ಆರೋಪಿತ ಕೋವಿಡ್ ಹಗರಣ : ಸಿಎಂ ಸಿದ್ದರಾಮಯ್ಯಗೆ ತನಿಖಾ ಆಯೋಗದ ವರದಿ ಸಲ್ಲಿಕೆ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಆಪಾದಿತ ಕೋವಿಡ್ ಹಗರಣದ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಸಲ್ಲಿಸಲಾಗಿದೆ. ಜಸ್ಟೀಸ್ ಜಾನ್ ಮೈಕೆಲ್ ಡಿ. ಕುನ್ಹಾ ಅವರ ನೇತೃತ್ವದ ತಂಡ ತಮ್ಮ ತನಿಖಾ ವರದಿಯನ್ನು ಶನಿವಾರ ರಾತ್ರಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು. ‘ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ಅವರ … Continued

ಎಸ್‌ಡಿಎ ಹುದ್ದೆಗೆ ನಕಲಿ ಅಂಕಪಟ್ಟಿ ಸೃಷ್ಟಿಸಿದ್ದ ಜಾಲ ಭೇದಿಸಿದ ಪೊಲೀಸರು ; 48 ಮಂದಿ ಬಂಧನ, ಅವರಲ್ಲಿ ಮೂವರು ಸರ್ಕಾರಿ ನೌಕರರು..!

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿದ್ದ ನಕಲಿ ಅಂಕಪಟ್ಟಿ( Fake marks card) ದಂಧೆಯ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, 3 ಸರ್ಕಾರಿ ಅಧಿಕಾರಿಗಳು ಸೇರಿ 48 ಮಂದಿಯನ್ನು ಬಂಧಿಸಿದ್ದಾರೆ. ಈ ಧಂದೆಯ ಕಿಂಗ್ ಪಿನ್ ತಲೆಮರೆಸಿಕೊಂಡಿದ್ದಾನೆ . ದ್ವಿತೀಯ ದರ್ಜೆ ಸಹಾಯಕ ಬ್ಯಾಕ್‌ಲ್ಯಾಗ್‌ ಹುದ್ದೆಗೆ ನಕಲಿ ದಾಖಲೆ ಸಲ್ಲಿಸಿ ಉದ್ಯೋಗ ಪಡೆಯಲು ನಕಲಿ ಅಂಕಪಟ್ಟಿ ಒದಗಿಸಿದ್ದ … Continued

ಮುಡಾ ಹಗರಣ: ಸಿದ್ದರಾಮಯ್ಯ ಕುಟುಂಬಕ್ಕೆ ಸೈಟ್ ; ನಕಲಿ ನಿರ್ಣಯದ ಆಧಾರದ ಮೇಲೆ ನಿವೇಶನ ಹಂಚಿಕೆ-ಬಿಜೆಪಿ ಆರೋಪ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ ಅವರಿಗೆ ಬದಲಿ ನಿವೇಶನ ನೀಡುವ ನಿರ್ಣಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ತೆಗೆದುಕೊಂಡಿಲ್ಲ. ಆದರೂ ನಿಯಮಬಾಹಿರವಾಗಿ 14 ನಿವೇಶನಗಳನ್ನು ಪಡೆಯಲಾಗಿದೆ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ರವಿಕುಮಾರ ಗಂಭೀರ ಆರೋಪ ಮಾಡಿದ್ದಾರೆ ಹಾಗೂ ಆಡಿಯೋ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರವಿಕುಮಾರ ಅವರು, 2020ರಲ್ಲಿ … Continued

ಜೈಲಿನಲ್ಲಿ ರಾಜಾತಿಥ್ಯಕ್ಕೆ ಬಿತ್ತು ಬ್ರೇಕ್​; ಆರೋಪಿ ದರ್ಶನ್​ ಬಳ್ಳಾರಿಗೆ ಸ್ಥಳಾಂತರ, ಉಳಿದವರು ಬೇರೆ ಬೇರೆ ಜೈಲಿಗೆ ಶಿಫ್ಟ್..

ಬೆಂಗಳೂರು : ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೆ, ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ರಾಜ್ಯದ ಇತರ ಜಿಲ್ಲಾ ನ್ಯಾಯಾಲಯಗಳಿಗೆ ಸ್ಥಳಾಂತರಿಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಆರೋಪಿ ದರ್ಶನ್​ … Continued

ಕನ್ನಡದ ಹಿರಿಯ ನಟಿ ಪದ್ಮಜಾ ರಾವ್ ​ಗೆ ಮೂರು ತಿಂಗಳು ಜೈಲು ಶಿಕ್ಷೆ

ಮಂಗಳೂರು : ಚೆಕ್ ಬೌನ್ಸ್ ಪ್ರಕರಣದಲ್ಲಿ ಕನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್ ಅವರಿಗೆ ನಗರದ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 40.20 ಲಕ್ಷ ರೂ. ದಂಡ ವಿಧಿಸಿದೆ. ನಟಿ ಪದ್ಮಜಾ ರಾವ್ ಅವರು ಜೂನ್ 17, 2020 ರಂದು 40 ಲಕ್ಷ ರೂ.ಗಳ ಕೈ … Continued

