ವೀಡಿಯೊ…| ಮುಖ್ಯಮಂತ್ರಿ ಜೀ, ಐಸಾ ಹೋತಾ ರೆಹತಾ ಹೈ…’: ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರತ್ತ ನೋಡಿ ಪ್ರಧಾನಿ ಮೋದಿ ಹೀಗಂದಿದ್ಯಾಕೆ..?

ಬೆಂಗಳೂರು : ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬೋಯಿಂಗ್‌ನ ಹೊಸ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಯಾಂಪಸ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರತ್ತ ನೋಡಿಕೊಂಡು “ಮುಖ್ಯಮಂತ್ರಿ ಜಿ ಐಸಾ ಹೋತಾ ರೆಹತಾ ಹೈ (ಮುಖ್ಯಮಂತ್ರಿಯವರೇ, ಇದು ನಡೆಯುತ್ತಲೇ ಇರುತ್ತದೆ) ಎಂದು  ಚಟಾಕಿ … Continued

ಇದು ಕಾಂಗ್ರೆಸ್ ಸರ್ಕಾರವೋ? ಆರ್ ಎಸ್ ಎಸ್ ಸರ್ಕಾರವೋ ? :ಸಿಸಿಬಿ ವಿಚಾರಣೆ ಬೆನ್ನಲ್ಲೇ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧವೇ ಹರಿಹಾಯ್ದ ಬಿ.ಕೆ. ಹರಿಪ್ರಸಾದ

ಬೆಂಗಳೂರು: ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಧಾನ ಪರಿಷತ್‌ ಬಿಕೆ ಹರಿಪ್ರಸಾದ (BK Hari Prasad) ಅವರನ್ನು ಶುಕ್ರವಾರ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ನಡೆಯಿಂದ ಅವರು ತಮ್ಮದ ಪಕ್ಷದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದೇನು ಕಾಂಗ್ರೆಸ್ ಸರ್ಕಾರವೋ?, ಬೇರೆ ಸರ್ಕಾರವೋ ಎಂದು … Continued

ಬೆಂಗಳೂರಲ್ಲಿ ಬೋಯಿಂಗ್ ತಂತ್ರಜ್ಞಾನ ಕ್ಯಾಂಪಸ್‌ ಉದ್ಘಾಟಸಿದ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ದೇವನಹಳ್ಳಿ ಸಮೀಪ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ (BIETC) ಕ್ಯಾಂಪಸ್‌ (BIETC Campus) ಶುಕ್ರವಾರ ಲೋಕಾರ್ಪಣೆ ಮಾಡಿದರು. ಪ್ರಧಾನಿ ಮೋದಿ ಅವರು ಇದೇ ಕಾರ್ಯಕ್ರಮದಲ್ಲಿ ಬೋಯಿಂಗ್‌ ಸುಕನ್ಯಾ (Boeing sukanya programme) ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 1600 ಕೋಟಿ ರೂಪಾಯಿ ವೆಚ್ಚದಲ್ಲಿ 43 … Continued

ಬೆಂಗಳೂರು : ಮನೆಯಲ್ಲಿ ಸಿಲಿಂಡರ್ ಸ್ಫೋಟ ; 8 ಮಂದಿಗೆ ಗಾಯ, ಐದು ಮನೆಗಳಿಗೆ ಹಾನಿ

ಬೆಂಗಳೂರು : ಬೆಂಗಳೂರಿನ ಯಲಹಂಕದ ಎಲ್‌ಬಿಎಸ್‌ನಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು 8 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ. ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರಿಗೆ 60% ರಷ್ಟು ಸುಟ್ಟಗಾಯಗಳಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡ ಅಫರ್ವಾಜ್, ಸಲ್ಮಾ, ಶಾಹಿದ್, ಫಸಿಯಾ, ಅಸ್ಮಾ ಎಂಬವರನ್ನು … Continued

ಅನಂತಕುಮಾರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬೆಂಗಳೂರು : ಸಂಸದ ಅನಂತಕುಮಾರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಅನಂತಕುಮಾರ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲೇ ಜನರು ರಾಜಕಾರಣಿಗಳನ್ನು ನಂಬದಂತಹ ಪರಿಸ್ಥಿತಿ ಇದೆ. ಹೀಗಾಗಿ ಯಾರೇ ಇದ್ದರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ನಮ್ಮ ಮಾತು … Continued

ಬೆಂಗಳೂರು : ಚಾಕೊಲೇಟ್‌ ಪ್ಯಾಕ್‌ ನಲ್ಲಿ ಅಡಗಿಸಿಟ್ಟು ವಿಮಾನದಲ್ಲಿ ಒಯ್ಯುತ್ತಿದ್ದ 7.76 ಕೋಟಿ ರೂ. ಮೌಲ್ಯದ ವಜ್ರ ವಶಕ್ಕೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಅಕ್ರಮವಾಗಿ ಒಯ್ಯುತ್ತಿದ್ದ ಸುಮಾರು 7.76 ಕೋಟಿ ರೂ. ಮೌಲ್ಯದ 8,053 ಕ್ಯಾರೆಟ್‌ ತೂಕದ ವಜ್ರಗಳು, 4.62 ಲಕ್ಷ ರೂ. ಮೊತ್ತದ ಅಮೆರಿಕ ಡಾಲರ್‌ ಮತ್ತು ದಿರ್‌ಹಂ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದಲ್ಲಿ ಇಬ್ಬರು ಪ್ರಯಾಣಿಕರನ್ನು ವೈಮಾನಿಕ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದು, ಅವರಿಬ್ಬರು … Continued

