ಬಿಜೆಪಿಯಿಂದ ಶಾಸಕರಾದ ಶಿವರಾಮ ಹೆಬ್ಬಾರ, ಎಸ್‌.ಟಿ. ಸೋಮಶೇಖರ ಉಚ್ಚಾಟನೆ

ಬೆಂಗಳೂರು: ಶಾಸಕರಾದ ಶಿವರಾಮ ಹೆಬ್ಬಾರ (Shivaram Hebbar) ಹಾಗೂ ಎಸ್.ಟಿ. ಸೋಮಶೇಖರ (ST Somashekhar) ಅವರನ್ನು ಬಿಜೆಪಿ (BJP)ಯಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಇಬ್ಬರು ಶಾಸಕರನ್ನು 6 ವರ್ಷಗಳ ಕಾಲ ಬಿಜೆಪಿ ಹೈಕಮಾಂಡ್‌ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಬಸವನಗೌಡ ಪಾಟೀಲ ಯತ್ನಾಳ್‌ ಅವರ ಉಚ್ಚಾಟನೆ ಮಾಡಿದ ಕೆಲವು ದಿನಗಳ ನಂತರ ಈ … Continued

ಸತ್ಯವಂತರಿಗಿದು ಕಾಲವಲ್ಲ…ದುಷ್ಟರಿಗೆ ಸುಭಿಕ್ಷ ಕಾಲ… : ಪಕ್ಷದಿಂದ ತಮ್ಮ ಉಚ್ಚಾಟಿಸಿದ್ದಕ್ಕೆ ಬಿಜೆಪಿಗೆ ಮಾರ್ಮಿಕವಾಗಿ ತಿವಿದ ಯತ್ನಾಳ

ಬೆಂಗಳೂರು: ಬಿಜೆಪಿಯಿಂದ ತಮ್ಮನ್ನು ಉಚ್ಚಾಟನೆ ಮಾಡಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪುರಂದರ ದಾಸರ ಉಕ್ಕಿಯನ್ನು ಉಲ್ಲೇಖಿಸಿ ಬಿಜೆಪಿಗೆ ಮಾರ್ಮಿಕವಾಗಿ ಟಾಂಗ್‌ ನೀಡಿದ್ದಾರೆ. ಹೈ ಕಮಾಂಡ್‌ನಿಂದ ಉಚ್ಚಾಟನೆ ಆದೇಶ ಹೊರಬಿದ್ದ ನಂತರ ಪ್ರತಿಕ್ರಿಯಿಸಿರುವ ಅವರು, ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ ಎಂದು ಪುರಂದರ ದಾಸರ ಹೇಳಿದ್ದಾರೆ. ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವು … Continued

ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ

ನವದೆಹಲಿ: ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal) ಅವರನ್ನು ಉಚ್ಚಾಟನೆ ಮಾಡಲಾಗಿದೆ. ಶಿಸ್ತು ಸಮಿತಿ ನೀಡಿದ್ದ ಶೋಕಾಸ್‌ ನೋಟಿಸ್‌ಗೆ ಸರಿಯಾಗಿ ಉತ್ತರ ನೀಡದ ಕಾರಣ ಬಿಜೆಪಿ (BJP) ಹೈಕಮಾಂಡ್‌ ಈ ನಿರ್ಧಾರವನ್ನು ಕೈಗೊಂಡಿದ್ದು, ತಕ್ಷಣವೇ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಮಾರ್ಚ್ … Continued

ಬಿಜೆಪಿ ಹೈಕಮಾಂಡ್‌ ಬುಲಾವ್ ; ದಿಢೀರ್‌ ದೆಹಲಿಗೆ ತೆರಳಿದ ವಿಜಯೇಂದ್ರ

ಬೆಂಗಳೂರು : ಕದೆಹಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್‌ ಬುಲಾವ್ ನೀಡಿದೆ. ಭಾನುವಾರ ಸಂಜೆ ಬಿ. ವೈ. ವಿಜಯೇಂದ್ರ ದಿಢೀರ್ ಆಗಿ ದೆಹಲಿ ವಿಮಾನವೇರಿದ್ದಾರೆ. ದೆಹಲಿಗೆ ಬರುವಂತೆ ಹೈಕಮಾಂಡ್‌ನಿಂದ ಫೋನ್‌ ಕರೆ ಬಂದ ನಂತರ ದಾವಣಗೆರೆಗೆ ಹೋಗುತ್ತಿದ್ದ ಬಿ. ವೈ. ವಿಜಯೇಂದ್ರ ಅವರಿಗೆ ನೆಲಮಂಗಲದಿಂದ ಬೆಂಗಳೂರಿಗೆ … Continued

ರಾಜ್ಯದ ಮೂವರು ಬಿಜೆಪಿ ನಾಯಕರಿಗೆ ಹೈಕಮಾಂಡ್ ದಿಢೀರ್‌ ಬುಲಾವ್

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ಮೂವರು ನಾಯಕರಿಗೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ ಎಂದು ವರದಿಯಾಗಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿ.ಸಿ. ಮೋಹನ ಅವರಿಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ. ಇಂದು ಮಧ್ಯಾಹ್ನ 3:30ಕ್ಕೆ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ಮೂವರೂ ನಾಯಕರಿಗೆ … Continued

ಬಿಜೆಪಿ ಹೈಕಮಾಂಡ್‌ ಬುಲಾವ್‌: ಮಾಜಿ ಸಿಎಂ ಬೊಮ್ಮಾಯಿ ದೆಹಲಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರಿಷ್ಠರಿಂದ ಈಗ ಬುಲಾವ್‌ ಬಂದಿದೆ. ಬೊಮ್ಮಾಯಿಯವರು ಭಾನುವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. … Continued