ಭಾರತದ ಮೇಲೆ ಅಮೆರಿಕ ಭಾರಿ ಸುಂಕ ವಿಧಿಸಿದ್ದರ ಬಗ್ಗೆ ಡೆಮಾಕ್ರಸಿ ಇನ್ಸ್ಟಿಟ್ಯೂಟ್ ಸಮೀಕ್ಷೆ ; ಅದರಲ್ಲಿ ಟ್ರಂಪಗೆ ಮಂಗಳಾರತಿ…!

ನವದೆಹಲಿ : ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸುಂಕ ವಿಧಿಸಿದ್ದಕ್ಕೆ ಸಂಬಂಧಿಸಿದಂತೆ ಅಮೆರಿಕದ ಚಿಂತಕರ ಚಾವಡಿ (think tank) ಡೆಮಾಕ್ರಸಿ ಇನ್ಸ್ಟಿಟ್ಯೂಟ್ ಸಮೀಕ್ಷೆ ನಡೆಸಿದ್ದು ಅದರಲ್ಲಿ ಕಂಡುಬಂದ ಅಂಶಗಳನ್ನು ಬಿಡುಗಡೆ ಮಾಡಿದೆ.
ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಅಮೆರಿಕವು ಭಾರತದ ಮೇಲೆ ಸುಂಕ ವಿಧಿಸಬಾರದಿತ್ತು ಎಂದು ಅರ್ಧಕ್ಕಿಂತ ಹೆಚ್ಚು ಜನ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 53%ರಷ್ಟು ಜನರು ಈ ಕ್ರಮ ತಪ್ಪು ಎಂದು ಹೇಳಿದ್ದಾರೆ. 43%ರಷ್ಟು ಜನರು ಅದನ್ನು ಬೆಂಬಲಿಸಿದ್ದಾರೆ. ಈ ಬಗ್ಗೆ ಗೊತ್ತಿಲ್ಲ ಎಂದು 4%ರಷ್ಟು ಜನ ಹೇಳಿದ್ದಾರೆ ಎಂದು ಡೆಮಾಕ್ರಸಿ ಇನ್ಸ್ಟಿಟ್ಯೂಟ್ ನಡೆಸಿದ ಸಮೀಕ್ಷೆ ತೋರಿಸಿದೆ.
ಭಾರತವು ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಲು ಆದೇಶಿಸಿದರು. ಮೂರು ವಾರಗಳಲ್ಲಿ ಜಾರಿಗೆ ಬರಲಿರುವ ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ 25 ಪ್ರತಿಶತ ಸುಂಕವು ಸೇರಿ ಭಾರತದ ಸರಕುಗಳ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಇದು ಯಾವುದೇ ದೇಶಗಳ ಮೇಲೆ ಟ್ರಂಪ್‌ ವಿಧಿಸಿದ ಅತ್ಯಧಿಕ ಸುಂಕವಾಗಿದೆ. ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಸುಮಾರು 55%ರಷ್ಟು ಉತ್ಪನ್ನಗಳು ಟ್ರಂಪ್ ವಿಧಿಸಿರುವ ಸುಂಕಕ್ಕೆ ಒಳಪಟ್ಟಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಮುಖ ಸುದ್ದಿ :-   ಭಯೋತ್ಪಾದನೆ ಸಹಿಸಲು ಸಾಧ್ಯವೇ ಇಲ್ಲ ; ಬ್ರಿಕ್ಸ್‌ ನವದೆಹಲಿ ಘೋಷಣೆಯಲ್ಲಿ ಪಹಲ್ಗಾಮ್‌ ದಾಳಿ ಖಂಡಿಸಿದ ನಾಯಕರು

