ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ

ಬೆಂಗಳೂರು : ಬೆಂಗಳೂರು ನಗರಾದ್ಯಂತ 73.75 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೆಟ್ರೋ ನಿಲ್ದಾಣ, ರೈಲು ಸೇರಿದಂತೆ ವಿವಿಧೆಡೆ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯಾಣಿಕರಿಗೆ ‘ಸೆಲ್ಫಿ ಪಾಯಿಂಟ್‌’ ಅನ್ನು ನಿರ್ಮಿಸಿದೆ. ಬೆಂಗಳೂರು ನಮ್ಮ ಮೆಟ್ರೋ ಹಸಿರು … Continued

ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ : ಬೆಂಗಳೂರಿನ ಟೆಕ್ಕಿ ಬಂಧನ

ಹೈದರಾಬಾದ್‌ : ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಮೇಲ್ ಕಳುಹಿಸಿದ್ದಕ್ಕಾಗಿ ಬೆಂಗಳೂರಿನ 34 ವರ್ಷದ ಮಾಜಿ ಐಟಿ ಉದ್ಯೋಗಿಯನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬಿಹಾರ ಮೂಲದ ಆರೋಪಿ ವೈಭವ ತಿವಾರಿ ಫೆಬ್ರವರಿ 15 ಮತ್ತು 18 ರಂದು ಆರ್‌ಜಿಐ ವಿಮಾನ ನಿಲ್ದಾಣಕ್ಕೆ ಎರಡು ಬೆದರಿಕೆ ಇ ಮೇಲ್‌ಗಳನ್ನು ಕಳುಹಿಸಿದ್ದಾನೆ. … Continued

ಬೆಂಗಳೂರು | ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : ಮೂವರು ಕಾರ್ಮಿಕರು ಸಜೀವದಹನ

ಬೆಂಗಳೂರು : ದಕ್ಷಿಣ ತಾಲೂಕಿನ ರಾಮಸಂದ್ರದ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಕಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಜೀವದಹನವಾಗಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆಕಸ್ಮಿಕ ಬೆಂಕಿಯಿಂದ ಪರ್ಫ್ಯೂಮ್ ಫ್ಯಾಕ್ಟರಿ ಹೊತ್ತಿ ಉರಿಯುತ್ತಿದ್ದು, ಅದು ಇಡೀ ಕಾರ್ಖಾನೆಯನ್ನು ಆವರಿಸಿಕೊಂಡಿದ್ದರಿಂದ ಮೂವರು ಕಾರ್ಮಿಕರು ದಹನವಾಗಿದ್ದಾರೆ ಎಂದು ಹೇಳಲಾಗಿದೆ. … Continued

ಕರ್ನಾಟಕ ಬಜೆಟ್ 2024 : ಬೆಂಗಳೂರಿಗೆ ಸಿಕ್ಕಿದ್ದೇನು…?

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 2024-25ನೇ ಹಣಕಾಸು ವರ್ಷದ ಆಯವ್ಯಯದಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿಗೆ, ವಿಶೇಷವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ 6000 ಕೋಟಿ ರೂ. ಗಳಷ್ಟು ತೆರಿಗೆ ಸಂಗ್ರಹದ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ.  ಬಜೆಟ್‌ನಲ್ಲಿ ಬೆಂಗಳೂರಿಗೆ ಕೊಟ್ಟಿದ್ದೇನು..? • ಬೆಂಗಳೂರಲ್ಲಿ ಹೋಟೆಲ್ ವ್ಯಾಪಾರದ … Continued

ಮಾಜಿ ಪ್ರಧಾನಿ ಎಚ್​ ಡಿ ದೇವೆಗೌಡರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬೆಂಗಳೂರು : ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ವರಿಷ್ಠ ಎಚ್.ಡಿ. ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾದ ನಂತರ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಎಚ್‌.ಡಿ. ದೇವೇಗೌಡ ಅವರಿಗೆ ಈಗಾಗಲೇ 91 ವರ್ಷ ವಯಸ್ಸಾಗಿದ್ದು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, … Continued

ಚಲನಚಿತ್ರ ನಿರ್ಮಾಪಕ ರಾಕ್‌ ಲೈನ್ ವೆಂಕಟೇಶಗೆ ಶಾಕ್‌ ನೀಡಿದ ಬಿಬಿಎಂಪಿ : ರಾಕ್‌ ಲೈನ್ ಮಾಲ್​ ಗೆ ಬೀಗ

