ಲೋಕಸಭೆ ಚುನಾವಣೆ 2024 : ‘ನ್ಯಾಯ’ ವಿಷಯದ ಹೊಸ ಪ್ರಚಾರ ಗೀತೆ ಬಿಡುಗಡೆ ಮಾಡಿದ ಕಾಂಗ್ರೆಸ್‌ | ವೀಡಿಯೊ ವೀಕ್ಷಿಸಿ

ನವದೆಹಲಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷವು ತನ್ನ ಪ್ರಚಾರ ಕಾರ್ಯತಂತ್ರವನ್ನು ಅನಾವರಣಗೊಳಿಸಿದ್ದು, “ನ್ಯಾಯ”ದ ವಿಷಯವನ್ನು ಕೇಂದ್ರೀಕರಿಸಿದೆ. ಸೋಮವಾರ, ಪಕ್ಷವು ಹೆಚ್ಚು ಸಮಾನ ಮತ್ತು ನ್ಯಾಯಯುತ ಭಾರತಕ್ಕಾಗಿ ತನ್ನ ದೃಷ್ಟಿಕೋನವುಳ್ಳ ಪ್ರಚಾರ ಹಾಡನ್ನು ಬಿಡುಗಡೆ ಮಾಡಿದೆ. “ಹಮ್ ಸಾಥ್ ಹೈ ತೋ ಹಾಥ್ ಯೇ ಹಾಲತ್ ಬದಲ್ ದೇಗಾ” ಎಂಬ ಗೀತೆಯನ್ನು ಕಾಂಗ್ರೆಸ್ ಪ್ರಧಾನ … Continued

‘ಇಂಡಿಯಾ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ಸಿಗದೇ ಇರಬಹುದು, ಆದರೆ…’: ಲೋಕಸಭೆ ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ

ಬೆಂಗಳೂರು : 2024ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ಸಿಗದೇ ಇರಬಹುದು ಎಂದು ಹೇಳಿದ್ದಾರೆ. ಆದರೆ  ಇದೇ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೂಡ ಸಂಪೂರ್ಣ ಬಹುಮತ  ಪಡೆಯುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಆದ್ದರಿಂದ, ಇಂಡಿಯಾ ಮೈತ್ರಿಕೂಟವು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, … Continued

ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೂ ನನ್ನನ್ನು ಬಿಡಲಿಲ್ಲ : ಕಾಂಗ್ರೆಸ್ಸಿನ ‘ಸರ್ವಾಧಿಕಾರಿ’ ಆರೋಪಕ್ಕೆ ತುರ್ತು ಪರಿಸ್ಥಿತಿ ಕರಾಳತೆ ನೆನಪಿಸಿದ ರಾಜನಾಥ ಸಿಂಗ್‌

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಪ್ರತಿಪಕ್ಷಗಳ ಮೇಲೆ ಭಾವನಾತ್ಮಕ ವಾಗ್ದಾಳಿ ನಡೆಸಿದರು. ಆಡಳಿತಾರೂಢ ಭಾರತೀಯ ಜನತಾ ಪಕ್ಷವು “ಅಘೋಷಿತ ತುರ್ತು ಪರಿಸ್ಥಿತಿ” ಅನ್ನು ಹೇರಿದೆ ಎಂದು ಆಗಾಗ್ಗೆ ಆರೋಪಿಸಿದೆ. ಆದರೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಜೈಲಿನಲ್ಲಿದ್ದಾಗ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಂತೆ ತನಗೆ ನಿರ್ಬಂಧಿಸಲಾಗಿತ್ತು ಎಂದು … Continued

ಬನವಾಸಿ: ಬಿಜೆಪಿ ತೊರೆದು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಪುತ್ರ…!

ಬನವಾಸಿ (ಶಿರಸಿ): ಯಲ್ಲಾಪುರ ಕ್ಷೇತ್ರದ ಯುವ ಮುಖಂಡ ಹಾಗೂ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಇಂದು, ಗುರುವಾರ ಅಧಿಕೃತವಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಟ್ಟಣದ ಟಿ‌.ಎಂ.ಎಸ್ ಎದುರು ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ ಹೆಬ್ಬಾರ್ ಅವರಿಗೆ ಪಕ್ಷದ ಶಾಲು ಹಾಕಿ ಬಾವುಟ  ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. … Continued

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪೋಸ್ಟ್‌ : 7 ಜನರ ವಿರುದ್ಧ ಎಫ್‌ಐಆರ್‌

