ಕರ್ನಾಟಕದಲ್ಲಿ ದಾಖಲೆ ಮಟ್ಟದ ಚಳಿ: ಕಳೆದ 20 ವರ್ಷಗಳಲ್ಲೇ ಅತ್ಯಂತ ಶೀತಲ ಹವಾಮಾನ…!

ಬೆಂಗಳೂರು : ಕರ್ನಾಟಕದಲ್ಲಿ ಈ ವರ್ಷ ಚಳಿಯ ತೀವ್ರತೆ ಮಿತಿಮೀರಿದ್ದು, ಕಳೆದ ಎರಡು ದಶಕಗಳಲ್ಲಿ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ದಾಖಲೆ ಮಟ್ಟಕ್ಕೆ ಕುಸಿದಿದೆ. ಇದು ಕೇವಲ ಸಾಂದರ್ಭಿಕ ಬದಲಾವಣೆಯಲ್ಲ, ಬದಲಿಗೆ ದೀರ್ಘಕಾಲದ ಹವಾಮಾನ ವೈಪರೀತ್ಯದ ಸೂಚನೆಯಾಗಿದೆ ಎಂದು ದತ್ತಾಂಶಗಳು ತಿಳಿಸಿವೆ. ರಾಜ್ಯದಲ್ಲಿ ತಾಪಮಾನದ ವ್ಯವಸ್ಥಿತ ದಾಖಲೆಗಳನ್ನು ಸುಮಾರು ಒಂದು ಶತಮಾನದಿಂದ ನಿರ್ವಹಿಸಲಾಗುತ್ತಿದ್ದರೂ, ಹೆಚ್ಚಿನ … Continued

ಕರ್ನಾಟಕದಲ್ಲಿ ತಾಪಮಾನ ತೀವ್ರ ಕುಸಿತ ; ಇಂದು ಸಹ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡಿನಲ್ಲಿ ವ್ಯಾಪಕ ಚಳಿ ಬೀಳುತ್ತಿದ್ದು, ಸೋಮವಾರವೂ ಕೆಲ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ (Karnataka Districts) ಕನಿಷ್ಠ ತಾಪಮಾನ ಒಂದಂಕಿಗೆ ಇಳಿದಿದ್ದು, ಬೀದರಿನಲ್ಲಿ ದಾಖಲೆಯ ಮಟ್ಟದ ಚಳಿ ದಾಖಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗಿನ ಸಮಯದಲ್ಲಿ ಮಂಜು ಮತ್ತು ಶೀತಗಾಳಿ ಸಾಮಾನ್ಯವಾಗಿದೆ. ಡಿಸೆಂಬರ್ … Continued

ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್‌, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಇಳಿಕೆಯಾಗುತ್ತಿದ್ದು, ತೀವ್ರ ಚಳಿ ಬೀಳುತ್ತಿದೆ. ಕರ್ನಾಟಕದ (Karnataka Weather) ಹಲವು ಜಿಲ್ಲೆಗಳಿಗೆ ಭಾನುವಾರ (ಡಿ.21) ತೀವ್ರ ಶೀತ ಗಾಳಿ(Cold Wave) ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 7 ಜಿಲ್ಲೆಗಳಿಗೆ ಆರೆಂಜ್‌ ಹಾಗೂ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ತೀವ್ರ ಶೀತ ಗಾಳಿ ಹಿನ್ನೆಲೆಯಲ್ಲಿ ಬೀದರ, … Continued

ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಶೀತಗಾಳಿ, ಹಲವು ಜಿಲ್ಲೆಗಳಲ್ಲಿ ತೀವ್ರ ಚಳಿ ; ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆ ಮುಂದುವರಿದಿದ್ದು, ಶುಕ್ರವಾರ (ಡಿಸೆಂಬರ್ 19) ರಾಜ್ಯದ ಹಲವು ಜಿಲ್ಲೆಗಳಲ್ಲಿ ಶೀತಗಾಳಿಯ ಜೋರಾಗಿ ಬೀಸಲಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಭಾಗದ ನಾಲ್ಕು ಜಿಲ್ಲೆಗಳಲ್ಲಿ ತೀವ್ರವಾದ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ  ಕನಿಷ್ಠ ತಾಪಮಾನ 12 ರಿಂದ 14 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. … Continued

ಕರ್ನಾಟಕದಲ್ಲಿ ತೀವ್ರಗೊಂಡ ಶೀತಗಾಳಿ: ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಇನ್ನೂ ಹೆಚ್ಚಾಗುವ ಸಾಧ್ಯತೆ

ಬೆಂಗಳೂರು :  ಮುಂದಿನ ಎರಡು ಅಥವಾ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಶೀತಗಾಳಿಯಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲಿಯೂ ಉತ್ತರ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಹಾವೇರಿ, ಧಾರವಾಡ, ವಿಜಯಪುರ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಕುಸಿತ ಕಂಡಿದ್ದು, ಇದು ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ … Continued

ಕರ್ನಾಟಕದಲ್ಲಿ 5 ದಿನ ಭಾರೀ ಚಳಿ ಮುನ್ಸೂಚನೆ ; ಹಲವು ಜಿಲ್ಲೆಗಳಿಗೆ ಶೀತಗಾಳಿ ಮುನ್ನೆಚ್ಚರಿಕೆ

ಬೆಂಗಳೂರು: ಡಿಸೆಂಬರ್ 12 ರಿಂದ 16 ರ ಅವಧಿಯಲ್ಲಿ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಉತ್ತರ … Continued

ಈ ಬಾರಿ ಚಳಿಗಾಲದಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ ; ಹವಾಮಾನ ಇಲಾಖೆ

ನವದೆಹಲಿ :  ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಭಾರತೀಯ ಹವಾಮಾನ ಇಲಾಖೆ(IMD)ಯ ಮುನ್ಸೂಚನೆಯ ಪ್ರಕಾರ, ದೇಶದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ತೀವ್ರ ಚಳಿ ಇರಲಿದೆ. ವಿಶೇಷವಾಗಿ ವಾಯವ್ಯ (Northwest) ಭಾರತ, ಉತ್ತರ  ಭಾರತ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳು ಸಾಮಾನ್ಯಕ್ಕಿಂತ ಹೆಚ್ಚು ಕೋಲ್ಡ್‌ವೇವ್ (ಶೀತದ ಅಲೆ) ದಿನಗಳನ್ನು ಎದುರಿಸಲಿವೆ. ಸೋಮವಾರ ನವದೆಹಲಿಯಲ್ಲಿ ಮಾತನಾಡಿದ ಐಎಂಡಿ (IMD) ಮಹಾನಿರ್ದೇಶಕ … Continued

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ; 5 ಜಿಲ್ಲೆಗಳಿಗೆ ಶೀತಗಾಳಿ ಎಚ್ಚರಿಕೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ, ಮುಂದಿನ ಒಂದು ವಾರ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತೀವ್ರ ಶೀತಗಾಳಿಯ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ … Continued