ಸಮೀಕ್ಷೆಯಲ್ಲಿ ಕೇಳಿದ ಟ್ರಂಪ್ ಅವರ ಹೊಸ ಸುಂಕಗಳು ಅಮೆರಿಕಕ್ಕೆ ಒಳ್ಳೆಯದೇ ಎಂಬ ಪ್ರಶ್ನೆಗೆ ಒಳ್ಳೆಯದು ಎಂದು ಶೇ.44%ರಷ್ಟು ಜನ ಹೇಳಿದ್ದರೆ ಒಳ್ಳೆಯದಲ್ಲ ಎಂದು 44%ರಷ್ಟು ಜನ ಹೇಳಿದ್ದಾರೆ. ಶೇ.4ರಷ್ಟು ಜನ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಜಾಗತಿಕವಾಗಿ ಭಾರತದ ಬೆಳೆಯುತ್ತಿರುವ ಆರ್ಥಿಕ ಪ್ರಭಾವವು “ಒಳ್ಳೆಯದು” ಎಂದು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನ ಸಂಖ್ಯೆಯ (64%) ಜನರು ನಂಬಿದ್ದಾರೆ. ಅದು ಒಳ್ಳೆಯದಲ್ಲ ಎಂದು ಶೇ.29ರಷ್ಟು ಜನ ಭಾವಿಸಿದ್ದಾರೆ ಹಾಗೂ ಶೇ7ರಷ್ಟು ಜನರು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಭಾರತದ ಪ್ರಧಾನಿ ಮೋದಿ ಯಶಸ್ವಿ ಸರ್ಕಾರವನ್ನು ಮುನ್ನಡೆಸುತ್ತಿದ್ದು, ಅವರ ನಾಯಕತ್ವ ಅಮೆರಿಕಕ್ಕೆ ಒಳ್ಳೆಯದೋ ಅಥವಾ ಒಳ್ಳೆಯದಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಿದವರಲ್ಲಿ ಶೇಕಡಾ 59ರಷ್ಟು ಜನ ಒಳ್ಳೆಯದು ಎಂದು ಹೇಳಿದ್ದಾರೆ. ಶೇ. 38 ಜನರು ಪ್ರಧಾನಿ ಮೋದಿಯವರ ನಾಯಕತ್ವ ಅಮೆರಿಕಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದರೆ ಶೇ.೩ರಷ್ಟು ಜನ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಭಾರತಕ್ಕೆ ಸಂಬಂಧಿಸಿದಂತೆ, H-1B ವೀಸಾ ಕುರಿತ ಪ್ರಶ್ನೆಗೆ ಮಾತ್ರ ನಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಪ್ರಸ್ತುತ ಲಕ್ಷಾಂತರ ಹೆಚ್ಚು ಕೌಶಲ್ಯಪೂರ್ಣ ಭಾರತೀಯರು ಅಮೇರಿಕನ್ ವ್ಯವಹಾರಗಳಲ್ಲಿ ಕೆಲಸ ಮಾಡುತ್ತಿರುವ H-1B ವೃತ್ತಿಪರ ವೀಸಾ ಕಾರ್ಯಕ್ರಮವನ್ನು ಕೊನೆಗೊಳಿಸುವುದನ್ನು ಶೇಕಡಾ 61ರಷ್ಟು ಜನ ಬೆಂಬಲಿಸಿದ್ದಾರೆ. ಶೇ.36ರಷ್ಟು ಜನ ಅದನ್ನು ಮುಂದುವರಿಸಬೇಕು ಎಂದು ಹೇಳಿದ್ದರೆ ಶೇ.3ರಷ್ಟು ಜನ ಗೊತ್ತಿಲ್ಲ ಎಂದು ಹೇಳಿದ್ದಾರೆ.
“H1-B ವೀಸಾಗಳು ಅಮೆರಿಕನ್ ಕಾರ್ಮಿಕರಿಗಿಂತ ವಿದೇಶಿಯರಿಗೆ, ವಿಶೇಷವಾಗಿ ಭಾರತೀಯರಿಗೆ ಆದ್ಯತೆ ನೀಡುತ್ತವೆ ಮತ್ತು ಆ ಮೂಲಕ ಅಮೆರಿಕನ್ನರಿಂದ ಉದ್ಯೋಗಗಳನ್ನು ಕಸಿದುಕೊಳ್ಳುತ್ತವೆ ಎಂಬ ವಾದವು ಅಮೆರಿಕಾದ ಜನರಲ್ಲಿ ಬಹಳ ಬಲವಾಗಿ ಪ್ರತಿಧ್ವನಿಸುತ್ತದೆ” ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಆಗಸ್ಟ್ 3 ಮತ್ತು ಆಗಸ್ಟ್ 5 ರ ನಡುವೆ ಡೆಮಾಕ್ರಸಿ ಇನ್ಸ್ಟಿಟ್ಯೂಟ್ 1,500 ಸಂಭಾವ್ಯ ಅಮೇರಿಕನ್ ಮತದಾರರಲ್ಲಿ ದೂರವಾಣಿ ಸಮೀಕ್ಷೆಯನ್ನು ನಡೆಸಲಾಯಿತು.

ಪ್ರಮುಖ ಸುದ್ದಿ :-   ಮಾಡರ್ನ್‌ ಯುದ್ಧದ ಎಲೆಕ್ಟ್ರಾನಿಕ್‌ ದಾಳಿಗೂ ಬಗ್ಗದ ಚೀನಾ ಅಧ್ಯಕ್ಷರ ಈ ಹೈಟೆಕ್‌ ವಿಮಾನ ; ಇದರಲ್ಲಿದೆ ರಹಸ್ಯಮಯ ಅತ್ಯಾಧುನಿಕ ಭದ್ರತಾ ವ್ಯವಸ್ಥೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement