೨೦೨೪ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಲ್ಲಿ ಮೋದಿ ವಿರುದ್ಧ ದೀದಿ ಸ್ಪರ್ಧೆ: ಟಿಎಂಸಿ

ಕೋಲ್ಕತ್ತ: ನಂದಿಗ್ರಾಮ ಕ್ಷೇತ್ರದಲ್ಲಿ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಗೆಲ್ಲುವುದು ಖಚಿತವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೀದಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಟಿಎಂಸಿ ತಿಳಿಸಿದೆ. ನಂದಿಗ್ರಾಮದಲ್ಲಿ ಸೋಲುವ ಮಾತೇ ಇಲ್ಲ. ಬೇರೆ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುವ ಅವಶ್ಯಕತೆಯಿಲ್ಲ. ಮಮತಾ ಬ್ಯಾನರ್ಜಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸೆಣೆಸಲಿದ್ದು, ಮೋದಿಯವರು ಸುರಕ್ಷಿತ ಕ್ಷೇತ್ರ … Continued

ಕಾಶ್ಮೀರದ ಬಿಜೆಪಿ ಮುಖಂಡನ ನಿವಾಸದ ಮೇಲೆ ಗುಂಡಿನ ದಾಳಿ

ಕಾಶ್ಮೀರ: ಉತ್ತರ ಕಾಶ್ಮೀರದ ಬಿಜೆಪಿ ಮುಖಂಡ ಅನ್ವರ್‌ ಖಾನ್‌ ನಿವಾಸದ ಮೇಲೆ ಭಯೋತ್ಪಾದಕರ ಗುಂಪು ಗುಂಡಿನ  ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಬಿಜೆಪಿ ಉತ್ತರ ಕಾಶ್ಮೀರ ಅಭಿಯಾನದ ನೇತೃತ್ವ ವಹಿಸಿದ್ದ ಅನ್ವರ್‌ ಖಾನ್‌ ನಿವಾಸದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅವರು ಮನೆಯಲ್ಲಿರಲಿಲ್ಲ. ಅನ್ವರ್‌ ಖಾನ್‌ ಬಾರಾಮುಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಕುಪ್ವಾರಾ … Continued

ಬಿಜೆಪಿ ೧೦೦ಸ್ಥಾನಗಳಲ್ಲಿ ಗೆದ್ದರೆ ಚುನಾವಣಾ ತಂತ್ರಜ್ಞ ವೃತ್ತಿ ತ್ಯಜಿಸುವೆ: ಪ್ರಶಾಂತ್‌ ಕಿಶೋರ್‌

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನಗಳು ದೊರೆತರೆ ತಮ್ಮ ಚುನಾವಣಾ ತಂತ್ರಜ್ಞ ವೃತ್ತಿಯನ್ನೇ ತ್ಯಜಿಸುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಬಿಜೆಪಿಯ ಸುತ್ತ ಸಾಕಷ್ಟು ಪ್ರಚೋದನೆಗಳು ಸೃಷ್ಟಿಯಾಗಿದ್ದವು, ಆದರೆ ಈಗ ಸ್ಥಿತಿ ಬದಲಾಗಿದೆ. ಡಿಸೆಂಬರ್‌ನಲ್ಲಿ ಬಿಜೆಪಿ 200 ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿತ್ತು ಎಂದರು. ಬಿಜೆಪಿಗೆ … Continued

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದಲ್ಲಿ ಬಿಜೆಪಿ ಜಯಭೇರಿ: ಅಮಿತ್‌ ಶಾ

ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಆಸ್ಸಾಂ ರಾಜ್ಯಗಳಲ್ಲಿ ನಡೆದ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ೩೦ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨೬ರಲ್ಲಿ ಹಾಗೂ ಅಸ್ಸಾಂನಲ್ಲಿ ೪೭ ಸ್ಥಾನಗಳಲ್ಲಿ ೩೭ ಸ್ಥಾನಗಳಲ್ಲಿ ಬಿಜೆಪಿ ಗೆಲುವು … Continued

ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ: ಕಾಂಗ್ರೆಸ್‌ ಕಚೇರಿಯಲ್ಲಿ ಷಡ್ಯಂತ್ರ ನಡೆದಿದೆಯೇ ಎಂದು ಬಿಜೆಪಿ ಪ್ರಶ್ನೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಯುವತಿಯದ್ದು ಎನ್ನಲಾದ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಟ್ವೀಟ್‌ ಮಾಡಿದ್ದು, ಈ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಕಾಂಗ್ರೆಸ್ ಕಚೇರಿಯಲ್ಲೇ ಷಡ್ಯಂತ್ರ ನಡೆದಿಯೇ ಎಂದು ಪ್ರಶ್ನಿಸಿದೆ. … Continued

