ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

ನವದೆಹಲಿ: ಕೋವಿಡ್-19 ಲಸಿಕೆಗಳನ್ನು “ಪರಿಣಾಮಕಾರಿ” ಎಂದು ಕರೆದ ದೆಹಲಿಯ ಏಮ್ಸ್ ವೈದ್ಯರು, ವ್ಯಾಕ್ಸಿನೇಷನ್ ಮತ್ತು ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವುಗಳಿಗೆ ಸಂಬಂಧವಿದೆ ಎಂಬುದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ದೆಹಲಿಯ ಏಮ್ಸ್‌ನ ಶ್ವಾಸಕೋಶ, ಕ್ರಿಟಿಕಲ್ ಕೇರ್ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಕರಣ ಮದನ ಅವರು, ಈವರೆಗೆ ಬಳಸಲಾದ ಲಸಿಕೆಗಳ ಬಗ್ಗೆ ಪರಿಶೀಲನೆ ನಡೆಸಲು … Continued

ಆರೋಗ್ಯದಲ್ಲಿ ಏರುಪೇರು : ಲಾಲು ಪ್ರಸಾದ ಯಾದವ್ ಆಸ್ಪತ್ರೆಗೆ ದಾಖಲು

ಪಾಟ್ನಾ: ಆರ್‌ಜೆಡಿ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್‌ ಅವರನ್ನು ಪಾಟ್ನಾದ ಆಸ್ಪತ್ರೆಗೆ ದಾಖಲಿಸಿ ನಂತರ ಬುಧವಾರ ದೆಹಲಿಗೆ ಕರೆದೊಯ್ದು ಏಮ್ಸ್‌ಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿದೆ. 76 ವರ್ಷದ ನಾಯಕನನ್ನು ಎಐಐಎಂಎಸ್‌ನ ಕಾರ್ಡಿಯಾಲಜಿ ಪ್ರಾಧ್ಯಾಪಕ ಡಾ ರಾಕೇಶ ಯಾದವ್ ಅವರ ಕಾರ್ಡಿಯೋ-ನ್ಯೂರೋ ಸೆಂಟರ್‌ನ ಕಾರ್ಡಿಯೋ ಕ್ರಿಟಿಕಲ್ ಕೇರ್ ಘಟಕಕ್ಕೆ ದಾಖಲಿಸಲಾಗಿದೆ … Continued

ಉಪರಾಷ್ಟ್ರಪತಿ ಜಗದೀಪ ಧನಕರ ಆಸ್ಪತ್ರೆಗೆ ದಾಖಲು

ನವದೆಹಲಿ: ಉಪರಾಷ್ಟ್ರಪತಿ ಜಗದೀಪ ಧನಕರ (73) ಅವರು ಅಸ್ವಸ್ಥತೆ ಮತ್ತು ಎದೆ ನೋವಿನ ಅನುಭವವಾದ ನಂತರ ಭಾನುವಾರ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಮುಂಜಾನೆ 2 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪ್ರಸ್ತುತ ಕ್ರಿಟಿಕಲ್ ಕೇರ್ ಯುನಿಟ್‌ನಲ್ಲಿ (CCU) ನಿಗಾದಲ್ಲಿ ಇರಿಸಲಾಗಿದೆ. ಏಮ್ಸ್‌ನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ರಾಜೀವ್ ನಾರಂಗ ಅವರ … Continued

ಸಿಪಿಐ(ಎಂ) ಮುಖಂಡ ಸೀತಾರಾಮ ಯೆಚೂರಿ ಸ್ಥಿತಿ ʼಚಿಂತಾನಜಕʼ

ನವದೆಹಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಪ್ರಸ್ತುತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ನವದೆಹಲಿಯಲ್ಲಿ ಉಸಿರಾಟದ ಬೆಂಬಲದಲ್ಲಿದ್ದಾರೆ ಎಂದು ಪಕ್ಷವು ಮಂಗಳವಾರ ತಿಳಿಸಿದೆ. 72 ವರ್ಷದ ರಾಜಕಾರಣಿ ಯೆಚೂರಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ ಮತ್ತು ತೀವ್ರ ಉಸಿರಾಟದ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ … Continued

ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ದೆಹಲಿ ಏಮ್ಸ್ ಗೆ ದಾಖಲು

ನವದೆಹಲಿ : ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರನ್ನು ಸೋಮವಾರ ಸಂಜೆ ತೀವ್ರ ಜ್ವರದಿಂದ ಅಸ್ವಸ್ಥಗೊಂಡ ನಂತರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ದಾಖಲಿಸಲಾಯಿತು. ಆಸ್ಪತ್ರೆಯ ಮೂಲಗಳ ಪ್ರಕಾರ, ಯೆಚೂರಿ ಅವರನ್ನು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಯೆಚೂರಿ ಅವರ ಆರೋಗ್ಯ … Continued

