ಡಿಸೆಂಬರ್ 19 ರಂದು ಇಂಡಿಯಾ ಮೈತ್ರಿಕೂಟದ 4ನೇ ಸಭೆ

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ನಾಲ್ಕನೇ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 19 ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಭಾನುವಾರ ಹೇಳಿದ್ದಾರೆ. ಡಿಸೆಂಬರ್ 17ರಿಂದ ಸಭೆಯನ್ನು ಮುಂದೂಡಿದ್ದಕ್ಕೆ ಅವರು ಯಾವುದೇ ಕಾರಣಗಳನ್ನು ನೀಡಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ … Continued

ಕಾಂಗ್ರೆಸ್ ಸಂಸದರ ನಿವೇಶನದ ಮೇಲೆ ನಡೆದ ದಾಳಿಯಲ್ಲಿ 176 ಬ್ಯಾಗ್ ನಗದು ವಶ : ₹353 ಕೋಟಿ ಎಣಿಕೆ… ಎಣಿಕೆ ಮುಂದುವರೆದಿದೆ….!

ನವದೆಹಲಿ: ನವದೆಹಲಿ: ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ವಶಪಡಿಸಿಕೊಂಡ ಹಣದ ಎಣಿಕೆಯನ್ನು ಭಾನುವಾರದೊಳಗೆ ಮುಗಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 6 ರಂದು ದಾಳಿಗಳು ಪ್ರಾರಂಭವಾಗಿದ್ದು, ಅಧಿಕಾರಿಗಳು ಒಟ್ಟು 176 ಬ್ಯಾಗ್‌ಗಳಲ್ಲಿ 140 ಬ್ಯಾಗ್‌ಗಳ ಎಣಿಕೆಯನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಸಂಬಂಧಿಸಿದ ನಿವೇಶನಗಳಲ್ಲಿ ಆದಾಯ ತೆರಿಗೆ … Continued

ತೆರಿಗೆ ದಾಳಿಯಲ್ಲಿ ದಾಖಲೆ ಪ್ರಮಾಣದ ನಗದು ಹಣ ವಶ : ತನ್ನ ಪಕ್ಷದ ಸಂಸದರಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

ನವದೆಹಲಿ; ಆದಾಯ ತೆರಿಗೆ ಇಲಾಖೆಯು ಸುಮಾರು 300 ಕೋಟಿ ರೂಪಾಯಿಗಳಷ್ಟು ಲೆಕ್ಕಕ್ಕೆ ಸಿಗದ ಹಣವನ್ನು ವಶಪಡಿಸಿಕೊಂಡಿರುವ ವರದಿಯ ನಂತರ ಸಂಸದ ಧೀರಜ್ ಸಾಹು ಅವರ ವ್ಯವಹಾರಗಳ ಜೊತೆ ಪಕ್ಷ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಶನಿವಾರ ಹೇಳಿದ್ದಾರೆ. “ಅವರ ವ್ಯವಹಾರಗಳ ಮೇಲೆ ದಾಳಿಯ ಮೇಲೆ ಆದಾಯ ತೆರಿಗೆ … Continued

ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನಂ.1 : ಅನುಮೋದನೆ ರೇಟಿಂಗ್‌ ಎಷ್ಟು ಗೊತ್ತಾ…?

ಅಮೆರಿಕ ಮೂಲದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು 76% ರಷ್ಟು ಅನುಮೋದನೆ ರೇಟಿಂಗ್‌ ಪಡೆದ ನಂತರ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಭಾರತದ ಪ್ರಧಾನ ಮಂತ್ರಿಯ ಅನುಮೋದನೆಯ ರೇಟಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿಶ್ವದ ಜನಪ್ರಿಯ ನಾಯಕನಿಗಿಂತ 10% ಕ್ಕಿಂತ ಹೆಚ್ಚು ಅಂಕಗಳಿಂದ ಮುಂದಿದ್ದಾರೆ. … Continued

ಮಹಾರಾಷ್ಟ್ರ ಆಡಳಿತಾರೂಢ ಮೈತ್ರಿಕೂಟಕ್ಕೆ ನವಾಬ್ ಮಲಿಕ್ ಸೇರ್ಪಡೆ ವಿರೋಧಿಸಿ ಎನ್‌ ಸಿಪಿಯ ಅಜಿತ್ ಪವಾರಗೆ ಪತ್ರ ಬರೆದ ಫಡ್ನವೀಸ್‌

ಮುಂಬೈ : ಎನ್‌ಸಿಪಿ ಶಾಸಕ ನವಾಬ್ ಮಲಿಕ್ ಅವರನ್ನು ಮಹಾಯುತಿ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಪಕ್ಷದ ದೇವೇಂದ್ರ ಫಡ್ನವೀಸ್ ಅವರು ಮತ್ತೊಬ್ಬ ಉಪಮುಖ್ಯಮಂತ್ರಿ ಮತ್ತು ಮೈತ್ರಿಪಕ್ಷವಾದ ಎನ್‌ಸಿಪಿ ಅಜಿತ್ ಪವಾರ್ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ನವಾಬ್ ಮಲಿಕ್ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ … Continued