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ: ದಿ. ಸುರೇಶ ಅಂಗಡಿ ಪತ್ನಿ ಬಿಜೆಪಿ ಅಭ್ಯರ್ಥಿ

ಬೆಳಗಾವಿ: ಪ್ರತಿಷ್ಠಿತ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಮತ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯು ದಿವಂಗತ ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ … Continued

ಟೈಮ್‌ ನೌ-ಸಿ ವೋಟರ್ ಸಮೀಕ್ಷೆ: ಪಿಣರಾಯಿಗೆ ಮತದಾರ ಜೈ..ಕಾಂಗ್ರೆಸ್‌ಗೆ ಕೈ

ನವ ದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಮತ್ತೆ ಆಡಳಿತಾರೂಢ ರಂಗವೇ ಅಧಿಕಾರಕ್ಕೆ ಬರಲಿದೆ ಎಂದು ಟೈಮ್‌ ನೌ – ಸಿ ವೋಟರ್ ಸಮೀಕ್ಷೆಯು ಹೇಳಿದೆ. ಕೇರಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಿಂದ ಒಂದೇ ಹಂತದಲ್ಲಿ ನಡೆಯಲಿದ್ದು, ಹಲವು ದಶಕಗಳಿಂದ ರಾಜಕೀಯ ಶಕ್ತಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಹಣಾಹಣಿ ನಡೆಯುತ್ತದೆ. 2016 ರ … Continued

ಪಶ್ಚಿಮ ಬಂಗಾಳ ಎಬಿಪಿ-ಸಿ ವೋಟರ್ಸ್‌ ಸಮೀಕ್ಷೆ 2021:ಟಿಎಂಸಿ ಅಧಿಕಾರಕ್ಕೆ, ಬಿಜೆಪಿ ತುಸು ಹಿಂದೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮುಂಚಿನ ಮನಸ್ಥಿತಿಯನ್ನು ನಿರ್ಧರಿಸುವ ಸಲುವಾಗಿ, ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಮತದಾರರ ಮನಸ್ಸಿನಲ್ಲಿ ಯಾವ ರಾಜಕೀಯ ಪಕ್ಷವು ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಲು ಕ್ಷಿಪ್ರ ಸಮೀಕ್ಷೆ ನಡೆಸಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಹಂತದ ಮತದಾನವು ಶನಿವಾರ ನಡೆಯಲಿದೆ. ಮತದಾನದ ದಿನಾಂಕ ಹತ್ತಿರವಾಗುವ ಸಂದರ್ಭದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ … Continued

ಮಹಾರಾಷ್ಟ್ರ ಸರ್ಕಾರ ವಿಕಾಸ ಮರೆತು ವಸೂಲಿಯಲ್ಲಿ ನಿರತ: ಕೇಂದ್ರ ಸಚಿವ ರವಿಶಂಕರ

ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರಕಾರ ವಿಕಾಸವನ್ನು ಮರೆತು ವಸೂಲಿಯಲ್ಲಿ ನಿರತವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ ಆರೋಪಿಸಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ವಿಕಾಸವಲ್ಲ, ವಸೂಲಿ ಮಾತ್ರ. ಎನ್‌ಸಿಪಿ ಮುಖ್ಯಸ್ಥ ಯಾವ ಉದ್ದೇಶದಿಂದ ಸಚಿವ ಅನಿಲ್‌ ದೇಶ್‌ಮುಖ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಶರದ್‌ ಪವಾರ್‌ ದೇಶಮುಖ್‌ ರಾಜಿನಾಮೆ ಪಡೆದು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುವುದು ಒಳಿತು ಎಂದರು. ಅನಿಲ್‌ ದೇಶಮುಖ್‌ … Continued

ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ: ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದ ಮುತಾಲಿಕ್‌

ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ನಾನು ಟಿಕೆಟ್ ಆಕಾಂಕ್ಷಿ ಆಆಗಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಹೇಳಿದರು. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಷಯವಾಗಿ ಹಲವು ನಾಯಕರೊಂದಿಗೆ ಚರ್ಚಿಸಿದ್ದೇನೆ. ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಟಿಕೆಟ್ ದೊರೆಯುವ ವಿಶ್ವಾಸವಿದೆ ಎಂದರು. ನನಗೀಗ … Continued