ರಕ್ಷಣಾ ಸಚಿವ ರಾಜನಾಥ ಸಿಂಗ್ ದೆಹಲಿ ಏಮ್ಸ್ ಗೆ ದಾಖಲು

ನವದೆಹಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಗುರುವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿದೆ. ಬುಧವಾರ ತಡರಾತ್ರಿ ಬೆನ್ನು ನೋವಿನಿಂದ ಬಳಲುತ್ತಿದ್ದ ಅವರನ್ನು ಹಳೆಯ ಖಾಸಗಿ ವಾರ್ಡ್‌ಗೆ ದಾಖಲಿಸಲಾಯಿತು. ನರಶಸ್ತ್ರಚಿಕಿತ್ಸಾ ವಿಭಾಗದ ನಿಗಾದಲ್ಲಿದ್ದು, ಆವರ ಆರೋಗ್ಯ ಸ್ಥಿರವಾಗಿದೆ. ಶುಕ್ರವಾರ ಡಿಸ್ಚಾರ್ಜ್ ಆಗಬಹುದು ಎಂದು ದೆಹಲಿಯ ಏಮ್ಸ್ ತಿಳಿಸಿದೆ. ಗುರುವಾರ … Continued

ವೀಡಿಯೊ..| ವೈದ್ಯೆಗೆ ಕಿರುಕುಳ ನೀಡಿದ ವ್ಯಕ್ತಿ ಬಂಧಿಸಲು ಆಸ್ಪತ್ರೆ ವಾರ್ಡ್ ಒಳಕ್ಕೇ ವಾಹನ ನುಗ್ಗಿಸಿದ ಪೊಲೀಸರು…!

ನವದೆಹಲಿ: ಆರೋಪಿಯನ್ನು ಬೆನ್ನಟ್ಟಲು ಅಸಹಜ ಉತ್ಸಾಹ ಪ್ರದರ್ಶಿಸಿದ ಪೊಲೀಸರು ಮಂಗಳವಾರ ರಿಷಿಕೇಶದ ಏಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ವಾಹನ ಓಡಿಸಿದ ಘಟನೆಯ ವೀಡಿಯೊ ವೈರಲ್ ಆಗಿದೆ. ಮಹಿಳಾ ವೈದ್ಯರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸರು ಬಂದಿದ್ದರು. 26-ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಆಕ್ಷನ್ ಚಲನಚಿತ್ರದ ದೃಶ್ಯವನ್ನು ಹೋಲುವಂತೆ ಪೋಲೀಸ್ ವಾಹನವನ್ನು … Continued

ವೈದ್ಯಕೀಯ ಪವಾಡ…: ಅಪಘಾತದಿಂದ ಪ್ರಜ್ಞಾಹೀನಳಾಗಿ ವೆಂಟಿಲೇಟರ್‌ನಲ್ಲಿದ್ದಾಗಲೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ…!

ನವದೆಹಲಿ : ವೈದ್ಯಕೀಯ ಪವಾಡವೊಂದರಲ್ಲಿ, ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವೆಂಟಿಲೇಟರ್‌ನಲ್ಲಿದ್ದ ಮಹಿಳೆಯೊಬ್ಬರು ಕಳೆದ ವಾರ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಏಮ್ಸ್) ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ನಂದಿನಿ ತಿವಾರಿ (22) ಅವರನ್ನು ಅಕ್ಟೋಬರ್ 17 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಮಹಿಳೆ … Continued

12 ತಾಸುಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಕೂಡಿಕೊಂಡಿದ್ದ 1 ವರ್ಷದ ಅವಳಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದ ಏಮ್ಸ್‌ ವೈದ್ಯರು….

ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (AIIMS) 12 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಕಳೆದ ವರ್ಷ ಜನಿಸಿದ್ದ ಎದೆ ಮತ್ತು ಹೊಟ್ಟೆ ಸೇರಿಕೊಂಡಿದ್ದ ಸಂಯೋಜಿತ ಅವಳಿ ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಅವರನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ ಎಂದು ವೈದ್ಯರು ಬುಧವಾರ ತಿಳಿಸಿದ್ದಾರೆ. ಎಐಐಎಂಎಸ್‌ನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ … Continued

ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡಲು ಪ್ರಧಾನಿ ಮೋದಿಗೆ ಮನವಿ

ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಲವು ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ … Continued