ಸಿಇಒನಿಂದ ಮಗನ ಕೊಲೆ ಪ್ರಕರಣ : ಐದು ವಾರಗಳಿಂದ ಮಗನ ಭೇಟಿಗೆ ಸುಚನಾ ಸೇಠ್‌ ಅವಕಾಶ ನೀಡಿರಲಿಲ್ಲ ; ಪತಿ ಹೇಳಿಕೆ

ಪಣಜಿ: ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಬೆಂಗಳೂರಿನ ಎಐ ಸ್ಟಾರ್ಟ್‌ಅಪ್ ಸಿಇಒ ಸುಚನಾ ಸೇಠ್ ಅವರಿಂದ ಬೇರ್ಪಟ್ಟ ಪತಿ ಕಳೆದ ಐದು ಭಾನುವಾರಗಳಿಂದ ತಮ್ಮ ಮಗುವನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ಶನಿವಾರ ಗೋವಾ ಪೊಲೀಸರಿಗೆ ಹೇಳಿದ್ದಾರೆ. ವೆಂಕಟ ರಾಮನ್ ಅವರು ವಿಚಾರಣೆಯ ಭಾಗವಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಬೆಂಗಳೂರಿನಿಂದ ಮಧ್ಯಾಹ್ನ ಗೋವಾದ … Continued

‘ಕೋರ್ಟ್ ಆದೇಶವನ್ನು ಸಹಿಸಲು ಸಾಧ್ಯವಿಲ್ಲ’: ಮುದ್ದೆಯಾದ ಟಿಶ್ಯೂ ಪೇಪರ್‌ ನಲ್ಲಿ ಸುಚನಾ ಸೇಠ್ ಬರೆದ “ಬರಹ” ಪತ್ತೆ…!

ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪದಲ್ಲಿ ಬೆಂಗಳೂರಿನ ಸ್ಟಾರ್ಟ್‌ ಅಪ್‌ನ ಸಿಇಒ ಸುಚನಾ ಸೇಠ್ ಅವಳನ್ನು ಬಂಧಿಸಿದ ಕೆಲವು ದಿನಗಳ ನಂತರ, ತನ್ನ ಮಗನ ಕಸ್ಟಡಿಯನ್ನು ತನ್ನ ಗಂಡನಿಗೆ ಕೊಡಲು ಬಯಸುವುದಿಲ್ಲ ಎಂದು ಸೂಚಿಸುವ ಕೈಬರಹದ “ಗುಪ್ತ ಟಿಪ್ಪಣಿ” ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, ತನ್ನ ಗಂಡನನ್ನು ಹೋಲುವ ತನ್ನ … Continued

ವಿಧಾನಸೌಧ ಮುಂಭಾಗದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮುಂದೆ ಬುಧವಾರ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಸಾಲದ ಬಾಕಿ ವಸೂಲಿಗಾಗಿ ತಮ್ಮ ಮನೆಯನ್ನು ಬ್ಯಾಂಕ್ ಹರಾಜು ಮಾಡಿದ್ದರಿಂದ ಅಸಮಾಧಾನಗೊಂಡ ದಂಪತಿ ಹತಾಶರಾಗಿ ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗಿದ್ದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ವಿಧಾನಸೌಧದ ಹೊರಗೆ ಆಗಮಿಸಿದ್ದರು. ಈ ವೇಳೆ ದಂಪತಿ ತಮ್ಮ ಮೇಲೆ … Continued

ನಾನು ಎದ್ದಾಗ ಮಗು ಸತ್ತಿತ್ತು : ಪೊಲೀಸರಿಗೆ ಕೊಲೆ ಆರೋಪಿ ಸಿಇಒ ಹೇಳಿಕೆ, ಮಗು ಉಸಿರುಗಟ್ಟಿ ಸತ್ತಿದೆ: ಪೋಸ್ಟ್ ಮಾರ್ಟೆಮ್ ವರದಿ, ಇದು ಯೋಜಿತ ಕೊಲೆಯಂತೆ ತೋರುತ್ತದೆ ; ಪೊಲೀಸ್‌

ಪಣಜಿ: ಕೊಲೆ ಆರೋಪಿ ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್‌ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಕೊಠಡಿಯಲ್ಲಿ ಕೆಮ್ಮಿನ ಸಿರಪ್ಪಿನ ಖಾಲಿ ಬಾಟಲಿಗಳನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ, ಮಹಿಳೆ ಆತನಿಗೆ ಹೆಚ್ಚಿನ ಪ್ರಮಾಣದ ಔಷಧಿ ನೀಡಿರಬಹುದು ಮತ್ತು ಅದು ದೊರೆತಿರುವುದು ಇದು ಪೂರ್ವ ಯೋಜಿತ ಕೊಲೆ ಎಂದು ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. … Continued