ಈಗ ಲೋಕಸಭೆ ಚುನಾವಣೆ ನಡೆದರೆ ಗೆಲ್ಲೋದು ಬಿಜೆಪಿ ಮೈತ್ರಿಕೂಟವೋ-ಕಾಂಗ್ರೆಸ್‌ ಮೈತ್ರಿಕೂಟವೋ ; ಮೂಡ್ ಆಫ್ ದಿ ನೇಷನ್ ಸರ್ವೆ ಹೇಳಿದ್ದೇನು..?

ಈಗ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ ಪ್ರಬಲ ಪ್ರದರ್ಶನ ನೀಡಲಿದ್ದು, 343 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಅಭಿಪ್ರಾಯ ಸಮೀಕ್ಷೆಯ ಹೇಳಿದೆ. 2024ರ ಲೋಕಸಭೆ ಚುನಾವಣೆಯಲ್ಲಿ 232 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಈಗ ಚುನಾವಣೆ ನಡೆದರೆ 188 ಸ್ಥಾನಗಳಿಗೆ ಕುಸಿಯಲಿದೆ ಎಂದು … Continued

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ ಜೊತೆ ಮೈತ್ರಿ ಇಲ್ಲ ; 2026ರ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿ ಸ್ಪರ್ಧೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ, ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಮ್ಮ ಪಕ್ಷವು 2026 ರ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ, ಬಂಗಾಳ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲು ನಡೆದ ಆಂತರಿಕ ಸಭೆಯಲ್ಲಿ, ಟಿಎಂಸಿ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋಗಲಿದೆ … Continued

ದೆಹಲಿ ವಿಧಾನಸಭೆ ಚುನಾವಣೆ | ಎಎಪಿ ಗುಡಿಸಿ ಹಾಕಿದ ಬಿಜೆಪಿ ; 48ರಲ್ಲಿ ಬಿಜೆಪಿಗೆ ಜಯ, ಎಎಪಿಗೆ ಕೇವಲ 22 ಸ್ಥಾನ, ಕಾಂಗ್ರೆಸ್‌ ಶೂನ್ಯ

ನವದೆಹಲಿ: 27 ವರ್ಷಗಳ ವನವಾಸದ ನಂತರ, ಬಿಜೆಪಿ ಭರ್ಜರಿ ಜಯ ಗಳಿಸುವ ಮೂಲಕ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಒಂದು ದಶಕದ ಆಳ್ವಿಕೆಯ ನಂತರ ಆಮ್ ಆದ್ಮಿ ಪಕ್ಷ (ಎಎಪಿ)ಹೀನಾಯವಾಗಿ ಸೋತಿದ್ದು, ಅದರ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಘಟನಾಘಟಿ ನಾಯಕರು ಮಣ್ಣು ಮುಕ್ಕಿದ್ದಾರೆ. ಒಟ್ಟು 70 ಸ್ಥಾನಗಳ ದೆಹಲಿ … Continued

ದೆಹಲಿ ವಿಧಾನಸಭೆ ಚುನಾವಣೆ ; ಆಮ್‌ ಆದ್ಮಿ ಪಾರ್ಟಿಗೆ ಆಘಾತ ; ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಮಾಜಿ ಡಿಸಿಎಂ ಸಿಸೋಡಿಯಾಗೆ ಸೋಲು

 ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ಅವರು ಸೋಲನುಭವಿಸಿದ್ದಾರೆ. ಎಎಪಿ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಪ್ರವರ್ಧಮಾನಕ್ಕೆ ಏರಿದ ಅರವಿಂದ ಕೇಜ್ರಿವಾಲ್‌ ಅವರು ಮಾಜಿ ಮುಖ್ಯಮಂತ್ರಿಯ ಸಾಹಿಬ್‌ … Continued

ದೆಹಲಿ ಚುನಾವಣೆ ಫಲಿತಾಂಶ | ಆರಂಭಿಕ ಟ್ರೆಂಡ್‌ ; ಭರ್ಜರಿ ಗೆಲುವಿನತ್ತ ಬಿಜೆಪಿ ದಾಪುಗಾಲು

ನವದೆಹಲಿ : ದೆಹಲಿ ವಿದಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಟ್ರೆಂಡ್‌ ಪ್ರಕಾರ ಬಿಜೆಪಿ ಭರ್ಜರಿ ಜಯದತ್ತ ದಾಪುಗಾಲು ಇಡುತ್ತಿದೆ. ಇದೇ ಟ್ರೆಂಡ್‌ ಮುಂದುವರಿದರೆ ಒಂದು ದಶಕದಿಂದ ಪ್ರಾಬಲ್ಯ ಹೊಂದಿದ್ದ ದೆಹಲಿಯ ರಾಜಕೀಯ ಭೂದೃಶ್ಯದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷವು ಅಧಿಕಾರ ಕಳೆದುಕೊಳ್ಳಲಿದೆ. ಮತ ಎಣಿಕೆ ನಡೆಯುತ್ತಿದ್ದು, 27 ವರ್ಷಗಳ ನಂತರ ಬಿಜೆಪಿ … Continued

ದೆಹಲಿ ವಿಧಾನಸಭೆ ಚುನಾವಣೆ | ಗುರುವಾರ ಹೊರಬಿದ್ದ 3 ಪ್ರಮುಖ ಎಕ್ಸಿಟ್ ಪೋಲ್‌ಗಳು ; ಬಹುಮತ ಬಿಜೆಪಿಗೋ, ಎಎಪಿಗೋ..?