ಹಿಂದಿ ರಾಜ್ಯಗಳಿಗೆ ʼಗೋ ಮೂತ್ರʼ ರಾಜ್ಯಗಳೆಂದು ಟೀಕಿಸಿದ ಡಿಎಂಕೆ ಸಂಸದ : ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ನಂತರ ಸೆಂಥಿಲ್ ಕುಮಾರ ಕ್ಷಮೆಯಾಚನೆ

ನವದೆಹಲಿ: ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ ಅವರು ಸಂಸತ್ತಿನಲ್ಲಿ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿ ಪಕ್ಷಾತೀತವಾಗಿ ಟೀಕೆ ಎದುರಿಸಿದ ನಂತರ ಹೇಳಿಕೆಗಾಗಿ ಬುಧವಾರ ಕ್ಷಮೆಯಾಚಿಸಿದ್ದಾರೆ. ಧರ್ಮಪುರಿ ಸಂಸದರ ಹೇಳಿಕೆಗೆ ಬಿಜೆಪಿ ಮತ್ತು ಡಿಎಂಕೆ ಮಿತ್ರಪಕ್ಷ ಕಾಂಗ್ರೆಸ್‌ನಿಂದ ತಕ್ಷಣವೇ ಖಂಡನೆ ವ್ಯಕ್ತವಾಗಿದ್ದು, ಅವರು ಡಿಎಂಕೆ ಸಂಸದ ಡಿಎನ್‌ವಿ ಸೆಂಥಿಲ್ ಕುಮಾರ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಸದನದಲ್ಲಿ ಜೆ … Continued

‘ಸನಾತನ ಧರ್ಮ’ದ ನಂತರ ಹೊಸ ವಿವಾದದಲ್ಲಿ ಡಿಎಂಕೆ : ಹಿಂದಿ ಹೃದಯ ಭಾಗದ ರಾಜ್ಯಗಳ ಕುರಿತು ವಿವಾದಾತ್ಮಕ ಹೇಳಿಕೆ ನಂತರ ಕ್ಷಮೆಯಾಚಿಸಿದ ಡಿಎಂಕೆ ಸಂಸದ

ನವದೆಹಲಿ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಡಿಎನ್‌ವಿ ಸೆಂಥಿಲ್‌ಕುಮಾರ್ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಲೋಕಸಭೆಯಲ್ಲಿ ತಮ್ಮ ಹೇಳಿಕೆಯ ಮೂಲಕ ವಿವಾದಕ್ಕೆ ಕಾರಣರಾದರು. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಇತ್ತೀಚಿನ ಗೆಲುವನ್ನು ಲೇವಡಿ ಮಾಡಿದ ತಮಿಳುನಾಡು ನಾಯಕ ಹಿಂದಿ ಹೃದಯ ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. … Continued

“ಇದು ಕಾಂಗ್ರೆಸ್ ಸೋಲು, ಜನರ ಸೋಲಲ್ಲ”: 3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು ಇತರ ಇಂಡಿಯಾ ಮೈತ್ರಿಕೂಟ ಸದಸ್ಯ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಯ ಕೊರತೆಯೇ ಕಾರಣ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳೊಂದಿಗೆ ಕಾಂಗ್ರೆಸ್‌ ಸೀಟು ಹಂಚಿಕೆಯು ಮೂರು ರಾಜ್ಯಗಳಲ್ಲಿ ವಿಭಿನ್ನ ಫಲಿತಾಂಶವನ್ನು ಕಾಣಬಹುದಿತ್ತು … Continued

ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ : ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಬಿಜೆಪಿ ಶಾಸಕಾಂಗ ಸಭೆಗೆ ಹೋಗಲ್ಲ ಎಂದು ಗುಡುಗಿದ ಯತ್ನಾಳ

ಬೆಳಗಾವಿ : ವಿಧಾನಸಭೆಯ ವಿಪಕ್ಷದ ನಾಯಕ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕೆಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಆಗ್ರಹಿಸಿದ್ದು, ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಬಿಜೆಪಿ ಶಾಸಕಾಂಗ ಸಭೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ … Continued

ಎಬಿವಿಪಿ ಕಾರ್ಯಕರ್ತನಿಂದ ಕಾಂಗ್ರೆಸ್ ಸಿಎಂ ಹುದ್ದೆ ರೇಸ್‌ ವರೆಗೆ ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ್ ರೆಡ್ಡಿಯ ರಾಜಕೀಯ ದಾರಿ….

ಹೈದರಾಬಾದ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಚಟುವಟಿಕೆಯಿಂದ ಆರಂಭವಾದ ಅನುಮುಲಾ ರೇವಂತ ರೆಡ್ಡಿ ಅವರ ರಾಜಕೀಯ ಮಾರ್ಗವು ಈಗ ತೆಲಂಗಾಣದ ಸಂಭಾವ್ಯ ಮುಖ್ಯಮಂತ್ರಿ ಹುದ್ದೆಯ ವರೆಗೆ ಅವರನ್ನು ತಂದು ನಿಲ್ಲಿಸಿದೆ. 56ರ ಹರೆಯದ ಕಾಂಗ್ರೆಸ್ ನಾಯಕ ಹಾಗೂ ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರ ಕಟುಟೀಕಾಕಾರ, ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ ರೆಡ್ಡಿ … Continued