಎಂದು ಪತ್ನಿ ಹಾಗೂ ತಾಯಿ ಹೇಳಿದ್ದಾರೆ.
ನಿನಾಮ ಪತ್ನಿ ಲಕ್ಷ್ಮಿ ತನ್ನ ಗಂಡ ಕೋಮಾದಲ್ಲಿದ್ದಾನೆ ಎಂದು ಹೇಳಿದ ಆಸ್ಪತ್ರೆಯು ಸ್ಥಿತಿ ಗಂಭೀರವಾಗಿದೆ ಎಂದು ಘೋಷಿಸಿತು ಮತ್ತು ಮುಂಗಡ ಹಣ ಕಟ್ಟುವಂತೆ ಸೂಚಿಸಿತು. 1 ಲಕ್ಷ ಹಣ ಹೊಂದಿಸಿ ಆಸ್ಪತ್ರೆಗೆ ವಾಪಸಾಗುತ್ತಿದ್ದಂತೆ  ಐಸಿಯುನಲ್ಲಿ ಪತಿಯನ್ನು ಕೆಲವು ಸಿಬ್ಬಂದಿ ಹಿಡಿದು ನಿಲ್ಲಿಸಿರುವುದು ಕಂಡು ಬಂತು ಎಂದು ಹೇಳಿದ್ದಾಳೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

ರೋಗಿಯು ಕಿರುಚಲು ಪ್ರಾರಂಭಿಸಿದಾಗ ಸಿಬ್ಬಂದಿ ಸಿಡಿಮಿಡಿಗೊಂಡರು. ಚಿಂತೆಗೀಡಾದ ತಾನು ಪರೀಕ್ಷಿಸಲು ಹೋದೆ. ಐಸಿಯು ಬಾಗಿಲಿನ ಮೇಲಿದ್ದ ಚಿಕ್ಕ ಗಾಜಿನ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಐದು ಜನ ಬಂಟಿಯನ್ನು ತಡೆಹಿಡಿದಿರುವುದನ್ನು ಕಂಡೆ. ಬಂಟಿ ಕೈಯಲ್ಲಿ ಕತ್ತರಿ ಹಿಡಿದು ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಆ ಸಿಬ್ಬಂದಿ ಅಂತಿಮವಾಗಿ ಆತನನ್ನು ಹೊರಗೆ ಹೋಗಲು ಬಿಟ್ಟರು ಎಂದು ಘಟನೆ ಬಗ್ಗೆ ಬಂಟಿ ಪತ್ನಿ ಹೇಳಿದ್ದಾಳೆ.
ಹಣಕ್ಕಾಗಿ ತನ್ನ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾಗ ಐವರು ಆಸ್ಪತ್ರೆಯ ಸಿಬ್ಬಂದಿ ಬಲವಂತವಾಗಿ ನನ್ನನ್ನು ತಡೆದರು ಎಂದು ಬಂಟಿ ನಿನಾಮ ಹೇಳಿದ್ದಾನೆ. ತಪ್ಪಿಸಿಕೊಳ್ಳಲು ಅವಕಾಶವನ್ನು ಬಳಸಿಕೊಂಡ ಐಸಿಯುವಿನಿಂದ ಹೊರಬಂದೆ ಎಂದು ಆತ ಹೇಳಿದ್ದಾನೆ. ಹೊರಬಂದ ಬಂಟಿ ಆಸ್ಪತ್ರೆಯ ವಂಚನೆಯನ್ನು ಬಹಿರಂಗಪಡಿಸಿದ್ದಾನೆ.
ಈ ಆಘಾತಕಾರಿ ಸಂಗತಿಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಖಾಸಗಿ ಆಸ್ಪತ್ರೆಗಳ ನೈತಿಕತೆಯನ್ನು ಜನರು ಪ್ರಶ್ನಿಸುವಂತೆ ಮಾಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement