ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

ಬೆಂಗಳೂರು: ವಿಧಾನಸೌಧದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂಬಂತೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನಕಲಿ ವಿಡಿಯೊ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಿಹಾರ ಮೂಲದ 25 ವರ್ಷದ ವಲಸೆ ಕಾರ್ಮಿಕನನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಅರಾರಿಯಾ ಜಿಲ್ಲೆಯ ಹಜರತ್‌ ಅಲಿ ಎಂಬಾತ ಬಂಧಿತ ಆರೋಪಿ. ಕಳೆದ ಕೆಲವು ತಿಂಗಳುಗಳಿಂದ … Continued

ಭಾರೀ ವಿವಾದಕ್ಕೆ ಕಾರಣವಾದ ಕಾಂಗ್ರೆಸ್ ನಾಯಕಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ ಚಹಾ ಮಾರುತ್ತಿರುವ ಎಐ (AI) ರಚಿತ ವೀಡಿಯೊ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಚಹಾ ಮಾರುತ್ತಿರುವ ದೃಶ್ಯವಿರುವ ಎಐ-ಸೃಷ್ಟಿಸಿದ ವೀಡಿಯೊವನ್ನು ಹಿರಿಯ ಕಾಂಗ್ರೆಸ್ ನಾಯಕಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಅವರು  ಪ್ರಧಾನಿ ಮೋದಿ ಅವರು ಜಾಗತಿಕ ಕಾರ್ಯಕ್ರಮವೊಂದರಲ್ಲಿ ಕೆಟಲ್ ಮತ್ತು ಗ್ಲಾಸ್‌ಗಳೊಂದಿಗೆ ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (AI) ಸೃಷ್ಟಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. … Continued

ಎಐ(AI) ಕಮಾಲ್‌..: ಬಿಲಿಯನೇರ್ ಮಸ್ಕ್-ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಭರ್ಜರಿ ಡ್ಯಾನ್ಸ್‌ ಮಾಡಿದ ವೀಡಿಯೊ ವೈರಲ್‌ | ವೀಕ್ಷಿಸಿ

ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು, ಬೀ ಗೀಸ್ ಅವರ ‘ಸ್ಟೇಯಿನ್’ ಅಲೈವ್’ ಹಾಡಿಗೆ ಭರ್ಜರಿ ಡ್ಯಾನ್ಸ್‌ ಹೆಜ್ಜೆಗಳನ್ನು ಪ್ರದರ್ಶಿಸುವ ಆರ್ಟಿಫಿಶೀಯಲ್‌ ರಚಿಸಿದ ( AI-generated) ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಮೂಲತಃ ಉತಾಹ್‌ನ ಅಮೆರಿಕದ ಸೆನೆಟರ್ ಮೈಕ್ ಲೀ ಅವರು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಚಿತ್ರಿಸಲಾದ ಈ ಜೋಡಿಯು … Continued