ರಾಯ್‌ಪುರ: ಛತ್ತೀಸ್‌ಗಡ ವರ್ಷದ ಕ್ರೂರ ನಕ್ಸಲ್ ದಾಳಿಗೆ ಸಾಕ್ಷಿಯಾಗಿದೆ.
ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ನಕ್ಸಲ್ ವಿರೋಧಿ ಕಾರ್ಯಾಚರಣೆಯ ನಂತರ ಜಿಲ್ಲಾ ಕೇಂದ್ರಕ್ಕೆ ಹಿಂದಿರುಗುತ್ತಿದ್ದ 30 ಡಿಆರ್‌ಜಿ ಜವಾನರನ್ನು ಹೊತ್ತ ಬಸ್ಸಿಗೆ ನೆಲದಲ್ಲಿ ನಕ್ಸಲರು ಇಟ್ಟ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದರಿಂದ ಐವರು ಜವಾನರು ಮೃತಪಟ್ಟಿದ್ದಾರೆ.
ಲ್ಯಾಂಡ್ ಗಣಿ ಪ್ರಚೋದಕವು ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ಯ ನಾಲ್ಕು ಜವಾನರು, ಚಾಲಕ ಮೃತಪಟ್ಟಿದ್ದು, 14 ಜವಾನರು ಗಾಯಗೊಂಡಿದ್ದಾರೆ.
ಸಂಜೆ 4.30 ರ ಸುಮಾರಿಗೆ ದೌಡೈನ ಕನ್ಹಾರ್ಗಾಂವ್-ಕಡೇನಾರ್ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಸ್ಥಳಕ್ಕೆ ಹೆಚ್ಚುವರಿ ಬಲವನ್ನುಕಳುಹಿಸಲಾಗಿದೆ. ಗಾಯಗೊಂಡ ಜವಾನರನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಾಯ್‌ಪುರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಐಜಿ ತಿಳಿಸಿದ್ದಾರೆ.
ಕನ್ಹಾರ್ಗಾಂವ್-ಕಡೇನಾರ್ ರಸ್ತೆಯಲ್ಲಿ ಒಂದರ ನಂತರ ಒಂದರಂತೆ ಮೂರು ಐಇಡಿ ಸ್ಫೋಟಗಳು ಸಂಭವಿಸಿವೆ. ಆಗ ಚಾಲಕನು ಬಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಂಡ. ಸ್ಫೋಟಕ್ಕೆ ವಾಹನವು ಅವಶೇಷಗಳಾಗಿ ಮಾರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಮಾವೋವಾದಿಗಳ ಸ್ಮಾಲ್ ಆಕ್ಷನ್ ಗ್ರೂಪ್ (ಎಸ್‌ಎಜಿ) ಈ ದಾಳಿ ನಡೆಸಿರಬಹುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