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದೂ ವೋಟ್ ಬೇಡ, ಮುಸ್ಲಿಂ ವೋಟ್ ಸಾಕು ಎಂಬ ಸುಳ್ಳು ಸುದ್ದಿಯನ್ನು ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬಂತೆ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಈ ಬಗ್ಗೆ ದೂರು ನೀಡಿದೆ. ಈ … Continued

ಲೋಕಸಭಾ ಚುನಾವಣೆ : ಕರ್ನಾಟಕದ 14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಕಣದಲ್ಲಿ ; ಕ್ಷೇತ್ರವಾರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು : ಏಪ್ರಿಲ್‌ 26ರಂದು ಕರ್ನಾಟಕದಲ್ಲಿ ಲೋಕಸಭೆಗೆ ನಡೆಯುವ ಮೊದಲ ಹಂತದಲ್ಲಿ ಚುನಾವಣೆಗೆ 14 ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ಪಡೆಯುವ ಗಡುವು ಸೋಮವಾರ ಮುಕ್ತಾಯಗೊಂಡಿದ್ದು, 247 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಲೋಕಸಭೆ ಚುನಾವಣೆಯ ಕರ್ನಾಟಕದ ಮೊದಲ ಹಂತದ ಅಖಾಡ ಸಿದ್ಧವಾಗಿದೆ. ಏಪ್ರಿಲ್‌ 26ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು … Continued

ಚುನಾವಣೆಯಲ್ಲಿ ತಮ್ಮ ಮಗ ಸೋಲಬೇಕು ಎಂದ ಹಿರಿಯ ಕಾಂಗ್ರೆಸ್ ನಾಯಕ…!

ತಿರುವನಂತಪುರಂ: ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಪುತ್ರ ಅನಿಲ ಕೆ. ಆಂಟನಿ ಚುನಾವಣೆಯಲ್ಲಿ ಗೆಲ್ಲಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ. ಸುದೀರ್ಘ ಸಮಯದ ನಂತರ ಮೌನ ಮುರಿದ ಎ.ಕೆ.ಆಂಟನಿ ತಮ್ಮ ಮಗ ಸೋಲಬೇಕು, ಅವರ ವಿರುದ್ಧ ಸ್ಪರ್ಧಿಸಿರುವ ದಕ್ಷಿಣ ಕೇರಳ … Continued

ಲೋಕಸಭೆ ಚುನಾವಣೆ : ಕಾಂಗ್ರೆಸ್‌ ಪಕ್ಷದ ಬ್ಯಾನರ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಚಿತ್ರ….!

ಭೋಪಾಲ್ : ಮಧ್ಯಪ್ರದೇಶದ ಮಂಡಲಾ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಅವರ ಚುನಾವಣಾ ಪ್ರಚಾರದ ವೇಳೆ ಕಟ್ಟಿದ್ದ ಕಾಂಗ್ರೆಸ್‌ ಪಕ್ಷದ ಬ್ಯಾನರ್‌ನಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಫಗ್ಗನ್‌ ಸಿಂಗ್‌ ಕುಲಸ್ತೆ ಅವರ ಫೋಟೊ ರಾರಾಜಿಸಿದೆ. ಇದು ಕಾಂಗ್ರೆಸ್‌ ನಾಯಕರ ಮುಜುಗರಕ್ಕೆ ಕಾರಣವಾಗಿದೆ. ಈ ಘಟನೆ ಬಗ್ಗೆ ಕಾಂಗ್ರೆಸ್‌ ಅದನ್ನು ‘ಮಾನವ ದೋಷ’ ಎಂದು … Continued

ಲೋಕಸಭೆ ಚುನಾವಣೆ : ‘ಪೂರ್ವ, ದಕ್ಷಿಣದಲ್ಲಿ ಬಿಜೆಪಿಗೆ ಲಾಭ, ಅದು 300 ಸೀಟು ಗೆಲ್ಲಬಹುದು; ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಭವಿಷ್ಯ

ನವದೆಹಲಿ : ಭಾರತೀಯ ಜನತಾ ಪಕ್ಷವು (ಬಿಜೆಪಿ) ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ತನ್ನ ಸ್ಥಾನಗಳು ಮತ್ತು ಮತಗಳ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತದೆ ಮತ್ತು ಅದು 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಭಾನುವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಆಂಧ್ರಪ್ರದೇಶದಲ್ಲಿ … Continued

ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ದೂರು ದಾಖಲು

ಬೆಂಗಳೂರು: ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸಚಿವ ದಿನೇಶ ಗುಂಡೂರಾವ್ ಕುಟುಂಬದವರನ್ನು ಅವಮಾನಿಸಿರುವ ಶಾಸಕ ಯತ್ನಾಳ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೇಷಾದ್ರಿಪುರ ಪೊಲೀಸ್ … Continued