ಮಳೆಗೆ ಅಪಾರ್ಟ್​ಮೆಂಟ್ ಕಂಪೌಂಡ್‌ ಗೋಡೆ ಕುಸಿದು ನಾಲ್ವರ ದುರ್ಮರಣ

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್​ಮೆಂಟ್​ ತಡೆಗೋಡೆ ತಡರಾತ್ರಿ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಕಾಂಪೌಂಡ್​ ಕೂಲಿ ಕಾರ್ಮಿಕರು ಮಲಗಿದ್ದ ಶೆಡ್ ಮೇಲೆಯೇ ಗೋಡೆ ಕುಸಿದು ಬಿದ್ದಿದೆ. ಉತ್ತರ ಭಾರತ ಮೂಲದ … Continued

ಈದ್ಗಾ ಮೈದಾನ ವಿವಾದ, ಜುಲೈ 12 ಕ್ಕೆ ಚಾಮರಾಜಪೇಟೆ ಬಂದ್‌ಗೆ ಕರೆ

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಾದ-ಪ್ರತಿವಾದ ಜೋರಾಗುತ್ತಿದ್ದು, ಜುಲೈ 12ರಂದು ಚಾಮರಾಜಪೇಟೆ ಬಂದ್​ಗೆ ಕರೆ ನೀಡಲಾಗಿದೆ. ಬಕ್ರೀದ್ ಹಬ್ಬದ ಬಳಿಕ ನಾಗರಿಕರ ಒಕ್ಕೂಟ ಬಂದ್​ಗೆ ಕರೆ ನೀಡಿದ್ದು, ಜುಲೈ 12ರಂದು ಅಂಗಡಿ ಮುಂಗಟ್ಟು ಮುಚ್ಚಿ ಬಂದ್​ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಅಂದು ಶಾಂತಿಯುತ ಮೆರವಣಿಗೆ ಮಾಡಲು ನಿರ್ಧರಿಸಿದ್ದು, ಆಗಸ್ಟ್ 15ರಂದು ಮೈದಾನದಲ್ಲಿ ಧ್ವಜಾರೋಹಣ … Continued

ಮಗು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬೆಂಗಳೂರು: ಮರಣ ಪತ್ರ ಬರೆದಿಟ್ಟು ಪುಟ್ಟ ಮಗುವನ್ನು ಕೊಂದು ನಂತರ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್. ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. 31 ವರ್ಷದ ದೀಪಾ ತನ್ನ ಮೂರುವರೆ ವರ್ಷದ ಮಗು ರಿಯಾ ಅವಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾಯುವ ಮುನ್ನ ಬರೆದ ಡೆತ್ ನೋಟ್‌ನಲ್ಲಿ”Nobody is … Continued

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಕರಾರು ಪತ್ರ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನ ಮಂಜೂರು ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಮ್ಮಕ್ಕ ಅವರಿಗೆ ನಿವೇಶನ ಕ್ರಯಪತ್ರವನ್ನು ಹಂಚಿಕೆ ಮಾಡಿದರು. ಕೆಲ ದಿನಗಳ ಹಿಂದಷ್ಟೇ ಸಾಲು ಮರದ ತಿಮ್ಮಕ್ಕ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ನಂತರ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಿಡಿಎ, ನಿವೇಶನ ಹಂಚಿಕೆ ಪತ್ರವನ್ನು … Continued

ಹಣಕಾಸು ಸಂಸ್ಥೆ ಉದ್ಯೋಗಿಗೆ 35 ಲಕ್ಷ ರೂ. ಪಂಗನಾಮ ಹಾಕಿದ ಸೋಶಿಯಲ್ ಮೀಡಿಯಾ ಗೆಳತಿ…!

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತವಾಗಿದ್ದ ಮಹಿಳೆಯೊಬ್ಬರೊಂದಿಗೆ 45 ವರ್ಷದ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ವಂಚನೆಗೊಳಗಾಗಿದ್ದಾರೆ. ನ್ಯಾನ್ಸಿ ವಿಲಿಯಂ ಎಂಬ ಆರೋಪಿ ಗೆಳೆತನವಾದ ನಂತರ ಅನೇಕ ಬಾರಿ ವೀಡಿಯೊ ಕಾಲ್ ಮಾಡಿ, ಭಾರತಕ್ಕೆ ಬಂದು ಜ್ಯೂವೆಲ್ಲರಿ ವ್ಯವಹಾರ ಆರಂಭಿಸುವುದಾಗಿ ಭರವಸೆ ನೀಡಿದ್ದಾಳೆ. ಆಕೆಯನ್ನು ನಂಬಿದ ಹಣಕಾಸು ಕಂಪನಿ ಸಿಬ್ಬಂದಿ 35 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆಕೆ … Continued