ನಟ ದರ್ಶನಗೆ ಜೈಲಲ್ಲಿ ರಾಜಾತಿಥ್ಯ..?! ಫೋಟೊ ವೈರಲ್‌

ಬೆಂಗಳೂರು : ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆಯೇ..? ವೈರಲ್ ಆದ ಚಿತ್ರಗಳನ್ನು ನೋಡಿದರೆ ಹಾಗೆ ಅನಿಸದಿರದು…! ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕನ್ನಡ ನಟ ದರ್ಶನ್ ತೂಗುದೀಪ ಜೈಲಿನೊಳಗೆ ವಿಐಪಿ ಆತಿಥ್ಯ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದುರ್ಗದ ರೇಣೂಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ … Continued

ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನು ಕೊಚ್ಚಿ ಕೊಂದ ಮಲತಂದೆ

ಬೆಂಗಳೂರು: ಇಬ್ಬರ ಹೆಣ್ಣುಮಕ್ಕಳನ್ನು ಮಲತಂದೆಯೇ ಬರ್ಬರವಾಗಿ ಮಚ್ಚಿನಿಂದ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾನಗರದ ಅಮೃತಹಳ್ಳಿ ಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ನೆಲೆಸಿರುವ ಉತ್ತರ ಭಾರತ (North India) ಮೂಲದ ಕುಟುಂಬವಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ವತಃ ಮಲತಂದೆಯೇ ಸುಮಾರು 14 ಹಾಗೂ 16 ವರ್ಷದ … Continued

ಯಾರು ಏನೇ ಬೈದರೂ ಬೆಂಗಳೂರಲ್ಲಿ ನೀರಿನ ದರ ಹೆಚ್ಚಳ ಆಗಲಿದೆ ; ಡಿಸಿಎಂ ಶಿವಕುಮಾರ

ಬೆಂಗಳೂರು : ಯಾರೇ ಬೈದರೂ ವಿಪಕ್ಷಗಳು ವಿರೋಧ ಮಾಡಿದರೂ ನಾವು ನೀರಿನ ದರ ಹೆಚ್ಚಳ ಮಾಡುತ್ತೇವೆ. ಯಾಕೆಂದರೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೀರಿನ ದರ ಹಲವು ವರ್ಷಗಳಿಂದ … Continued

ವೀಡಿಯೊ | ಅಮೆರಿಕದ ʼ ಡೆಮಾಕ್ರಟಿಕ್ ʼ ಸಮಾವೇಶದಲ್ಲಿ ಕರ್ನಾಟಕದ ಅರ್ಚಕರಿಂದ ಮೊಳಗಿದ ʼಅಸತೋಮಾ ಸದ್ಗಮಯ…ಓ ಶಾಂತಿʼ ವೇದ ಮಂತ್ರ ಪಠಣ

 ಚಿಕಾಗೊ : ಅಮೆರಿಕದ  ಚಿಕಾಗೋದಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದ 3 ನೇ ದಿನದಂದು ಹಿಂದೂ ರ್ಚಕರು ವೇದ ಮಂತ್ರಗಳೊಂದಿಗೆ ಕಲಾಪವನ್ನು ಪ್ರಾರಂಭಿಸುತ್ತಿದ್ದಂತೆ ಸಭಾಂಗಣದಾದ್ಯಂತ “ಓಂ ಶಾಂತಿ ಶಾಂತಿ” ಘೋಷಣೆಗಳು ಪ್ರತಿಧ್ವನಿಸಿದವು. ಮೇರಿಲ್ಯಾಂಡ್‌ನ ಶ್ರೀ ಶಿವವಿಷ್ಣು ದೇವಸ್ಥಾನದ ಅರ್ಚಕರಾದ ಕರ್ನಾಟಕ ಮೂಲದ ರಾಕೇಶ್ ಭಟ್ ಅವರು ಅಖಂಡ ದೇಶಕ್ಕಾಗಿ ಆಶೀರ್ವಾದ ಕೋರಿ ವೈದಿಕ ಪ್ರಾರ್ಥನೆ … Continued

ವೀಡಿಯೊ..| ಬೆಂಗಳೂರು : ಒಳಗೆ ಮಗುವಿದೆ ಎಂದು ಕೂಗಿಕೊಂಡ್ರೂ ಕಾರಿನ ಗಾಜು ಒಡೆದು ಯುವಕನ ಪುಂಡಾಟ..

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಕಾರಿನ ಗ್ಲಾಸ್​ ಒಡೆದು ಗದ್ದಲ ಎಬ್ಬಿಸಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ (Sarjapur Road) ದೊಡ್ಡಕನ್ನೆಹಳ್ಳಿ ಬಳಿ ನಡೆದಿದೆ. ಗ್ಲಾಸ್ ಒಡೆಯುತ್ತಿದ್ದಂತೆ ಕಾರಿನ‌ ಒಳಗಿದ್ದವರು ಕೂಗಿಕೊಂಡಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಇದೆ ಎಂದು ಚಾಲಕನ ಸೀಟಿನಲ್ಲಿ ಕುಳಿತಿದ್ದವರು ಕೂಗುತ್ತಿದ್ದರೂ ಯುವಕ ಗಲಾಟೆ ಮುಂದುವರೆಸಿದ್ದಾನೆ. ರಸ್ತೆಯ ಮಧ್ಯದಲ್ಲಿ ಕಾರಿನ ವಿಂಡ್‌ಸ್ಕ್ರೀನ್ ಒಡೆಯುವ … Continued