ಭಟ್ಕಳ: ಭಾರೀ ಮಳೆಗೆ ಮುಟ್ಟಳ್ಳಿಯಲ್ಲಿ ಮನೆ ಮೇಲೆ ಕುಸಿದ ಗುಡ್ಡ, ನಾಲ್ವರು ಸಿಲುಕಿರುವ ಶಂಕೆ, ಹಲವು ಗ್ರಾಮಗಳ ಸಂಪರ್ಕ ಕಡಿತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಭಾರೀ ಮಳೆ ಬೀಳುತ್ತಿದ್ದು, ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದಿದೆ. ಈವರೆಗೆ ಮನೆಯವರ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಶಾಮಕ ಮತ್ತು ತುರ್ತುಸೇವೆಗಳು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿದೆ. ಆದರೆ ಮಳೆನೀರು … Continued

ವಶಕ್ಕೆ ಪಡೆದಿದ್ದ ಶಂಕಿತರನ್ನು ಬಿಟ್ಟು ಕಳುಹಿಸಿದ ಎನ್‌ಐಎ ಅಧಿಕಾರಿಗಳು

ಕಾರವಾರ: ಎನ್‌ಐಎ ಅಧಿಕಾರಿಗಳು ಭಟ್ಕಳ ( ಮತ್ತು ತುಮಕೂರಿನಲ್ಲಿ ವಶಕ್ಕೆ ಪಡೆದಿದ್ದ ಶಂಕಿತರನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಭಟ್ಕಳದ ಅಬ್ದುಲ್ ಮುಖ್ತದೀರ್ (30) ಹಾಗೂ ತುಮಕೂರಿನ ಶಂಕಿತನನ್ನು ಬಿಡುಗಡೆ ಮಾಡಿದ್ದಾರೆ. ಹೆಚ್ಚಿನ ವಿಚಾರಣೆಗೆ ದೆಹಲಿಗೆ ಬರುವಂತೆ ಎನ್‌ಐಎ ನೋಟಿಸ್‌ ನೀಡಿದ್ದಾರೆ. ಅಬ್ದುಲ್ ಮುಖ್ತದೀರ್ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮುಖ್ಯರಸ್ತೆ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ … Continued

ಭಟ್ಕಳ: ಆಟ ಆಡುತ್ತಿದ್ದಾಗ ಮಳೆ ನೀರಿನ ಕಾಲುವೆಗೆ ಬಿದ್ದು 4 ವರ್ಷದ ಮಗು ಸಾವು

ಭಟ್ಕಳ: ಮನೆಯ ಹಿಂದುಗಡೆ ಆಟವಾಡುತ್ತಿದ್ದ ಬಾಲಕ ಮಳೆ ನೀರಿನ ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪಡುಶಿರಾಲಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ಬಾಲಕನನ್ನು ವಿಜೇತ ನಾಯ್ಕ (4) ಎಂದು ಗುರುತಿಸಲಾಗಿದೆ. ಶುಕ್ರವಾರ ಅಂಗನವಾಡಿಗೆ ಹೋಗಿದ್ದ ಬಾಲಕ ಮಧ್ಯಾಹ್ನ ಮನೆಗೆ ಬಂದಿದ್ದಾನೆ. ತಾಯಿ ಮನೆಗೆಲಸದಲ್ಲಿರುವಾಗ ಮನೆಯ ಹಿಂದುಗಡೆ ಆಟವಾಡುತ್ತಿದ್ದ ಎಂದು … Continued

ಭಟ್ಕಳ: ಪೊಲೀಸ್ ಜೀಪ್ ಡಿಕ್ಕಿ, ಮಹಿಳೆ ಸಾವು

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಪೊಲೀಸ್ ಜೀಪ್ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪೈಲಟ್ ಮಾಡುವ ಸಲುವಾಗಿ ಬೆಳಕೆ ಕಡೆಯಿಂದ ಸಾರದಹೊಳೆ ಕಡೆಗೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಮಹಿಳೆಯನ್ನು ವೆಂಕಟಾಪುರ   ನಿವಾಸಿ ವಿಜಯಾ ಹೊನ್ನಾವರಕರ … Continued

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ಸನ್ಯಾಸಿಗಳಿಂದ ಸ್ಪರ್ಧೆ, ಭಟ್ಕಳದಲ್ಲಿ ನನ್ನಿಂದಲೇ ಮೊದಲು ಪ್ರಯೋಗಕ್ಕೆ ಚಿಂತನೆ : ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ (ಉತ್ತರ ಕನ್ನಡ) : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಪ್ರೇರಣೆ ಪಡೆದಿರುವ ಸುಮಾರು 50ಕ್ಕೂ ಹೆಚ್ಚು ಸನ್ಯಾಸಿಗಳು ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಉಜಿರೆ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೊಳೆ ಹಳೆಕೋಟೆ ಶ್ರೀಕ್ಷೇತ್ರ ಹನುಮಂತ ದೇವರ ಪುನರ್ … Continued