ಬೆಂಗಳೂರು: ತೆರಿಗೆ ಪಾವತಿಸದ ಕಾರಣ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಚಲನಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ ಅವರ ಒಡೆತನದ ರಾಕ್‌ಲೈನ್ ಮಾಲ್ ಅನ್ನು ಇಂದು, ಬುಧವಾರ ಪಾಲಿಕೆ ಕಂದಾಯ ಅಧಿಕಾರಿಗಳು ಬೀಗ ಹಾಕಿದ್ದಾರೆ. ದಾಸರಹಳ್ಳಿ ವಲಯದ ಬಿಬಿಎಂಪಿ ಕಂದಾಯ ಅಧಿಕಾರಿಗಳು ಇಂದು ಬುಧವಾರ ಬೆಳ್ಳಂಬೆಳಿಗ್ಗೆ ರಾಕ್‌ಲೈನ್ ಮಾಲ್ ಬಳಿ ತೆರಳಿಬೀಗ ಜಡಿದಿದ್ದಾರೆ. ರಾಕ್​ಲೈನ್ ಮಾಲ್​ 2011 … Continued

ತಂದೆ ನಾರಾಯಣ ಮೂರ್ತಿ ಜೊತೆ ಬೆಂಗಳೂರಿನಲ್ಲಿ ಸಾಮಾನ್ಯರಂತೆ ಐಸ್‌ಕ್ರೀಂ ಸವಿದ ಬ್ರಿಟನ್‌ ನ ಪ್ರಥಮ ಮಹಿಳೆ..!

ಬೆಂಗಳೂರು : ಬ್ರಿಟನ್ನಿನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರು ಬೆಂಗಳೂರಿನಲ್ಲಿ ತಮ್ಮ ತಂದೆ ನಾರಾಯಣ ಮೂರ್ತಿ ಅವರೊಂದಿಗೆ ಐಸ್ ಕ್ರೀಂ ಸವಿಯುತ್ತಿರುವುದು ಕಂಡುಬಂದಿದೆ. ತಂದೆ-ಮಗಳ ಜೋಡಿಯ ಸ್ನ್ಯಾಪ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, “ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರು ತಮ್ಮ ತಂದೆ ನಾರಾಯಣ … Continued

ವೀಡಿಯೊ…| ಬೆಂಗಳೂರು ಬಿಎಂಟಿಸಿ ಬಸ್ಸಿನಲ್ಲಿ ಕಿಟಕಿ ತೆರೆದ ಬಗ್ಗೆ ನಡೆದ ವಾಗ್ವಾದದ ನಂತರ ಚಪ್ಪಲಿಯಿಂದ ಹೊಡೆದಾಡಿಕೊಂಡ ಇಬ್ಬರು ಮಹಿಳೆಯರು…!

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ಸಿನಲ್ಲಿ ಇತ್ತೀಚೆಗೆ ಆಘಾತಕಾರಿ ಘಟನೆ ನಡೆದಿರುವುದು ವರದಿಯಾಗಿದೆ. ವೈರಲ್ ದೃಶ್ಯಗಳಲ್ಲಿ, ಇಬ್ಬರು ಮಹಿಳಾ ಪ್ರಯಾಣಿಕರು ತೀವ್ರ ಘರ್ಷಣೆಯಲ್ಲಿ ತೊಡಗಿರುವುದು ಕಂಡುಬರುತ್ತದೆ, ಅದು ನಂತರ ದೈಹಿಕ ವಾಗ್ವಾದಕ್ಕೆ ತಿರುಗುತ್ತದೆ. ನಂತರ ಮಹಿಳೆಯರಿಬ್ಬರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಳ್ಳುವುದು ಕಂಡುಬರುತ್ತದೆ. ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಸ್‌ ನಲ್ಲಿ ಈ ಘಟನೆ … Continued

ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ : ದಿನೇಶ ಗುಂಡೂರಾವ್‌

ಉಡುಪಿ : ಮಂಗನ ಕಾಯಿಲೆಗೆ ಲಸಿಕೆ ಕುರಿತು ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದ್ದು, ಲಸಿಕೆ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಉಡುಪಿಯಲ್ಲಿ ಶನಿವಾರ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಐಸಿಎಂಆರ್ ನವರು ವ್ಯಾಕ್ಸಿನ್ ತಯಾರಿಕೆಗೆ … Continued

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಜನರಿಗೆ ಕೋಟ್ಯಂತರ ರೂ. ವಂಚನೆ ಆರೋಪ : ದೂರು ದಾಖಲು

ಬೆಂಗಳೂರು : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್‌ಬಿಐ ಹೆಸರು ಹೇಳಿಕೊಂಡು ಬ್ಯಾಂಕ್​ಗಳಿಂದ ಸಬ್ಸಿಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಸಂಗ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬ್ಲೂ ವಿಂಗ್ಸ್ ಎಂಬ ಹೆಸರಿನ ನಕಲಿ ಟ್ರಸ್ಟ್ ಅಡಿ ಪವಿತ್ರಾ ಮತ್ತು ಆಕೆಯ ಗ್ಯಾಂಗ್ ಹಲವರಿಗೆ … Continued