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಮತ್ತೆ ಮೂರು ಎಕ್ಸಿಟ್ ಪೋಲ್‌ಗಳು ಶುಕ್ರವಾರ ಹೊರಬಿದ್ದಿದ್ದು, ಮೂರೂ ಸಮೀಕ್ಷೆಗಳು ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದೆ. ಬುಧವಾರ 11 ಎಕ್ಸಿಟ್‌ ಪೋಲ್‌ಗಳಲ್ಲಿ 9 ಎಕ್ಸಿಟ್‌ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆಯಬಹುದು ಎಂದು ಹೇಳಿದ್ದವು. ಎರಡು ಸಮೀಕ್ಷೆಗಳು ಆಮ್‌ ಆದ್ಮಿ … Continued

ಶಿರಸಿ | ಶಾಸಕರಿಗೆ ಅವಹೇಳನ ಮಾಡಿದ ಆರೋಪ ; ಅನಂತಮೂರ್ತಿ ಹೆಗಡೆ ವಿರುದ್ಧ ದೂರು

ಶಿರಸಿ ; ಬಿಜೆಪಿ ಮುಖಂಡ ಹಾಗೂ ಹೋರಾಟಗಾರ ಅನಂತಮೂರ್ತಿ ಹೆಗಡೆ ಮೇಲೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಅನಂತಮೂರ್ತಿ ಹೆಗಡೆ ಸುದ್ದಿಗೋಷ್ಠಿಯಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಶಿರಸಿ ನಗರ ಪೊಲೀಸ್‌ ಠಾಣೆಯಲ್ಲಿ ಶಿರಸಿ ನಗರ ಸಭೆ ಸದಸ್ಯರಾದ ಪ್ರದೀಪ ಶೆಟ್ಟಿ ಎಂಬವರು ದೂರು ನೀಡಿದ್ದಾರೆ. ರಾಜ್ಯದ 224 ಶಾಸಕರಲ್ಲಿ ಹೆಚ್ಚು … Continued

ದೆಹಲಿ ವಿಧಾನಸಭೆ ಚುನಾವಣೆ | ಎಎಪಿಗೆ ಹಿನ್ನಡೆ, 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ; ಭವಿಷ್ಯ ನುಡಿದ ಬಹುತೇಕ ಎಕ್ಸಿಟ್‌ ಪೋಲ್‌ ಗಳು

ನವದೆಹಲಿ; 25 ವರ್ಷಗಳ ನಂತರ ಬಿಜೆಪಿಯು ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಭವಿಷ್ಯ ನುಡಿದಿವೆ. ಆದರೆ ಅನೇಕ ಸಂದರ್ಭಗಳಲ್ಲಿ ಚುನಾವನೋತ್ತರ ಸಮೀಕ್ಷೆಗಳು ತಪ್ಪಾಗಿವೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಾದ್ಯಂತ ಬುಧವಾರ ನಡೆದ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಿತು. … Continued

ಕೇಂದ್ರ ಬಜೆಟ್‌ 2025 | ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ, ಕಳಸಾ-ಬಂಡೂರಿ ಯೋಜನೆ ಪ್ರಸ್ತಾಪಿಸದೆ ರಾಜ್ಯಕ್ಕೆ ಅನ್ಯಾಯ; ವಸಂತ ಲದವಾ

 ಹುಬ್ಬಳ್ಳಿ: ಕೇಂದ್ರದ 2025-26 ಮುಂಗಡಪತ್ರ ಅತ್ಯಂತ ನಿರಾಶದಾಯಕ, ದೇಶದ ಬಹುತೇಕ ಜನತೆಗೆ ಯಾವುದೇ ಅಪೇಕ್ಷಿತ, ನಿರೀಕ್ಷಿತ ಯೋಜನೆಗಳಿಲ್ಲ. ಅದರಲ್ಲಿಯೂ ಕರ್ನಾಟಕದ ಮಟ್ಟಿಗೆ ಅತ್ಯಂತ ನಿರಾಶದಾಯಕ ಬಜೆಟ್‌ ಆಗಿದೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಹೇಳಿದ್ದಾರೆ. ಹುಬ್ಬಳ್ಳಿ- ಅಂಕೋಲಾ ಮಾರ್ಗದ ಪ್ರಸ್ತಾಪವೇ ಇಲ್ಲ. 164.44 ಕಿಲೋಮೀಟರ್ ಉದ್ದದ  ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಯೋಜನೆ ಈಗಾಗಲೇ … Continued

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಡಿದೆದ್ದರೇ ಆಳಂದ ಶಾಸಕ; ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್. ಪಾಟೀಲ ದಿಢೀರ್‌ ರಾಜೀನಾಮೆ…!

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಹಾಗೂ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ​ ಅವರು ಶನಿವಾರ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ದಿಢೀರ್ ರಾಜೀನಾಮೆ ಕಾಂಗ್ರೆಸ್​​ನಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ … Continued