ಹಿಜಾಬ್‌ ಕುರಿತು ಹೈಕೋರ್ಟ್ ತೀರ್ಪು: ಭಟ್ಕಳದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿದ ಮುಸ್ಲಿಂ ವರ್ತಕರು

ಕಾರವಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿರ್ಬಂಧಿಸಿ‌ ಸಮವಸ್ತ್ರ ಸಂಹಿತೆ ಪಾಲಿಸಬೇಕೆಂಬ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದ ನಂತರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕ ಹೈಕೋರ್ಟ್‌ ತ್ರಿಸದಸ್ಯ ಪೀಠ ಇಂದು, ಮಂಗಳವಾರ (ಮಾರ್ಚ್ 15) ಹಿಜಾಬ್‌ ಕುರಿತು ತೀರ್ಪು ಪ್ರಕಟಿಸಿದ್ದು, ಹಿಜಾಬ್ ಇಸ್ಲಾಂ … Continued

ಭಟ್ಕಳ: ಹೆಬ್ಬಾವು ಕಚ್ಚಿದ್ದಕ್ಕೆ ಹಾವು ಹಿಡಿದುಕೊಂಡೇ ಆಸ್ಪತ್ರೆಗೆ ಬಂದು ದಾಖಲಾದ ವ್ಯಕ್ತಿ..!

ಭಟ್ಕಳ: ಹೆಬ್ಬಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ಹೆಬ್ಬಾವು ಸಮೇತ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುವ ಘಟನೆ ಸೋಮವಾರ ರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹೀಗೆ ಹೆಬ್ಬಾವು ಹಿಡಿದು ಹಾವಿನ ಸಮೇತ ಆಸ್ಪತ್ರೆಗೆ ಬಂದ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಭಟ್ಕಳದಲ್ಲಿ ಕೆಲದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಳೆಗೆ … Continued

ಭಟ್ಕಳ: ಅಕಸ್ಮಾತ್‌ ವಿದ್ಯುತ್ ತಂತಿ ತಗುಲಿ ರೈತ ಸಾವು

ಭಟ್ಕಳ: ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ವೇಳೆ ಅಕಸ್ಮಾತ್‌ ಆಗಿ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿಯ ಹೂತ್ಕಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ನಾಗೇಶ ಮಂಜಯ್ಯ ಭಟ್(48) ಎಂದು ಗುರುತಿಸಲಾಗಿದೆ. ಈತ ಮನೆಯ ಮುಂದಿನ ತೋಟದಲ್ಲಿ ಕೊಕ್ಕೆಯನ್ನು ಕೈಯಲ್ಲಿ ಹಿಡಿದು ಹೀರೆಕಾಯಿ ಕೊಯ್ಯುತ್ತಿರುವಾಗ … Continued

ಭಟ್ಕಳ: ವೆಂಕಟಾಪುರ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷ, ಆತಂಕ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರ ಹೊಳೆಯ ನೀರಕಂಠದ ಸಮೀಪದಲ್ಲಿ ಹೊಳೆ ನಡುವೆ ದಿಬ್ಬದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ವೆಂಕಟಾಪುರ ನದಿಯ ಈ ಪ್ರದೇಶದಲ್ಲಿ ಇದು ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಶುಕ್ರವಾರ ಸಂಜೆಯ ಸಮಯ ಮರಳು ದಿಬ್ಬದ ಮೇಲೆ ಮಲಗಿದ್ದ ಮೊಸಳೆಯನ್ನು ಕಂಡಿದ್ದ ಸ್ಥಳೀಯರು ಪೋಟೋ ಕ್ಲಿಕ್ಕಿಸಿದ್ದು, ಶನಿವಾರ ಮಧ್ಯಾಹ್ನದ … Continued

ಭಟ್ಕಳ: ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿದ ದೋಣಿಗಳು, 10ಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದಾಗ ಅಲೆಯ ರಭಸಕ್ಕೆ ಸಿಲುಕಿದ್ದ 10ಕ್ಕೂ ಹೆಚ್ಚು ಮೀನುಗಾರರನ್ನು ಭಟ್ಕಳ ಬಂದರು ಸಮೀಪದ ಅಳಿವೆ ಪ್ರದೇಶದಲ್ಲಿ ರಕ್ಷಿಸಲಾಗಿದೆ. ಅಬ್ಬರದ ಮಳೆಯಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಲು ನಿರ್ಬಂಧವಿದ್ದರೂ, ಮೀನುಗಾರರು ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದರು ಎನ್ನಲಾಗಿದೆ. ಅರಬ್ಬೀ ಸಮುದ್ರದಲ್ಲಿ ಬಾರೀ ಗಾಳಿ ಸಹಿತ ಅಬ್ಬರದ ಮಳೆಯಾಗಿದ್ದರಿಂದ ಮೀನುಗಾರರು ಅಲೆಯ ರಭಸಕ್ಕೆ … Continued