ಬೆಂಗಳೂರು: ಹಾಡಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿ ಗುಂಡಿನ ದಾಳಿ, ಇಬ್ಬರಿಗೆ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನಾಭರಣ ಮಳಿಗೆಯೊಂದರ ದರೋಡೆ ಮಾಡುವ ಯತ್ನ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರು ನಗರದ ಕೊಡಿಗೇ ಹಳ್ಳಿಯಲ್ಲಿರುವ ಜ್ಯುವೆಲ್ಲರಿ ಮಳಿಗೆಗೆ ಗುರುವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರು ಗುಂಡು ಹಾರಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಆತಂಕ ಸೃಷ್ಟಿಸಿದರು. ಮಧ್ಯಾಹ್ನದ ಹೊತ್ತಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರು ಮಳಿಗೆಯ ಮಾಲೀಕರು ಹಾಗೂ ನೌಕರರನ್ನು ಬೆದರಿಸಿ … Continued

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಬಳ್ಳಾರಿಯಲ್ಲಿ ಪ್ರಮುಖ ಶಂಕಿತನನ್ನು ವಶಕ್ಕೆ ಪಡೆದ ಎನ್‌ಐಎ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಒಬ್ಬ ಶಂಕಿತ ಆರೋಪಿಯನ್ನು ಬುಧವಾರ ಬಂಧಿಸಿದೆ ಎಂದು ವರದಿಗಳು ತಿಳಿಸಿವೆ. ಬುಧವಾರ ಬೆಳಿಗ್ಗೆ ಬಳ್ಳಾರಿಯಲ್ಲಿ ಶಂಕಿತ ಆರೋಪಿ ಶಬ್ಬೀರ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ವ್ಯಕ್ತಿಯು ಸ್ಫೋಟದ ದಿನದಂದು … Continued

ಬೆಂಗಳೂರು : ನಮ್ಮ ಮೆಟ್ರೋ ಹಳಿ ಮೇಲೆ ಯುವಕನ ಓಡಾಟ : 27 ನಿಮಿಷ ಮೆಟ್ರೋ ಸೇವೆ ಸ್ಥಗಿತ

ಬೆಂಗಳೂರು : ಯುವಕನೊಬ್ಬನ ಹುಚ್ಚಾಟಕ್ಕೆ ಬೆಂಗಳೂರಿನ ನಮ್ಮ ಮೆಟ್ರೋ ಸೇವೆ ಸರಿಸುಮಾರು ಅರ್ಧ ಘಂಟೆ ಸ್ಥಗಿತಗೊಂಡ ಪ್ರಸಂಗ ನಡೆದ ವರದಿಯಾಗಿದೆ. ಬೆಂಗಳೂರಿನ ಜ್ಞಾನಭಾರತಿ ಸ್ಟೇಷನ್​ನಿಂದ ಪಟ್ಟಣಗೆರೆ ಸ್ಟೇಷನ್ ನಡುವೆ ಮೆಟ್ರೋ ಹಳಿಯಲ್ಲಿ ಯುವಕನೊಬ್ಬ ಮನಬಂದಂತೆ ಓಡಾಡಿದ್ದಾನೆ. ಹಳಿ ಮೇಲೆ ಯುವಕನ ಓಡಾಟವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ … Continued

ಕರ್ನಾಟಕದಲ್ಲಿ ಕಲರ್‌ ಕಾಟನ್ ಕ್ಯಾಂಡಿ ನಿಷೇಧ : ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಸುವಂತಿಲ್ಲ ; ನಿಯಮ ಮೀರಿದ್ರೆ ಜೈಲು-ದಂಡ

ಬೆಂಗಳೂರು : ರಾಜ್ಯದಲ್ಲಿ ಕಲ‌ರ್ ಕಾಟನ್ ಕ್ಯಾಂಡಿ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಒಂದು ವೇಳೆ ಕೃತಕ ಬಣ್ಣದ ಕಾಟನ್ ಕ್ಯಾಂಡಿ ಮಾರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬಣ್ಣ ಬಳಸದೇ ಇರುವ ಕಾಟನ್ ಕ್ಯಾಂಡಿ ಮಾರಬಹುದು ಎಂದು … Continued

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಎನ್ಐಎಯಿಂದ ಶಂಕಿತನ ಮತ್ತೆರಡು ವೀಡಿಯೊ ಬಿಡುಗಡೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಘಟನೆ ನಡೆದು 7 ದಿನಗಳಾದರೂ ಬಾಂಬ್‌ ಇರಿಸಿದ್ದ ಶಂಕಿತ ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಶಂಕಿತನ ಮತ್ತೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಒಂದರಲ್ಲಿ ಶಂಕಿತ ಬಾಂಬರ್ ಬಿಎಂಟಿಸಿ ಬಸ್ ಹತ್ತಿ, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದು ಕಂಡುಬರುತ್ತದೆ. ಮೊದಲ ವೀಡಿಯೊದಲ್ಲಿ ಈತ ಬಸ್‌ ಏರಿದ … Continued

