ಕಿತ್ತೂರು | ಒಕ್ಕಲೆಬ್ಬಿಸಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ : ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದ ಮಹಿಳೆಯರು

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕು ದೇವಗಾಂವದಲ್ಲಿ ಕೆಲ ಮಹಿಳೆಯರು ವಿಷದ ಬಾಟಲಿಯೊಂದಿಗೆ ಆಗಮಿಸಿ ಪ್ರತಿಭಟಿಸಿದರು. ಈ ಮೂಲಕ ಒಕ್ಕಲು ಎಬ್ಬಿಸಲು ಬಂದ ಅರಣ್ಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. 12ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳೊಂದಿಗೆ ಬಂದಿದ್ದ ಅರಣ್ಯ ಅಧಿಕಾರಿಗಳನ್ನು ಜನರು ಜಮೀನು ಬಳಿಯೇ ತಡೆದರು. ಪೊಲೀಸರು ಸಂಧಾನಕ್ಕೆ ಯತ್ನಿಸಿದರು. ಆದರೆ ಬೆಳೆಯ ನಾಶಕ್ಕೆ ಒಪ್ಪದ ರೈತರು ಬೆಳೆ … Continued

ಮರಾಠಾ ಸಮಾಜದ ಸಭೆ | ಸಮಾಜದ ಅಭ್ಯುದಯಕ್ಕೆ ಸಂಘಟಿತ ಹೋರಾಟ ಅಗತ್ಯ : ಕಿರಣ ಜಾಧವ

ಬೆಳಗಾವಿ : ಮರಾಠಾ ಸಮಾಜದ ಅಭ್ಯುದಯಕ್ಕೆ ಸಂಘಟಿತ ಪ್ರಯತ್ನ ಇಂದಿನ ಅಗತ್ಯವಾಗಿದೆ ಎಂದು ಮರಾಠಾ ಸಮಾಜದ ಮುಖಂಡ ಕಿರಣ ಜಾಧವ ಹೇಳಿದ್ದಾರೆ. ನಗರದ ಮಿಲನ್ ಹೊಟೇಲ್ ಸಭಾಗೃಹದಲ್ಲಿ ಶನಿವಾರ ನಡೆದ ಬೆಳಗಾವಿ ಉತ್ತರ ಮರಾಠಾ ಸಮಾಜ ಬಾಂಧವರ ಸಭೆಯಲ್ಲಿ ಅವರು ಮಾತನಾಡಿದರು. ಮರಾಠಾ ಸಮಾಜದ ಮೀಸಲಾತಿಯನ್ನು ಈಗ ಇರುವ 3 ಬಿ ಯಿಂದ 2 ಎ … Continued

ವೈದ್ಯೆ ಅತ್ಯಾಚಾರ-ಕೊಲೆ ಘಟನೆ : ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಮೇಣದಬತ್ತಿ ಹಚ್ಚಿ ಪ್ರತಿಭಟನಾ ಮೆರವಣಿಗೆ

ಬೆಳಗಾವಿ : ಅಮಾನುಷ ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದ ಕೋಲ್ಕತ್ತಾ ವೈದ್ಯೆ ಕುಟುಂಬಕ್ಕೆ ನ್ಯಾಯ ದೊರೆಕಿಸಿಕೊಡುವಂತೆ ಒತ್ತಾಯಿಸಿ ದೇಶಾದ್ಯಂತ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮೇಣದ ಬತ್ತಿ ಹಚ್ಚಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಬೆಳಗಾವಿಯಲ್ಲೂ ಮಹಿಳಾ ಮೋರ್ಚಾದವರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರ್ನಾಟಕ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್, ಬೆಳಗಾವಿ ಜಿಲ್ಲಾ ಮಹಿಳಾ … Continued

ʼಹರ್ ಘರ್‌ ತಿರಂಗಾʼ ಅಭಿಯಾನದಲ್ಲಿ ಪಾಲ್ಗೊಳ್ಳಲು ಡಾ.ಸೋನಾಲಿ ಸರ್ನೋಬತ್ ಕರೆ

ಬೆಳಗಾವಿ : ಹರ್ ಘರ್‌ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಕರೆ ನೀಡಿದ್ದಾರೆ. ಮಂಗಳವಾರದಿಂದ ಆಗಸ್ಟ್ 15 ರ ವರೆಗೆ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ತ್ರಿವರ್ಣ ಧ್ವಜವನ್ನು ಗೌರವಿಸಿ, ಎಲ್ಲೆಡೆ ರಾಷ್ಟ್ರಾಭಿಮಾನ ಪಸರಿಸೋಣ. ಅಭಿಯಾನದಲ್ಲಿ ಪಾಲ್ಗೊಂಡು ತಿರಂಗಾ ಅಭಿಯಾನದ ಸೆಲ್ಫಿ ಅಥವಾ ಪೋಟೋ ತೆಗೆದು ಅಪ್ಲೋಡ್ … Continued

ಬೆಳಗಾವಿ | ಚಚಡಿಯಲ್ಲಿ ಕಲುಷಿತ ನೀರು ಸೇವಿಸಿ ವಾಂತಿಭೇದಿ; 41 ಜನ ಆಸ್ಪತ್ರೆಗೆ ದಾಖಲು

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 41 ಜನ ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ತೀವ್ರ ಅಸ್ವಸ್ಥಗೊಂಡ ಮೂವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆ ಮತ್ತು ಇತರ ಮೂವರನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವಾರದಿಂದ ಗ್ರಾಮದ ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದೆ. ಇದು ಸೋಮವಾರ ಹತೋಟಿ ಮೀರಿದೆ. ಒಂದೇ … Continued

ಬೆಳಗಾವಿ ಬಳಿಯ ರೆಸಾರ್ಟ್‌ನಲ್ಲಿ ಬಿಜೆಪಿ ಅತೃಪ್ತ ನಾಯಕರ ಸಭೆ…!

