ಮಕ್ಕಳ ಆಟದ ನೋಟು ನೀಡಿ ವ್ಯಾಪಾರಿಗೆ 40 ಲಕ್ಷ ರೂ. ವಂಚನೆ ; ಪ್ರತಿತಂತ್ರದಿಂದ ವಂಚಕರನ್ನೇ ಖೆಡ್ಡಾಕ್ಕೆ ಬೀಳಿಸಿದ ವ್ಯಾಪಾರಿ ಕುಟುಂಬ !

ಅಸಲಿ ನೋಟುಗಳಂತೆಯೇ ಕಾಣುವ ಹಣದ ಕಂತೆಗಳು… ಬ್ಯಾಂಕ್‌ಗಳಲ್ಲಿ ಹಣವನ್ನು ಪ್ಯಾಕ್ ಮಾಡಲು ಬಳಸುವ ಪಟ್ಟಿಗಳಿಂದಲೇ ಸುತ್ತಿ ಸಿದ್ಧಪಡಿಸಿದ್ದ ನೋಟಿನ ಬಂಡಲ್‌ಗಳು… ಆದರೆ ಆ ಕಂತೆಗಳ ಒಳಗೆ ಇದ್ದದ್ದು ಮಾತ್ರ ಮಕ್ಕಳ ಆಟವಾಡಲು ಬಳಸುವ ನಕಲಿ ನೋಟುಗಳು! ಇಂತಹ ತಂತ್ರ ಬಳಸಿ ಗುಜರಾತ್‌ನ ಮಸಾಲೆ ವ್ಯಾಪಾರಿಯೊಬ್ಬರಿಗೆ ಬರೋಬ್ಬರಿ 40 ಲಕ್ಷ ರೂ. ವಂಚನೆ ಮಾಡಿದ ಘಟನೆ ನಡೆದಿದೆ. … Continued