೫೦ ರೂ.ಗಳಿಗೆ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಸ್ನೇಹಿತರ ನಡುವೆ ಕೇವಲ ೫೦ ರೂ.ಗಳಿಗೆ ನಡೆದ ಜಗಳವು ಯುವಕನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬಸವೇಶ್ವರನಗರದ ಕುರುಬರಹಳ್ಳಿ ಸರ್ಕಲ್ ಬಳಿ ನಿನ್ನೆ ರಾತ್ರಿ ನಡೆದ ವರದಿಯಾಗಿದೆ. ಲಗ್ಗೆರೆಯ ಶಿವಮಾಧು(೨೪) ಎಂಬಾತ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ . ಸ್ನೇಹಿತ ಶಾಂತಕುಮಾರ ಎಂಬಾತ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ … Continued

ಡಾ. ಅಂಬೇಡ್ಕರ್​ ಸ್ಕೂಲ್​ ಆಫ್​ ಎಕನಾಮಿಕ್ಸ್​​ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಮೋದಿ

ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್​ ಬಳಿ ಇರುವ ಆವರಣದಲ್ಲಿರುವ ಡಾ.ಬಿ.ಆರ್​.ಅಂಬೇಡ್ಕರ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ (ಬೇಸ್​) ವಿವಿ ಕ್ಯಾಂಪಸ್​ ಅನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.ಈ ವೇಳೆ ಡಾ.ಅಂಬೇಡ್ಕರ ಅವರ ಪುತ್ಥಳಿಯನ್ನೂ ಪ್ರಧಾನಿ ಅನಾವರಣ ಮಾಡಿದರು. 201 ಕೋಟಿ ರೂ. ವೆಚ್ಚದಲ್ಲಿ ಬೇಸ್​ ವಿವಿಯ ನೂತನ ಕ್ಯಾಂಪಸ್​ ಅನ್ನು ನಿರ್ಮಿಸಲಾಗಿದೆ. ಮೇಲ್ದರ್ಜೆಗೇರಿಸಿದ 150 ಐಟಿಐ ಹಬ್​ಗಳನ್ನೂ … Continued

11ನೇ ಮಹಡಿಯಿಂದ ಜಿಗಿದು ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವೈದ್ಯ ಆತ್ಮಹತ್ಯೆ

ಬೆಂಗಳೂರು: ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ವಸತಿ ಸಮುಚ್ಚಯದ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವೈದ್ಯರನ್ನು ಡಾ. ಪೃಥ್ವಿರಾಜ  ರೆಡ್ಡಿ (31) ಎಂದು ಗುರುತಿಸಲಾಗಿದೆ. ಅವರು ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಹಾಗೂ ಇವರ ಪತ್ನಿಯೂ ವೈದ್ಯೆಯೇ ಆಗಿದ್ದಾರೆ … Continued

ಬೆಂಗಳೂರು: ಬೆಳ್ಳಂಬೆಳಗ್ಗೆ ವಿವಾಹಿತೆ ಮೇಲೆ ಆಸಿಡ್ ಎರಚಿದ ಪ್ರೇಮಿ

ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ನಡೆದ ಒಂದು ಪ್ರಕರಣ ಮಾಸುವ ಮುನ್ನಾ ನಗರದಲ್ಲಿ ಇಂದು, ಶುಕ್ರವಾರ (ಜೂನ್ 10) ಮತ್ತೆ ಮಹಿಳೆಯೊಬ್ಬರ ಚಮೇಲೆ ವ್ಯಕ್ತಿಯೊಬ್ಬ ಆಸಿಡ್ ದಾಳಿ ಮಾಡಿದ್ದಾನೆ. ಬೆಂಗಳೂರಿನ ಸಾರಕ್ಕಿ ಬಳಿ ಘಟನೆ ನಡೆದಿದ್ದು, ಪರಿಚಯಸ್ಥನಿಂದಲೇ ಈ ಕೃತ್ಯ ನಡೆದಿದೆ. ಸದ್ಯ ಘಟನಾ ಸ್ಥಳಕ್ಕೆ ಎಸಿಪಿ ಶಿವಕುಮಾರ್, ಡಿಸಿಪಿ ಹರೀಶ್ ಪಾಂಡೆ ಭೇಟಿ … Continued

ಬೆಂಗಳೂರಿನಲ್ಲಿ ರೈತ ಮುಖಂಡ ಟಿಕಾಯತ್‌ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ: ವ್ಯಕ್ತಿಗೆ ಥಳಿತ

ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯುದ್ಧ್​ವೀರ್​ ಸಿಂಗ್ ಅವರ ಮೇಲೆ ಕಪ್ಪು ಮಸಿ ಎರಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರ ಕೋಡಿಹಳ್ಳಿ‌ ಚಂದ್ರಶೇಖರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಸಭೆ ಕರೆಯಲಾಗಿತ್ತು. ರಾಷ್ಟ್ರೀಯ ಕಿಸಾನ್ ಮೊರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, … Continued