ಬೆಳಗಾವಿ: ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಬಳಿಯ ರೆಸಾರ್ಟ್‌ನಲ್ಲಿ ಬಿಜೆಪಿ ಅತೃಪ್ತ ನಾಯಕರು ಭಾನುವಾರ ಸಭೆ ನಡೆಸಿದರು. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಸಂಸದರಾದ ಜಿ.ಎಂ.ಸಿದ್ಧೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಪ್ರತಾಪ ಸಿಂಹ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಆದರೆ, ಮುಡಾ ಹಗರಣ ವಿರೋಧಿಸಿ ಬಿಜೆಪಿ … Continued

ಕರುಳು ಹಿಂಡುವ ದೃಶ್ಯ | ಬೆಳಗಾವಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ; ಕೈಚೀಲದಲ್ಲಿ ಸುಟ್ಟು ಕರಕಲಾದ ಮಗನ ಶವ ಕೊಂಡೊಯ್ದ ತಂದೆ…!

ಬೆಳಗಾವಿ: ತಾಲೂಕಿನ ನಾವಗೆ ಬಳಿಯ ಸ್ನೇಹಂ ಟೆಕ್ಸೋ ಟೇಪ್ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದದಲ್ಲಿ ಸುಟ್ಟು ಕರಕಲಾದ ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ ಅವರ ಮೃತದೇಹದ ಸುಟ್ಟು ಕರಕಲಾಗಿದ್ದು, ಅವಶೇಷಗಳನ್ನು ಚೀಲದಲ್ಲಿ ತುಂಬಿಕೊಂಡು ತೆರಳಿದ ಅವರ ತಂದೆ ಕಣ್ಣೀರಿಡುವ ದೃಶ್ಯ ಕರುಳು ಹಿಂಡುವಂತಿತ್ತು. ಮಂಗಳವಾರ ಕೆಲಸಕ್ಕೆ ಹೋಗಿದ್ದ ಮಗ ಮನೆ ಸೇರುತ್ತಾನೆ ಎಂದು … Continued

ಬೆಳಗಾವಿ : ನಾವಗೆ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ

ಬೆಳಗಾವಿ: ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸ್ನೇಹಂ ಕಂಪನಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಂಗಳವಾರ ರಾತ್ರಿ ಈ ಕಂಪನಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಕಂಪನಿಯಲ್ಲಿ ಸುಮಾರು 20 ರಷ್ಟು ಜನ ಇದ್ದರು ಎನ್ನಲಾಗಿದೆ. ಇನ್ಸುಲೆನ್ ಟೇಪ್ ರೆಡಿ ಮಾಡುವ ಕಾರ್ಖಾನೆ ಇದಾಗಿದ್ದು, ಸ್ನೇಹಂ ಕಾರ್ಖಾನೆಯ ಲಿಫ್ಟ್‌‌ನಲ್ಲಿ ಮಂಗಳವಾರ(ಆಗಸ್ಟ್ 6) ರಾತ್ರಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದ್ದು, … Continued

ಮುಂದಿನ ವಾರ ಹೆಚ್ಚು ಮಳೆ: ಕಟ್ಟೆಚ್ಚರ ವಹಿಸಲು ಸೂಚನೆ

ಬೆಳಗಾವಿ: ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಇದಕ್ಕಾಗಿ ಕಂದಾಯ, ವಿಪತ್ತು ನಿರ್ವಹಣೆ, ಅರಣ್ಯ ಇಲಾಖೆ, ಇಂಧನ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಕಳೆದ 42 … Continued

ಬೈಲಹೊಂಗಲ : ಕುಡಿದ ಅಮಲಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ ಮಗ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಾರಾಯಿ ಕುಡಿದ ಅಮಲಿನಲ್ಲಿ ಮಗ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೊಲೆಯಾದ ಮಹಿಳೆಯನ್ನು ಮಹಾದೇವಿ ಗುರಪ್ಪ ತೊಲಗಿ (70) ಎಂದು ಗುರುತಿಸಲಾಗಿದೆ. ಈಕೆಯ ಪುತ್ರ ಈರಣ್ಣ ಗುರಪ್ಪ ತೊಲಗಿ (34) ಕೊಲೆ ಆರೋಪಿಯಾಗಿದ್ದಾನೆ. ಈತ ಕುಡಿತದ ದಾಸನಾಗಿದ್ದ ಹಾಗೂ … Continued