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತನ ಹೊಸ ಫೋಟೋ ಬಿಡುಗಡೆ ಮಾಡಿದ ಎನ್‌ಐಎ

ನವದೆಹಲಿ : 10 ಮಂದಿ ಗಾಯಗೊಂಡಿರುವ ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣದ ಶಂಕಿತ ಆರೋಪಿಯ ಹೊಸ ಫೋಟೋಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆ ಮಾಡಿದೆ. ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ ಎನ್‌ಐಎ, ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇರಿಸಿದ್ದ … Continued

ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ರದ್ದು

ಬೆಂಗಳೂರು : ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ (Bike Taxi) ಬಾಡಿಗೆ ಯೋಜನೆ ರದ್ದುಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಬೈಕ್‌ಗಳಂತಹ ಸಾರಿಗೆಯೇತರ ವಾಹನಗಳನ್ನು ಟ್ಯಾಕ್ಸಿ ಸೇವೆಗೆ ಬಳಕೆ ಮತ್ತು ಅವುಗಳ ಕಾರ್ಯಾಚರಣೆಗೆ ಖಾಸಗಿ ಅಪ್ಲಿಕೇಶನ್‌ಗಳನ್ನು ಬಳಸುವುದು ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಾಗಿ ಎಲ್ಲ ರೀತಿಯ ಬೈಕ್‌ … Continued

ವೀಡಿಯೊ…| ರಾಮೇಶ್ವರಂ ಕೆಫೆ ಸ್ಫೋಟ: ಬಾಂಬರ್ ಬಟ್ಟೆ ಬದಲಿಸಿ, ಬಸ್ ಹತ್ತಿದ ಮತ್ತೊಂದು ಸಿಸಿಟಿವಿ ವೀಡಿಯೊ ಹೊರಬಿತ್ತು

ಬೆಂಗಳೂರು : ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಹೊಸ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಈ ಸಿಸಿಟಿವಿ ದೃಶ್ಯವಾಳಿಯು ಶಂಕಿತ ಬಾಂಬರ್ ಬಟ್ಟೆ ಬದಲಿಸಿ ತುಮಕೂರಿಗೆ ಬಸ್ ಹತ್ತಿರಬಹುದು ಎಂದು ಸೂಚಿಸುತ್ತದೆ. ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇರಿಸಿದ ನಂತರ, ಬಾಂಬರ್, … Continued

ಈ ಬೇಸಿಗೆಯಲ್ಲಿ ಕರ್ನಾಟಕದಲ್ಲಿ ರಣಬಿಸಿಲು ; ಕೆಲವೆಡೆ ಬಿಸಿಗಾಳಿ : ಹವಾಮಾನ ಇಲಾಖೆ

ಬೆಂಗಳೂರು : ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಋತುವಿನಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ಕರ್ನಾಟಕದಲ್ಲಿ ದಾಖಲಾಗಿದೆ. ಹೆಚ್ಚಿನ ಉಷ್ಣತೆಯು ಬೇಸಿಗೆಯ ತಿಂಗಳುಗಳಾದ ಮಾರ್ಚ್ ಮತ್ತು ಮೇ ನಡುವೆ ಇರುತ್ತದೆ. ಎಲ್ಲಾ ಮೂರು ತಿಂಗಳ ಕಾಲ … Continued

ಪಾಕ್ ಪರ ಘೋಷಣೆ ಪ್ರಕರಣ: ಸಂಸದ ಸೈಯದ್ ನಾಸಿರ್ ಹುಸೇನಗೆ ಪ್ರಮಾಣವಚನ ಬೋಧಿಸದಂತೆ ಉಪರಾಷ್ಟ್ರಪತಿಗೆ ಪತ್ರ

ಬೆಂಗಳೂರು : ಕಳೆದ ವಾರ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸಿರ್ ಹುಸೇನ್ ಜಯಗಳಿಸಿದ ನಂತರ ವಿಧಾನಸಭೆಯೊಳಗೆ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಮೂವರನ್ನು ಬಂಧಿಸಿದ ಕೆಲವು ದಿನಗಳ ನಂತರ, ಈ ಪ್ರಕರಣದಲ್ಲಿ ತನಿಖೆ ಪೂರ್ಣವಾಗುವವರೆಗೂ ಸೈಯದ್ ನಾಸಿರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ನಿವೃತ್ತ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು … Continued